ಬೆಂಗಳೂರು: ಬಿಬಿಎಂಪಿ ಇ ಖಾತಾ ಪಡೆಯಲು ಸುಸ್ತಾದವರಿಗೆ ಪಾಲಿಕೆ ಗುಡ್ ನ್ಯೂಸ್

ಬೆಂಗಳೂರಿನ ಬಿಬಿಎಂಪಿ ಇ ಖಾತಾ ಪಡೆಯಲು ಸುಸ್ತಾದವರಿಗೆ ಪಾಲಿಕೆ ಶುಭ ಸುದ್ದಿ ಕೊಟ್ಟಿದೆ. ಇ ಖಾತಾ ಮಾಡಿಸಲು ಸೈಬರ್​ಗಳಿಗೆ ಹೋಗಿ ಗಂಟೆಗಟ್ಟಲೇ ಕಾದು ಸುಸ್ತಾದವರಿಗೆ ಪಾಲಿಕೆ ಬೇರೊಂದು ಆಯ್ಕೆ ಕೊಟ್ಟಿದೆ. ಸದ್ಯ ಬಿಬಿಎಂಪಿಯ ಕಚೇರಿಗಳಲ್ಲಿ ಹಾಗೂ ವೆಬ್ ಸೈಟ್​​ಗಳಲ್ಲಿ ಇ ಖಾತಾ ಮಾಡಿಸುತ್ತಿದ್ದವರು, ಇನ್ಮುಂದೆ ಬೆಂಗಳೂರು ಒನ್ ನಾಗರೀಕ ಕೇಂದ್ರಗಳಲ್ಲಿ ಕೂಡ ಇ-ಖಾತಾ ತೆರೆಯಲು ಪಾಲಿಕೆ ಹಸಿರು ನಿಶಾನೆ ತೋರಿದೆ.

ಬೆಂಗಳೂರು: ಬಿಬಿಎಂಪಿ ಇ ಖಾತಾ ಪಡೆಯಲು ಸುಸ್ತಾದವರಿಗೆ ಪಾಲಿಕೆ ಗುಡ್ ನ್ಯೂಸ್
ಬಿಬಿಎಂಪಿ ಇ ಖಾತಾ ಪಡೆಯಲು ಸುಸ್ತಾದವರಿಗೆ ಪಾಲಿಕೆ ಗುಡ್ ನ್ಯೂಸ್
Follow us
ಶಾಂತಮೂರ್ತಿ
| Updated By: Ganapathi Sharma

Updated on:Nov 12, 2024 | 10:13 AM

ಬೆಂಗಳೂರು, ನವೆಂಬರ್ 12: ಬಿಬಿಎಂಪಿ ವ್ಯಾಪ್ತಿಯಲ್ಲಿ ಇ-ಖಾತಾ ಪಡೆಯುವವರಿಗೆ ಪಾಲಿಕೆ ಕಚೇರಿಗಳಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಅಲ್ಲದೇ ವೆಬ್ ಸೈಟ್​ಗಳ ಮೂಲಕ ಇ-ಖಾತಾ ಪಡೆಯುವುದಕ್ಕೂ ಅವಕಾಶ ನೀಡಲಾಗಿತ್ತು. ಆದರೆ ಕೆಲ ಸೈಬರ್​​ಗಳಲ್ಲಿ ಮನಬಂದಂತೆ ಹಣ ವಸೂಲಿ ಮಾಡುತ್ತಿರುವ ದೂರುಗಳು ಕೇಳಿಬಂದ ಬೆನ್ನಲ್ಲೆ ಬಿಬಿಎಂಪಿ ಇದೀಗ ಹೊಸ ಯೋಜನೆ ಹಾಕಿಕೊಂಡಿದೆ. ಈಗಾಗಲೇ ಬಿಬಿಎಂಪಿ ಕಚೇರಿಗಳಲ್ಲಿ ಇ-ಖಾತಾಗೆ ಕೌಂಟರ್ ತೆರೆಯಲು ಸೂಚಿಸಿದ್ದ ಪಾಲಿಕೆ, ಇದೀಗ ಬೆಂಗಳೂರು ಒನ್ ನಾಗರೀಕ ಕೇಂದ್ರಗಳಲ್ಲೂ ಇ-ಖಾತಾ ಪಡೆಯಲು ಅವಕಾಶ ಕಲ್ಪಿಸಿಕೊಟ್ಟಿದೆ

ಇ-ಖಾತಾ ಬಗ್ಗೆ ಈಗಾಗಲೇ ಬೆಂಗಳೂರು ಒನ್ ಸಿಬ್ಬಂದಿಗೆ ತರಬೇತಿ ನೀಡಿರುವ ಪಾಲಿಕೆ, ಸದ್ಯ ಇ-ಖಾತಾ ಮಾಡಿಕೊಡಲು 45 ರೂಪಾಯಿ ದರ ನಿಗದಿ ಮಾಡಿದೆ. ಬೇಕಾಬಿಟ್ಟಿ ಹಣ ವಸೂಲಿ ಮಾಡುವುದಕ್ಕೆ ಕಡಿವಾಣ ಹಾಕಲು ಈ ಪ್ಲಾನ್ ಮಾಡಿರುವ ಬಿಬಿಎಂಪಿ, ಇದೀಗ ಜನರು ತಮ್ಮ ಹತ್ತಿರದ ಬೆಂಗಳೂರು ಒನ್ ಕೇಂದ್ರಗಳಲ್ಲಿ ದಾಖಲೆಗಳನ್ನು ಸಲ್ಲಿಸಿ ಶೀಘ್ರವಾಗಿ ಇ-ಖಾತಾ ಪಡೆಯಲು ಅವಕಾಶ ಕಲ್ಪಿಸಿಕೊಟ್ಟಿದೆ.

ಇದನ್ನೂ ಓದಿ: ಇನ್ಮುಂದೆ ಇ-ಖಾತಾ ಪಡೆಯುವುದು ಬಲು ಸುಲಭ: ಇಲ್ಲಿದೆ ಹಂತ ಹಂತದ ಮಾಹಿತಿ

ಇ ಖಾತಾ ಪಡೆಯುವುದು ಹೇಗೆ?

ನಾಗರೀಕರು ಇ-ಖಾತಾವನ್ನು ಹೇಗೆ ಪಡೆಯಬೇಕು ಎಂಬ ವಿಡಿಯೋ ಬಿಡುಗಡೆ ಮಾಡಿರುವ ಪಾಲಿಕೆ, ಈ ವಿಡಿಯೋ ನೋಡಿಕೊಂಡು ಸುಲಭವಾಗಿ ಅಪ್ ಲೋಡ್ ಮಾಡುವುದಕ್ಕೆ ನೆರವಾಗಲು ಹೊರಟಿದೆ. ಸದ್ಯ ಪಾಲಿಕೆಯ ಯೂಟ್ಯೂಬ್ ಚಾನೆಲ್​ನಲ್ಲಿ ಕನ್ನಡ ಹಾಗೂ ಇಂಗ್ಲೀಷ್​ನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಆ ಮೂಲಕ ಇ-ಖಾತಾ ಬಗ್ಗೆ ಜನರಿಗಿರುವ ಗೊಂದಲಗಳನ್ನು ನಿವಾರಿಸಲು ಪಾಲಿಕೆ ಮುಂದಾಗಿದೆ.

ಇದನ್ನೂ ಓದಿ: ಆನ್​ಲೈನ್​ನಲ್ಲಿ ಬಿಬಿಎಂಪಿ ಇ ಖಾತಾ ಪಡೆಯವುದು ಹೇಗೆ? ಇಲ್ಲಿದೆ ಸರಳ ಮಾರ್ಗ !

ಒಟ್ಟಿನಲ್ಲಿ ವಲಯವಾರು ಸಹಾಯವಾಣಿ, ಪಾಲಿಕೆ ಕಚೇರಿಗಳಲ್ಲಿ ನೆರವು ಕೇಂದ್ರಗಳು ಹೀಗೆ ಹಲವು ಪ್ಲಾನ್​ಗಳ ಮೂಲಕ ಇ-ಖಾತಾ ಪಡೆಯುವುದನ್ನು ಸುಲಭ ಮಾಡಲು ಹೊರಟಿದ್ದ ಪಾಲಿಕೆ, ಇದೀಗ ಬೆಂಗಳೂರು ಒನ್ ಕೇಂದ್ರದಲ್ಲೂ ಇ-ಖಾತಾ ಪಡೆಯಲು ಅವಕಾಶ ಕೊಟ್ಟಿರುವುದು ನಗರವಾಸಿಗಳಿಗೆ ಸಂತಸ ತಂದಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:40 am, Tue, 12 November 24

ನಟ ವಿನೋದ್ ರಾಜ್ ಅವರು ತಾಯಿ ನೆನಪಲ್ಲಿ ಸ್ಮಾರಕ ನಿರ್ಮಾಣ ಮಾಡಿದ್ದಾರೆ. ಇದರ
ನಟ ವಿನೋದ್ ರಾಜ್ ಅವರು ತಾಯಿ ನೆನಪಲ್ಲಿ ಸ್ಮಾರಕ ನಿರ್ಮಾಣ ಮಾಡಿದ್ದಾರೆ. ಇದರ
ಗೌತಮಿ ಜೊತೆ ಆಡಲ್ಲ ಎಂದು ದೊಡ್ಡ ದಂಡ ತೆತ್ತಿದ ಮೋಕ್ಷಿತಾ
ಗೌತಮಿ ಜೊತೆ ಆಡಲ್ಲ ಎಂದು ದೊಡ್ಡ ದಂಡ ತೆತ್ತಿದ ಮೋಕ್ಷಿತಾ
ಮನೆಯಲ್ಲಿ ಬ್ರಹ್ಮ ಕಮಲ ಗಿಡ ಇದ್ದರೆ ಇದೆ ಅನೇಕ ಪ್ರಯೋಜನ!
ಮನೆಯಲ್ಲಿ ಬ್ರಹ್ಮ ಕಮಲ ಗಿಡ ಇದ್ದರೆ ಇದೆ ಅನೇಕ ಪ್ರಯೋಜನ!
Daily Horoscope: ಈ ರಾಶಿಯವರಿಗಿಂದು 5 ರಾಶಿಗಳ ಶುಭ ಫಲ
Daily Horoscope: ಈ ರಾಶಿಯವರಿಗಿಂದು 5 ರಾಶಿಗಳ ಶುಭ ಫಲ
ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ