ಕೃಷ್ಣ ಜನ್ಮಾಷ್ಟಮಿ 2026: ಒಂದೇ ದಿನದಲ್ಲಿ ಬೆಂಗಳೂರಿನ 4 ಪ್ರಸಿದ್ಧ ಕೃಷ್ಣ ದೇವಾಲಯಗಳ ದರ್ಶನ ಪಡೆಯಿರಿ

ಕೃಷ್ಣ ಜನ್ಮಾಷ್ಟಮಿಯಂದು ಬೆಂಗಳೂರಿನಲ್ಲೇ ದಿವ್ಯ ಆಶೀರ್ವಾದ ಪಡೆಯಲು ಬಯಸುವಿರಾ? ಈ ಮಾರ್ಗದರ್ಶಿ ನಗರದ 4 ಪ್ರಸಿದ್ಧ ಕೃಷ್ಣ ದೇವಾಲಯಗಳಿಗೆ ಒಂದೇ ದಿನದಲ್ಲಿ ಭೇಟಿ ನೀಡಲು ಸುಲಭ ಪ್ರವಾಸ ಯೋಜನೆಯನ್ನು ನೀಡುತ್ತದೆ. ಇಸ್ಕಾನ್, ಗೋವರ್ಧನ ಕ್ಷೇತ್ರ, ಇಂದಿರಾನಗರ ಕೃಷ್ಣ ದೇವಾಲಯ ಮತ್ತು ಎಡ್ನೀರ್ ಮಠಕ್ಕೆ ಬೆಳಿಗ್ಗೆಯಿಂದ ರಾತ್ರಿಯವರೆಗೆ ಭೇಟಿ ನೀಡಿ, ವಿಶೇಷ ಪೂಜೆ ಮತ್ತು ಆಚರಣೆಗಳಲ್ಲಿ ಭಾಗವಹಿಸಿ ಪುಣ್ಯ ಗಳಿಸಿ. ಮೆಟ್ರೋ ಬಳಸಿ ಸುಲಭವಾಗಿ ತಲುಪಿ.

ಕೃಷ್ಣ ಜನ್ಮಾಷ್ಟಮಿ 2026: ಒಂದೇ ದಿನದಲ್ಲಿ ಬೆಂಗಳೂರಿನ 4 ಪ್ರಸಿದ್ಧ ಕೃಷ್ಣ ದೇವಾಲಯಗಳ ದರ್ಶನ ಪಡೆಯಿರಿ
ಸಾಂದರ್ಭಿಕ ಚಿತ್ರ
Image Credit source: Tv9 kannada

Updated on: Aug 31, 2026 | 9:58 AM

ಬೆಂಗಳೂರು, ಆ.31: ಶ್ರೀಕೃಷ್ಣ ಜನ್ಮಾಷ್ಟಮಿಯ ಪವಿತ್ರ ಸಂದರ್ಭದಲ್ಲಿ ಕೃಷ್ಣನ ದಿವ್ಯ ಆಶೀರ್ವಾದ ಪಡೆಯಲು ಭಕ್ತರು ಕಾತುರರಾಗಿದ್ದಾರೆ. ಹಬ್ಬದ ದಿನದಂದು ದೀರ್ಘ ಪ್ರಯಾಣ ಮಾಡಲು ಸಾಧ್ಯವಾಗದ ನಗರದ ಭಕ್ತಾದಿಗಳಿಗೆ ಮತ್ತು ಪ್ರವಾಸಿಗರಿಗೆ ಬೆಂಗಳೂರಿನಲ್ಲೇ ಇರುವ 4 ಪ್ರಸಿದ್ಧ ಹಾಗೂ ಐತಿಹಾಸಿಕ ಕೃಷ್ಣ ದೇವಾಲಯಗಳಿಗೆ ಒಂದೇ ದಿನದಲ್ಲಿ ಭೇಟಿ ನೀಡಲು ಸುಲಭ ಪ್ರವಾಸ ಯೋಜನೆಯನ್ನು ಇಲ್ಲ ನೀಡಲಾಗಿದೆ.

ಬೆಳಗಿನಿಂದ ರಾತ್ರಿಯವರೆಗೆ ಒಂದೇ ದಿನದ ಅವಧಿಯಲ್ಲಿ ಭೇಟಿ ನೀಡಬಹುದಾದ ಅತ್ಯಂತ ಸುಂದರ ಹಾಗೂ ಪ್ರಸಿದ್ಧ ಕೃಷ್ಣ ಕ್ಷೇತ್ರಗಳ ಹಾದಿ ಇಲ್ಲಿದೆ

ಇಸ್ಕಾನ್ ದೇವಾಲಯ, ರಾಜಾಜಿನಗರ

ಸಮಯ: ಮುಂಜಾನೆ 6:00 – 9:00 (ಬೆಳಗಿನ ಅವಧಿ)

ವಿಶೇಷತೆ: ಏಷ್ಯಾದಲ್ಲೇ ಅತಿ ದೊಡ್ಡ ಇಸ್ಕಾನ್ ದೇವಾಲಯಗಳಲ್ಲಿ ಒಂದಾದ ಇಲ್ಲಿ ಜನ್ಮಾಷ್ಟಮಿಯ ದಿನದಂದು ವಿಶೇಷ ಕೀರ್ತನೆಗಳು, ಲಕ್ಷಾಂತರ ಹೂವುಗಳ ಅಲಂಕಾರ ಮತ್ತು ಮಹಾ ಅಭಿಷೇಕ ಜರುಗುತ್ತದೆ.

ದರ್ಶನ: ಶ್ರೀ ರಾಧಾ ಕೃಷ್ಣ ಹಾಗೂ ಶ್ರೀ ಕೃಷ್ಣ ಬಲರಾಮರ ದಿವ್ಯ ಮಂಗಳ ರೂಪದ ದರ್ಶನದಿಂದ ದಿನವನ್ನು ಪ್ರಾರಂಭಿಸಬಹುದು.

ಇದನ್ನೂ ಓದಿ: ಡಬಲ್ ಡೆಕ್ಕರ್ ಬಸ್‌ನಲ್ಲಿ ಬೆಂಗಳೂರು ದರ್ಶನ: ರಾಜಧಾನಿಯ ಪ್ರಮುಖ ತಾಣಗಳಿಗೆ ವಿಶೇಷ ಟೂರ್

ಶ್ರೀ ಗೋವರ್ಧನ ಕ್ಷೇತ್ರ, ಬಸವನಗುಡಿ

ಸಮಯ: ಬೆಳಿಗ್ಗೆ 10:30 – 12:30 (ಮಧ್ಯಾಹ್ನದ ಮುನ್ನ)

ವಿಶೇಷತೆ: ಬಸವನಗುಡಿಯ ಈ ಕಲ್ಲಿನ ಗುಹಾ ದೇವಾಲಯವು ಅತ್ಯಂತ ಆಕರ್ಷಕವಾಗಿದೆ. ಕಲ್ಲಿನ ಗುಹೆಯಂತಹ ಸಣ್ಣ ಮಾರ್ಗದಲ್ಲಿ ಸಾಗಿದರೆ ಶ್ರೀಕೃಷ್ಣ ತನ್ನ ಕಿರುಬೆರಳಿನಲ್ಲಿ ಗೋವರ್ಧನ ಗಿರಿಯನ್ನು ಎತ್ತಿ ಹಿಡಿದಿರುವ ಭವ್ಯ ಮೂರ್ತಿಯ ದರ್ಶನ ಭಾಗ್ಯ ಸಿಗುತ್ತದೆ.

ಶ್ರೀ ಕೃಷ್ಣ ದೇವಾಲಯ, ಇಂದಿರಾನಗರ

ಸಮಯ: ಸಂಜೆ 4:30 – 6:30 (ಸಂಜೆಯ ಅವಧಿ)

ವಿಶೇಷತೆ: ಚಿನ್ಮಯ ಮಿಷನ್ ಆಡಳಿತಕ್ಕೊಳಪಟ್ಟಿರುವ ಈ ದೇವಾಲಯವು ನಗರದ ಗದ್ದಲದ ನಡುವೆಯೂ ಪ್ರಶಾಂತ ವಾತಾವರಣವನ್ನು ಹೊಂದಿದೆ. ಇಲ್ಲಿ ಶ್ವೇತ ವರ್ಣದ ಗೋಪುರ ಮತ್ತು ಮಂತ್ರಮುಗ್ಧಗೊಳಿಸುವ ಕೃಷ್ಣನ ವಿಗ್ರಹವಿದೆ. ಜನ್ಮಾಷ್ಟಮಿಯ ಸಂಜೆ ಇಲ್ಲಿ ಹಮ್ಮಿಕೊಳ್ಳುವ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರನ್ನು ಸೆಳೆಯುತ್ತವೆ.

ಶ್ರೀ ಎಡ್ನೀರ್ ಮಠ ಕೃಷ್ಣ ದೇವಾಲಯ, ಕೋರಮಂಗಲ

ಸಮಯ: ರಾತ್ರಿ 7:30 – 9:30 (ರಾತ್ರಿಯ ಅವಧಿ)

ವಿಶೇಷತೆ: ಜನ್ಮಾಷ್ಟಮಿಯ ರಾತ್ರಿ ಭಕ್ತಾದಿಗಳಿಗೆ ವಿಶೇಷ ಪೂಜೆ ಹಾಗೂ ಸಾಂಸ್ಕೃತಿಕ ವೈಭವವನ್ನು ವೀಕ್ಷಿಸಲು ಕೋರಮಂಗಲದ ಈ ದೇವಾಲಯ ಸೂಕ್ತವಾಗಿದೆ. ರಾತ್ರಿ ಜನ್ಮಾಷ್ಟಮಿಯ ಮಹಾ ಆರತಿ, ಭಜನೆ ಹಾಗೂ ಶ್ರೀಕೃಷ್ಣನ ಜನ್ಮೋತ್ಸವದ ಸಂಭ್ರಮದಲ್ಲಿ ಭಾಗಿಯಾಗಿ ಮಹಾ ಪ್ರಸಾದ ಸ್ವೀಕರಿಸಬಹುದು

ಈ ನಾಲ್ಕೂ ತಾಣಗಳು ನಮ್ಮ ಮೆಟ್ರೋ ಹಾಗೂ ರಸ್ತೆ ಮಾರ್ಗದ ಮೂಲಕ ಸುಲಭವಾಗಿ ಸಂಪರ್ಕ ಹೊಂದಿದ್ದು, ಪ್ರವಾಸಕ್ಕೆ ಮೆಟ್ರೋ ಅಥವಾ ಟ್ಯಾಕ್ಸಿ ಬಳಸುವುದು ಸಮಯ ಉಳಿಸಲು ಸೂಕ್ತ. ಹಬ್ಬದ ದಿನದಂದು ದೇವಸ್ಥಾನಗಳಲ್ಲಿ ವಿಪರೀತ ಜನಸಂದಣಿ ಇರುವುದರಿಂದ ಮುಂಚಿತವಾಗಿಯೇ ತಲುಪುವುದು ಒಳಿತು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us