Stop Tobacco: ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರೇ ಎಚ್ಚರ, ಬಂದಿದೆ ‘ಸ್ಟಾಪ್ ಟೊಬ್ಯಾಕೊ’ ಆ್ಯಪ್; ಇಲ್ಲಿದೆ ಮಾಹಿತಿ
‘ಸ್ಟಾಪ್ ಟೊಬ್ಯಾಕೊ’ ಆ್ಯಪ್ ಫೆಬ್ರವರಿ 28 ರಂದು ಕರ್ನಾಟಕದಲ್ಲಿ ಬಿಡುಗಡೆಯಾದ ಜಿಪಿಎಸ್ ಆಧಾರಿತ ಮೊಬೈಲ್ ಅಪ್ಲಿಕೇಶನ್ ಇದಾಗಿದೆ. ಸಾರ್ವಜನಿಕವಾಗಿ ಧೂಮಪಾನ ಮಾಡಿದವರ ಕುರಿತು ಪೋರ್ಟಲ್‌ನಲ್ಲಿ 50 ದೂರುಗಳನ್ನು ದಾಖಲಿಸಿದೆ.
ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವರ ವಿರುದ್ಧ ದೂರು ನೀಡಲು ಜಿಪಿಎಸ್ ಆಧಾರಿತ ‘ಸ್ಟಾಪ್ ಟೊಬ್ಯಾಕೊ’(Stop Tobacco App) ಮೊಬೈಲ್ ಅಪ್ಲಿಕೇಶನ್ವೊಂದನ್ನು ಕಂಡು ಹಿಡಿಯಾಲಾಗಿದೆ. ಇದೇ ವರ್ಷ ಫೆಬ್ರವರಿ 28 ರಿಂದ ಆ್ಯಪ್ ಕಾರ್ಯಾರಂಭ ಮಾಡಿದ್ದು, ಇಲ್ಲಿಯವರೆಗೆ 50 ದೂರುಗಳು ದಾಖಲಾಗಿವೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದರಿಂದ, ಧೂಮಪಾನ ಮಾಡದೇ ಇದ್ದವರು ಕೂಡ ಹೊಗೆಯಿಂದ ತೊಂದರೆ ಅನುಭವಿಸುತ್ತಾರೆ. ಇದೀಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿಭಾಗವಾದ ರಾಜ್ಯ ತಂಬಾಕು ನಿಯಂತ್ರಣ ಕೋಶ (STCC) ಇಂತಹ ಘಟನೆಗಳನ್ನು ಕಡಿಮೆ ಮಾಡಲು ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ.
ಹೌದು ಆ್ಯಪ್ ಪ್ರಾರಂಭವಾದಾಗಿನಿಂದ 200 ಕ್ಕೂ ಹೆಚ್ಚು ಜನರು ಆ್ಯಪ್ನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ‘ಧೂಮಪಾನ ನಿಷೇಧ’ ಫಲಕಗಳನ್ನು ಹಾಕದ ಮತ್ತು ಧೂಮಪಾನ ಮಾಡಲು ಜನರಿಗೆ ಅವಕಾಶ ಮಾಡಿಕೊಡುವ ಅಂಗಡಿ ಮಾಲೀಕರ ವಿರುದ್ಧ 5ರಿಂದ 6 ದೂರುಗಳು ದಾಖಲಾಗಿದ್ದು, ಕ್ರಮ ತೆಗೆದುಕೊಳ್ಳಲಾಗಿದೆ. ಅಂತಹ ಅಂಗಡಿಗಳ ಬಳಿ ಧೂಮಪಾನ ಮಾಡುವವರಿಂದ ದಂಡವನ್ನು ಸಹ ವಿಧಿಸಲಾಗಿದೆ. ಅಲ್ಲದೆ 6 ದಿನಗಳ ಕಾಲ ಅಂಗಡಿ ಮುಚ್ಚಿಸಲಾಗುತ್ತದೆ. ಬೆಂಗಳೂರಿನ ಗಾಂಧಿನಗರ, ಎಚ್‌ಎಸ್‌ಆರ್ ಲೇಔಟ್ ಮತ್ತು ಬಾಣಸವಾಡಿಯಲ್ಲಿ ಇದುವರೆಗೆ ಗರಿಷ್ಠ ಸಂಖ್ಯೆಯ ಪ್ರಕರಣಗಳು ವರದಿಯಾಗಿವೆ. ಬೆಳಗಾವಿ ಮತ್ತು ದಕ್ಷಿಣ ಕನ್ನಡದಲ್ಲೂ ಪ್ರಕರಣಗಳು ವರದಿಯಾಗಿವೆ ಎಂದು ರಾಜ್ಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಉಸ್ತುವಾರಿ ಪ್ರಭಾಕರ್ ಅವರು ತಿಳಿಸಿದ್ದಾರೆ.
ಇದನ್ನೂ ಓದಿ:ರಾಜ್ಯದಲ್ಲಿ ಹೆಚ್ಚಿದ ದಡಾರ ರೋಗ: ಜನರಲ್ಲಿ ಆತಂಕ ಮೂಡಿಸಿದ ಆರೋಗ್ಯ ಇಲಾಖೆ ವರದಿ
ಇನ್ನು ಆ್ಯಪ್‌ನಲ್ಲಿ GPS ತಾಂತ್ರಿಕ ವ್ಯವಸ್ಥೆ ಇರುವುದರಿಂದ ಧೂಮಪಾನ ನಿಷೇಧಿತ ಪ್ರದೇಶದಲ್ಲಿ, ಧೂಮಪಾನ ಮಾಡವರ ಲೊಕೇಶನ್ ಸ್ವಯಂಚಾಲಿತವಾಗಿ ಆ್ಯಪ್‌ನಲ್ಲಿ ಫೀಡ್ ಆಗುತ್ತದೆ. ಈ ಮಾಹಿತಿ ಆಯಾ ಜಿಲ್ಲಾ ತಂಬಾಕು ನಿಯಂತ್ರಣ ಕೋಶಕ್ಕೆ ಹೋಗುತ್ತದೆ. ಕೂಡಲೇ ಅಧಿಕಾರಿಗಳು ಆ ಸ್ಥಳಕ್ಕೆ ಹೋಗಿ ದೂರಿನ ಮೇಲೆ ಕ್ರಮ ತೆಗೆದುಕೊಳ್ಳುತ್ತಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದರಿಂದ ಹೊಗೆಯಿಂದ ಜನರು ಕಿರಿಕಿರಿಯಾಗುತ್ತದೆ. ಈ ವೇಳೆ ಕೂಡಲೆ ದೂರು ನೀಡಲು ಆ್ಯಪ್ ಸಹಾಯಕಾರಿಯಾಗಿದೆ. ಏಕೆಂದರೆ ಜನರು ನೇರವಾಗಿ ಧೂಮಪಾನ ಮಾಡುವವರ ಬಳಿ ಹೋಗಿ ನಿಲ್ಲಸಿ ಎಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ ಆ್ಯಪ್‌ನಲ್ಲಿ ಧೂಮಪಾನ ಮಾಡುವರ ಫೋಟೋ ಅಪ್‌ಲೋಡ್ ಮಾಡಿದರೆ ಅಗತ್ಯ ಕ್ರಮವನ್ನು ಸರ್ಕಾರ ತೆಗೆದುಕೊಳ್ಳುತ್ತದೆ ಎಂದು ಎಸ್‌ಟಿಸಿಸಿಯ ಅಧಿಕಾರಿ ಡಾ.ಕಿರಣ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ:ಚುನಾವಣೆ ಹೊಸ್ತಿಲಲ್ಲಿ ಪೊಲೀಸರಿಗೆ ಕಾಡುತ್ತಿದೆ ಆರೋಗ್ಯ ಸಮಸ್ಯೆ; ಚಿಕಿತ್ಸೆ ಕೊಡಿಸಲು ಮುಂದಾದ ಡಿಸಿಪಿ ಸಿಕೆ ಬಾಬು
ವಿಶ್ವ ಆರೋಗ್ಯ ಸಂಸ್ಥೆಯು (WHO) ತನ್ನ ಅತ್ಯುತ್ತಮ ತಂಬಾಕು ನಿಯಂತ್ರಣ ನೀತಿಗಾಗಿ ಬೆಂಗಳೂರನ್ನು ಗುರುತಿಸುವುದರೊಂದಿಗೆ ಕರ್ನಾಟಕದಲ್ಲಿ ತಂಬಾಕು ಉತ್ಪನ್ನಗಳ ಉತ್ಪಾದನೆ ಮತ್ತು ಬಳಕೆಯನ್ನು ಕಡಿಮೆ ಮಾಡಲು ಹಲವಾರು ಉಪಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಇಲಾಖೆ ಹೇಳಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ