AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರನ್ನು ಮತ್ತಷ್ಟು ಹಸಿರು ಮಾಡಲು ಮುಂದಾದ ಬಿಬಿಎಂಪಿ, 2.5 ಲಕ್ಷ ಸಸಿಗಳ ವಿತರಣೆ

ನಗರವನ್ನು ಹಸಿರಾಗಿಸಲು ಬಿಬಿಎಂಪಿಯು ನಿವಾಸಿ ಕಲ್ಯಾಣ ಸಂಘಗಳು (ಆರ್‌ಡಬ್ಲ್ಯುಎ) ಮತ್ತು ಲಾಭರಹಿತ ಸಂಸ್ಥೆಗಳು ಸೇರಿದಂತೆ ನಾಗರಿಕರಿಗೆ 2.5 ಲಕ್ಷ ಸಸಿಗಳನ್ನು ವಿತರಿಸಲು ಸಿದ್ಧತೆ ನಡೆಸಿದೆ.

ಬೆಂಗಳೂರನ್ನು ಮತ್ತಷ್ಟು ಹಸಿರು ಮಾಡಲು ಮುಂದಾದ ಬಿಬಿಎಂಪಿ, 2.5 ಲಕ್ಷ ಸಸಿಗಳ ವಿತರಣೆ
ಬಿಬಿಎಂಪಿ
ಆಯೇಷಾ ಬಾನು
ಆಯೇಷಾ ಬಾನು|

Updated on: Jun 05, 2023 | 8:49 AM

Share

ಬೆಂಗಳೂರು: ಗಾರ್ಡನ್ ಸಿಟಿ, ಗ್ರೀನ್ ಸಿಟಿಯೆಂದು ಹೆಸರು ಪಡೆದಿರುವ ಬೆಂಗಳೂರನ್ನು ಮತ್ತಷ್ಟು ಹಸಿರು ಮಾಡಲು ಬಿಬಿಎಂಪಿ ಮುಂದಾಗಿದೆ. ನಗರವನ್ನು ಹಸಿರಾಗಿಸಲು ಬಿಬಿಎಂಪಿಯು ನಿವಾಸಿ ಕಲ್ಯಾಣ ಸಂಘಗಳು (ಆರ್‌ಡಬ್ಲ್ಯುಎ) ಮತ್ತು ಲಾಭರಹಿತ ಸಂಸ್ಥೆಗಳು ಸೇರಿದಂತೆ ನಾಗರಿಕರಿಗೆ 2.5 ಲಕ್ಷ ಸಸಿಗಳನ್ನು ವಿತರಿಸಲು ಸಿದ್ಧತೆ ನಡೆಸಿದೆ.

ಬಿಬಿಎಂಪಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಸರೀನಾ ಸಿಕ್ಕಲಿಗಾರ್ ಈ ಬಗ್ಗೆ ಮಾತನಾಡಿ, ಈ ಮಳೆಗಾಲದಲ್ಲಿ 1 ಲಕ್ಷ ಸಸಿಗಳನ್ನು ನೆಡಲಾಗುವುದು. “ಈಗಾಗಲೇ ನಾವು ಎರಡು ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿದ್ದೇವೆ. ಇವುಗಳಲ್ಲಿ ಸರಿಸುಮಾರು 90 ಪ್ರತಿಶತದಷ್ಟು ಸಸಿಗಳು ಉಳಿದುಕೊಂಡಿವೆ, ಹಾಳಾದ ಸಸಿಗಳ ಸ್ಥಳಗಳಲ್ಲಿ ಹೊಸ ಸಸಿಗಳನ್ನು ನೆಡುತ್ತೇವೆ” ಸಸಿಗಳನ್ನು ನೆಡಲು ಗಾರ್ಡ್​ಗಳನ್ನು ನೇಮಿಸಲಾಗುವುದು. ಅವರು ಮೂರು ವರ್ಷಗಳ ಕಾಲ ನೀರು ಹಾಕುವ ಮತ್ತು ಗಿಡಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊಂದಿರುತ್ತಾರೆ ಎಂದು ಅವರು ತಿಳಿಸಿದರು.

ಆದರೆ, ಬಿಬಿಎಂಪಿ ನೀಡಿರುವ ಸಸಿಗಳ ಬಗ್ಗೆ ಸ್ಥಳೀಯ ಸಮುದಾಯಗಳು ಅಸಮಾಧಾನ ವ್ಯಕ್ತಪಡಿಸಿವೆ.

ಈ ಬಗ್ಗೆ RWAs ಹೇಳೋದೇನು?

BBMPಯ ಸಸಿ ನೆಡುವ ಕಾರ್ಯದಲ್ಲಿ ಅನುಭವ ಹೊಂದಿರುವ RWA ಸಂಸ್ಥೆಗಳು, ಈ ಯೋಜನೆ ಹೆಚ್ಚಿನ ಮಟ್ಟದಲ್ಲಿ ಯಶಸ್ಸು ಕಾಣಬೇಕಾದ್ರೆ ಸಸಿಗಳ ಜೊತೆಗೆ ಗಾರ್ಡ್‌ಗಳನ್ನೂ ಒದಗಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿವೆ.

ಇದನ್ನೂ ಓದಿ: ಗೋಲ್​ಮಾಲ್: ಬಿಬಿಎಂಪಿ ಶಾಲಾ ಕಾಲೇಜುಗಳಿಗೆ ಅನರ್ಹ ಶಿಕ್ಷಕರ ನೇಮಕ

“ಟ್ರೀ ಗಾರ್ಡ್‌ಗಳು ದುಬಾರಿ ಮತ್ತು ಅವರು ಸುಲಭವಾಗಿ ಲಭ್ಯವಿರುವುದಿಲ್ಲ. ನಾವು ಬಿಬಿಎಂಪಿ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಅವರು ಸ್ಟಾಕ್ ಇಲ್ಲವೆಂದು ಹೇಳಿಬಿಡುತ್ತಾರೆ” ಎಂದು ರಾಮಮೂರ್ತಿನಗರ ನಿವಾಸಿಗಳ ಕಲ್ಯಾಣ ಸಂಘದ (ಆರ್‌ಡಬ್ಲ್ಯೂಎ) ಶಂಕರ್ ಹೇಳಿದರು. “ನಮ್ಮ ವಾರ್ಡ್‌ನಲ್ಲಿ ಅಂದಾಜು 500 ಹಸುಗಳಿದ್ದು, ಟ್ರೀ ಗಾರ್ಡ್‌ಗಳಿಲ್ಲದೆ, ಸಸ್ಯಗಳನ್ನು ರಕ್ಷಿಸಲು ಆಗುತ್ತಿಲ್ಲ. ಹಸುಗಳು ಸಸಿಗಳನ್ನು ತಿಂದು ಹಾಕುತ್ತವೆ ಎಂದರು.

ಇನ್ನು ವೈಟ್‌ಫೀಲ್ಡ್ ರೈಸಿಂಗ್ ತಂಡದ ನಾಯಕಿ ಅನುಪಮಾ ಕಿಲಾರು ಮತ್ತೊಂದು ಕಳವಳ ವ್ಯಕ್ತಪಡಿಸಿದರು. “ಸಸಿಗಳ ವೆಚ್ಚವನ್ನು ಬಿಬಿಎಂಪಿ ಭರಿಸುತ್ತಿರುವಾಗ, ಈ ಸಸಿಗಳ ಸುಸ್ಥಿರತೆ ಮತ್ತು ಗುಣಮಟ್ಟದ ಬಗ್ಗೆ ಅವರಿಗೆ ನಿರ್ಲಕ್ಷ್ಯವಿದೆ. ನಿರ್ದಿಷ್ಟ ಪ್ರದೇಶದಲ್ಲಿ ಒಂದು ಜಾತಿಯು ನಿಜವಾಗಿಯೂ ಬದುಕಬಹುದೇ ಎಂದು ಅವರು ಪರಿಶೀಲಿಸುವುದಿಲ್ಲ. ಅದಕ್ಕಾಗಿಯೇ ಅಂತಹ ಸಸಿಗಳು ಕೆಲವೇ ದಿನಗಳಲ್ಲಿ ಒಣಗುವುದನ್ನು ನಾವು ನೋಡುತ್ತೇವೆ ಎಂದರು.

ಮತ್ತೊಂದೆಡೆ ಸಸಿ ನೆಡುವ ತಂಡವು ತ್ವರಿತವಾಗಿ ಬೆಳೆಯುವ, ಸುಮಾರು 10 ಅಡಿಗಳಷ್ಟು ಬೆಳೆಯುವ ಮತ್ತು ರಸ್ತೆ ಬದಿಯಲ್ಲಿ ನೆಡಲು ಸೂಕ್ತವಾದ ಸ್ಥಳೀಯ ತಳಿಗಳ ಗಟ್ಟಿಮುಟ್ಟಾದ ಮರಗಳನ್ನು ಆಯ್ಕೆ ಮಾಡುವ ಮೂಲಕ ಈ ಸಮಸ್ಯೆಯನ್ನು ಪರಿಹರಿಸಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Follow Us
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ