
ಬೆಂಗಳೂರು, (ಜೂನ್ 09): ರಾಜಧಾನಿ ಬೆಂಗಳೂರಿನಲ್ಲಿ ಕಸದ (bengaluru garbage) ಸಮಸ್ಯೆ ಮತ್ತೆ ತಲೆದೂರಿದೆ. ನಗರದ ಹಲವೆಡೆ ರಸ್ತೆಯುದ್ಧಕ್ಕೂ ಕಸದ ರಾಶಿಯೇ ಕಾಣಿಸುತ್ತಿದೆ. ಸದ್ಯ ಮಳೆಗಾಲ ಆರಂಭವಾಗಿರುವುದರಿಂದ ವಿಲೇವಾರಿಯಾಗದ ಕಸ ದುರ್ವಾಸನೆ ಬೀರುತ್ತಿದ್ದು, ಸಾರ್ವಜನಿಕರು ರಸ್ತೆಯಲ್ಲಿ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡು ತಿಂಗಳುಗಳಿಂದ ಕಸ ಸಾಗಿಸದ ಕಾರಣ, ತ್ಯಾಜ್ಯ ರಸ್ತೆ ಮಧ್ಯಕ್ಕೆ ಬಂದು ವಾಹನ ಸವಾರರಿಗೂ ತೊಂದರೆಯಾಗುತ್ತಿದೆ.
ಇನ್ನು ಅಚ್ಚರಿಯ ವಿಷಯ ಅಂದ್ರೆ, ಸ್ವಚ್ಛತೆ ಕಾಪಾಡುವುದಕ್ಕಾಗಿ GBA ಕಡೆಯಿಂದ ಮಾರ್ಷಲ್ ಗಳನ್ನು ನಿರ್ಮಿಸದ್ದಾರೆ. ಅದ್ರೆ ಮಾರ್ಷಲ್ ಗಳು ಇದರ ಬಗ್ಗೆ ಗಮನವನ್ನು ಅರಿಸುತ್ತಿಲ್ಲ.ಇಡೀ ರಸ್ತೆಯಲ್ಲಿ ಸ್ಥಳೀಯ ನಿವಾಸಿಗಳು ರಸ್ತೆಯಲ್ಲೇ ಬೇಕಾಬಿಟ್ಟಿ ಕಸವನ್ನು ಎಸೆದು ಹೋಗುತ್ತಿದ್ದಾರೆ.
ಇನ್ನು ಕಳೆದ ಎರಡು ತಿಂಗಳಿನಿಂದ ಟಿಪ್ಪರ್‌ಗಳು ಸರಿಯಾಗಿ ಬರ್ತಿಲ್ಲ. ಮನೆಯಲ್ಲೇ ಕಸದ ರಾಶಿ ಬೀಳ್ತಿದೆ. ಹಸಿ ಕಸದ ವಾಸನೆಯಿಂದ ಸೊಳ್ಳೆ ಕಾಟ ಜಾಸ್ತಿಯಾಗಿದೆ. ಅಧಿಕಾರಿಗಳು ಇದನ್ನ ಅರ್ಥ ಮಾಡ್ಕೋಬೇಕು ಸರಿಯಾಗಿ ಕಸದ ಆಟೋಗಳು ಮನೆ ಬಳಿ ಬರ್ತಿಲ್ಲ. ಇದರಿಂದ ಜನರು ರಸ್ತೆಯಲ್ಲೇ ಕಸವನ್ನು ಎಸೆಯುತ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ.
‘ಕಸಾ ಪೋರ್ಟಲ್’ ನೀಡಿರುವ ಅಂಕಿಅಂಶಗಳ ಪ್ರಕಾರ, ಒಂದು ತಿಂಗಳ ಹಿಂದೆ 3,200 ರಷ್ಟಿದ್ದ ಸಕ್ರಿಯ ಬ್ಲ್ಯಾಕ್ ಸ್ಪಾಟ್‌ಗಳ ಸಂಖ್ಯೆ ಈಗ ಬರೋಬ್ಬರಿ 5,445 ಕ್ಕೆ ಏರಿಕೆಯಾಗಿದೆ. ಇದರಿಂದ ಉದ್ಯಾನ ನಗರಿ ಈಗ ಕಸದ ನಗರಿಯಾಗುತ್ತಿದೆಯೇ ಎಂಬ ಆತಂಕ ಶುರುವಾಗಿದೆ.
ಕಳೆದ 13 ವರ್ಷಗಳಿಂದ ಕಸ ಸಂಗ್ರಹಣೆ ಟೆಂಡರ್‌ಗಳನ್ನು ಅಂತಿಮಗೊಳಿಸದಿರುವುದು, ಟಿಪ್ಪರ್ ಮತ್ತು ಸಿಬ್ಬಂದಿಯ ಕೊರತೆ, ಸಿಬ್ಬಂದಿಯ ಅನಿಯಮಿತ ಲಭ್ಯತೆ, ಸಂಬಳ ಪಾವತಿಯಲ್ಲಿ ವಿಳಂಬ ಮತ್ತು ಕಸ ರವಾನಿಸುವ ವಾಹನಗಳ ರಿಪೇರಿಯಿಂದಾಗಿ ನಗರದಲ್ಲಿ ಕಸ ಸಂಗ್ರಹಣಾ ವ್ಯವಸ್ಥೆ ಸಂಪೂರ್ಣವಾಗಿ ಕುಸಿಯಲು ಪ್ರಮುಖ ಕಾರಣ ಎಂದು ತಿಳಿದುಬಂದಿದೆ.
ವರದಿ: ಅರುಣ್ ಕುಮಾರ್ ಟಿವಿ9 ಬೆಂಗಳೂರು