Bengaluru News: ಬೈಕ್​ ಕಳ್ಳತನ ಮಾಡ್ತಿದ್ದ ಐವರ ಬಂಧನ; 20 ಲಕ್ಷ ರೂ. ಮೌಲ್ಯದ 22 ಬೈಕ್, ಒಂದು ಆಟೋ ಜಪ್ತಿ

|

Updated on: Jun 20, 2023 | 2:26 PM

ಬೈಕ್​ ಕಳ್ಳತನ ಮಾಡುತ್ತಿದ್ದ ಐವರು ಆರೋಪಿಗಳನ್ನ ಕಾಟನ್​ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಗರದ ಕಾಟನ್ ಪೇಟೆ, ಚಂದ್ರಾಲೇಔಟ್, ಜ್ಞಾನ ಭಾರತಿ, ಅಮೃತಹಳ್ಳಿ, ಹಲಸೂರು, ಎಸ್ ಆರ್ ನಗರ ಸೇರಿದಂತೆ ಹಲವು ಠಾಣಾ ವ್ಯಾಪ್ತಿಯಲ್ಲಿ ಕೈ ಚಳಕ ತೋರಿಸಿದ್ದ ಈ ಗ್ಯಾಂಗ್​ನ ಐವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದು,20ಲಕ್ಷ ಮೌಲ್ಯದ ಬೈಕ್​ನ್ನ ವಶಕ್ಕೆ ಪಡೆದಿದ್ದಾರೆ.

Bengaluru News: ಬೈಕ್​ ಕಳ್ಳತನ ಮಾಡ್ತಿದ್ದ ಐವರ ಬಂಧನ; 20 ಲಕ್ಷ ರೂ. ಮೌಲ್ಯದ 22 ಬೈಕ್, ಒಂದು ಆಟೋ ಜಪ್ತಿ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಬೈಕ್​ ಕಳ್ಳತನ(Theft) ಮಾಡುತ್ತಿದ್ದ ಐವರು ಆರೋಪಿಗಳನ್ನ ಕಾಟನ್​ಪೇಟೆ ಠಾಣೆ ಪೊಲೀಸರು(Cottonpete Police Station) ಬಂಧಿಸಿದ್ದಾರೆ. ನಗರದಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಈ ಖತರ್ನಾಕ್ ಗ್ಯಾಂಗ್ ಕಾಟನ್ ಪೇಟೆ, ಚಂದ್ರಾಲೇಔಟ್, ಜ್ಞಾನ ಭಾರತಿ, ಅಮೃತಹಳ್ಳಿ, ಹಲಸೂರು, ಎಸ್ ಆರ್ ನಗರ ಸೇರಿದಂತೆ ಹಲವು ಠಾಣಾ ವ್ಯಾಪ್ತಿಯಲ್ಲಿ ಈ ಗ್ಯಾಂಗ್​ ಕೈ ಚಳಕ ತೋರಿಸಿತ್ತು. ಇದೀಗ ಐವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದು, ಅವರಿಂದ 20ಲಕ್ಷ ಮೌಲ್ಯದ 22ಬೈಕ್ ಸೇರಿ ಒಂದು ಆಟೋವನ್ನ ಜಪ್ತಿ ಮಾಡಲಾಗಿದೆ. ಸದ್ಯ ಆರೋಪಿಗಳನ್ನ ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ. ಈ ಕುರಿತು ಕಾಟನ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾದಕ ವಸ್ತು ಮಾರಾಟಕ್ಕೆ ಯತ್ನಿಸಿದ್ದ ಓರ್ವ ಆರೋಪಿಯನ್ನ ಬಂಧಿಸಿದ ಪೊಲೀಸರು

ಬೆಂಗಳೂರು: ಕೊಟ್ಟಿಗೆಪಾಳ್ಯ ಬಳಿ ಡ್ರಗ್ಸ್​​ ಮಾರಾಟಕ್ಕೆ ಯತ್ನಿಸಿದ್ದ ಓರ್ವ ಆರೋಪಿಯನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ವೇಳೆ 2.97 ಲಕ್ಷ ಮೌಲ್ಯದ ಎಂಡಿಎಂಎಯನ್ನ ಜಪ್ತಿ ಮಾಡಲಾಗಿದೆ. ಮತ್ತೋರ್ವ ಆರೋಪಿಗಾಗಿ ಪೊಲೀಸರ ಹುಡುಕಾಟ ನಡೆಸಿದ್ದು, ಕಾಮಾಕ್ಷಿಪಾಳ್ಯ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ಬೈಕ್ ಕದ್ದು ಆಂಧ್ರದಲ್ಲಿ ಮಾರಾಟ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್

ಮಾರಣಾಂತಿಕ ಹಲ್ಲೆ ನಡೆಸಿ ದರೋಡೆ ಮಾಡಿದ್ದ ಆರೋಪಿಗಳ ಬಂಧನ

ಬೆಂಗಳೂರು ಗ್ರಾಮಾಂತರ: ಮಾರಣಾಂತಿಕ ಹಲ್ಲೆ ನಡೆಸಿ ದರೋಡೆ ಮಾಡಿದ್ದ ಆರೋಪಿಗಳನ್ನು ನೆಲಮಂಗಲ ಪೊಲೀಸರು ಬಂಧಿಸಿದ್ದಾರೆ. ತೇಜಸ್, ಚಾಂದ್ ಪಾಷ, ಸಲ್ಮಾನ್ ಖಾನ್ ಬಂಧಿತ ಆರೋಪಿಗಳು. ಇವರಿಂದ 5 ಮೊಬೈಲ್, ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ. ಇದೇ ತಿಂಗಳ 10‌ರ ರಾತ್ರಿ ಬಸವರಾಜು ಎನ್ನುವವರ ಮೇಲೆ ನೆಲಮಂಗಲ ತಾಲೂಕಿನ ಗಂಗಾಧರಯ್ಯನ ಪಾಳ್ಯದ ಬಳಿ ಕುತ್ತಿಗೆಗೆ ಚಾಕುವಿನಿಂದ ಇರಿದು, ಹಲ್ಲೆ ನಡೆಸಿ, ಮೊಬೈಲ್ ಕಸಿದು ಪರಾರಿಯಾಗಿದ್ದರು. ಈ ಕುರಿತು ನೆಲಮಂಗಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:07 pm, Tue, 20 June 23