AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳ್ಳಂ ಬೆಳಗ್ಗೆ ಫೀಲ್ಡ್​ಗಿಳಿದ BBMP ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಕಾಲ್ನಡಿಗೆ ಮೂಲಕ ನಗರ ಪರಿಶೀಲನೆ

ಬಿಬಿಎಂಪಿ ಆಯುಕ್ತರ ರೌಂಡ್ಸ್‌ ವೇಳೆ ಕಂಡು ಬಂದಿದ್ದ ಕೂಲಿ ಕಾರ್ಮಿಕರು ನಿರ್ಮಿಸಿಕೊಂಡಿದ್ದ ಶೆಡನ್ನು ತೆರವು ಮಾಡಲಾಗಿದೆ. ವಿವಿಪುರಂನ ಜೈನ್ ದೇವಾಲಯದ ಬಳಿ ಅನಧಿಕೃತವಾಗಿ ಕಟ್ಟಿದ್ದ ಶೆಡ್ ತೆರವು ಮಾಡಲಾಗಿದೆ.

ಬೆಳ್ಳಂ ಬೆಳಗ್ಗೆ ಫೀಲ್ಡ್​ಗಿಳಿದ BBMP ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಕಾಲ್ನಡಿಗೆ ಮೂಲಕ ನಗರ ಪರಿಶೀಲನೆ
ವಿವಿಪುರಂನ ಜೈನ್ ದೇವಾಲಯದ ಬಳಿ ಅನಧಿಕೃತವಾಗಿ ಕಟ್ಟಿದ್ದ ಶೆಡ್ ತೆರವು
TV9 Web
| Updated By: ಆಯೇಷಾ ಬಾನು|

Updated on:Oct 19, 2022 | 10:27 AM

Share

ಬೆಂಗಳೂರು: ರಾಜಾಜಿನಗರದ ಸುಜಾತ ಥಿಯೇಟರ್‌ ಬಳಿ ರಸ್ತೆ ಗುಂಡಿಯಿಂದಾದ(Pothole) ಅಪಘಾತ ಅಧಿಕಾರಿಗಳ ನಿರ್ಲಕ್ಷ್ಯವನ್ನು ಎತ್ತಿ ತೋರಿಸಿಸುತ್ತಿದೆ. ಸದ್ಯ ಘಟನೆ ಬಳಿಕ ಬಿಬಿಎಂಪಿ (BBMP) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್(BBMP chief Commissioner Tushar Girinath) ಅವರು ಸಿಟಿ ರೌಂಡ್ಸ್ ಕೈಗೊಂಡಿದ್ದಾರೆ. ನಗರದ ಪ್ರಮುಖ ರಸ್ತೆಗಳಲ್ಲಿ BBMP ಮುಖ್ಯ ಆಯುಕ್ತ ತುಷಾರ್ ಪರಿಶೀಲನೆ ನಡೆಸುತ್ತಿದ್ದಾರೆ. ರಸ್ತೆಗುಂಡಿ, ಚರಂಡಿ ಸಮಸ್ಯೆ, ಲೈಟಿಂಗ್ ಸಮಸ್ಯೆ ಬಗ್ಗೆ ಜನರಿಂದ ಮಾಹಿತಿ ಪಡೆಯುತ್ತಿದ್ದಾರೆ. ನಿನ್ನೆ ಪಶ್ಚಿಮ ವಲಯದಲ್ಲಿ ಕಾಲ್ನಡಿಗೆ ಮೂಲಕ ಪರಿಶೀಲನೆ ನಡೆಸಿದ್ದ ಆಯುಕ್ತ ತುಷಾರ್ ಅವರು ಇಂದು ದಕ್ಷಿಣ ವಲಯದಲ್ಲಿ ಮಿನರ್ವ ಸರ್ಕಲ್​​ನಿಂದ ಪರಿಶೀಲನೆ ಆರಂಭಿಸಿದ್ದಾರೆ.

ಕಾಲ್ನಡಿಗೆ ಮೂಲಕ ಜನರ ಸಮಸ್ಯೆ ಆಲಿಸಿದ ಆಯುಕ್ತ

ಆಯುಕ್ತ ತುಷಾರ್ ಗಿರಿನಾಥ್ ಅವರು ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಕಾಲ್ನಡಿಗೆಯ ಮುಖಾಂತರ ಖುದ್ದು ಅವರೇ ಸಮಸ್ಯೆಗಳ ಪರಿವೀಕ್ಷಣೆ ಮಾಡಿದ್ದಾರೆ. ಅಧಿಕಾರಿಗಳ ಜೊತೆಗೆ ಸುಮಾರು 6 ಕಿ.ಮೀ ವರೆಗೂ ನಡೆದು ಜನರ ಬಳಿ ಮಾಹಿತಿ ಪಡೆಯುತ್ತಿದ್ದಾರೆ. ಮಿನರ್ವ ಸರ್ಕಲ್ ನಿಂದ ಕಾಲ್ನಡಿಗೆ ಆರಂಭವಾಗಿ ಲಾಲ್ ಬಾಗ್ ವೆಸ್ಟ್ ಗೇಟ್ ವರೆಗೂ ಕಾಲ್ನಡಿಗೆ ಮೂಲಕ ಪರಿಶೀಲನೆ ನಡೆಸಿದ್ದಾರೆ. ರಸ್ತೆ ಗುಂಡಿ, ಕೇಬಲ್ ತೆರವು, ಲೈಟಿಂಗ್ ಸಮಸ್ಯೆ, ಪುಟ್ ಪಾತ್ ಸ್ವಚ್ಪತೆ , ಕಾಮಗಾರಿಗಳ ಪರಿಶೀಲನೆ ಮಾಡಿದ್ದಾರೆ. ಇದನ್ನೂ ಓದಿ: ಗುಂಡಿ ತಪ್ಪಿಸುವ ಯತ್ನದಲ್ಲಿ ಕೆಳಗೆ ಬಿದ್ದಿದ್ದ ಉಮಾದೇವಿ ನಿಧನ: ಕೆಎಸ್​ಆರ್​ಟಿಸಿ ಬಸ್ ಚಾಲಕನ ಬಂಧನ

ಪುಟ್‌ಪಾತ್‌ನಲ್ಲಿ ಅನಧಿಕೃತವಾಗಿ ಕಟ್ಟಿದ್ದ ಶೆಡ್ ತೆರವು

ಬಿಬಿಎಂಪಿ ಆಯುಕ್ತರ ರೌಂಡ್ಸ್‌ ವೇಳೆ ಕಂಡು ಬಂದಿದ್ದ ಕೂಲಿ ಕಾರ್ಮಿಕರು ನಿರ್ಮಿಸಿಕೊಂಡಿದ್ದ ಶೆಡನ್ನು ತೆರವು ಮಾಡಲಾಗಿದೆ. ವಿವಿಪುರಂನ ಜೈನ್ ದೇವಾಲಯದ ಬಳಿ ಅನಧಿಕೃತವಾಗಿ ಕಟ್ಟಿದ್ದ ಶೆಡ್ ತೆರವು ಮಾಡಲಾಗಿದೆ. ಈ ರೀತಿ ಯಾಕೆ ಕಟ್ಟಿಸ್ತಾರೆ? ಯಾರೂ ನೋಡಲ್ವಾ? ಎಂದು ಕೂಡಲೇ ಶೆಡ್ ತೆರವುಗೊಳಿಸುವಂತೆ ಆಯುಕ್ತು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅದರಂತೆಯೇ ಪುಟ್ ಪಾತ್ ಮತ್ತು ಮೋರಿಗೆ ಹೊಂದಿಕೊಂಡಂತೆ ನಿರ್ಮಿಸಿದ್ದ ತಾತ್ಕಾಲಿಕ ಶೆಡ್ ಡೆಮಾಲಿಷ್ ಆಗಿದೆ.

ಯಾರೇ ಒತ್ತುವರಿ ಮಾಡಿದ್ದರೂ ತೆರವು ಮಾಡುತ್ತೇವೆ

ಇನ್ನು ಸಿಟಿ ರೌಂಡ್ಸ್​ ಬಗ್ಗೆ ಬಿಬಿಎಂಪಿ ಕಮಿಷನರ್​ ತುಷಾರ್ ಮಾತನಾಡಿದ್ದಾರೆ. ದಕ್ಷಿಣ ವಲಯದಲ್ಲಿ ಫುಟ್​ಪಾತ್​ ಒತ್ತುವರಿ ವೀಕ್ಷಿಸಿದ್ದೇನೆ. ಒತ್ತುವರಿ ಮಾಡಿರುವವರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದೇನೆ. ಯಾರೇ ಒತ್ತುವರಿ ಮಾಡಿದ್ದರೂ ತೆರವು ಮಾಡುತ್ತೇವೆ. ಅಧಿಕಾರಿಗಳು 2-3 ದಿನದಲ್ಲಿ ಆ ಬಗ್ಗೆ ಕ್ರಮಕೈಗೊಳ್ಳುತ್ತಾರೆ ಎಂದರು. ಬಡವರ ಮನೆ ಮಾತ್ರ ಹೊಡೆಯುತ್ತಾರೆ ಶ್ರೀಮಂತರ ಮನೆ ಯಾಕೆ ಹೊಡೆಯಲ್ಲ ಅನ್ನೋ ಪ್ರಶ್ನೆ ಬರೋದೆ ಇಲ್ಲ. ವಿವಿಪುರಂ ಪುಟ್ ಪಾತ್ ಮೇಲೆ ಕಟ್ಟಡ ಕಾರ್ಮಿಕರು ಮನೆ ಕಟ್ಟಿಕೊಂಡಿದ್ರು ಅದನ್ನ ತೆರವು ಮಾಡಿದ್ದೇವೆ. ವಿವಿಪುರಂನಲ್ಲಿ ಮಾತ್ರ ಡೆಮಾಲಿಷ್ ಮಾಡಿ ಬಸವನಗುಡಿಯಲ್ಲಿ ಏಕೆ ಡೆಮಾಲಿಷ್ ಮಾಡಲ್ಲ ಅಂತಾ ಪ್ರಶ್ನೆ ಮಾಡ್ತಾ ಇದ್ದೀರಾ . ನಾವು ಎಲ್ಲರ ವಿರುದ್ಧ ಕ್ರಮ ವಹಿಸ್ತೇವೆ ಎಂದರು.

ದೀಪಾವಳಿ ಅದ್ದೂರಿ ಆಚರಣಗೆ ಪಾಲಿಕೆ ಗ್ರೀನ್ ಸಿಗ್ನಲ್

ನಗರದ 200 ಕಡೆ ಪಟಾಕಿ ಮಾರಾಟಕ್ಕೆ ಅವಕಾಶ ಕೊಡಲಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿ, ಪೊಲೀಸ್ ಇಲಾಖೆ ಹದ್ದಿನ ಕಣ್ಣು ಇಡಲಿದೆ. ಯಾವ ಪಟಾಕಿ ಮಾರಾಟ ಮಾಡಬೇಕು , ಮಾಡಬಾರದು ಅಂತಾ ಪೊಲೀಸ್ರು ಹಾಗೂ ಮಾಲಿನ್ಯ ಮಂಡಳಿ ಗಮನ ಇಡಲಿದೆ ಎಂದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:40 am, Wed, 19 October 22