ಬೆಂಗಳೂರಿನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಬಿಬಿಎಂಪಿಯಿಂದ ವರದಿ ಕೇಳಿದೆ. ಚುನಾವಣಾ ಆಯೋಗದಿಂದ ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿಗೆ ನೋಟೀಸ್ ನೀಡಲಾಗಿದೆ. ಕಾಂಗ್ರೆಸ್ ಆರೋಪ, ಮಾಧ್ಯಮಗಳಲ್ಲಿ ಬಂದ ಸುದ್ದಿ ಆಧಾರದ ಮೇಲೆ ಚುನಾವಣಾ ಆಯೋಗ ವರದಿ ಕೇಳಿದೆ.
ಈ ಕುರಿತು ಬಿಬಿಎಂಪಿಯ ವಿಶೇಷ ಆಯುಕ್ತ ರಂಗಪ್ಪ ಮಾತನಾಡಿದ್ದು, ಮುಖ್ಯ ಆಯುಕ್ತರ ಒಪ್ಪಿಗೆ ಬಳಿಕ ವರದಿ ಸಲ್ಲಿಕೆ ಮಾಡುತ್ತೇವೆ. ಆರ್ಒ ಅಧಿಕಾರಿಯೇ ಐಡಿ ನೀಡಿದ್ದಾರೆ ಎಂಬ ಮಾಹಿತಿ ಇದೆ.
ಮತ್ತಷ್ಟು ಓದಿ: Voter List: ಬೆಂಗಳೂರಿನ ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಿಂದ ಸಾವಿರಾರು ಮತದಾರರ ಹೆಸರು ಡಿಲೀಟ್
ಚಿಲುಮೆ ಸಂಸ್ಥೆಯು ಸಮನ್ವಯಾಧಿಕಾರಿ ಎಂಬ ಐಡಿ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ವರದಿ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಗುರುತಿನ ಚೀಟಿ ಹಂಚಿಕೆ ಮಾಡಿದ ಆರ್ಒ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ನಮ್ಮ ಬಿಎಲ್ಒಗಳು ಮನೆಮನೆಗೆ ತೆರಳಿ ಪರಿಶೀಲನೆ ಮಾಡುತ್ತಾರೆ. ಪಟ್ಟಿಯಿಂದ ಡಿಲೀಟ್ ಆದವರು ಸೇರ್ಪಡೆ ಮಾಡಿಕೊಳ್ಳಬಹುದು ಎಂದು ರಂಗಪ್ಪ ತಿಳಿಸಿದ್ದಾರೆ.
ಚಿಲುಮೆ ಸಂಸ್ಥೆ ವಿರುದ್ಧ ಎಫ್ಐಆರ್ ದಾಖಲು ಬೆಂಗಳೂರಿನಲ್ಲಿ ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ಆರೋಪ ಪ್ರಕರಣ, ಚಿಲುಮೆ ಸಂಸ್ಥೆ ವಿರುದ್ಧ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಬಿಎಂಪಿ ನೀಡಿದ ದೂರಿನ ಅನ್ವಯ ಎಫ್ಐಆರ್ ದಾಖಲಿಸಲಾಗಿದೆ. ಚಿಲುಮೆ ಸಂಸ್ಥೆ ವಿರುದ್ಧ ಮತದಾರರ ಮಾಹಿತಿ ದುರಪಯೋಗ ಆರೋಪ ಕೇಳಿಬಂದಿದೆ.
ಚಿಲುಮೆ ಸಂಸ್ಥೆಯಿಂದ ಮತದಾರರ ಪಟ್ಟಿ ಕಳವು ಆರೋಪ ವಿಚಾರ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹೇಳಿಕೆ ನೀಡಿದ್ದಾರೆ. ಈಗಾಗಲೇ ಹಲಸೂರು ಗೇಟ್ ಠಾಣೆಯಲ್ಲಿ FIR ದಾಖಲಾಗಿದೆ, ಯಾರೂ ಇಲ್ಲದಿರುವುದರಿಂದ ಕಚೇರಿಗೆ ಪೊಲೀಸರಿಂದ ಭದ್ರತೆ ಕಲ್ಪಿಸಲಾಗುತ್ತದೆ. ಎಫ್ಐಆರ್ ದಾಖಲಾದ ಕೂಡಲೇ ಕಚೇರಿ ಖಾಲಿ ಮಾಡಿದ್ದಾರೆ. ನ್ಯಾಯಾಲಯದ ಅನುಮತಿ ಪಡೆದು ಪರಿಶೀಲನೆ ಮಾಡಲಾಗುತ್ತದೆ. ಚಿಲುಮೆ ನಿರ್ದೇಶಕರು ಹಾಗೂ ವ್ಯವಸ್ಥಾಪಕರು ನಾಪತ್ತೆಯಾಗಿದ್ದಾರೆ ತನಿಖೆಯ ನಂತರ ಸತ್ಯಾಂಶ ಬಯಲಾಗುತ್ತದೆ ಎಂದು ಹೇಳಿದ್ದಾರೆ.
ಹೆಬ್ಬಾಳ ಕ್ಷೇತ್ರದಲ್ಲಿ 38,000 ಮತದಾರರ ಹೆಸರು ಡಿಲೀಟ್ ಆಗಿರುವ ಕುರಿತು, ಹೆಬ್ಬಾಳ ಶಾಸಕ ಭೈರತಿ ಸುರೇಶ್ ಹೇಳಿಕೆ ನೀಡಿದ್ದಾರೆ. ಮತ್ತೆ 33 ಸಾವಿರ ಮತದಾರರನ್ನು ಸೇರ್ಪಡೆ ಮಾಡಲಾಗಿದೆ ಇತಿಹಾಸದಲ್ಲಿ ಇಷ್ಟೊಂದು ಡಿಲೀಟ್ & ಸೇರ್ಪಡೆ ಆಗಿರಲಿಲ್ಲ, ಈ ನಡೆ ಚಿಲುಮೆ ಸಂಸ್ಥೆ ವಿರುದ್ಧ ಅನುಮಾನ ಹುಟ್ಟಿಸುತ್ತಿದೆ, ಅಲ್ಪಸಂಖ್ಯಾತರಿರುವ ಕ್ಷೇತ್ರಗಳಲ್ಲಿ ಅತೀ ಹೆಚ್ಚು ಡಿಲೀಟ್ ಆಗಿದೆ.
ಪ್ರತಿ ಬೂತ್ನಲ್ಲೂ 150ಕ್ಕೂ ಹೆಚ್ಚು ಜನರ ಹೆಸರು ಡಿಲೀಟ್ ಆಗಿದೆ, 30-40 ವರ್ಷಗಳಿಂದ ಅದೇ ಮನೆಯಲ್ಲಿ ವಾಸವಾಗಿದ್ದರು, 1 ಮನೆಯಲ್ಲಿ 10 ವೋಟ್ಗಳಿದ್ರೆ 8 ಜನರ ಹೆಸರು ಡಿಲೀಟ್ ಆಗಿದೆ.
ಒಂದು ಮನೆಯಲ್ಲಿ ಕೇವಲ ಎರಡು ಮತಗಳನ್ನು ಉಳಿಸಿದ್ದಾರೆ, ಇದು ಬಿಜೆಪಿ ಸರ್ಕಾರದ ಕುತಂತ್ರ ಎಂದ ಭೈರತಿ ಸುರೇಶ್ ಕಿಡಿಕಾರಿದ್ದಾರೆ.
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ