Bengaluru Rain Report: 10 ವರ್ಷಗಳಲ್ಲಿ ಬೆಂಗಳೂರನಲ್ಲಿ ಸುರಿದ ವರ್ಷಧಾರೆ ಎಷ್ಟು ? ಇಲ್ಲಿದೆ ಮಳೆಯ ವರದಿ
ಬೆಂಗಳೂರಲ್ಲಿ ಕಳೆದ 10 ವರ್ಷಗಳಲ್ಲಿ ಮಳೆ ಯಾವ ವರ್ಷ ಎಷ್ಟಾಯಿತು ಇಲ್ಲಿದೆ ವರದಿ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಿಟ್ಟು-ಬಿಡದೆ ಮಳೆ ಸುರಿಯುತ್ತಿದ್ದು, ಸಾರ್ವಜನಿಕರು ಹೈರಾಣಾಗಿ ಹೋಗಿದ್ದಾರೆ. ಬೆಂಗಳೂರಿನಲ್ಲಿ ಈ ವರ್ಷ ದಾಖಾಲೆಯ ಮಳೆಯಾಗಿದ್ದು, ಕಳೆದ 10 ವರ್ಷಗಳಲ್ಲಿ ಇದೆ ಮೊದಲ ಬಾರಿಗೆ ಇಷ್ಟು ಪ್ರಮಾಣದ ಮಳೆಯಾಗಿದೆ. ದಶಕದಲ್ಲಿ ಎಷ್ಟು ಪ್ರಮಾಣದ ಮಳೆಯಾಗಿತ್ತು ಇಲ್ಲಿದೆ ವರದಿ.
ವರ್ಷ | ಸೆಪ್ಟೆಂಬರ್ (ಮಿ ಮೀ) | ಅಕ್ಟೋಬರ್ (ಮಿ ಮೀ) | ವಾರ್ಷಿಕ |
2011 | 111.1 | 170 | 1178.8 |
2012 | 68.4 | 83.2 | 7246 |
2013 | 352.6 | 100.2 | 1185.7 |
2014 | 319. 0 | 343 | 1159.3 |
2015 | 189.8 | 47 | 1279.3 |
2016 | 33.2 | 11.5 | 795.6 |
2017 | 513. 8 | 385.7 | 1696 |
2018 | 231.3 | 111.7 | 1033.2 |
2019 | 136.7 | 178.4 | 946.5 |
2020 | 299.6 | 204.3 | 1217 |
ಈ ವರ್ಷದ ಮಳೆ 2017 ರ ವರ್ಷದ ದಾಖಾಲೆಯ ಮಳೆಯನ್ನು ಹಿಂದಿಕ್ಕಿದೆ. 2017ರಲ್ಲಿ ಒಟ್ಟು 1696.0 ಮಿ ಮೀ ಮಳೆಯಾಗಿತ್ತು. ಆದರೆ ಈ ವರ್ಷ ಅಕ್ಟೋಬರ್ 17 ರವರೆಗೂ ಒಟ್ಟು 1709.1 ಮಿ ಮೀ ದಾಟಿದೆ. ಸಾಮಾನ್ಯವಾಗಿ ಅಕ್ಟೋಬರ್ ತಿಂಗಳು ಮೊದಲವಾರದ ಬಳಿಕ ನೈರುತ್ಯ ಮುಂಗಾರು ಬಲ ಕಳೆದು ಕೊಂಡು ಹಿಂಗಾರು ಮಾರುತಕ್ಕೆ ಅವಕಾಶ ಮಾಡಿಕೊಡುತ್ತದೆ. ಆದರೆ ಈ ವರ್ಷ ಅಕ್ಟೋಬರ್ ತಿಂಗಳ ಎರಡು ವಾರದ ಬಳಿಕವು ನೈರುತ್ಯ ಮುಂಗಾರು ಸಕ್ರಿಯವಾಗಿದ್ದು, ಇನ್ನು ಎರಡು ತಿಂಗಳು ಹೆಚ್ಚಿನ ಮಳೆಯಾಗುವ ಸಾಧ್ಯಾತೆ ಇದೆ. ಪ್ರತಿವರ್ಷ ಡಿಸೆಂಬರ್ ತಿಂಗಳಲ್ಲಿ ವಾರ್ಷಿಕ ಮಳೆಯ ವರದಿಯನ್ನ ಲೆಕ್ಕಾ ಹಾಕಲಾಗುತ್ತೆ. ಆದರೆ ಈ ವರ್ಷ ಇನ್ನು ಎರಡು ತಿಂಗಳು ಬಾಕಿ ಇರುವಾಗಲೇ ದಾಖಾಲೆ ಮಳೆ ದಾಖಲಾಗಿದೆ ಎಂದು ಹವಮಾನ ಇಲಾಖೆ ತಜ್ಞ ಸದಾನಂದ ಅಡಿಗ ತಿಳಿಸಿದ್ದಾರೆ.
ನಗರದಲ್ಲಿ ಮಳೆ ಸೃಷ್ಟಿಸಿದ ಅವಾಂತರ
ಬೆಂಗಳೂರಿನಲ್ಲಿ ಬಿಟ್ಟು-ಬಿಡದೆ ಮಳೆ ಸುರಿಯುತ್ತಿದ್ದು, ಸಾರ್ವಜನಿಕರು ಹೈರಾಣಾಗಿ ಹೋಗಿದ್ದಾರೆ. ಹಗಲು-ರಾತ್ರಿ ಎನ್ನದೆ ಮಳೆ ಸುರಿಯುತ್ತಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದೆ. ಹಾಗೇ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಎಷ್ಟೋ ಕುಟುಂಬಗಳು ಬೀದಿಗೆ ಬಿದ್ದಿವೆ. ಮಳೆರಾಯನ ಆರ್ಭಟಕ್ಕೆ ಐಟಿ-ಬಿಟಿಯವರು ನಲುಗಿ ಹೋಗಿದ್ದಾರೆ. ಕಳೆದ ತಿಂಗಳೂ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಗೆ ಸಿಲಿಕಾನ ಸಿಟಿ ಜಲಾವೃತವಾಗಿತ್ತು. ಮಳೆಯಿಂದ ರಾಜಾಕಾಲುವೆ-ಕೆರೆಗಳು ತುಂಬಿ ಹರಿದಿದ್ದು, ಐಟಿ-ಬಿಟಿ ಕಂಪನಿಗಳ ಅಪಾರ್ಟಮೆಂಟ್ಗಳಲ್ಲಿ ನೀರು ನುಗ್ಗಿತ್ತು.
ಇದು ರಾಜ್ಯ ಸರ್ಕಾರಕ್ಕೆ ತೆಲೆನೋವು ಉಂಟು ಮಾಡಿತ್ತು. ಸ್ವತಃ ರಾಜಕಾರಣಿಗಳೇ ಬೋಟ್ನಲ್ಲಿ ಓಡಾಡಿದರು ಮತ್ತು ಮಳೆ ನೀರಲ್ಲೇ ಪ್ರತಿಭಟನೆಯನ್ನೂ ಮಾಡಿದರು. ರಾಜಾಕಾಲುವೆ ಮತ್ತು ಕೆರೆ ಒತ್ತುವರಿಯಿಂದ ಮಳೆ ನೀರು ಹೋಗಲು ದಾರಿಯಿಲ್ಲದೇ ರಸ್ತೆಗಳಲ್ಲಿ ಮಳೆ ನೀರು ನಿಂತು ಮನೆಗಳಿಗೆ ನೀರು ನುಗ್ಗಿತ್ತು. ಮಳೆಯಿಂದಾದ ಈ ಅವಾಂತರ ಮಳೆಗಾಲದ ಅಧಿವೇಶನದಲ್ಲಿ ಸಾಕಷ್ಟು ಸದ್ದು ಮಾಡಿತ್ತು.
ಅವೈಜ್ಞಾನಿಕವಾಗಿ ಬೆಂಗಳೂರನ್ನು ನಿರ್ಮಾಣ ಮಾಡಿರುವುದೇ ಬೆಂಗಳೂರಿನಲ್ಲಿ ಮಳೆ ನೀರು ನಿಲ್ಲಲು ಕಾರಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಿಸಿದರು. ಅವಾಂತರ ಬೆನ್ನಲ್ಲೇ ರಾಜ್ಯ ಸರ್ಕಾರ ರಾಜಾಕಾಲುವೆ ಮತ್ತು ಕೆರೆಗಳನ್ನು ಒತ್ತುವರಿ ಮಾಡಿಕೊಂಡ ಕಟ್ಟಡಗಳನ್ನು ತೆರವುಗೊಳಿಸುವಂತೆ ಆದೇಶ ನೀಡಿತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:29 pm, Tue, 18 October 22