ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ವಿರುದ್ಧ ತಂತ್ರ ಹೂಡಿದ್ರಾ ಡಿಕೆಶಿ..? ಪ್ರಸನ್ನ ಕುಮಾರ್​ ಆಡಿಯೋ ಕೊಡ್ತಿದೆ ಸುಳಿವು

ಮಾಜಿ ಶಾಸಕ ಪ್ರಸನ್ನ ಕುಮಾರ್‌ ಆಡಿಯೋ ವೈರಲ್ ಆಗಿದೆ. ಟಿಕೆಟ್ ಅಂತು 200 ಪರ್ಸೆಂಟ್ ಅವನಿಗೆ ಕೊಡೋದಿಲ್ಲ. ಅವನಿಗಂತು ಯಾವುದೇ ಕಾರಣಕ್ಕೂ ಟಿಕೆಟ್ ಸಿಗಲ್ಲ. ಇವತ್ತೇ ಹೇಳಿರುತ್ತೇನೆ ನೋಡ್ತಿರು ಎಂದು ಪ್ರಸನ್ನ ಕುಮಾರ್‌ ಮಾತನಾಡಿರುವ ಆಡಿಯೋ ವೈರಲ್ ಆಗಿದೆ.

ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ವಿರುದ್ಧ ತಂತ್ರ ಹೂಡಿದ್ರಾ ಡಿಕೆಶಿ..? ಪ್ರಸನ್ನ ಕುಮಾರ್​ ಆಡಿಯೋ ಕೊಡ್ತಿದೆ ಸುಳಿವು
ಮಾಜಿ ಶಾಸಕ ಪ್ರಸನ್ನ ಕುಮಾರ್‌
Follow us
ಆಯೇಷಾ ಬಾನು
|

Updated on:Feb 28, 2021 | 1:58 PM

ಬೆಂಗಳೂರು: ಅಖಂಡ ಶ್ರೀನಿವಾಸ ಮೂರ್ತಿ ವಿರುದ್ಧ ಡಿಕೆಶಿ ರಣತಂತ್ರ ಹೆಣುದ್ರಾ? ಪ್ರಸನ್ನ ಕುಮಾರ್‌ಗೆ ಪುಲಿಕೇಶಿನಗರ ಟಿಕೆಟ್ ಕೊಡ್ತಾರಾ? ಕಾರ್ಯಕರ್ತನ ಜತೆ ಈ ಬಗ್ಗೆ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಪ್ತ, ಮಾಜಿ ಶಾಸಕ ಪ್ರಸನ್ನ ಕುಮಾರ್‌ ಆಡಿಯೋ ವೈರಲ್ ಆಗಿದೆ. ಟಿಕೆಟ್ ಅಂತು 200 ಪರ್ಸೆಂಟ್ ಅವನಿಗೆ ಕೊಡೋದಿಲ್ಲ. ಅವನಿಗಂತು ಯಾವುದೇ ಕಾರಣಕ್ಕೂ ಟಿಕೆಟ್ ಸಿಗಲ್ಲ. ಇವತ್ತೇ ಹೇಳಿರುತ್ತೇನೆ ನೋಡ್ತಿರು ಎಂದು ಪ್ರಸನ್ನ ಕುಮಾರ್‌ ಮಾತನಾಡಿರುವ ಆಡಿಯೋ ವೈರಲ್ ಆಗಿದೆ.

ಅಖಂಡ ಶ್ರೀನಿವಾಸಮೂರ್ತಿ ಮೇಲೆ ಯಾವುದೇ ಬೇಸರವಿಲ್ಲ. ಆಡಿಯೋದಲ್ಲಿ ಮಾತನಾಡಿರುವುದು ನನ್ನದಲ್ಲ ಎಂದು ಹೇಳಲ್ಲ. ಹಳೆಯ ಆಡಿಯೋವನ್ನ ಈಗ ವೈರಲ್ ಮಾಡಲಾಗಿದೆ ಎಂದು ಬೆಂಗಳೂರಿನಲ್ಲಿ ಮಾಜಿ ಶಾಸಕ ಪ್ರಸನ್ನ ಕುಮಾರ್ ತಿಳಿಸಿದ್ದಾರೆ. ಜೆಡಿಎಸ್ ನಲ್ಲಿದ್ದಾಗ ಇದನ್ನ ಮಾತನಾಡಿರಬಹುದು. ಆದ್ರೆ ಈಗ ನಾನು ಮಾತನಾಡಿಲ್ಲ. ಶಾಸಕರ ಸಂಬಂಧಿ ನವೀನ್ ಮೇಲೆ ಬೇಸರವಿದೆ. ಯಾವುದೇ ಷರತ್ತು ಇಲ್ಲದೆ ಕಾಂಗ್ರೆಸ್​ ಸೇರಿದ್ದೇನೆ. ನಮ್ಮ ಅಧ್ಯಕ್ಷರು ಕೈಗೊಳ್ಳುವ ನಿರ್ಧಾರಕ್ಕೆ ನಾನು ಬದ್ಧ ಎಂದು ಹೇಳಿದ್ರು.

ಅಷ್ಟಕ್ಕೂ ಆ ಆಡಿಯೋದಲ್ಲಿ ಏನಿದೆ? ಪ್ರಸನ್ನ ಕುಮಾರ್ : ಮೊದಲು ವಿಠಲ ದಯಾನಂದ್ ಅಶೋಕ್ ಬೇಕಾಗಿತ್ತು ಈಗ್ಯಾಕೆ ನಮ್ಮ ಹತ್ತಿರ ಬಂದ ಕಾರ್ಯಕರ್ತ : ಹುಂ ಪ್ರಸನ್ನ ಕುಮಾರ್: ಶಿಸ್ತಿನ ಸಮಿತಿ ಇದೆ ಅಲ್ಲಿ ಕೊಡ್ತೀನಿ ನೀನು ಕೊಟ್ಟಿರೋ ಕಂಪ್ಲೆಂಟ್ ಅವರು ಏನು ತೀರ್ಮಾನ ಮಾಡ್ತಾರೋ ಮಾಡಲಿ ಅಂತ ಹೇಳಿ ಕಳುಹಿಸಿದ್ದಾನಂತೆ. ಕಾರ್ಯಕರ್ತ: ಹುಂ… ಪ್ರಸನ್ನ ಕುಮಾರ್ : ನಾನು ಹೇಳಿದೆ ಅವನಿಗೆ ಯಾರು ಇಲ್ಲಾ‌ ನಾನೇ ಅಂತ ತಿಳಿದುಕೊಂಡಿದ್ದಾ‌ನೆ ಪುಲಿಕೇಶಿ ನಗರದಲ್ಲಿ. ಮೊದಲು ನೀನು ನನ್ನ ಪಾರ್ಟಿಗೆ ಸೇರಿಸಿಕೊಳ್ಳಿ ಅವನ ಮಾತೆಲ್ಲಾ ಕಡಿಮೆ‌ ಆಗ್ತದೆ ಅಂದೆ. ಕಾರ್ಯಕರ್ತ : ಹುಂ.. ಪ್ರಸನ್ನ ಕುಮಾರ್ : ನಡಿ ಕಾಂಗ್ರೆಸ್ ಆಫೀಸಿಗೆ ನಡಿ ಸಲೀಂ‌ ಬರ್ತಾನೆ ಮಾತಾಡೋಣ ಅಲ್ಲೆ ಡಿಸೈಡ್ ಮಾಡ್ತೀನಿ ಅಂತ. ಕಾರ್ಯಕರ್ತ: ಹುಂ ಪ್ರಸನ್ನ ಕುಮಾರ್ : ಪಾರ್ಟಿ ಆಫಿಸ್​ಗೆ ಹೋದ್ವಿ ಅಲ್ಲಿ ಯಾರೋ ಹಾಸನ ಡಿಸ್ಟಿಕ್ ನವರು ಬಂದಿದ್ದರು ಸುಮಾರು ಹೊತ್ತು ಅಲ್ಲೆ ಆಗ್ಬಿಡ್ತು. ನಾನು ಬೇರೆ ಟಿಫನ್ ಮಾಡಿಕೊಂಡು ಹೋಗಿರ್ಲಿಲ್ಲ ಸ್ವಲ್ಪ ಗಂಜಿ ಕುಡ್ಕೊಂಡು ಹೋಗಿದ್ದೆ. ಹಂಗೆ ಹಿಂಗೆ ಮಾಡಿ ಎರಡುವರೆ ಮೂರು ಗಂಟೆ ಅಲ್ಲೆ ಆಯ್ತು. ಸಲೀಂ ಕರೆಸಿ ನೋಡಿ ಇವನದು ಡೇಟ್ ಫಿಕ್ಸ್ ಮಾಡಿಬಿಡಿ ಅಂತ ಹೇಳಿದರು. ಆ ಮೇಲೆ ಇನ್ನು ಒಂದು ಸ್ವಲ್ಪ ಹೊತ್ತು ಯಾರೋ ಬಂದ್ರು ಅಂತ ಹೋದರು. ಫೈನಲ್ ಆಗಿ ಒಳಗೆ ಹೋದ್ವಿ ಆಂಟಿ ಚೇಂಬರ್​ನಲ್ಲಿ ಶರತ್ ಬಚ್ಚೇಗೌಡ, ಮಧು ಬಂಗಾರಪ್ಪ ಜೊತೆಗೆ ನಿಂದು ಸೇರಿಸಿಕೊಳ್ಳೋಣ. ಸೇರಿಸೋದಾದರೆ ಪ್ರೆಸ್ ಮೀಟ್ ಮಾಡಿ ಸೇರಿಸಿಕೊಳ್ಳಬೇಕು. ಹಂಗೇನಾದರು ಇದ್ದರೆ ಈಗಲೆ ಸೇರಿಸಿಕೊಳ್ತೀನಿ ಅದು ಸರಿ ಹೋಗೋದಿಲ್ಲ. ಪ್ರೆಸ್ ಮೀಟ್ ಮಾಡಿ ಸೇರಿಸಿಕೊಳ್ಳಬೇಕು ಅಂತ ಅವರು ಹೇಳಿ ಕಳುಹಿಸಿದರು. ಕಾರ್ಯಕರ್ತ: ಈಗ ಸೇರಿಸಿಕೊಂಡ ಮೇಲೆ ಟಿಕೆಟ್ ಕೊಡಬೇಕಲ್ಲ ಪ್ರಸನ್ನ ಕುಮಾರ್ : ಯಾರು…? ಕಾರ್ಯಕರ್ತ: ನಿಮಗೆ ಟಿಕೆಟ್ ಸಿಗಬೇಕಲ್ಲ ಸೇರಿಸಿದ ಮೇಲೆ ಪ್ರಸನ್ನ ಕುಮಾರ್ : ಅದು ಆಮೇಲೆ ನೋಡಿಕೊಳ್ಳೋಣ ಮೊದಲು ಇನ್ನ ಬಾಳ ದಿಸ ಐತೆ. ಈಗಲೆ ಟಿಕೆಟ್ ಗಿಕೆಟ್ ಅಂತಲ್ಲ ಅದು ಮುಂದಕ್ಕೆ ನೋಡೋಣ. ಕಾರ್ಯಕರ್ತ : ಅದೇ ಅದೇ ಮೊದಲು ಎಂಟ್ರಿ. ಪ್ರಸನ್ನ ಕುಮಾರ್ : ಅಲ್ಲಿ ಅಲ್ಲಿ ನಾನೊಬ್ಬನೆ ಅನ್ನೋತರ ಇರಬಾರದು ಅವರ ತಲೆಯಲ್ಲಿ. ಕಾರ್ಯಕರ್ತ : ಅದು ಕರೆಕ್ಟೆ ಪ್ರಸನ್ನ ಕುಮಾರ್ : ಟಿಕೆಟ್ ಅಂತು 200 ಪರ್ಸೆಂಟ್ ಅವನಿಗೆ ಕೊಡೋದಿಲ್ಲ. ಕಾರ್ಯಕರ್ತ : ಹೌದ…? ಪ್ರಸನ್ನ ಕುಮಾರ್ : 200% ಲಾಸ್ಟ್ ಟೈಮ್ ಅವತ್ತೆ ಹೋದಾಗ ಹೇಳಿದ ಅವನ ಮಾತ್ರ ಹಿಡಿಸೋದಿಲ್ಲ ಅಂತ ಹೇಳಿದ. ಕಾರ್ಯಕರ್ತ : ಹಾ ಪ್ಲಾನ್ ಮಾಡಿ ಬಿಟ್ಟಿದಾರೆ‌ ಪ್ರಸನ್ನ ಕುಮಾರ್ : ಎಲ್ಲಾ ಪ್ಲಾನ್ ಮಾಡಿಕೊಂಡಿದಾರೆ. ಇವನು ಇಷ್ಟೆಲ್ಲಾ ತಿ… ಎಲ್ಲಾ ಮಾತಾಡ್ತನೆ ಏನು ಇವನ ಅಪ್ಪನ ಮನೆ ಆಸ್ತಿನಾ…?ನನಗೆ ಅದೇ ಕೇಳಿದ. ಕಾಂಗ್ರೆಸ್ ಆಫೀಸಿಗೆ ಬರಬೇಕಾ ಸಾರ್ ಅಂದೆ. ಏಯ್ ಬಾರ ಪಾರ್ಟಿ ಆಫೀಸ್ ಯಾರಪ್ಪನ ಮನೆದು ಬಾರ ನಾನಿದಿನಿ ಅಂದ.. ಕಾರ್ಯಕರ್ತ : ಹ್ಹಾ..ಹ್ಹಾ… ಪ್ರಸನ್ನ ಕುಮಾರ್ : ಅವನಗಂತು ಯಾವುದೆ ಕಾರಣಕ್ಕೂ ಟಿಕೆಟ್ ಸಿಗಲ್ಲ ಇವತ್ತೆ ಹೇಳಿರ್ತಿನಿ ನೋಡಿರು. ಕಾರ್ಯಕರ್ತ : ಬೇರೆಯವರು ಎಂಟ್ರಿ ಆಗ್ತಾರಾ…? ಇಲ್ಲಾ ನೀವು ಎಂಟ್ರಿ ಆಗ್ತೀರಾ…? ಪ್ರಸನ್ನ ಕುಮಾರ್ : ಯಾರಾದರು ಅಷ್ಟೆರಿ ಯಾರು ಬೇಕಾದರು ಎಂಟ್ರಿ ಆಗಲಿ ಅವನು ಮಾತ್ರ ಎಂಟ್ರಿ ಆಗೋಕೆ ಬಿಡೋದಿಲ್ಲ. ಕಾರ್ಯಕರ್ತ : ಅದೇ ಅದೇ ಅದೇ ಒಟ್ನಲ್ಲಿ ನಡಿತ ಇದೆ ಚರ್ಚೆಗಳು ನೋಡಬೇಕು. ಪ್ರಸನ್ನ ಕುಮಾರ್ : ಇಲ್ಲಾ ಸಿದ್ದರಾಮಯ್ಯ ನವರು ಇವನು ಇಂತ ಕ್ಯಾರೆಕ್ಟರ್ ಅಂತ ಅವನಿಗೂ ಗೊತ್ತಿರಲಿಲ್ಲ ಪಾಪ ಯಾರೋ ಹೇಳಿದರು ಅಂತ ಎಲ್ಲಾ ಹೇಳಿದರು ಅಂತ ಮಾಡಿದರು. ಕಾರ್ಯಕರ್ತ : ಹುಂ ಅಷ್ಟೆ… ಪ್ರಸನ್ನ ಕುಮಾರ್ : ನಮಗೆ ಹಂಗೆ ಹೇಳಿನೆ ಅಲ್ಲಿ ಎಲ್ಲದು..? ಯಾವ ಕಾನ್ಸ್ಟಿಟ್ಯುಎನ್ಸಿ ಮೈಸೂರಲ್ಲಿ ಸೋತಿದ್ದು‌ ಕಾರ್ಯಕರ್ತ : ಯಾರು ಸಿದ್ದರಾಮಯ್ಯ ನವರು ಚಾಮುಂಡೇಶ್ವರಿ ಪ್ರಸನ್ನ ಕುಮಾರ್ : ಚಾಮುಂಡೇಶ್ವರಿ ಎಲ್ಲೋ ಒಂದು ಬೋವಿ ಜನಾಂಗದ್ದು ಕಾನ್ಫರೆನ್ಸ್ ಇತ್ತಂತೆ. ಏಯ್ ನಾನು ಬಸವಲಿಂಗಪ್ಪನ ಮಗನಿಗೆ ಕೊಡದೆ ನಿಮ್ಮವರಿಗೆ ಕೊಟ್ಟಿದೀನಿ ಅಂದ್ರಂತೆ ಅದು ಅಲ್ಲಿ ವೈಲ್ಡ್ ಸ್ಪ್ರೆಡ್ ಆಯ್ತು. ಕಾರ್ಯಕರ್ತ : ಹೌದು ಹೇಳಿ ಪ್ರಸನ್ನ ಕುಮಾರ್ : ಮೈಸೂರು ಆಕಡೆ ಎಲ್ಲಾ ಶಡ್ಯೂಲ್ ಕಾಸ್ಟ್ ನಮ್ಮವರೆಲ್ಲಾ ಜಾಸ್ತಿ ಇದಾರೆ ಅಲ್ಲಿ ಕಾರ್ಯಕರ್ತ : ಅವರೆಲ್ಲಾ ಉಲ್ಟಾ ಓಟ್ ಹಾಕಿದರು. ಪ್ರಸನ್ನ ಕುಮಾರ್ : ಎಲ್ಲಾ ಉಲ್ಟಾ ಹಾಕಿದರು ಕಾರ್ಯಕರ್ತ : ಒಟ್ಟು ಲಾಸೆ ಪ್ರಸನ್ನ ಕುಮಾರ್ : ಹುಂ…. ಕಾರ್ಯಕರ್ತ : ಏನಿಲ್ಲ ಏನಂದ್ರೆ ಪರಮೇಶ್ವರ್ ದು ಕಣ್ಣು ಬೀಳುತ್ತಾ ಅಂತ..? ಪ್ರಸನ್ನ ಕುಮಾರ್ : ಅವನು… ಏನಾಗುತ್ತೋ ನೋಡಣ್ರಿ ಮುಂದಕ್ಕೆ. ಪರಮೇಶ್ವರ್ ಬಂದರೆ ತೊಂದರೆ ಇಲ್ಲಾ‌. ಇವನು ಮಾತ್ರ ಇದಾಗಬಾರದು. ಮೂರು ಜನ ಸೇರಿಕೊಂಡು ನನಗೆ ಮೋಸ ಮಾಡಿದವರು ತಾನೆ. ಕಾರ್ಯಕರ್ತ : ಪರಮೇಶ್ವರ್ ಬ‌ಂದ್ರೆ ತೊಂದರೆ ಆಗಲ್ಲ ತಾನೆ ಪ್ರಸನ್ನ ಕುಮಾರ್ : ಪರಮೇಶ್ವರ್ ಏನೋ ಅವನು ಒಬ್ಬ ಥೂ… ಅಷ್ಟೆ ಎಲ್ಲಾ ಅಷ್ಟೇರಿ ನಾಳೆ ಸಿಕ್ತೀನಿ ಈಗಲೆ ಎಲ್ಲಾ ಫೋನ್ ಮಾಡ್ತಿದಾರೆ ನಾಳೆ ಸಿಕ್ತೀನಿ ಅಂದಿದ್ದೀನಿ. ಕಾರ್ಯಕರ್ತ : ಪರಮೇಶ್ವರ್ ಮನೆ ಹತ್ರ ಒಬ್ರು ಇರ್ತಾರಲ್ಲ ಸರವಣ ಅವರು ಹೇಗೆ ಪ್ರಸನ್ನ ಕುಮಾರ್ : ಅಯ್ಯೋ ಅವನು ಚಿಲ್ರೆ ಅವನು. ಚಿಲ್ರೆಲಿ ಚಿಲ್ರೆ ಅವನೆಲ್ಲಾ ಜೊತೆ ಹಾಕ್ಕೋಂಡು ಓಡಾಡ್ತಾರೆ ಅವರು. ಕಾರ್ಯಕರ್ತ: ಅವರು ನಿಮ್ಮ ಜೊತೆ ಇದ್ರಂತಲ್ಲ ಅವರು ಪ್ರಸನ್ನ ಕುಮಾರ್ : ಇದ್ದ ಇದ್ರು ನಾನೇ ಏನೋ ಸಪರೇಟ್ ಅನ್ನೋತರ ಮಾಡ್ತಿದ್ದ ನಮಗೆಲ್ಲಾ ಇರಿಟೇಶನ್ ಆಗೋದು ಕಾರ್ಯಕರ್ತ : ನಿಮ್ಮ ಜೊತೆಗೆ ಹಾಕೋಬೋದಲ್ಲ ಪ್ರಸನ್ನ ಕುಮಾರ್ : ಅವನ ಮುಖ ನೋಡಿದ್ರೆ ಸಾವಿರ ಓಟ್ ಹೋಗಬಹುದು ಅಷ್ಟೆ. ಅಷ್ಟೆ ಅವನ ಲೆವೆಲ್. ಕಾರ್ಯಕರ್ತ : ಎಲ್ಲಿ ಆಫಿಸ್​ಗೆ ಎಲ್ಲೂ ಬರಲೆ ಇಲ್ಲಾ‌ ಪ್ರಸನ್ನ ಕುಮಾರ್ : ನಾಳೆ ಬರ್ತಿನಿ ಅಂತ ಹೇಳಲಿಲ್ವೇನೋ ಈಗ. ನಮ್ಮ ಲೀಡರ್ ಗಳೆಲ್ಲಾ ಫೋನ್ ಮಾಡ್ತಿದಾರೆ ನಾಳೆ ಅಲ್ಲಿಗೆ ಬರ್ತಿನಿ. ಕಾರ್ಯಕರ್ತ : ಎಷ್ಟೊತ್ತಿಗೆ ಬರ್ತಿರಾ…? ಪ್ರಸನ್ನ ಕುಮಾರ್ : ಬೆಳಿಗ್ಗೆ ಫೋನ್ ಮಾಡು ಹೇಳ್ತಿನಿ ಆಯ್ತು ಎಂದು ಸಂಭಾಷಣೆ ಮುಗಿಸಿದ್ದಾರೆ.

ಇದನ್ನೂ ಓದಿ: DK Shivakumar | ಸಂಪತ್​ ರಾಜ್​ ಬೆನ್ನಿಗೆ ನಿಂತ ಡಿಕೆಶಿ.. ಶಾಸಕರ ಮನೆಗೆ ಬೆಂಕಿ ಕೇಸ್​ನಲ್ಲಿ ಮಾಜಿ ಮೇಯರ್ ಪಾತ್ರವಿಲ್ಲ ಎಂದರು

Published On - 1:55 pm, Sun, 28 February 21

ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ