Bangalore Karaga: ಈ ಬಾರಿಯ ಬೆಂಗಳೂರು ಕರಗ ಶಕ್ತ್ಯೋತ್ಸವ ಚೈತ್ರ ಪೂರ್ಣಿಮೆ ಏಪ್ರಿಲ್ 6 ಕ್ಕೆ

Dharmaraya Swamy Karaga: ಈ ಬಾರಿ ಬೆಂಗಳೂರು ಕರಗ ಶಕ್ತ್ಯೋತ್ಸವ ಚೈತ್ರ ಪೂರ್ಣಿಮೆ ಏಪ್ರಿಲ್ 6 ರಂದು ನಡೆಯಲಿದೆ. ಇದೇ ಮಾರ್ಚ್​​ 29ರಿಂದ ಉತ್ಸವ ಆರಂಭವಾಗಿ, ಏಪ್ರಿಲ್​ 8ರವರೆಗೆ ನಡೆಯಲಿದೆ.

Bangalore Karaga: ಈ ಬಾರಿಯ ಬೆಂಗಳೂರು ಕರಗ ಶಕ್ತ್ಯೋತ್ಸವ ಚೈತ್ರ ಪೂರ್ಣಿಮೆ ಏಪ್ರಿಲ್ 6 ಕ್ಕೆ
ಬೆಂಗಳೂರು ಕರಗ
Follow us
| Updated By: Digi Tech Desk

Updated on:Mar 21, 2023 | 12:10 PM

ಬೆಂಗಳೂರು: ಈ ಬಾರಿ ಬೆಂಗಳೂರು (Bengaluru) ಕರಗ ಶಕ್ತ್ಯೋತ್ಸವ (Karaga Shaktyotsava) ಚೈತ್ರ ಪೂರ್ಣಿಮೆ ಏಪ್ರಿಲ್ 6 ರಂದು ನಡೆಯಲಿದೆ. ಇದೇ ಮಾರ್ಚ್​​ 29ರಿಂದ ಉತ್ಸವ ಆರಂಭವಾಗಿ, ಏಪ್ರಿಲ್​ 8ರವರೆಗೆ ನಡೆಯಲಿದೆ. ಬರೋಬ್ಬರಿ 11 ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಧರ್ಮರಾಯಸ್ವಾಮಿ ಕರಗ (Dharmaraya Swamy Karaga) ವಿಜೃಂಭಣೆಯಿಂದ ನಡೆಯಲಿದೆ. ಈ ಬಾರಿಯು ಕರಗವನ್ನು ತಿಗಳ ಸಮುದಾಯದ ಅರ್ಚಕ ವಿ. ಜ್ಞಾನೇಂದ್ರ ಅವರು ಕರಗ ಹೊರಲಿದ್ದಾರೆ. ಪೂಜಾರಿ ಜ್ಞಾನೇಂದ್ರ ಅವರು ಕಳೆದ 12 ವರ್ಷಗಳಿಂದ ಕರಗ ಹೊರುತ್ತಿದ್ದಾರೆ. ಕರಗ ರಾತ್ರಿ 12 ಗಂಟೆಗೆ ನಗರ ಪ್ರದಕ್ಷಿಣೆಗೆ ಹೊರಡಲಿದೆ.

ಮಾರ್ಚ್​. 29ರಂದು ಧ್ವಜಾರೋಹಣ ನಡೆಯುತ್ತದೆ. ನಂತರ ಏಪ್ರಿಲ್​ 8ರವರಗೆ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಏಪ್ರಿಲ್​​ 3 ರಂದು ಆರತಿ, ಏಪ್ರಿಲ್​​ 4 ರಂದು ಹಸಿಕರಗ, ಏಪ್ರಿಲ್​ 5 ರಂದು ಪೊಂಗಲ್​, ಮರುದಿನ 6 ರಂದು ಕರಗ ಉತ್ಸವ ನಡೆಯಲಿದೆ. ಇನ್ನು ವೀರಕುಮಾರರು, ತಿಗಳ ಸಮುದಾಯದ ಕೆಲ ಭಕ್ತರು ಕರಗ ನಡೆಯುವ 11 ದಿನಗಳ ಕಾಲ ಉಪವಾಸ ಇರುತ್ತಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮನೆ ಬಾಡಿಗೆ ಬೇಕಂದ್ರೆ ಲಿಂಕ್ಡ್​ಇನ್ ಪ್ರೊಫೈಲ್ ಕೊಡಬೇಕು, ಪೋಸ್ಟ್ ವೈರಲ್

ಕರಗದಲ್ಲಿ ಮಲ್ಲಿಗೆ ಹೂವು ಮತ್ತು ಮಹಿಳೆಯರಿಗೆ ಹೆಚ್ಚಿನ ಪ್ರಶಸ್ತ್ಯ ನೀಡಲಾಗುತ್ತದೆ. ಈ ದುಂಡು ಮಲ್ಲಿಗೆಯ ಒತ್ತಾದ ದಂಡೆಗಳನ್ನು ವೀರಕುಮಾರರಿಗೆ ಮುಡಿಯಿಂದ ಹಾಕಲಾಗುತ್ತದೆ. ಜತೆಗೆ ದೇವಾನುದೇವತೆಗಳಿಗೂ ಮಲ್ಲಿಗೆಯನ್ನು ಬಿಟ್ಟು ಬೇರೆ ಹೂವುಗಳನ್ನು ಕರಗದಲ್ಲಿ ಬಳಸುವುದಿಲ್ಲ. ಇನ್ನು, ಇದು ಶಾಕ್ತಪಂಥದ ಆರಾಧನಾ ಕ್ರಮವಾದ್ದರಿಂದ ಶಕ್ತಿ ಸ್ವರೂಪಿಣಿಯಾದ ಸ್ತ್ರೀಗೆ ಹೆಚ್ಚಿನ ಮಹತ್ವ ಕೊಡಲಾಗಿದೆ. ಕರಗದ 11 ದಿನಗಳ ಕಾಲವೂ ಅರ್ಪಿಸಲಾಗುವ ಗಾವನ್ನ, ಪೊಂಗಲ್‌, ನೈವೇದ್ಯ ಇತ್ಯಾದಿಗಳನ್ನೆಲ್ಲವಹ್ನಿಕುಲ ಸಮುದಾಯದ ಹೆಣ್ಣುಮಕ್ಕಳೇ ಶ್ರದ್ಧೆಯಿಂದ ಸಿದ್ಧಪಡಿಸುತ್ತಾರೆ.

ಇಷ್ಟಾರ್ಥಗಳ ಸಿದ್ಧಿಗಾಗಿ ಅಥವಾ ಅಂದುಕೊಂಡದ್ದು ಜರುಗಿದರೆ ದೇವಾಲಯದ ಮುಂದೆ ಕರ್ಪೂರವನ್ನು ಹಚ್ಚುವುದು ಕರಗ ಉತ್ಸವದ ವಿಶೇಷ. ರಥೋತ್ಸವದ ವಿಶೇಷ. ಅದರಂತೆ ಕರಗದ ದಿನ ನೂರಾರು ಭಕ್ತರು ದೇವಾಲಯದ ಆವರಣ ಹಾಗೂ ರಸ್ತೆಯಲ್ಲಿ ಕರ್ಪೂರ ಹಚ್ಚಿ ದೇವರ ಕೃಪೆಗೆ ಪಾತ್ರರಾಗುತ್ತಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:58 am, Tue, 21 March 23

Nithya Bhavishya: ನವರಾತ್ರಿಯ ಐದನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಐದನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ನವರಾತ್ರಿ ಐದನೇ ದಿನ ಸ್ಕಂದ ಮಾತೆಯ ಆರಾಧನೆ ಮಹತ್ವ ತಿಳಿಯಿರಿ
ನವರಾತ್ರಿ ಐದನೇ ದಿನ ಸ್ಕಂದ ಮಾತೆಯ ಆರಾಧನೆ ಮಹತ್ವ ತಿಳಿಯಿರಿ
‘ಮಾತಾಡೋದು ಕಲಿಯುತ್ತಿದ್ದೇನೆ’: ಚೈತ್ರಾ ಹೇಳಿದ್ದು ಕೇಳಿ ಕಂಗಾಲಾದ ಸುದೀಪ್​
‘ಮಾತಾಡೋದು ಕಲಿಯುತ್ತಿದ್ದೇನೆ’: ಚೈತ್ರಾ ಹೇಳಿದ್ದು ಕೇಳಿ ಕಂಗಾಲಾದ ಸುದೀಪ್​
ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ