ಬೆಂಗಳೂರು: ಅಕ್ರಮ ಗ್ಯಾಸ್ ರೀ ಫಿಲ್ಲಿಂಗ್ ಅಡ್ಡೆ ಮೇಲೆ ದಾಳಿ; 750ಕ್ಕೂ ಹೆಚ್ಚು ಸಿಲಿಂಡರ್ ವಶ
ನಗರದ ಬಿಟಿಎಂ ಲೇಔಟ್ನ 2ನೇ ಹಂತದಲ್ಲಿರುವ ಗ್ಯಾಸ್ ಫಿಲ್ಲಿಂಗ್ ಅಡ್ಡೆ ಮೇಲೆ ಬೆಂಗಳೂರು ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ವಿವಿಧ ಕಂಪನಿಗಳಿಗೆ ಸೇರಿದ 750ಕ್ಕೂ ಹೆಚ್ಚು ಸಿಲಿಂಡರ್ಗಳನ್ನ ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು: ನಗರದ ಬಿಟಿಎಂ ಲೇಔಟ್ನ 2ನೇ ಹಂತದಲ್ಲಿರುವ ಗ್ಯಾಸ್ ಫಿಲ್ಲಿಂಗ್ ಅಡ್ಡೆ ಮೇಲೆ ಬೆಂಗಳೂರು ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ವಿವಿಧ ಕಂಪನಿಗಳಿಗೆ ಸೇರಿದ 750ಕ್ಕೂ ಹೆಚ್ಚು ಸಿಲಿಂಡರ್ಗಳನ್ನ ವಶಕ್ಕೆ ಪಡೆದಿದ್ದಾರೆ. ಯಾವುದೇ ಲೈಸೆನ್ಸ್ ಇಲ್ಲದೆ ಅನಧಿಕೃತವಾಗಿ ಖಾಲಿ ನಿವೇಶನದಲ್ಲಿ ಶೆಡ್ ಹಾಕಿಕೊಂಡು, ಕಳ್ಳತನ ಮಾಡಿಕೊಂಡು ತಂದ ಸಿಲಿಂಡರ್ಗಳಿಗೆ ಜ್ಯೋತಿ, ಗೋ ಗ್ಯಾಸ್ ಏಜೆನ್ಸಿಗಳು ಗ್ಯಾಸ್ ರೀ ಫಿಲ್ಲಿಂಗ್ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಸಿಸಿಬಿ ಪೊಲೀಸರು 750ಕ್ಕೂ ಅಧಿಕ ಸಿಲಿಂಡರ್ಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರ್ಕಾರಿ ಸ್ವಾಮ್ಯದ ವಿವಿಧ ಕಂಪನಿಯ 75 ಸಿಲಿಂಡರ್, ಗೋಗ್ಯಾಸ್, ಜ್ಯೋತಿ ಸೇರಿದಂತೆ ಇತರೆ ಕಂಪನಿಯ 694 ಸಿಲಿಂಡರ್ಗಳನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ಕಾರ್ಯಾಚರಣೆ ವೇಳೆ 35 ಲಕ್ಷ ಮೌಲ್ಯದ 75 ರೀಫಿಲ್ಲಿಂಗ್ ರಾಡ್, ಕಂಪ್ರೆಸ್ಸರ್, ಪೈಪ್, ತೂಕದ ಯಂತ್ರಗಳನ್ನ ವಶಕ್ಕೆ ಪಡೆಯಲಾಗಿದೆ. ಇನ್ನು ಇಂಡಿಯನ್, ಭಾರತ್, ಹೆಚ್.ಪಿ ಕಂಪನಿಯ ಸಿಲಿಂಡರ್ಗಳೆಂದು ಜನರಿಗೆ ನಂಬಿಸಿ ಮಾರಾಟ ಮಾಡಲಾಗುತ್ತಿತ್ತು. ಈ ಕುರಿತು ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತ್ಯೇಕ 2 ಪ್ರಕರಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ಮೌಲ್ಯದ ತಂಬಾಕು ಜಪ್ತಿ
ಗದಗ: ಜಿಲ್ಲೆಯ ಮುಂಡರಗಿ ಪಟ್ಟಣದ ಕೊಪ್ಪಳ ರಸ್ತೆಯ ಚೆಕ್ಪೋಸ್ಟ್ ಬಳಿ 1.84 ಲಕ್ಷ ಮೌಲ್ಯದ ತಂಬಾಕನ್ನ ಜಪ್ತಿ ಮಾಡಲಾಗಿದ್ದು ಶಿರಾಜ್ ನಾಗರಕಟ್ಟಿ ಎಂಬಾತನನ್ನ ವಶಕ್ಕೆ ಪಡೆಯಲಾಗಿದೆ. ಇನ್ನು ಇತ ಗದಗದಿಂದ ಕೊಪ್ಪಳ ಕಡೆಗೆ ಹೊರಟ್ಟಿದ್ದ 407 ವಾಹನದಲ್ಲಿ ಅಕ್ರಮವಾಗಿ ಸಾಗಾಟ ಮಾಡುವ ವೇಳೆ ವಶಕ್ಕೆ ಪಡೆಯಲಾಗಿದೆ. ಇನ್ನು ಜಿಲ್ಲೆಯಲ್ಲಿ ಇದೇ ರೀತಿ ಮತ್ತೊಂದು ಪ್ರಕರಣವನ್ನ ಪೊಲೀಸರು ಹಿಡಿದಿದ್ದಾರೆ. ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಚಕ್ ಪೋಸ್ಟ್ ನಲ್ಲಿ 1 ಲಕ್ಷ 10 ಸಾವಿರ ಮೌಲ್ಯದ ತಂಬಾಕನ್ನ ಜಪ್ತಿ ಮಾಡಿದ್ದಾರೆ. ರಾಣೆಬೆನ್ನೂರಿನಿಂದ ಶಿರಹಟ್ಟಿ ಕಡೆಗೆ ಸಾಗಿಸಲಾಗುತ್ತಿದ್ದ ಅಕ್ರಮ ತಂಬಾಕನ್ನ ಜಪ್ತಿ ಮಾಡಿದ್ದು, ಶ್ಯಾಮ ನವಲೆ ಎಂಬಾತನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಗದಗ ಎಸ್ಪಿ ಬಿ.ಎಸ್ ನೇಮಗೌಡ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಶಿರಹಟ್ಟಿ ಹಾಗೂ ಮುಂಡರಗಿ ಠಾಣೆಗಳಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಅಟ್ಟಿಕಾ ಬಾಬು ತಂದಿರಿಸಿದ್ದ ಫುಡ್ ಕಿಟ್ ಸೀಜ್ ಮಾಡಿದ ಪೊಲೀಸ್
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ