AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Air Quality: ಶಿವಮೊಗ್ಗ, ಬಳ್ಳಾರಿ ಏರ್ ಕ್ವಾಲಿಟಿಯಲ್ಲಿ ಕುಸಿತ; ಬೆಂಗಳೂರಿಗಿಂತಲೂ ಕಳಪೆ AQI

ಕೆಲ ದಿನಗಳ ಹಿಂದೆ ಬೆಂಗಳೂರಿನೊಂದಿಗೆ ರಾಜ್ಯದ ವಿವಿಧೆಡೆಯಲ್ಲಿ ಏರ್ ಕ್ವಾಲಿಟಿ ತಕ್ಕಮಟ್ಟಿಗೆ ಸುಧಾರಿಸಿರುವಂತೆ ಕಂಡಿತ್ತು. ಆದರೆ ಇಂದೂ ಗಾಳಿಯ ಗುಣಮಟ್ಟ ಅನಾರೋಗ್ಯಕರ ಮಟ್ಟದಲ್ಲಿಯೇ ಇದೆ. ಆದರೆ ಬೆಂಗಳೂರನ್ನೂ ಮೀರಿಸುವಂತೆ ಶಿವಮೊಗ್ಗ ಮತ್ತು ಬಳ್ಳಾರಿಯ ವಾಯು ಗುಣಮಟ್ಟ ಕಳಪೆ ಮಟ್ಟಕ್ಕೆ ಇಳಿದಿದೆ. ಹೀಗೆ ಮುಂದುವರೆದರೆ ಈ ವರ್ಷವೂ ಗಾಳಿಯ ಗುಣಮಟ್ಟ ಇನ್ನಷ್ಟು ಕುಸಿಯಲಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸಬೇಕೆಂದು ತಜ್ಞರು ಸೂಚನೆ ನೀಡಿದ್ದಾರೆ.

Bengaluru Air Quality: ಶಿವಮೊಗ್ಗ, ಬಳ್ಳಾರಿ ಏರ್ ಕ್ವಾಲಿಟಿಯಲ್ಲಿ ಕುಸಿತ; ಬೆಂಗಳೂರಿಗಿಂತಲೂ ಕಳಪೆ AQI
ಶಿವಮೊಗ್ಗ ಮತ್ತು ಬಳ್ಳಾರಿಯಲ್ಲಿ ಕಳಪೆ ಏರ್ ಕ್ವಾಲಿಟಿ
ಭಾವನಾ ಹೆಗಡೆ
|

Updated on: Jan 23, 2026 | 8:05 AM

Share

ಬೆಂಗಳೂರು, ಜನವರಿ 23: ಬೆಂಗಳೂರಿನ ಗಾಳಿಯ ಗುಣಮಟ್ಟ 162 ಇದ್ದು, ಏರ್ ಕ್ವಾಲಿಟಿ (Bengaluru Air Quality) ಅನಾರೋಗ್ಯಕಾರಿ ಹಂತದಲ್ಲೇ ಇದೆ. ಆದರೆ ಬೆಂಗಳೂರನ್ನೂ ಮೀರಿಸುವ ಹಂತಕ್ಕೆ ತಲುಪಿರುವುದು ಶಿವಮೊಗ್ಗ ಮತ್ತು ಬಳ್ಳಾರಿಯ ವಾಯು ಗುಣಮಟ್ಟ. ಕೆಲ ದಿನಗಳಿಂದ 100ರ ಆಸುಪಾಸಿನಲ್ಲಿದ್ದ ಶಿವಮೊಗ್ಗದ ಏರ್ ಕ್ವಾಲಿಟಿ ಇಂದು ಒಮ್ಮೆಲೇ ಬೆಂಗಳೂರಿಗಿಂತಲೂ ಹೆಚ್ಚಿನ AQIಗೆ ತಲುಪಿದೆ. ಇದರಿಂದ ಮಕ್ಕಳಿಗೆ, ಹಿರಿಯ ನಾಗರಿಕರಿಗೆ ಹಾಗೂ ಉಸಿರಾಟ ಸಮಸ್ಯೆ ಇರುವವರಿಗೆ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಕೆಲ ದಿನಗಳ ಹಿಂದೆ ಶಿವಮೊಗ್ಗದ ಗಾಳಿಯ ಗುಣಮಟ್ಟ ನೂರರ ಆಸುಪಾಸಿನಲ್ಲಿತ್ತು. ಆದರಿಂದು ಏಕಾಏಕಿ 175ಕ್ಕೆ ತಲುಪಿರುವುದು ಆತಂಕ ಸೃಷ್ಟಿಸಿದೆ. ಬಳ್ಳಾರಿಯೂ 178 AQI ಹೊಂದಿದ್ದು, ಬೆಂಗಳೂರಿಗಿಂತ ಕಳಪೆ ಗುಣಮಟ್ಟದ ಏರ್ ಕ್ವಾಲಿಟಿಯಾಗಿದೆ. ಇದರಿಂದ ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿದೆ.

ಬೆಂಗಳೂರಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ (WHO) ಮಿತಿಗಿಂತ 5 ಪಟ್ಟು ಹೆಚ್ಚಿರುವ ಸೂಕ್ಷ್ಮ ಕಣಗಳ ಪ್ರಮಾಣ ಆತಂಕಕಾರಿಯಾಗಿದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –162
  • ಮಂಗಳೂರು-156
  • ಮೈಸೂರು –94
  • ಬೆಳಗಾವಿ – 138
  • ಕಲಬುರ್ಗಿ-129
  • ಶಿವಮೊಗ್ಗ – 175
  • ಬಳ್ಳಾರಿ – 178
  • ಹುಬ್ಬಳ್ಳಿ- 156
  • ಉಡುಪಿ –157
  • ವಿಜಯಪುರ –111

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.