ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ನಿರ್ವಾಹಣೆಗೆ ಮಹತ್ವದ ಹೆಜ್ಜೆ; ಇಂದಿನಿಂದ ಆಕಾಶದಲ್ಲಿ ಹಾರಾಡಲಿವೆ ಡ್ರೋನ್​ಗಳು

ಇಂದಿನಿಂದ ಒಂದು ವಾರ ಬೆಂಗಳೂರಿನಲ್ಲಿ ಪ್ರಾಯೋಗಿಕ ಡ್ರೋನ್ ಹಾರಾಟ ನಡೆಯಲಿದೆ. ಸಂಚಾರ ನಿರ್ವಹಣೆ, ವಾಹನ ದಟ್ಟಣೆಗೆ ಡ್ರೋನ್​ಗಳ ಬಳಸಲಾಗುತ್ತೆ.

ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ನಿರ್ವಾಹಣೆಗೆ ಮಹತ್ವದ ಹೆಜ್ಜೆ; ಇಂದಿನಿಂದ ಆಕಾಶದಲ್ಲಿ ಹಾರಾಡಲಿವೆ ಡ್ರೋನ್​ಗಳು
ಡ್ರೋನ್ ದೃಶ್ಯ
Follow us
ಆಯೇಷಾ ಬಾನು
|

Updated on: Jun 20, 2023 | 2:21 PM

ಬೆಂಗಳೂರು: ಮೂರು ತಿಂಗಳಲ್ಲಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಕಡಿಮೆ ಆಗಬೇಕು(Bengaluru Traffic). ಡ್ರೋನ್ ಕ್ಯಾಮೆರಾಗಳನ್ನು(Drones) ಬಳಸಿ ನಗರದ ಟ್ರಾಫಿಕ್ ಅನ್ನು ನಿಯಂತ್ರಿಸಲು ಪೊಲೀಸರಿಗೆ ಗೃಹ ಸಚಿವ ಡಾ ಜಿ.ಪರಮೇಶ್ವರ್(Dr G Parameshwar) ಸೂಚನೆ ನೀಡಿದ್ದರು. ಈ ಸೂಚನೆ ಬೆನ್ನಲ್ಲೇ ಈಗ ಸಂಚಾರಿ ಪೊಲೀಸರು(Traffic Police) ಫೀಲ್ಡ್ ನಲ್ಲಿ ಮತ್ತಷ್ಟು ಆ್ಯಕ್ಟೀವ್ ಆಗಲಿದ್ದಾರೆ. ಇಂದಿನಿಂದ ಬೆಂಗಳೂರು ಟ್ರಾಫಿಕ್ ಮೇಲೆ ಡ್ರೋನ್ ಕಣ್ಣಿಡಲಿದೆ.

ಇಂದಿನಿಂದ ಒಂದು ವಾರ ಬೆಂಗಳೂರಿನಲ್ಲಿ ಪ್ರಾಯೋಗಿಕ ಡ್ರೋನ್ ಹಾರಾಟ ನಡೆಯಲಿದೆ. ಸಂಚಾರ ನಿರ್ವಹಣೆ, ವಾಹನ ದಟ್ಟಣೆಗೆ ಡ್ರೋನ್​ಗಳ ಬಳಸಲಾಗುತ್ತೆ. ಸಂಚಾರ ದಟ್ಟಣೆಯ ಜಾಗಗಳಲ್ಲಿ ಡ್ರೋನ್‌ ಮೂಲಕ ಚಿತ್ರೀಕರಣ ಮಾಡಿ ಸಂಚಾರ ದಟ್ಟಣೆಯ ಮಾಹಿತಿ ಸಂಗ್ರಹಿಸಲಾಗುತ್ತೆ. ಬಳಿಕ ಸಂಚಾರ ನಿರ್ವಹಣಾ ಕೇಂದ್ರ (ಟಿಎಂಸಿ)ದಲ್ಲಿ ಸಮಸ್ಯೆ ವಿಶ್ಲೇಷಿಸಿ ಸಂಚಾರ ನಿರ್ವಹಣೆ ಮಾಡಲಾಗುತ್ತೆ.

ಇದನ್ನೂ ಓದಿ: ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಡ್ರೋನ್‌ ಬಳಕೆ; ಮೂರು ತಿಂಗಳಲ್ಲಿ ಟ್ರಾಫಿಕ್ ಮುಕ್ತ ನಗರವಾಗಿಸಲು ಸೂಚನೆ

ಸಂಚಾರ ದಟ್ಟಣೆ ವೀಕ್ಷಿಸಿ ಕ್ರಮ ತೆಗೆದುಕೊಳ್ಳುವ ಟ್ರಾಫಿಕ್ ಪೊಲೀಸರು

ಸೇಫ್ ಸಿಟಿ ಯೋಜನೆಯಡಿ ಡ್ರೋನ್​ಗಳನ್ನು ಖರೀದಿಸಿದ್ದು ನಗರದ ಎಲ್ಲಾ ಸಂಚಾರ ವಿಭಾಗದಲ್ಲಿ ಪ್ರಯೋಗಿಕವಾಗಿ ಬಳಸಲಾಗುತ್ತಿದೆ. ಸಂಚಾರ ಪೊಲೀಸರಿಗೆ ಡ್ರೋನ್‌ ಬಳಕೆ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಸದ್ಯ ಹೆಬ್ಬಾಳ ಮೇಲ್ಸೇತುವೆ, ಸಿಲ್ಕ್‌ ಬೋರ್ಡ್‌ ಜಂಕ್ಷನ್,‌ ಕೆ.ಆರ್‌.ಪುರ ಮೇಲ್ಸೇತುವೆ, ಮಾರತ್‌ಹಳ್ಳಿ, ಸಾರಕ್ಕಿ ಜಂಕ್ಷನ್,‌ ಬನಶಂಕರಿ ಬಸ್‌ ನಿಲ್ದಾಣದ ಬಳಿ, ಇಬ್ಬಲೂರು ಜಂಕ್ಷನ್,‌ ಟ್ರಿನಿಟಿ ಜಂಕ್ಷನ್ ನಲ್ಲಿ ಡ್ರೋನ್ ಬಳಸಲಾಗುತ್ತಿದ್ದು ಸಂಚಾರ ದಟ್ಟಣೆ ವೀಕ್ಷಿಸಿ ಟ್ರಾಫಿಕ್ ಪೊಲೀಸರು ಕ್ರಮ ತೆಗೆದುಕೊಳ್ಳಲಿದ್ದಾರೆ. ಇನ್ನು ಪ್ರಾಯೋಗಿಕ ಹಾರಾಟಕ್ಕಾಗಿ ಕೇವಲ ಎರಡು ಡ್ರೋನ್​ಗಳನ್ನು ಖರೀದಿಸಿದ್ದು ನಂತರದಲ್ಲಿ ಹೆಚ್ಚುವರಿ ಮತ್ತೆರಡು ಡ್ರೋನ್​ ಗಳನ್ನು ಖರೀದಿಸಲಾಗುವುದು.

ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಕಳೆದ ಶುಕ್ರವಾರ ಹಿರಿಯ ಅಧಿಕಾರಿಗಳ ಜೊತೆ ತಮ್ಮ ಮೊದಲ ಅಪರಾಧ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಸಚಿವ ಜಿ ಪರಮೇಶ್ವರ್, ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡಲು ನಾನು ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಮೂರು ತಿಂಗಳ ಗಡುವನ್ನು ನೀಡಿದ್ದೇನೆ. ನಗರವು ವಿಶ್ವದ ಅತ್ಯಂತ ಜನದಟ್ಟಣೆಯ ನಗರಗಳಲ್ಲಿ ಒಂದಾಗಿದೆ ಎಂಬ ಅಪಖ್ಯಾತಿ ಗಳಿಸಿದೆ. ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾದರೆ ನಿಖರ ಕಾರಣ ಪತ್ತೆಗೆ ಪೊಲೀಸರಿಗೆ ಆಡಚಣೆಯಾಗುತ್ತಿದೆ. ಹೀಗಾಗಿ ವಾಹನ ದಟ್ಟಣೆ ತಗ್ಗಿಸಲು ಇನ್ಮುಂದೆ ಡ್ರೋನ್‌ ಕ್ಯಾಮರಾಗಳನ್ನು ಬಳಸಿ ಸಂಚಾರ ನಿರ್ವಹಣೆ ಮಾಡಲಾಗುತ್ತದೆ. ವಾಹನಗಳ ಓಡಾಟಕ್ಕೆ ಅಡ್ಡಿಯಾದರೆ ಕೂಡಲೇ ಡ್ರೋನ್‌ ಬಳಸಿ ಯಾವ ಜಾಗದಲ್ಲಿ ಟ್ರಾಫಿಕ್ ಜಾಮ್ ಆಗಿದೆ ಎಂಬುದನ್ನು ಪತ್ತೆ ಮಾಡಿ ಸಮಸ್ಯೆ ಬಗೆಹರಿಸಬೇಕು. ಪೊಲೀಸ್‌ ನಿಯಂತ್ರಣ ಕೊಠಡಿಗೆ ಈ ಡ್ರೋನ್‌ ಕ್ಯಾಮರಾಗಳು ಸಂಪರ್ಕ ಹೊಂದಿರುತ್ತವೆ. ಸಂಚಾರ ದಟ್ಟಣೆ ಉಂಟಾದ ಸ್ಥಳದಿಂದಲೇ ಇನ್‌ಸ್ಪೆಕ್ಟರ್‌ಗಳ ವಾಹನದಲ್ಲಿ ಆ ಕ್ಯಾಮರಾಗಳನ್ನು ನಿರ್ವಹಿಸುವ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದರು.

ಇನ್ನು ಪ್ರತಿ ದಿನ ಪಿಕ್‌ ಅವರ್‌ಗಳಲ್ಲಿ ಅಂದರೆ ಬೆಳಗ್ಗೆ ಹಾಗೂ ಸಂಜೆ ವೇಳೆ ಎರಡು ಗಂಟೆಗಳು ಸಂಚಾರ ವಿಭಾಗದ ಎಲ್ಲ ಪೊಲೀಸರು ರಸ್ತೆಯಲ್ಲಿ ನಿಂತು ಸಂಚಾರ ನಿರ್ವಹಣೆ ಮಾಡಬೇಕು. ಸಂಚಾರ ದಟ್ಟಣೆ ಉಂಟಾದರೆ ಡಿಸಿಪಿ ಹಾಗೂ ಎಸಿಪಿ ಅವರನ್ನು ಸಹ ಹೊಣೆ ಮಾಡಲಾಗುತ್ತದೆ ಎಂದು ಗೃಹ ಸಚಿವರು ಎಚ್ಚರಿಕೆ ನೀಡಿದ್ದರು.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ