
ಬೆಂಗಳೂರು, ಆಗಸ್ಟ್ 31: ಕರ್ನಾಟಕದಲ್ಲಿರುವ (Karnataka) 108 ಆ್ಯಂಬುಲೆನ್ಸ್ (Ambulance) ಅಥವಾ ಬೇರೆ ಖಾಸಗಿ ಆಂಬ್ಯುಲೆನ್ಸ್ಗಳ ಸೇವೆ ತುರ್ತಾಗಿ ಸಿಗುವುದು ಕಷ್ಟ. ಆ್ಯಂಬುಲೆನ್ಸ್ನ ಕಂಟ್ರೋಲ್ ರೂಂಗೆ ಕಾಲ್ ಮಾಡಿ, ಅದು ಸ್ಥಳದಲ್ಲಿ ಇದೆಯಾ ಎಂದು ಪರಿಶೀಲಿಸಿ ಅದು ಬರುವಷ್ಟರಲ್ಲಿ ರೋಗಿಗಳ ಗೋಲ್ಡನ್ ಅವರ್ ಕಡಿಮೆಯಾಗಿರುತ್ತೆ. ಇಂತಹ ಸಮಸ್ಯೆಗಳಿಗೆ ಬ್ರೇಕ್ ಹಾಕುವುದದಕ್ಕೆ ಆರೋಗ್ಯ ಇಲಾಖೆ ಆ್ಯಪ್ ಆಧಾರಿತ ಸೇವೆ ಒದಗಿಸಲು ಮುಂದಾಗಿದೆ. ಆ ಮೂಲಕ ಇನ್ಮುಂದೆ ಆ್ಯಂಬುಲೆನ್ಸ್ ಸೇವೆಯಲ್ಲಿ ಮತ್ತಷ್ಟು ಸರಳೀಕರಣವಾಗಲಿದೆ.
ಅದೆಷ್ಟೋ ರೋಗಿಗಳಿಗೆ ಆ್ಯಂಬುಲೆನ್ಸ್ ಸಿಗದೆ ಪರದಾಟ ನಡೆಸುವುದನ್ನ ನಾವು ನೋಡಿದ್ದೇವೆ. ನಾವು ಒಂದು ಆ್ಯಂಬುಲೆನ್ಸ್ ಸೇವೆ ಪಡೆಯಬೇಕು ಅಂದರೆ ಕೆಲವೊಮ್ಮೆ ವೇಟಿಂಗ್ ಲಿಸ್ಟ್‌ನಲ್ಲಿರಬೇಕಾಗುತ್ತೆ. ಇದರಿಂದ ತುರ್ತಾಗಿ ಆಸ್ಪತ್ರೆಗೆ ಹೋಗೋದಕ್ಕೆ ಸಾಧ್ಯವಾಗುದಿಲ್ಲ. ಹೀಗಾಗಿ ಅನೇಕ ಸಮಸ್ಯೆಗಳು ಉಂಟಾಗಿ, ಅದೆಷ್ಟೋ ರೋಗಿಗಳು ಜೀವ ಕಳೆದುಕೊಂಡಿರುವ ಉದಾಹರಣೆಗಳಿವೆ. ಇಂತಹ ಸಮಸ್ಯೆ ಬಾರದಂತೆ ಎಚ್ಚರಿಕೆ ವಹಿಸುವುದಕ್ಕೆ ಆರೋಗ್ಯ ಇಲಾಖೆ ಹೊಸ ಯೋಜನೆ ಜಾರಿಗೆ ತರುತ್ತಿದೆ.
ಓಲಾ, ಉಬರ್, ರ‍್ಯಾಪಿಡೋ, ಆಟೋ, ಕ್ಯಾಬ್ಗಳನ್ನು ಬುಕ್ ಮಾಡುವ ಮಾದರಿಯಲ್ಲಿ ಆ್ಯಂಬುಲೆನ್ಸ್ ಸೇವೆಯನ್ನು ಒದಗಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಈಗಾಗಲೇ 108 ಆ್ಯಂಬುಲೆನ್ಸ್ ಜವಾಬ್ದಾರಿಯನ್ನ ಸಂಪೂರ್ಣವಾಗಿ ಸರ್ಕಾರವೇ ನೋಡಿಕೊಳ್ಳುತ್ತಿದ್ದು, ಇದೀಗ ಆ್ಯಂಬುಲೆನ್ಸ್ ಸೇವೆಯನ್ನ ಮತ್ತಷ್ಟು ಸುಲಭವಾಗಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿರುವ ನಕಲಿ ವೈದ್ಯರ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯ ಪ್ಲ್ಯಾನ್ ಇದು
ಆ್ಯಪ್‌ನಲ್ಲಿ ನಮ್ಮ ಸ್ಥಳದಿಂದ ಯಾವ ಆಸ್ಪತ್ರೆ ಅಥವಾ ಪಿಹೆಚ್‌ಸಿ ಸೆಂಟರ್‌ಗೆ ಹೋಗಬೇಕು ಎಂಬುದನ್ನು ಸೆಲೆಕ್ಟ್ ಮಾಡಿದರೆ ಹತ್ತಿರವಿರುವ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆ್ಯಂಬುಲೆನ್ಸ್ ಬರಲಿದೆ. ಈಗಿರುವಂತೆ 108 ನಲ್ಲಿ ಉಚಿತ ಸೇವೆ ಸಿಗಲಿದ್ದು, ಇದರಲ್ಲಿ ಖಾಸಗಿ ಆ್ಯಂಬುಲೆನ್ಸ್ಗಳನ್ನ ಕೂಡ ಸೇರಿಸಿಕೊಳ್ಳಲಾಗುತ್ತಿದೆ. ಎಲ್ಲಾ ಖಾಸಗಿ ಆ್ಯಂಬುಲೆನ್ಸ್ಗಳಿಗೆ ಏಕರೂಪದ ಮೊತ್ತವನ್ನ ಇಲಾಖೆಯಿಂದಲೇ ನಿಗದಿ ಮಾಡಲಿದ್ದು, ಹೆಚ್ಚು ಹಣ ಪಡೆಯಲು ಇಲ್ಲಿ ಅವಕಾಶವಿರುವುದಿಲ್ಲ.
ಈಗಾಗಲೇ ಇಲಾಖೆಯಿಂದ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಿದ್ದು, ಇದರ ದುರುಪಯೋಗವಾಗುವ ಅವಕಾಶಗಳು ಇದೆಯಾ ಎಂದು ವರದಿ ನೀಡಲು ಹೇಳಿದೆ. ಈ ಹಿನ್ನೆಲೆ ಇದರ ಆಗುಹೋಗುಗಳ ಚರ್ಚೆ ಬಳಿಕ ಯೋಜನೆ ಜಾರಿಯಾಗಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಆರೋಗ್ಯ ಇಲಾಖೆಯ ಈ ಆನ್‌ಲೈನ್ ಆ್ಯಂಬುಲೆನ್ಸ್ ಸೇವೆಯನ್ನು ಜನರು ಕೂಡ ಸ್ವಾಗತಿಸಿದ್ದಾರೆ. ಹೆಚ್ಚು ಹಣ ವಸೂಲಿ ಮಾಡುವುದಕ್ಕೆ ಕಡಿವಾಣ ಹಾಕಲು ಸಹಕಾರಿಯಾಗಲಿದೆ. ಇದು ಸರ್ಕಾರದಿಂದ ಒಳ್ಳೆಯ ಪ್ರಯತ್ನ ಅಂತ ರಮೇಶ್ ಎಂಬುವವರು ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿದ್ದಾರೆ 1 ಸಾವಿರಕ್ಕೂ ಅಧಿಕ ನಕಲಿ ವೈದ್ಯರು: ಆರೋಗ್ಯ ಇಲಾಖೆಗೆ ದೂರು
ಒಟ್ಟಿನಲ್ಲಿ ಸರ್ಕಾರದಿಂದ ಹೊಸ ಯೋಜನೆಯನ್ನ ಜಾರಿಗೆ ತರುತ್ತಿದ್ದು, ಇದರಿಂದ ರೋಗಿಗಳಿಗೆ ಸೂಕ್ತ ಸಮಯದಲ್ಲಿ ಆ್ಯಂಬುಲೆನ್ಸ್ ಸೇವೆ ಸಿಗಲಿದೆ. ಇನ್ನು ಕೆಲವೇ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಯೋಜನೆ ಸಿದ್ಧವಾಗಲಿದ್ದು, ಆದಷ್ಟು ಬೇಗ ಆನ್‌ಲೈನ್ ಸೇವೆ ಜಾರಿಯಾಗಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:32 am, Sun, 31 August 25