ಚುನಾವಣೆ ಹೊಸ್ತಿಲಲ್ಲಿ ಪೊಲೀಸರಿಗೆ ಕಾಡುತ್ತಿದೆ ಆರೋಗ್ಯ ಸಮಸ್ಯೆ; ಚಿಕಿತ್ಸೆ ಕೊಡಿಸಲು ಮುಂದಾದ ಡಿಸಿಪಿ ಸಿಕೆ ಬಾಬು

ಆಗ್ನೇಯ ವಿಭಾಗದ ಪೊಲೀಸರಲ್ಲಿ ಅನಾರೋಗ್ಯದ ಸಮಸ್ಯೆಗಳು ಹೆಚ್ಚಾಗಿವೆ. ಆದ ಕಾರಣ ಕೆಲಸದ ಅವಧಿಯಲಷ್ಟೇ ಕೆಲಸ ಮಾಡಲು ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ.

ಚುನಾವಣೆ ಹೊಸ್ತಿಲಲ್ಲಿ ಪೊಲೀಸರಿಗೆ  ಕಾಡುತ್ತಿದೆ ಆರೋಗ್ಯ ಸಮಸ್ಯೆ;  ಚಿಕಿತ್ಸೆ ಕೊಡಿಸಲು ಮುಂದಾದ ಡಿಸಿಪಿ ಸಿಕೆ ಬಾಬು
ಪೊಲೀಸರಿಗೆ ಆರೋಗ್ಯ ತಪಾಸಣೆ
Follow us
ಆಯೇಷಾ ಬಾನು
|

Updated on:Mar 20, 2023 | 9:57 AM

ಬೆಂಗಳೂರು: ರಾಜ್ಯ ವಿಧಾನ ಸಭಾ ಚುನಾವಣೆ(Karnataka Assembly Elections 2023) ಸಮೀಪಿಸುತ್ತಿದ್ದಂತೆ ಪೊಲೀಸ್ ಅಧಿಕಾರಿಗಳಿಗೂ ತಲೆ ಬಿಸಿ ಹೆಚ್ಚಾಗಿದೆ. ಶಾಂತಿಯುತ ಚುನಾವಣೆಗಾಗಿ ಅಕ್ರಮದ ವಿರುದ್ಧ ಹೋರಾಡುತ್ತಿರುವ ಪೊಲೀಸರು ಕೆಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಚುನಾವಣಾ ಹೊತ್ತಲ್ಲೇ ಹಗಲಿರುಳು ಶ್ರಮಿಸೋ ಕೆಲ ಪೊಲೀಸ್ ಸಿಬ್ಬಂದಿಗಳಿಗೆ ಎದೆ ನೋವಿನ ಸಮಸ್ಯೆ ಎದುರಾಗಿದೆ. ಕೆಲಸದ ವೇಳೆ ಕೆಲ ಸಿಬ್ಬಂದಿಗೆ ಎದೆ ನೋವು, ಲೋ ಬಿಪಿ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು ಆತಂಕಕ್ಕೆ ಕಾರಣವಾಗಿದೆ.

ಇತ್ತೀಚೆಗೆ ಹೃದಯಾಘಾತದಿಂದ ಇಬ್ಬರು ಪೊಲೀಸ್ ಸಿಬ್ಬಂದಿಗಳು ಮೃತ ಪಟ್ಟಿದ್ದರು. ಇದಾದ ನಂತರ ಅನೇಕರಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸುತ್ತಿವೆ. ಹೀಗಾಗಿ ಇದರಿಂದ ಎಚ್ಚೆತ್ತ ಹಿರಿಯ ಅಧಿಕಾರಿಗಳು ಪೊಲೀಸ್ ಸಿಬ್ಬಂದಿ ಆರೋಗ್ಯದ ಮೇಲೆ ಒತ್ತು ನೀಡಲು ಮುಂದಾಗಿದ್ದಾರೆ. ತಮ್ಮ ಸಿಬ್ಬಂದಿಯ ಆರೋಗ್ಯದ ದೃಷ್ಟಿಯಿಂದ ಸಿಬ್ಬಂದಿಗೆ ಆರೋಗ್ಯದ ಬಗ್ಗೆ ಗಮನಹರಿಸಲು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಅಟ್ಟಿಕಾ ಬಾಬು ತಂದಿರಿಸಿದ್ದ ಫುಡ್ ಕಿಟ್ ಸೀಜ್ ಮಾಡಿದ ಪೊಲೀಸ್​

ಆಗ್ನೇಯ ವಿಭಾಗದ ಪೊಲೀಸರಲ್ಲಿ ಅನಾರೋಗ್ಯದ ಸಮಸ್ಯೆಗಳು ಹೆಚ್ಚಾಗಿವೆ. ಆದ ಕಾರಣ ಕೆಲಸದ ಅವಧಿಯಲಷ್ಟೇ ಕೆಲಸ ಮಾಡಲು ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ. ಇದರ ಜೊತೆ ಆಗ್ನೇಯ ವಿಭಾಗದ ಎಲ್ಲಾ ಪೊಲೀಸರಿಗೂ ಆರೋಗ್ಯ ತಪಾಸಣೆಯನ್ನು ಕಡ್ಡಾಯ ಮಾಡಲಾಗಿದೆ. ಜಯದೇವ, ಅಪೋಲೋ ಆಸ್ಪತ್ರೆ ಸಹಯೋಗದಲ್ಲಿ ಎಲ್ಲಾ ಇನ್ಸ್ ಪೆಕ್ಟರ್ ಹಾಗೂ ಮೇಲ್ಪಟ್ಟ ಅಧಿಕಾರಿಗಳಿಗೆ ಆರೋಗ್ಯ ತಪಾಸಣೆ ಮಾಡಿಸಲಾಗಿದ್ದು ತಪಾಸಣೆ ವರದಿ ಶಾಕಿಂಗ್ ಆಗಿದೆ.

14 ಸ್ಟೇಷನ್​ಗಳ ಪೈಕಿ 800 ಮಂದಿ ಪೊಲೀಸ್ ಸಿಬ್ಬಂದಿಗೆ ಆರೋಗ್ಯ ತಪಾಸಣೆ ಮಾಡಲಾಗಿದೆ. ಆಗ್ನೇಯ ವಿಭಾಗ ಡಿಸಿಪಿ ಸಿ.ಕೆ. ಬಾಬ ಅವರು ಎಂಟು ವಿಧದಲ್ಲಿ ಆರೋಗ್ಯ ತಪಾಸಣೆ ಮಾಡಿಸಿದ್ದಾರೆ. 800 ಮಂದಿ ಪೊಲೀಸ್ ಸಿಬ್ಬಂದಿಯಲ್ಲಿ ಶೇಕಡ 20% ರಷ್ಟು ಮಂದಿಗೆ ಬಿಪಿ ಹೈ ಮತ್ತು ಬಿಪಿ ಲೋ ಸಮಸ್ಯೆ ಇರುವುದು ಪತ್ತೆಯಾಗಿದೆ. ಮತ್ತೆ 20% ರಷ್ಟು ಮಂದಿಗೆ ಗ್ಯಾಸ್ಟ್ರಿಕ್, ಎದೆನೋವಿನ ಸಮಸ್ಯೆ ಇದೆ. ಆರೋಗ್ಯದ ಸಮಸ್ಯೆ ಇರುವವರನ್ನು ಪ್ರತ್ಯೇಕ ಗುಂಪು ಮಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:57 am, Mon, 20 March 23