Mantri Mall: ತೆರಿಗೆ ಕಟ್ಟಿ ಕಟ್ಟೀ ಅಂದರೂ ಡೋಂಟ್​ ಕೇರ್! ಮಂತ್ರಿ ಮಾಲ್​ಗೆ ಬೀಗ ಜಡಿಯಲು ಮುಂದಾದ ಬಿಬಿಎಂಪಿ

| Updated By: ಸಾಧು ಶ್ರೀನಾಥ್​

Updated on: Sep 18, 2021 | 10:14 AM

ಮಲ್ಲೇಶ್ವರಕ್ಕೆ ಸ್ವಾಗತ ಕೋರುವಂತೆ ಸಂಪಿಗೆ ರಸ್ತೆಯ ಆರಂಭದಲ್ಲಿರುವ ಮಂತ್ರಿ ಮಾಲ್ (Mantri Square Mall ) ಬರೋಬ್ಬರಿ 20,33,34,828 ರೂ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ತೆರಿಗೆ ಕಟ್ಟಿ ಕಟ್ಟೀ ಅಂತಾ ಮಂತ್ರಿ ಮಾಲ್ ಗೆ ಬಿಬಿಎಂಪಿ ನೋಟೀಸ್ ನೀಡುತ್ತಾ ಬಂದಿದೆ.

Mantri Mall: ತೆರಿಗೆ ಕಟ್ಟಿ ಕಟ್ಟೀ ಅಂದರೂ ಡೋಂಟ್​ ಕೇರ್! ಮಂತ್ರಿ ಮಾಲ್​ಗೆ ಬೀಗ ಜಡಿಯಲು ಮುಂದಾದ ಬಿಬಿಎಂಪಿ
ಮಂತ್ರಿ ಮಾಲ್‌
Follow us on

ಬೆಂಗಳೂರು: ಬೆಂಗಳೂರಿನಲ್ಲಿ ಬಿಬಿಎಂಪಿ ಆಸ್ತಿ ತೆರಿಗೆ ವಂಚಕರ ಸಂಖ್ಯೆ ಹೆಚ್ಚಳವಾಗಿದೆ. ಅದರಲ್ಲೂ ಬಿಬಿಎಂಪಿಗೆ ಮಂತ್ರಿ ಮಾಲ್ ದೊಡ್ಡ ತಲೆ ನೋವಾಗಿದೆ. ಅಭಿಷೇಕ್ ಡೆವಲಪರ್ಸ್ ಹೆಸರಿನಲ್ಲಿ ಬಿಬಿಎಂಪಿಗೆ ತೆರಿಗೆ ಪಾವತಿ ಮಾಡುತ್ತಿರುವ ಮಂತ್ರಿ ಮಾಲ್ 2018ರ ಬಳಿಕ ಇದೂವರೆಗೂ ಆಸ್ತಿ ತೆರಿಗೆ ಕಟ್ಟಿಲ್ಲ. ಬಿಬಿಎಂಪಿ ಪಶ್ಚಿಮ ವಲಯದಲ್ಲಿ ಅತೀ ದೊಡ್ಡ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಪಟ್ಟಿಯಲ್ಲಿ ಮಂತ್ರಿ ಮಾಲ್ ಮೊದಲ ಸ್ಥಾನದಲ್ಲಿದೆ.

ಮಲ್ಲೇಶ್ವರಕ್ಕೆ ಸ್ವಾಗತ ಕೋರುವಂತೆ ಸಂಪಿಗೆ ರಸ್ತೆಯ ಆರಂಭದಲ್ಲಿರುವ ಮಂತ್ರಿ ಮಾಲ್ (Mantri Square Mall ) ಬರೋಬ್ಬರಿ 20,33,34,828 ರೂ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ತೆರಿಗೆ ಕಟ್ಟಿ ಕಟ್ಟೀ ಅಂತಾ ಮಂತ್ರಿ ಮಾಲ್ ಗೆ ಬಿಬಿಎಂಪಿ ನೋಟೀಸ್ ನೀಡುತ್ತಾ ಬಂದಿದೆ. ಬಾಕಿ ತೆರಿಗೆ ಕಟ್ಟದಿದ್ದರೆ ಆಸ್ತಿ ಮುಟ್ಟುಗೋಲು ಹಾಕುವ ಎಚ್ಚರಿಕೆಯನ್ನೂ ನೀಡಿದೆ. ಆದರೂ ಮಂತ್ರಿ ಮಾಲ್​ ಕಡೆಯಿಂದ ಡೋಂಟ್​ ಕೇರ್.

ಆಸ್ತಿ ತೆರಿಗೆಗೆ ಬಿಬಿಎಂಪಿ ಮುಟ್ಟಗೋಲು ಅಸ್ತ್ರ
ಬಿಬಿಎಂಪಿ (BBMP) ಪಶ್ಚಿಮ ವಲಯದಲ್ಲಿ ಅತೀ ದೊಡ್ಡ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಮಂತ್ರಿ ಮಾಲ್​ನಿಂದ ಮೊದಲು ಮಾಲ್ ನ ಪೀಠೋಪಕರಣ ನಂತರ, ಮಾಲ್ ಗೆ ಬೀಗ ಜಡಿಯಲು ಬಿಬಿಎಂಪಿ ಇದೀಗ ನಿರ್ಧಾರ ಮಾಡಿದೆ.

Also Read:
ಮಂತ್ರಿ ಒತ್ತುವರಿ ಲೆಕ್ಕಶೋಧ: ಸರ್ವೆ ಅಧಿಕಾರಿಗಳಿಗೆ ತಡೆ!

Also Read:

ಬಿಡದಿ: ಈಗಲ್ಟನ್​ ರೆಸಾರ್ಟ್ ಒತ್ತುವರಿ ಮಾಡ್ಕೊಂಡಿದ್ದ 928 ಕೋಟಿ ರೂ. ಮೌಲ್ಯದ 77 ಎಕರೆ ಸರ್ಕಾರಿ ಭೂಮಿ ಜಿಲ್ಲಾಡಳಿತ ವಶಕ್ಕೆ

(BBMP to close down mantri mall in malleshwaram as tax arrears mount huge)