Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಬೆಂಜ್ ಕಾರು ಡಿಕ್ಕಿ ಹೊಡೆದು ಸಂಧ್ಯಾ ಸಾವು ಪ್ರಕರಣ: ಮತ್ತಷ್ಟು ರೋಚಕ ಸಂಗತಿ ಬಯಲು

ಕೆಂಗೇರಿಯಲ್ಲಿ ಬೆಂಜ್ ಕಾರ್ ಡಿಕ್ಕಿ ಹೊಡೆದು ಸಂಧ್ಯಾ ಎಂಬ ಮಹಿಳೆ ಮೃತಪಟ್ಟ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಆರೋಪಿ ಧನುಷ್ ಕಾರಿನಲ್ಲೇ ಮದ್ಯಪಾನ ಮಾಡಿ ದುರಂತ ಸೃಷ್ಟಿಸಿದ್ದನಾ ಎಂಬ ಪ್ರಶ್ನೆ ತನಿಖೆ ವೇಳೆ ಮೂಡಿದೆ. ಮತ್ತೊಂದು ಕಡೆ ಸಂಧ್ಯಾ ಪೋಷಕರು ಪ್ರಕರಣ ಸಂಬಂಧ ಹೈಕೋರ್ಟ್ ಕದ ತಟ್ಟಿದ್ದಾರೆ. ಹಾಗಾದರೆ ಸಂಧ್ಯಾ ಸಾವು ಪ್ರಕರಣದ ಮತ್ತಷ್ಟು ರೋಚಕ ವಿಚಾರಗಳೇನು? ಇಲ್ಲಿದೆ ಮಾಹಿತಿ.

ಬೆಂಗಳೂರಿನಲ್ಲಿ ಬೆಂಜ್ ಕಾರು ಡಿಕ್ಕಿ ಹೊಡೆದು ಸಂಧ್ಯಾ ಸಾವು ಪ್ರಕರಣ: ಮತ್ತಷ್ಟು ರೋಚಕ ಸಂಗತಿ ಬಯಲು
ಅಪಘಾತಕ್ಕೀಡಾಗಿದ್ದ ಕಾರು ಮತ್ತು ಸಂಧ್ಯಾ
Follow us
Shivaprasad
| Updated By: Ganapathi Sharma

Updated on:Nov 09, 2024 | 6:26 PM

ಬೆಂಗಳೂರು, ನವೆಂಬರ್ 9: ಇತ್ತೀಚೆಗೆ ಕೆಂಗೇರಿಯ ಬಸ್ ನಿಲ್ದಾಣದ ಬಳಿ ನಡೆದಿದ್ದ ಬೆಂಜ್ ಕಾರ್ ಅಪಘಾತ ಪ್ರಕರಣದ ಮತ್ತೊಂದು ಸತ್ಯ ಇದೀಗ ಬಯಲಾಗಿದೆ. ಈಗಾಗಲೇ ಬಂಧಿತನಾಗಿರುವ ಬೆಂಜ್ ಕಾರ್ ಚಾಲಕ ಧನುಷ್ ಕಾರಿನಲ್ಲೇ ಕೂತು ಮದ್ಯಪಾನ ಮಾಡಿದ್ದು, ಕೆಂಗೇರಿ ಸಂಚಾರ ಪೊಲೀಸರ ತನಿಖೆಯಲ್ಲಿ ಈ ವಿಚಾರ ಬಯಲಾಗಿದೆ. ಅಷ್ಟಲ್ಲದೇ ಆರೋಪಿ ಮದ್ಯ ಖರೀದಿ ಮಾಡಿದ್ದೆಲ್ಲಿ, ಕುಡಿದಿದ್ದೆಷ್ಟು ಎಂಬ ವಿಚಾರಗಳು ಕೂಡ ತನಿಖೆಯಲ್ಲಿ ಗೊತ್ತಾಗಿದ್ದು, ಆರೋಪಿ ವಿರುದ್ಧ ಸಾಕಷ್ಟು ಸಾಕ್ಷ್ಯಗಳನ್ನು ಕಲೆಹಾಕಲಾಗುತ್ತಿದೆ.

ಬೆನ್ಜ್ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಬಂದು ಸಂಧ್ಯಾ ಪ್ರಾಣ ತೆಗೆದಿದ್ದ ಧನುಷ್, ಮದ್ಯಪಾನ ಮಾಡಿರುವುದು ಆ ವೇಳೆಯೇ ಖಚಿತಪಟ್ಟಿತ್ತು. ಹೀಗಾಗಿ ಪೊಲೀಸರು ಆತನನ್ನು ಬಂಧಿಸಿ ಪ್ರಕರಣ ಕೂಡ ದಾಖಲಿಸಿದ್ದರು. ತನಿಖೆ ವೇಳೆ, ಆತ ನಾಯಂಡಹಳ್ಳಿ ಬಳಿ ಎಣ್ಣೆ ಖರೀದಿ ಮಾಡಿರುವುದು ಗೊತ್ತಾಗಿದೆ. ಸ್ನೇಹಿತನ ಜೊತೆ ಸೇರಿ ಎಣ್ಣೆ ಖರೀದಿಸಿ ಕಾರಿನಲ್ಲೇ ಎಣ್ಣೆ ಹೊಡೆದಿರುವ ಶಂಕೆ ಕೂಡ ಇದೆ.

ಕಾರಲ್ಲೇ ಮದ್ಯಪಾನ ಮಾಡಿ ಅತಿವೇಗದ ಚಾಲನೆ

ಕಾರಲ್ಲೇ ಮದ್ಯಪಾನ ಮಾಡಿದ ಬಳಿಕ, ಮೈಸೂರು ಬೆಂಗಳೂರು ರಸ್ತೆಯಲ್ಲಿ ಅತಿವೇಗದಲ್ಲಿ ಕಾರು ಚಲಾಯಿಸಿದ್ದು, ಕೆಂಗೇರಿ ಬಸ್ ನಿಲ್ದಾಣದ ಬಳಿ ಬಂದಾಗ ಹಂಪ್​ ಅನ್ನೂ ಎಗರಿಸಿ ಸಂಧ್ಯಾಗೆ ಡಿಕ್ಕಿ ಹೊಡೆದಿದ್ದಾನೆ. ಇದಕ್ಕೆಲ್ಲ ಪೊಲೀಸರು ಸಾಕಷ್ಟು ಸಾಕ್ಷ್ಯ ಸಂಗ್ರಹಿಸಿದ್ದಾರೆ.

ಆರೋಪಿ ವಿರುದ್ಧ ಸಿಕ್ಕಿರುವ ಪ್ರಬಲ ಸಾಕ್ಷ್ಯಗಳೇನು?

  • ಆರೋಪಿ ಧನುಷ್ ಬಾರ್​​ನಲ್ಲಿ ಮದ್ಯ ಖರೀದಿಸಿದ ಸಿಸಿಟಿವಿ ದೃಶ್ಯ ಪತ್ತೆ.
  • ಅಪಘಾತ ಜಾಗದ ಹಿಂದಿದ್ದ ಹಂಪ್​​ನಲ್ಲೂ ವೇಗವಾಗಿ ಚಾಲನೆ.
  • ಡಿಡಿ ಚೆಕ್ ಮಾಡಿದಾಗ 177% ಆಲ್ಕೋಹಾಲ್ ಸೇವನೆ ಪತ್ತೆ.
  • ಅಪಘಾತ ಸಂಬಂಧ 6 ಮಂದಿ ಪ್ರಮುಖ ಸಾಕ್ಷ್ಯಗಳ ಹೇಳಿಕೆ ಸಂಗ್ರಹ.
  • ಮದ್ಯ ಖರೀದಿ ಮಾಡಿದ ಬಾರ್​ನ ಇಬ್ಬರು ವ್ಯಕ್ತಿಗಳ ಹೇಳಿಕೆ.
  • ಮದ್ಯ ಖರೀದಿ ಮಾಡಿದ್ದನ್ನ ಗುರುತಿಸಿದ ಇಬ್ಬರು ವ್ಯಕ್ತಿಗಳ ಹೇಳಿಕೆ.
  • ಅಪಘಾತ ನಡೆದ ಸ್ಥಳದಲ್ಲಿದ್ದ ನಾಲ್ವರು ವ್ಯಕ್ತಿಗಳ ಹೇಳಿಕೆ ದಾಖಲು.
  • ಸ್ಥಳದಲ್ಲಿದ್ದ ಆಟೋ ಚಾಲಕರ ಹೇಳಿಕೆ ಕೂಡ ದಾಖಲು.
  • ಕಾರ್ ಬಂದಿರುವುದು ಘಟನಾ ಸ್ಥಳದಲ್ಲಿದ್ದ ಎರಡು ಸಿಸಿಟಿವಿಗಳಲ್ಲಿ ಪತ್ತೆ.
  • ಆದರೆ, ಅಪಘಾತ ನಡೆದ ಜಾಗದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿಲ್ಲ.

ಹೀಗೆ ಪೊಲೀಸರು ಧನುಷ್ ಮದ್ಯಪಾನ ಮಾಡಿ ಕಾರು ಚಲಾಯಿಸಿದ್ದಕ್ಕೆ ಸಾಕಷ್ಟು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಅಷ್ಟಲ್ಲದೇ, ಅಪಘಾತ ಸ್ಥಳ ಹಾಗೂ ಬೆನ್ಜ್ ಕಾರಿನಲ್ಲಿ ಪರಿಶೀಲನೆ ನಡೆಸಿ ಸಾಕ್ಷ್ಯ ಸಂಗ್ರಹಿಸಲಾಗಿದೆ. ಧನುಷ್ ಡಿಡಿ ಚೆಕ್ ಮಾಡಿ ವಿಡಿಯೋ ರೆಕಾರ್ಡ್ ಮಾಡಲಾಗಿದೆ. ಸದ್ಯ ಆರೋಪಿ ರಕ್ತದ ಮಾದರಿಯ ವರದಿ ಬರುವುದು ಬಾಕಿಯಿದೆ. ಆದರೆ, ಬೆಂಜ್ ಕಂಪನಿ ಸಿಬ್ಬಂದಿ ಕರೆಸಿ ಕಾರ್ ಪರಿಶೀಲನೆ ಮಾಡಿಸಿದಾಗ ಡ್ಯಾಶ್ ಕ್ಯಾಮರಾದಲ್ಲಿ ಅಪಘಾತ ದೃಶ್ಯ ಪತ್ತೆಯಾಗಿಲ್ಲ.

ಇದನ್ನೂ ಓದಿ: ಬೆಂಜ್ ಕಾರು ಡಿಕ್ಕಿಯಾಗಿ ಫ್ಯಾಷನ್ ಡಿಸೈನರ್ ಸಾವು: ಕೇಸ್​ ಹಿಂಪಡೆಯಲು ಆರೋಪಿಯಿಂದ ಒಂದೂವರೆ ಕೋಟಿ ಆಮಿಷ

ಒಟ್ಟಿನಲ್ಲಿ ಪ್ರಕರಣ ಸಂಬಂಧ ಎಲ್ಲಾ ಆಯಾಮಗಳಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ಅಪಘಾತ ಪ್ರಕರಣ ಸಂಬಂಧ ಸಿಸಿಟಿವಿ ದೃಶ್ಯಾವಳಿ ಒದಗಿಸಬೇಕೆಂದು ಸಂಧ್ಯಾ ಪೋಷಕರು ಹೈಕೋರ್ಟ್​ನಲ್ಲಿ ಅರ್ಜಿ ಹಾಕಿದ್ದಾರೆ. ಅಪಘಾತ ನಡೆದ ಸ್ಥಳದಲ್ಲಿನ ಸಿಸಿಟಿವಿ ದೃಶ್ಯಾವಳಿ ಒದಗಿಸಲು ಟ್ರಾಫಿಕ್ ಪೊಲೀಸರಿಗೆ ನಿರ್ದೇಶಿಸುವಂತೆ ಅರ್ಜಿ ಹಾಕಿದ್ದು, ಪ್ರಕರಣ ವಿಚಾರಣೆಗೆ ಬರಬೇಕಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 6:00 pm, Sat, 9 November 24

ಜಾಮ್‌ನಗರದ ಬಳಿ ವಾಯುಪಡೆಯ ಯುದ್ಧ ವಿಮಾನ ಪತನವಾದ ಕ್ಷಣ ಸಿಸಿಟಿವಿಯಲ್ಲಿ ಸೆರೆ
ಜಾಮ್‌ನಗರದ ಬಳಿ ವಾಯುಪಡೆಯ ಯುದ್ಧ ವಿಮಾನ ಪತನವಾದ ಕ್ಷಣ ಸಿಸಿಟಿವಿಯಲ್ಲಿ ಸೆರೆ
‘ದರ್ಶನ್ ಅಪ್ಪಟ ಬಂಗಾರ’: ಡಿ ಬಾಸ್ ವ್ಯಕ್ತಿತ್ವ ವಿವರಿಸಿದ ಗಣೇಶ್ ಕಾಸರಗೋಡು
‘ದರ್ಶನ್ ಅಪ್ಪಟ ಬಂಗಾರ’: ಡಿ ಬಾಸ್ ವ್ಯಕ್ತಿತ್ವ ವಿವರಿಸಿದ ಗಣೇಶ್ ಕಾಸರಗೋಡು
ಗ್ರಾಮಸ್ಥರ ಪ್ರಶ್ನೆಗಳಿಗೆ ಲಕ್ಷ್ಮಿಹೆಬ್ಬಾಳ್ಕರ್ ಅವರಲ್ಲಿ ಉತ್ತರವಿರಲಿಲ್ಲ
ಗ್ರಾಮಸ್ಥರ ಪ್ರಶ್ನೆಗಳಿಗೆ ಲಕ್ಷ್ಮಿಹೆಬ್ಬಾಳ್ಕರ್ ಅವರಲ್ಲಿ ಉತ್ತರವಿರಲಿಲ್ಲ
ಕೋಟೆನಾಡಲ್ಲಿ ನಾಳೆಯೂ ಅಗಲಿದೆಯಂತೆ ಮಳೆ
ಕೋಟೆನಾಡಲ್ಲಿ ನಾಳೆಯೂ ಅಗಲಿದೆಯಂತೆ ಮಳೆ
ಮಾರಿಗುಡಿ ದೇವಾಲಯಕ್ಕೆ ಭೇಟಿ ನೀಡಿದ ಅಶ್ವಿನಿ ಪುನೀತ್ ರಾಜ್​ಕುಮಾರ್: ವಿಡಿಯೋ
ಮಾರಿಗುಡಿ ದೇವಾಲಯಕ್ಕೆ ಭೇಟಿ ನೀಡಿದ ಅಶ್ವಿನಿ ಪುನೀತ್ ರಾಜ್​ಕುಮಾರ್: ವಿಡಿಯೋ
ರಿಷಬ್ ಶೆಟ್ಟಿ ಶಿವಾಜಿ ಪಾತ್ರ ಮಾಡುವುದು ಬೇಡ: ವಾಟಾಳ್ ನಾಗರಾಜ್
ರಿಷಬ್ ಶೆಟ್ಟಿ ಶಿವಾಜಿ ಪಾತ್ರ ಮಾಡುವುದು ಬೇಡ: ವಾಟಾಳ್ ನಾಗರಾಜ್
ಮಳೆಗಾಲದಲ್ಲಿ ಬೆಂಗಳೂರು ಹೇಗಿರಲಿದೆ ಅನ್ನೋದಿಕ್ಕೆ ಇದು ಟೀಸರ್ ಮಾತ್ರ!
ಮಳೆಗಾಲದಲ್ಲಿ ಬೆಂಗಳೂರು ಹೇಗಿರಲಿದೆ ಅನ್ನೋದಿಕ್ಕೆ ಇದು ಟೀಸರ್ ಮಾತ್ರ!
ಥಾಯ್ ಪ್ರಧಾನಿಯಿಂದ ಮೋದಿಗೆ ದಿ ವರ್ಲ್ಡ್ ಟಿಪಿಟಕ ಗ್ರಂಥ ಉಡುಗೊರೆ
ಥಾಯ್ ಪ್ರಧಾನಿಯಿಂದ ಮೋದಿಗೆ ದಿ ವರ್ಲ್ಡ್ ಟಿಪಿಟಕ ಗ್ರಂಥ ಉಡುಗೊರೆ
ವಕ್ಫ್ ತಿದ್ದುಪಡಿ ಬಿಲ್ ಬಗ್ಗೆ ನನ್ನ ಪಕ್ಷದ ಹಿರಿಯರು ಮಾತಾಡುತ್ತಾರೆ: ಸಚಿವೆ
ವಕ್ಫ್ ತಿದ್ದುಪಡಿ ಬಿಲ್ ಬಗ್ಗೆ ನನ್ನ ಪಕ್ಷದ ಹಿರಿಯರು ಮಾತಾಡುತ್ತಾರೆ: ಸಚಿವೆ
ಯಡಿಯೂರಪ್ಪ ಜೊತೆ ಬಸ್ಸಲ್ಲಿ ಹೋಗಲು ಬಿಜೆಪಿ ನಾಯಕರಲ್ಲಿ ಪೈಪೋಟಿ
ಯಡಿಯೂರಪ್ಪ ಜೊತೆ ಬಸ್ಸಲ್ಲಿ ಹೋಗಲು ಬಿಜೆಪಿ ನಾಯಕರಲ್ಲಿ ಪೈಪೋಟಿ