ಬೆಂಗಳೂರು, ಮಾರ್ಚ್ 23: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) 2024-25ನೇ ಸಾಲಿನಲ್ಲಿ ಆಸ್ತಿ ತೆರಿಗೆ (Proparty Tax) ಸಂಗ್ರಹಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಬಿಬಿಎಂಪಿ ಇಲ್ಲಿಯವರೆಗೆ 4,566 ಕೋಟಿ ರೂ. ಸಂಗ್ರಹ ಮಾಡಿದೆ. ಪ್ರಸಕ್ತ ಹಣಕಾಸು ವರ್ಷ ಮುಗಿಯುವುದರ ಒಳಗಾಗಿ 6 ಸಾವಿರ ಕೋಟಿ ರೂಪಾಯಿ ಆಸ್ತಿ ತೆರಿಗೆ ಸಂಗ್ರಹ ಗುರಿ ಹೊಂದಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 20.5 ಲಕ್ಷ ಜನರಲ್ಲಿ 3.49 ಲಕ್ಷ ಜನರು ತಮ್ಮ ಆಸ್ತಿ ತೆರಿಗೆಯನ್ನು ಪಾವತಿಸಿಲ್ಲ. ಅದರಲ್ಲಿ 1.73 ಲಕ್ಷ ಜನರು ದೀರ್ಘಕಾಲದ ಸುಸ್ತಿದಾರರು ಮತ್ತು 1.76 ಲಕ್ಷ ಜನರು ಪ್ರಸ್ತುತ ವರ್ಷದ ಸುಸ್ತಿದಾರರಿದ್ದು, ಒಟ್ಟು ಬಿಬಿಎಂಪಿ ಖಜಾನೆಗೆ 390 ಕೋಟಿ ರೂ. ಬರಬೇಕಿದೆ ಎಂದು ಕಂದಾಯ ಇಲಾಖೆ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದರು.
ನೋಟಿಸ್‌ಗಳು, ಎಸ್‌ಎಂಎಸ್‌ಗಳು, ಐವಿಆರ್‌ಎಸ್ ಕರೆಗಳು, ವೈಯಕ್ತಿಕ ಕರೆಗಳು, ಲಗತ್ತು ಸೂಚನೆಗಳನ್ನು ನೀಡಿದ ಬಳಿಕವೂ ದೀರ್ಘಕಾಲದ ಸುಸ್ತಿದಾರರು ಆಸ್ತಿ ತೆರಿಗೆಯನ್ನು ಪಾವತಿಸಿಲ್ಲ. ಉದ್ದೇಶಪೂರ್ವಕ ಮತ್ತು ದೀರ್ಘಕಾಲದ ಸುಸ್ತಿದಾರರು ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂದು ಬಾರಿಯ ಪರಿಹಾರ ಯೋಜನೆಯಡಿ (ಒನ್ ಟೈಮ್ ಸೆಟಲ್ಮೆಂಟ್) ಕೂಡ ಸದುಪಯೋಗಪಡಿಸಿಕೊಂಡಿಲ್ಲ. ಹಲವು ವರ್ಷಗಳಿಂದ ಅವರು ಆಸ್ತಿ ತೆರಿಗೆಯನ್ನು ಪಾವತಿಸಿಲ್ಲ ಎಂದರು.
ಮಾರ್ಚ್ 31ರೊಳಗೆ ಬಾಕಿ ಆಸ್ತಿ ತೆರಿಗೆ ಪಾವತಿಸದಿದ್ದರೆ ಡಬಲ್ ಹಣ ದಂಡದ ರೂಪದಲ್ಲಿ ಪಾವತಿಸಬೇಕಿದೆ. ಹೌದು, ಮಾರ್ಚ್ 31 ಆಸ್ತಿ ತೆರಿಗೆ ಪಾವತಿಗೆ ಕಡೆಯ ದಿನವಾಗಿದೆ. ಬಳಿಕ, ಆಸ್ತಿ ತೆರಿಗೆ ಎಷ್ಟು ಬಾಕಿ ಇದೆಯೋ ಅಷ್ಟೇ ದಂಡವನ್ನೂ ಆಸ್ತಿ ಮಾಲೀಕರು ಪಾವತಿಸಬೇಕಿದೆ. ಅಂದರೆ 100 ರೂ. ಆಸ್ತಿ ತೆರಿಗೆ ಬಾಕಿ ಇದ್ದರೆ, ಇದರ ಮೇಲೆ ಮತ್ತೆ 100 ರೂಪಾಯಿ ದಂಡ ಬೀಳಲಿದೆ. ಇದರ ಜೊತೆಗೆ ವಾರ್ಷಿಕ ಶೇ 15 ರಷ್ಟು ಬಡ್ಡಿ ದರವೂ ಇರಲಿದೆ.
ಇದನ್ನೂ ಓದಿ: ಬೆಳಗಾವಿ ಅಧಿವೇಶನ: ಬಿಬಿಎಂಪಿ ಆಸ್ತಿ ತೆರಿಗೆ, ಬೋರ್‌ವೆಲ್ ಮುಚ್ಚದಿದ್ದರೆ 1 ವರ್ಷ ಜೈಲು, ಬಿಲ್ ಪಾಸ್
ಆದರೆ ಇದು ಮಾರ್ಚ್ 31ಕ್ಕೆ ಕೊನೆಯಾಗಲಿದೆ. ನಂತರ ಶೇ 100 ರಷ್ಟು ದಂಡ ಹಾಗೂ ಶೇ 15 ರಷ್ಟುಬಡ್ಡಿ ಜೊತೆಗೆ ಆಸ್ತಿ ತೆರಿಗೆ ಪಾವತಿಸಬೇಕು.ಅಂದರೆ 1000 ರೂ ಆಸ್ತಿ ತೆರಿಗೆ ಇದ್ದರೆ, 2000 ರೂ. ಜೊತೆಗೆ 15% ಬಡ್ಡಿ ಕಟ್ಟಬೇಕಿದೆ.
Published On - 1:54 pm, Sun, 23 March 25