Bengaluru clean air projects: 140 ಕೋಟಿ ರೂ. ಯೋಜನೆಗಳೊಂದಿಗೆ ಬೆಂಗಳೂರಿಗೆ ಸಿಗಲಿದೆ ಸ್ವಚ್ಛ ಗಾಳಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 02, 2023 | 7:46 AM

ನಗರದ ವಾಯು ಗುಣಮಟ್ಟವನ್ನು ಸುಧಾರಿಸಲು ಕರ್ನಾಟಕ ಸರ್ಕಾರವು 15 ನೇ ಹಣಕಾಸು ಆಯೋಗದಿಂದ 140 ಕೋಟಿ ರೂಪಾಯಿಗಳ 11 ಯೋಜನೆಗಳಿಗೆ ಅನುಮೋದನೆ ನೀಡಿದೆ.

Bengaluru clean air projects: 140 ಕೋಟಿ ರೂ. ಯೋಜನೆಗಳೊಂದಿಗೆ ಬೆಂಗಳೂರಿಗೆ ಸಿಗಲಿದೆ ಸ್ವಚ್ಛ ಗಾಳಿ
ಸಾಂದರ್ಭೀಕ ಚಿತ್ರ
Follow us on

ಬೆಂಗಳೂರು: ನಗರದ ವಾಯು ಗುಣಮಟ್ಟವನ್ನು ಸುಧಾರಿಸಲು ಕರ್ನಾಟಕ ಸರ್ಕಾರವು 140 ಕೋಟಿ ರೂಪಾಯಿಗಳ 11 ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಈ ಯೋಜನೆಗಳಿಗೆ 15 ನೇ ಹಣಕಾಸು ಆಯೋಗದಿಂದ ಹಣ ನೀಡಲಾಗಿದೆ. ಈಗಾಗಲೇ ರಾಜ್ಯ ಮಟ್ಟದ ಸಮಿತಿಯಿಂದ ಅನುಮತಿ ನೀಡಿದೆ. 11 ಕಾಮಗಾರಿಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC), ತೋಟಗಾರಿಕೆ ಇಲಾಖೆ ಮತ್ತು ನಗರ ಭೂ ಸಾರಿಗೆ ನಿರ್ದೇಶನಾಲಯ (DULT) ನಡುವೆ ವಿಂಗಡಿಸಲಾಗಿದೆ.

ಬಸ್ ಡಿಪೋಗಳನ್ನು ವಿದ್ಯುದ್ದೀಕರಣಗೊಳಿಸುವುದು (20 ಕೋಟಿ ರೂ.), ಐದು ಡಬಲ್ ಡೆಕ್ಕರ್ ಬಸ್‌ಗಳು (ರೂ. 10 ಕೋಟಿ), ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸುವುದು (ರೂ. 1 ಕೋಟಿ), ಮತ್ತು 100 ಎಲೆಕ್ಟ್ರಿಕ್ ಫೀಡರ್ ಬಸ್‌ಗಳನ್ನು ಒದಗಿಸುವುದು (ರೂ. 13 ಕೋಟಿ) ಸೇರಿದಂತೆ ವಿವಿಧ ಕೆಲಸಗಳನ್ನು ಬಿಎಂಟಿಸಿಗೆ ವಹಿಸಲಾಗಿದೆ.

ಬಿಬಿಎಂಪಿಗೆ ರಸ್ತೆ ಗುಡಿಸುವ ಯಂತ್ರಗಳನ್ನು ಖರೀದಿಸಲು (30 ಕೋಟಿ ರೂ.), ಸುಸಜ್ಜಿತ ಫುಟ್‌ಪಾತ್‌ಗಳನ್ನು ನಿರ್ಮಿಸಲು (ರೂ. 30 ಕೋಟಿ), ವರ್ಟಿಕಲ್ ಗಾರ್ಡನ್‌ಗಳನ್ನು ನಿರ್ಮಿಸಲು (ರೂ. 5 ಕೋಟಿ), ನಿರ್ಮಾಣ ತ್ಯಾಜ್ಯವನ್ನು ಸಂಗ್ರಹಿಸಿ ಸಾಗಿಸಲು (ರೂ. 20 ಕೋಟಿ) ಮತ್ತು ಉದ್ಯಾನವನಗಳನ್ನು ಅಭಿವೃದ್ಧಿಪಡಿಸಲು (5 ಕೋಟಿ ರೂ.) ಯೋಜನೆಗಳನ್ನು ನೀಡಲಾಗಿದೆ.

ಇದನ್ನೂ ಓದಿ:Petrol Price Today: ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಫೆಬ್ರವರಿ 2ರಂದು ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ? ವಿವರ ಇಲ್ಲಿದೆ

ಇದೇ ಯೋಜನೆಯಡಿ ಈ ಹಿಂದೆ 279 ಕೋಟಿ ರೂ.ಗಳನ್ನು ಒದಗಿಸಿದ್ದರೂ ಬಿಬಿಎಂಪಿ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡಿಲ್ಲ. ಇನ್ನು ಪಾಲಿಕೆಯು 42 ಟ್ರಾಫಿಕ್ ಛೇದಕಗಳಲ್ಲಿ ನೀರಿನ ಕಾರಂಜಿಗಳನ್ನು ಸ್ಥಾಪಿಸಲು, ಮೆಕ್ಯಾನಿಕಲ್ ಸ್ವೀಪರ್ ಯಂತ್ರಗಳನ್ನು ಖರೀದಿಸಲು, ಹೊರಸೂಸುವಿಕೆಯನ್ನು ಅಳೆಯಲು ಸೆನ್ಸರ್‌ಗಳನ್ನು ಸ್ಥಾಪಿಸಲು ಮತ್ತು ಟೆಂಡರ್‌ಶ್ಯೂರ್ ರಸ್ತೆಗಳನ್ನು ನಿರ್ಮಿಸಲು ಪ್ರಸ್ತಾಪಿಸಿದೆ. ಆದರೆ, ಸದ್ಯಕ್ಕೆ ಈ ಯೋಜನೆಗಳು ಜಾರಿಯಾಗಿಲ್ಲ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:37 am, Thu, 2 February 23