ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ; ಗಂಭೀರತೆ ಅರಿತು ಪ್ರಕರಣ ದಾಖಲಿಸಿಕೊಂಡ NIA
ಮಾರ್ಚ್.01ರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಎನ್ಐಎ ಪ್ರಕರಣವನ್ನು ದಾಖಲಿಸಿಕೊಂಡಿದೆ. ಆದಷ್ಟು ಬೇಗ ತನಿಖೆ ಆರಂಭಿಸಲಿದೆ. ಮತ್ತೊಂದೆಡೆ ಪೊಲೀಸರು, ಗೃಹ ಸಚಿವರು ಆದಷ್ಟು ಬೇಗ ಆರೋಪಿಯನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು, ಮಾರ್ಚ್.04: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಆದ ಬಾಂಬ್ ಸ್ಫೋಟ ಘಟನೆ ಸಂಬಂಧ NIA ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನೆರಡು ದಿನಗಳಲ್ಲಿ ಅಧಿಕೃತವಾಗಿ ತನಿಖೆ ಕೈಗೆತ್ತಿಕೊಳ್ಳಲಿದ್ದಾರೆ. UAPA ಅಡಿ ಹೆಚ್ಎಎಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದ್ರೆ ಪ್ರಕರಣದ ಗಂಭೀರತೆ ಅರಿತು ಎನ್ಐಎ ಪ್ರಕರಣ ದಾಖಲಿಸಿಕೊಂಡಿದೆ.
ಬಾಂಬ್ ಸ್ಫೋಟ ಸಂಭವಿಸಿದ ಬೆಂಗಳೂರಿನ ರಾಮೇಶ್ವರಂ ಕೆಫೆಗೆ ಭಾನುವಾರ ಭೇಟಿ ನೀಡಿದ ಸಿಸಿಬಿ ಪೊಲೀಸರು ಸ್ಥಳ ಮಹಜರು ನಡೆಸಿದ್ರು. ಸಿಸಿಬಿ ತನಿಖಾಧಿಕಾರಿ ನವೀನ್ ಕುಲಕರ್ಣಿ ಮತ್ತು ಟೀಂ, ರಾಮೇಶ್ವರಂ ಕೆಫೆ ಮ್ಯಾನೇಜರ್, ಸಿಬ್ಬಂದಿ ಸಮ್ಮುಖದಲ್ಲಿ ಮಹಜರು ನಡೆಸಿದ್ರು. ಬಾಂಬರ್ ಎಂಟ್ರಿಯಾದ ಸ್ಥಳ, ಓಡಾಡಿದ್ದ ಸ್ಥಳದಲ್ಲಿ ಪರಿಶೀಲನೆ ಮಾಡಿದ್ರು. ಜೊತೆಗೆ ಶಂಕಿತರನ್ನ ಆಡುಗೋಡಿ ಟೆಕ್ನಿಕಲ್ ಸೆಲ್ಗೆ ಕರೆತಂದು ವಿಚಾರಣೆ ನಡೆಸಿದ್ರು.
ಬೆಂಗಳೂರಿನ ರಾಮೇಶ್ವರಂ ಕೆಫೆಯ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಪತ್ತೆಗಾಗಿ ಪೊಲೀಸರು ಹರಸಾಹಸ ಪಡ್ತಿದ್ದಾರೆ. ಟೈಮ್ ಟ್ರಾವೆಲ್ ರೀತಿ ಎರಡೂ ಕಡೆ ಹುಡುಕಾಟ ನಡೆಸ್ತಿದ್ರೂ, ಆರೋಪಿಯ ಜಾಡು ಮಾತ್ರ ಸಿಗ್ತಿಲ್ಲ. ಆರೋಪಿ ಪತ್ತೆ ಆಗದಿದ್ರೆ ಪೊಲೀಸರು ರೇಖಾಚಿತ್ರ ಬಿಡುಗಡೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬರ್ ಬೇಟೆಗಾಗಿ ಪೊಲೀಸರ ತಲಾಶ್: ಶಂಕಿತನ ಮತ್ತೊಂದು ದೃಶ್ಯ ಲಭ್ಯ, ಇಲ್ಲಿದೆ ಪ್ರಕರಣದ ಸಮಗ್ರ ಮಾಹಿತಿ
ರಾಮೇಶ್ವರ ಕೆಫೆಗೆ ಒಂದು ಕಿಮೀ ಇರುವ ಒಂದು ಸ್ಥಳದಲ್ಲಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದಾನೆ. ಆದ್ರೆ, ಗ್ರಾಫೈಟ್ ಇಂಡಿಯಾ ಸರ್ಕಲ್ನಲ್ಲಿ ರೋಡ್ ಕ್ರಾಸ್ ಮಾಡಿ ಬಂದು ಬಸ್ ಏರಿದ್ದಾನೆ. ಆದ್ರೆ ಅದಕ್ಕಿಂತ ಹಿಂದೆ ಯಾವ ಕಡೆಯಿಂದ ಬಂದ? ಯಾವ ವಾಹನದಲ್ಲಿ ಬಂದ? ಯಾರಾದ್ರು ಡ್ರಾಪ್ ಮಾಡಿದ್ರಾ? ಅನ್ನೊದನ್ನು ಪತ್ತೆ ಮಾಡಲು ಯತ್ನಿಸಲಾಗಿದೆ. ಆದ್ರೆ, ಬಾಂಬ್ ಇಡಲು ಯಾವ ದಾರಿಯಲ್ಲಿ ಬಂದಿದ್ದನೋ ಅದೇ ದಾರಿಯಲ್ಲಿ ವಾಪಾಸ್ ಹೋಗಿಲ್ಲ. ಮುಂದೆ ಯಾವ ಮಾರ್ಗದಲ್ಲಿ ಹೋಗಿದ್ದಾನೆ ಅನ್ನೊದು ಮಾಹಿತಿ ಇಲ್ಲಾ.
10 ವರ್ಷ, ಮೂರು ಬ್ಲಾಸ್ಟ್, ಒಂದೇ ಮಾದರಿಯ ಸಂಚು?
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಸೇರಿ, ಕಳೆದ 10 ವರ್ಷಗಳಲ್ಲಿ ರಾಜ್ಯದಲ್ಲಿ 3 ಪ್ರಮುಖ ಸ್ಫೋಟಗಳು ಸಂಭವಿಸಿವೆ. ಈ ಮೂರೂ ಪ್ರಕರಣಗಳಲ್ಲಿ ಒಬ್ಬನೇ ಭಾಗಿಯಾಗಿದ್ದು, ಎಲ್ಲಾ ಕಡೆ ಒಬ್ಬನೇ ಆಪರೇಟ್ ಮಾಡಿದ್ದಾನೆ ಅಂತಾ ಹೇಳಲಾಗ್ತಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:09 am, Mon, 4 March 24