AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮೇಶ್ವರಂ ಕೆಫೆ ಸ್ಫೋಟದ ಗಾಯಾಳುಗಳಿಗೆ ಮುಂದುವರೆದ ಚಿಕಿತ್ಸೆ, ಇಬ್ಬರು ಡಿಸ್ಚಾರ್ಜ್

ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟದಲ್ಲಿ 09 ಜನರಿಗೆ ಗಾಯಗಳಾಗಿವೆ. ಗಾಯಾಳುಗಳಿಗೆ ವೈದೇಹಿ ಆಸ್ಪತ್ರೆ, ಬ್ರೂಕ್​ ಫೀಲ್ಡ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ಇಬ್ಬರು ಡಿಸ್ಚಾರ್ಜ್ ಆಗಿದ್ದು ಉಳಿದವರಿಗೆ ಚಿಕಿತ್ಸೆ ಮುಂದುವರೆದಿದೆ. ಈ ಬಗ್ಗೆ ಬ್ರೂಕ್​ ಫೀಲ್ಡ್​ ಆಸ್ಪತ್ರೆ ವೈದ್ಯ ಪ್ರದೀಪ್ ಮಾಹಿತಿ ನೀಡಿದ್ದಾರೆ.

TV9 Web
| Updated By: ಆಯೇಷಾ ಬಾನು|

Updated on: Mar 02, 2024 | 12:03 PM

Share

ಬೆಂಗಳೂರು, ಮಾರ್ಚ್.02: ಇಂದಿರಾ ನಗರ ಮತ್ತು ವೈಟ್​ಫೀಲ್ಡ್​ ನಡುವಿನ, ಕುಂದಲಹಳ್ಳಿಯ ಬ್ರೂಕ್ ಫೀಲ್ಡ್ ರಸ್ತೆಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಮಾರ್ಚ್ 01ರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಬಾಂಬ್ ಸ್ಫೋಟಗೊಂಡಿದೆ. ಭೀಕರ ಸದ್ದು, ಬೆಂಕಿಯ ಜ್ವಾಲೆ ಕಂಡು ಜನ ಧಿಕ್ಕಾಪಾಲಾಗಿ ಓಡಿದ್ದು 09 ಜನರಿಗೆ ಗಾಯಗಳಾಗಿವೆ. ಗಾಯಾಳುಗಳಿಗೆ ವೈದೇಹಿ ಆಸ್ಪತ್ರೆ, ಬ್ರೂಕ್​ ಫೀಲ್ಡ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಈವರೆಗೆ ಇಬ್ಬರು ಡಿಸ್ಚಾರ್ಜ್ ಆಗಿದ್ದು ಉಳಿದವರಿಗೆ ಚಿಕಿತ್ಸೆ ಮುಂದುವರೆದಿದೆ.

ವೈದೇಹಿ ಆಸ್ಪತ್ರೆಗೆ ದಾಖಲಾಗಿರುವ 6 ಗಾಯಾಳುಗಳ ಪೈಕಿ ನವ್ಯ ಹಣೆಗೆ ಗಾಯ ಆಗಿದ್ದು ಚಿಕಿತ್ಸೆ ಮುಂದುವರೆದಿದೆ. ನಾಗಶ್ರೀ ಕಣ್ಣಿಗೆ ಗಾಯ ಆಗಿದೆ. ಬಾಲ ಮುರಳಿ ಬೆನ್ನಿನ ಭಾಗಕ್ಕೆ ಗಾಯ ಆಗಿದೆ. ಶಂಕರ್ ಎಂಬುವವರ ಕಿವಿಗೆ ಗಾಯಗಳಾಗಿವೆ. ನಿನ್ನೆ ಶ್ರೀನಿವಾಸ ಹಾಗೆ ಮೋನಿ ಎಂಬುವವರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಸದ್ಯ ನಾಲ್ವರಿಗೆ ವೈದೇಹಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ: ತೀವ್ರಗೊಂಡ ತನಿಖೆ, ಸ್ಥಳದಲ್ಲಿ ನ್ಯಾಶನಲ್ ಸೆಕ್ಯುರಿಟಿ ಗಾರ್ಡ್ ಕಮಾಂಡೋಗಳು

ಇನ್ನು ಮತ್ತೊಂದೆಡೆ ಬ್ರೂಕ್​ ಫೀಲ್ಡ್​ ಆಸ್ಪತ್ರೆ ವೈದ್ಯ ಪ್ರದೀಪ್ ಮಾಹಿತಿ ನೀಡಿದ್ದಾರೆ. ಮೂವರು ಗಾಯಾಳುಗಳ ಆರೋಗ್ಯ ತಪಾಸಣೆ ನಡೆಸಿದ್ದೇನೆ. ಐಸಿಯೂನಲ್ಲಿರುವ ಸ್ವರ್ಣಾಂಬ ಎಂಬುವರಿಗೆ ಬಿಪಿ ಕಡಿಮೆ ಇತ್ತು. ಈಗ ಎಲ್ಲ ನಾರ್ಮಲ್ ಇದೆ, ಬೇರೆ ಯಾವುದೇ ಸಮಸ್ಯೆ ಇಲ್ಲ. ಗಾಯಾಳುಗಳು ಕೂಡ ಕುಟುಂಬಸ್ಥರ ಜೊತೆ ಮಾತನಾಡುತ್ತಿದ್ದಾರೆ. ಕಿವಿ ಕೆಳ ಭಾಗದಲ್ಲಿ ಗ್ಲಾಸ್ ಚೂರು, ಪ್ಲಾಸ್ಟಿಕ್ ಮಾದರಿಯ ವಸ್ತು ಪತ್ತೆಯಾಗಿದೆ. ನಾಳೆ ಸ್ವರ್ಣಾಂಬರನ್ನು ಜನರಲ್ ವಾರ್ಡ್​​ಗೆ ಶಿಫ್ಟ್ ಮಾಡುತ್ತೇವೆ. ಗಾಯಾಳು ದೀಪಾಂಶುರನ್ನು ಸಂಜೆ 4 ಗಂಟೆಗೆ ಡಿಸ್ಚಾರ್ಜ್ ಮಾಡ್ತೇವೆ. ಫಾರೂಕ್​ಗೆ ಗಾಯದ ಹಿನ್ನಲೆ ಆಂಟಿಬಯೋಟಿಕ್ ನೀಡಲಾಗುತ್ತಿದೆ. ಚೆನ್ನಾಗಿ ಓಡಾಡುತಿದ್ದಾರೆ. ಇನ್ನು ಸ್ವಲ್ಪ ಸಮಯ ಅವರು ಆಸ್ಪತ್ರೆಯಲ್ಲಿ ಉಳಿಯಬೇಕಾಗಿದೆ. ನಾಳೆವರೆಗೂ ಅವರು ಆಸ್ಪತ್ರೆಯಲ್ಲೇ ಇರಲಿದ್ದಾರೆ ಎಂದು ತಿಳಿಸಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ