ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ: ಯುವಕನ ಜೀವ ಉಳಿಸಿದ ಅಮ್ಮನ ಫೋನ್ ಕರೆ!
ರಾಜ್ಯದ ರಾಜಧಾನಿ ಬೆಂಗಳೂರು ಬಾಂಬ್ ಸ್ಫೋಟಕ್ಕೆ ಬೆಚ್ಚಿಬಿದ್ದಿದೆ. ನಿನ್ನೆ ಮಧ್ಯಾಹ್ನ ಐಟಿಪಿಎಲ್ ಮುಖ್ಯರಸ್ತೆಯ ಕುಂದಲಹಳ್ಳಿ ಗೇಟ್ ಬಳಿಯ ಪ್ರಖ್ಯಾತ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿ 9ಮಂದಿ ಗಾಯಗೊಂಡಿದ್ದಾರೆ. ಈ ಬಾಂಬ್ ಸ್ಫೋಟದ ತನಿಖೆ ಚುರುಕುಗೊಂಡಿದೆ. ಸದ್ಯ ನಿನ್ನೆ ಘಟನೆಯಲ್ಲಿ ಅಪಾಯದಿಂದ ಪಾರಾದ ಕುಮಾರ್ ಅಲಂಕೃತ್ ಎಂಬ ಯುವಕ ತಾನು ಪ್ರಾಣಾಪಾಯದಿಂದ ಪಾರಾದ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
ಬೆಂಗಳೂರು, ಮಾರ್ಚ್ 2: ನಿನ್ನೆ ಕುಂದಲಹಳ್ಳಿಯ ರಾಮೇಶ್ವರಂ ಕೆಫೆ ಹೋಟೆಲ್‌ನಲ್ಲಿ ಸ್ಫೋಟ (Rameshwaram Cafe Blast) ಸಂಭವಿಸಿದೆ. ಅಪರಿಚಿತ ವ್ಯಕ್ತಿ ಇಟ್ಟು ಹೋಗಿರುವ ಬ್ಯಾಗ್‌ನಿಂದ ಸ್ಫೋಟ ಸಂಭವಿಸಿದ್ದು, 9 ಜನ ಗಾಯಗೊಂಡಿದ್ದಾರೆ. ಸದ್ಯ ಈ ಬಗ್ಗೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ರಾಮೇಶ್ವರಂ ಕೆಫೆ ಫುಡ್ಪ್ರಿಯರ ಅಚ್ಚುಮೆಚ್ಚಿನ ತಾಣ. ಹೋಟೆಲ್ನ ಘೀ ಮಸಾಲೆ, ಪುಡಿ ಇಡ್ಲಿಗೆ ಪ್ರತ್ಯೇಕ ಫ್ಯಾನ್ ಬೇಸ್ ಇದೆ. ನಿನ್ನೆ ಓರ್ವ ಯುವಕ ಏನಾದರೂ ತಿನ್ನಬೇಕೆಂದು ರಾಮೇಶ್ವರಂ ಕೆಫೆಗೆ ಹೋಗಿದ್ದಾರೆ. ಆರ್ಡರ್ ಮಾಡಿ ತಮಗಿಷ್ಟವಾದ ತಿಂಡಿ ತಿನ್ನಬೇಕೆನ್ನುವಷ್ಟರಲ್ಲಿ ಬಂದ ಫೋನ್ ಕರೆ ಆತನ ಜೀವವನ್ನೇ ಉಳಿಸಿದೆ.
ಕುಮಾರ್ ಅಲಂಕೃತ್ ಎಂಬ ಯುವಕ ನಿನ್ನೆ ಇದೇ ರಾಮೇಶ್ವರಂ ಕೆಫೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಅಮ್ಮನ ಫೋನ್ ಕರೆ ಬಂತು ಎಂದು ಕೆಫೆಯಿಂದ ಹೊರಗೆ ಬಂದಿದ್ದಾನೆ. ಇದಾದ ಕೆಲವೇ ನಿಮಿಷಗಳಲ್ಲಿ ಬಾಂಬ್ ಸ್ಫೋಟಗೊಂಡಿದೆ. ಸದ್ಯ ಅಪಾಯದಿಂದ ಪಾರಾದ ಬಗ್ಗೆ ಟ್ವೀಟ್ ಮಾಡಿರುವ ಯುವಕ ಕುಮಾರ್ ಅಲಂಕೃತ್, ‘ರಾಮೇಶ್ವರಂ ಕೆಫೆಯಲ್ಲಿ ನಿನ್ನೆ ತಿನ್ನೋಕೆ ಹೋಗಿದ್ದೆ. ದೋಸೆ ತೆಗೆದುಕೊಂಡು ತಿನ್ನೋಕೆ ಕುಳಿತುಕೊಂಡೆ. ದೋಸೆ ತಿನ್ನೋಕು ಮುನ್ನ ಅಮ್ಮ ಫೋನ್ ಮಾಡಿದರು. ಮಾತನಾಡೋಕೆ ಕೆಫೆಯಿಂದ ನಾನು ಹೊರಗೆ ಬಂದೆ. 10 ಮೀಟರ್ ದೂರ ಸಾಗುತ್ತಿದ್ದಂತೆ ಸ್ಫೋಟವಾಗಿದೆ. ತಾಯಿಯೇ ದೇವರು ಎಂದು ಬರೆದುಕೊಂಡಿದ್ದಾರೆ’.
ಕುಮಾರ್ ಅಲಂಕೃತ್ ಟ್ವೀಟ್
I grabbed my Dosa from the counter and planned to sit at my usual spot. But today my MOM called me so I thought to go out in quite area, I moved 10m away from the place I usually sit(BOMB SITE) and Blast took place, I ran outside. MOM=GOD 🙏🏼 #RameshwaramCafe #RameshwaramCafeBlast https://t.co/s17G1By4Mv
— Kumar Alankrit (@kumaralankrit01) March 1, 2024
ನಿನ್ನೆ ಮಧ್ಯಾಹ್ನ 1 ಗಂಟೆ ಸುಮಾರು. ಇಂದಿರಾ ನಗರ ಮತ್ತು ವೈಟ್ಫೀಲ್ಡ್ ನಡುವಿನ ಕುಂದಲಹಳ್ಳಿಯ ಬ್ರೂಕ್ ಫೀಲ್ಡ್ ರಸ್ತೆಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಗ್ರಾಹಕರು ಗಿಜಿಗಿಜಿ ಅಂತಿದ್ದರು. ದೋಸೆ, ಊಟ, ಕಾಫಿ ಅಂತ ಸ್ನೇಹಿತರ ಜತೆ ರುಚಿ ಸವಿಯುತ್ತಿದ್ದರು. ಇದೇ ಹೊತ್ತಲ್ಲಿ, ಹ್ಯಾಂಡ್ ವಾಶ್ ಬೇಸನ್ ಬಳಿ ಬಾಂಬ್ ಸ್ಫೋಟಗೊಂಡಿತ್ತು. ಭೀಕರ ಸದ್ದು, ಬೆಂಕಿಯ ಜ್ವಾಲೆ ಕಂಡು ಜನ ದಿಕ್ಕಾಪಾಲಾಗಿ ಓಡಿದ್ದರು.
ರವೆ ಇಡ್ಲಿ ತಿಂದು ಬಾಂಬ್ ಇಟ್ಟು ಹೋಗಿದ್ದಾನೆ: ಡಿಕೆ ಶಿವಕುಮಾರ್
ರವೆ ಇಡ್ಲಿ ತಿಂದು ಆರೋಪಿ ಬಾಂಬ್ ಇಟ್ಟು ಹೋಗಿದ್ದಾನೆ. ಬ್ಯಾಗ್ ಇಟ್ಟು ಒಂದು ಗಂಟೆಯ ನಂತರ ಬ್ಲಾಸ್ಟ್ ಆಗಿದೆ. ಎಲ್ಲವೂ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಬಾಂಬ್ ಸ್ಫೋಟ ಸಂಭವಿಸಿದ ರಾಮೇಶ್ವರಂ ಕೆಫೆಗೆ ತೆರಳಿ ನಿನ್ನೆ ರಾತ್ರಿ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಟೈಮರ್ ಬಳಸಿ ಮಧ್ಯಾಹ್ನ 12.55ಕ್ಕೆ ಕಡಿಮೆ ತೀವ್ರತೆಯ ಬಾಂಬ್ ಸ್ಫೋಟಿಸಲಾಗಿದೆ. ಸ್ಫೋಟದಲ್ಲಿ ಗ್ರಾಹಕರು, ಸಿಬ್ಬಂದಿ ಸೇರಿ 10 ಜನ ಗಾಯಗೊಂಡಿದ್ದಾರೆ. ಆದರೆ ಯಾರ ಜೀವಕ್ಕೆ ಅಪಾಯವಿಲ್ಲ ಎಂದು ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:30 pm, Sat, 2 March 24