ಇನ್ಮುಂದೆ ಇ-ಖಾತಾ ಪಡೆಯುವುದು ಬಲು ಸುಲಭ: ಇಲ್ಲಿದೆ ಹಂತ ಹಂತದ ಮಾಹಿತಿ

ಆಸ್ತಿಯ ಇ-ಖಾತಾ ಪಡೆಯಲು ಮಾಲೀಕರು ಬಿಬಿಎಂಪಿ ಕಚೇರಿಗೆ ಅಲೆದು ಅಲೆದು ಹೈರಾಣಾಗುತ್ತಿದ್ದರು. ಆದರೆ, ಇನ್ಮುಂದೆ ಇ-ಖಾತಾ ಪಡೆಯಲು ಬಿಬಿಎಂಪಿಗೆ ತೆರಳಬೇಕಿಲ್ಲ. ಮನಯಲ್ಲೇ ಕೂತು ನಿಮ್ಮ ಸ್ವತ್ತಿನ ಇ-ಖಾತಾ ಪಡೆಯಬಹುದಾಗಿದೆ. ಅದು ಹೇಗೆ? ಇಲ್ಲಿದೆ ವಿವರ

ಇನ್ಮುಂದೆ ಇ-ಖಾತಾ ಪಡೆಯುವುದು ಬಲು ಸುಲಭ: ಇಲ್ಲಿದೆ ಹಂತ ಹಂತದ ಮಾಹಿತಿ
ಬಿಬಿಎಂಪಿ
Follow us
ವಿವೇಕ ಬಿರಾದಾರ
|

Updated on:Oct 04, 2024 | 11:08 AM

ಬೆಂಗಳೂರು, ಅಕ್ಟೋಬರ್​ 04: ಆಸ್ತಿ ಖಾತಾ ಪಡೆಯುವ ಪ್ರಕಿಯೆಯನ್ನು ಸರಳಗೊಳಿಸಲು ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ (BBMP) ಸಂಪರ್ಕರಹಿತ ಇ-ಖಾತಾ (E-Katha) ವಿತರಣಾ ವ್ಯವಸ್ಥೆಯನ್ನು ಆರಂಭಿಸಿದೆ. ಆಸ್ತಿ ಮಾಲೀಕರು ಇನ್ಮುಂದೆ ಫೇಸ್​ಲೆಸ್​ ಅಂದರೆ ಸಂಪರ್ಕರಹಿತವಾಗಿ ಅನ್​ಲೈನ್​ ಮೂಲಕ ಇ-ಖಾತಾವನ್ನು ಪಡೆಯಬಹುದು.

ಅಕ್ಟೋಬರ್​ 1ರಿಂದ ಇ-ಖಾತಾ ವಿತರಣಾ ವ್ಯವಸ್ಥೆಯನ್ನು ಆರಂಭವಾಗಿದೆ. ಈವರೆಗೆ 21 ಲಕ್ಷಕ್ಕೂ ಹೆಚ್ಚು ಆಸ್ತಿ ನೋಂದಣಿ ಎ ಮತ್ತು ಬಿ ಖಾತಾಗಳನ್ನು ಡಿಜಟಲೀಕರಣಗೊಳಿಸಿ ಇ-ಖಾತಾದಲ್ಲಿ ಡ್ರಾಫ್ಟ್​​ ಮಾಡಲಾಗಿದೆ. ಆಸ್ತಿ ಮಾಲೀಕರು ತಮ್ಮ ಸ್ವತ್ತಿನ ಇ-ಖಾತಾವನ್ನು ಡೌನ್​ಲೋಡ್​ ಮಾಡಿಕೊಳ್ಳಬಹುದಾಗಿದೆ. ಇದರಿಂದ ಇನ್ಮುಂದೆ ಆಸ್ತಿ ಮಾಲೀಕರು ಇ-ಖಾತಾಗಳನ್ನು ಪಡೆಯಲು ಬಿಬಿಎಂಪಿ ಮೆಟ್ಟಿಲು ಹತ್ತುವುದು ತಪ್ಪುತ್ತದೆ.

ಇದನ್ನೂ ಓದಿ: ಬೆಂಗಳೂರು: ಸಿಗರೇಟ್, ಬೀಡಿ ತುಂಡುಗಳಿಗೆ ಪ್ರತ್ಯೇಕ ಡಸ್ಟ್ ಬಿನ್ ಅಳವಡಿಕೆಗೆ ಮುಂದಾದ ಬಿಬಿಎಂಪಿ

ಇ-ಖಾತಾ ಪಡೆಯುವುದು ಹೇಗೆ?

ಆಸ್ತಿ ಮಾಲೀಕರು BBMPeAasthi.karnataka.gov.inನಲ್ಲಿ ಇ-ಖಾತಾಗಳನ್ನು ಡೌನ್​ಲೋಡ್​ ಮಾಡಿಕೊಳ್ಳಬಹುದು. ಇನ್ನು, ಇ-ಖಾತಾಗಳನ್ನು ಡೌನಲೋಡ್​​ ಮಾಡಿಕೊಳ್ಳಲು ಕೆಲವು ದಾಖಲಾತಿಗಳು ಅವಶ್ಯವಾಗಿರುತ್ತದೆ. ಆ ದಾಖಲೆಗಳು ಯಾವುವು ಎಂಬುವುದನ್ನು ಬಿಬಿಎಂಪಿ ಮಾಹಿತಿ ನೀಡಿದೆ.

ಅರ್ಜಿ ಸಲ್ಲಿಕೆ ಹಂತಗಳು

  • ನಾಗರಿಕರು ಆಸ್ತಿ ಮಾರಾಟದ ಅಥವಾ ನೋಂದಣಿ ಡೀಡ್​ ನಂಬರ್​ ಅನ್ನು ನಮೂದಿಸಿ.
  • 2004ರ ಏಪ್ರಿಲ್​ 1 ರಿಂದ ಈವರೆಗಿನ ಋಣಭಾರ ಪ್ರಮಾಣಪತ್ರ (ಇಸಿ) ಸಂಖ್ಯೆ ಸಲ್ಲಿಸಬೇಕು.
  • ಆಸ್ತಿ ತೆರಿಗೆಯ ಅಪ್ಲಿಕೇಷನ್​ ಸಂಖ್ಯೆ ಸಲ್ಲಿಸಬೇಕು.
  • ಬೆಸ್ಕಾಂ ಮೀಟರ್​​ ಸಂಖ್ಯೆ ಸಲ್ಲಿಸಬೇಕು.
  • ಆಸ್ತಿಯ ಜಿಪಿಎಸ್​ ದತ್ತಾಂಶ, ಆಸ್ತಿ ಛಾಯಾಚಿತ್ರಗಳನ್ನು ಸಲ್ಲಿಸಬೇಕು.
  • ಎ ಖಾತಾ ಎಂದು ಧೃಡೀಕರಿಸುವ ದಾಖಲೆಗಳನ್ನು ಆಸ್ತಿ ಮಾಲೀಕರು ಸಲ್ಲಿಸಬೇಕು.

ದಾಖಲೆಗಳು ಯಾವುವು?

ಇ-ಖಾತಾ ಪಡೆಯಲು ಆಸ್ತಿ ಮಾಲೀಕರು ಆಧಾರ್​ ಇ ಕೆವೈಸಿ, ಆಸ್ತಿಯ ಜಿಪಿಎಸ್​ ದತ್ತಾಂಶ, ಆಸ್ತಿ ಛಾಯಾಚಿತ್ರಗಳು, ಆಸ್ತಿ ನೋಂದಾಯಿತ ದಾಸ್ತವೇಜು, 2004ರ  ಏಪ್ರಿಲ್​ 1 ರಿಂದ ಈವರೆಗಿನ ಋಣಭಾರ ಪ್ರಮಾಣಪತ್ರ (ಇಸಿ), ಬೆಸ್ಕಾಂ ಮೀಟರ್​​ ಸಂಖ್ಯೆ ಮತ್ತು ಎ ಅಥವಾ ಬಿ ಖಾತಾ ಎಂದು ಧೃಡೀಕರಿಸುವ ದಾಖಲೆಗಳನ್ನು ಆನ್​ಲೈನ್​ನಲ್ಲಿ ಅಪ್ಲೋಡ್​​ ಮಾಡಬೇಕಾಗುತ್ತದೆ.

ಆನ್​ಲೈನ್​ನಲ್ಲಿ ದಾಖಲೆಗಳನ್ನು ಅಪ್ಲೋಡ್​ ಮಾಡಲು ಸಾಧ್ಯವಾಗದಿದ್ದರೇ, ಸಹಾಯಕ ಕಂದಾಯ ಅಧಿಕಾರಿಯನ್ನು ಭೇಟಿಯಾಗಬಹುದು. ಆಸ್ತಿ ಮಾಲೀಕರು ಅಂತಿಮ ಇ-ಖಾತಾ ವಿತರಿಸದಂತೆ ಆಕ್ಷೇಪಣೆಯನ್ನು ಸಲ್ಲಿಸಬಹುದಾಗಿದ್ದು, ಕರಡು ಇ-ಖಾತಾ ರಚಿಸಿದ ಏಳು ದಿನಗಳವರೆಗೆ ಅವಕಾಶವಿರುತ್ತದೆ ಎಂದು ಬಿಬಿಎಂಪಿ ತಿಳಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:30 am, Fri, 4 October 24

ಸುದೀಪ್ ಇರುವಾಗ ರೇಟಿಂಗ್ ಬಗ್ಗೆ ಚಿಂತೆಯೇಕೆ? ದೊಡ್ಮನೆ ಶೋಗೆ ಭರ್ಜರಿ TRP
ಸುದೀಪ್ ಇರುವಾಗ ರೇಟಿಂಗ್ ಬಗ್ಗೆ ಚಿಂತೆಯೇಕೆ? ದೊಡ್ಮನೆ ಶೋಗೆ ಭರ್ಜರಿ TRP
ಬಿಗ್​ಬಾಸ್ ಮನೆಯಲ್ಲಿ ಶುರುವಾಗಿದೆ ಕಳ್ಳರ ಕಾಟ
ಬಿಗ್​ಬಾಸ್ ಮನೆಯಲ್ಲಿ ಶುರುವಾಗಿದೆ ಕಳ್ಳರ ಕಾಟ
Video: ಜಾರ್ಖಂಡ್​ನಲ್ಲಿ ಬಸ್ ಪಲ್ಟಿ, 7 ಮಂದಿ ಸಾವು
Video: ಜಾರ್ಖಂಡ್​ನಲ್ಲಿ ಬಸ್ ಪಲ್ಟಿ, 7 ಮಂದಿ ಸಾವು
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ
6,6,6,6,6,6,6,6: ಸಿಕ್ಸರ್​ಗಳ ಸುರಿಮಳೆ, 8 ಎಸೆತಗಳಲ್ಲಿ 8 ಸಿಕ್ಸ್​
6,6,6,6,6,6,6,6: ಸಿಕ್ಸರ್​ಗಳ ಸುರಿಮಳೆ, 8 ಎಸೆತಗಳಲ್ಲಿ 8 ಸಿಕ್ಸ್​
ಬೈಂದೂರಲ್ಲಿ ಲ್ಯಾಂಡ್ ಆದ ಬಳಿಕ ಶಿವಕುಮಾರ್​ಗೆ ಶೆಡ್ಯೂಲ್ ಮರೆತುಹೋಯಿತೇ?
ಬೈಂದೂರಲ್ಲಿ ಲ್ಯಾಂಡ್ ಆದ ಬಳಿಕ ಶಿವಕುಮಾರ್​ಗೆ ಶೆಡ್ಯೂಲ್ ಮರೆತುಹೋಯಿತೇ?
ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು
ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು
ಕೇವಲ 2 ತಿಂಗಳು ಹಿಂದೆ ಚಿಕ್ಕಬಳ್ಳಾಪುರದಿಂದ ಟ್ರಾನ್ಸ್​ಫರ್ ಆಗಿರುವ ಅಧಿಕಾರಿ
ಕೇವಲ 2 ತಿಂಗಳು ಹಿಂದೆ ಚಿಕ್ಕಬಳ್ಳಾಪುರದಿಂದ ಟ್ರಾನ್ಸ್​ಫರ್ ಆಗಿರುವ ಅಧಿಕಾರಿ
ಸಿಎಂ ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ರನ್ನು ಭೇಟಿಯಾಗಲಿದ್ದಾರೆ
ಸಿಎಂ ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ರನ್ನು ಭೇಟಿಯಾಗಲಿದ್ದಾರೆ
ಕೇವಲ 27 ದಿನಗಳಲ್ಲೇ ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಕೇವಲ 27 ದಿನಗಳಲ್ಲೇ ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ