ಕೋರ್ಟ್ ಆದೇಶದಂತೆ ಬೇಳೂರು ರಾಘವೇಂದ್ರ ಶೆಟ್ಟಿ ಮನೆ ಸ್ವಾಧೀನಪಡಿಸಿಕೊಂಡ ಬ್ಯಾಂಕ್, ಹರಾಜು ಪ್ರಕ್ರಿಯೆಗೆ ಶೆಟ್ಟಿ ಬೆಂಬಲಿಗರ ಅಡ್ಡಿ
ಬೇಳೂರು ರಾಘವೇಂದ್ರ ಶೆಟ್ಟಿ ಕಡೆಯವರು ನಿನ್ನೆ(ಮಾರ್ಚ್ 15) ರಾತ್ರಿ ಬ್ಯಾಂಕ್ ಸಿಬ್ಬಂದಿ ಹಾಕಿದ್ದ ಸೀಲ್ ಓಪನ್ ಮಾಡಿ ಬೀಗ ಒಡೆದು ಫ್ಲಾಟ್ ಗೆ ಅಕ್ರಮ ಪ್ರವೇಶ ಮಾಡಿ ಹರಾಜು ಪ್ರಕ್ರಿಯೆಗೆ ಅಡ್ಡಿ ಪಡಿಸಿದ್ದಾರೆ.
ಬೆಂಗಳೂರು: ಬೇಳೂರು ರಾಘವೇಂದ್ರ ಶೆಟ್ಟಿ ಅವರ ಫ್ಲಾಟ್ ಹರಾಜು ಪ್ರಕ್ರಿಯೆಗೆ ಅಡ್ಡಿ ಪಡಿಸಲು ಅವರ ಬೆಂಬಲಿಗರಿಂದ ಹೈಡ್ರಾಮ ನಡೆದಿದೆ. ಈ ಹಿಂದೆ ಕರ್ನಾಟಕ ರಾಜ್ಯ ಕರಕುಶಲ ವಸ್ತುಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದ ಬೇಳೂರು ರಾಘವೇಂದ್ರ ಶೆಟ್ಟಿ ಅವರ ಮನೆಯನ್ನು ಕೋರ್ಟ್ ಆದೇಶದಂತೆ ಬ್ಯಾಂಕ್ ಅಧಿಕಾರಿಗಳು ಸ್ವಾಧೀನಪಡಿಸಿಕೊಂಡಿದ್ದಾರೆ. ಸ್ವಾಧೀನಪಡೆದ ಮನೆಯನ್ನ ಇನ್ನು ಮೂರು ದಿನಗಳಲ್ಲಿ ಬ್ಯಾಂಕ್ ಹರಾಜು ಹಾಕಲಿದೆ. ಈ ನಡುವೆ ಬೇಳೂರು ರಾಘವೇಂದ್ರ ಶೆಟ್ಟಿ ಕಡೆಯವರು ನಿನ್ನೆ(ಮಾರ್ಚ್ 15) ರಾತ್ರಿ ಬ್ಯಾಂಕ್ ಸಿಬ್ಬಂದಿ ಹಾಕಿದ್ದ ಸೀಲ್ ಓಪನ್ ಮಾಡಿ ಬೀಗ ಒಡೆದು ಫ್ಲಾಟ್ ಗೆ ಅಕ್ರಮ ಪ್ರವೇಶ ಮಾಡಿದ್ದಾರೆ.
ಬೇಳೂರು ರಾಘವೇಂದ್ರ ಶೆಟ್ಟಿ ಅವರು ಸೆಂಟ್ರಲ್ ಬ್ಯಾಂಕ್ ಅಫ್ ಇಂಡಿಯಾದಲ್ಲಿ ಐದು ಕೋಟಿಗೂ ಅಧಿಕ ಸಾಲ ಪಡೆದಿದ್ದಾರೆ. ಹಾಗೂ ಮೂರು ವರ್ಷದಿಂದ ಸಾಲ ಮರುಪಾವತಿ ಮಾಡದ ಹಿನ್ನೆಲೆ ಫ್ಲಾಟನ್ನು ಬ್ಯಾಂಕ್ ಸ್ವಾಧೀನಕ್ಕೆ ನೀಡಿ ಕಳೆದ ಡಿಸೆಂಬರ್ನಲ್ಲಿ ಕೋರ್ಟ್ ಆದೇಶ ನೀಡಿತ್ತು. ಅದರಂತೆ ಸಂಜಯನಗರದ ಡಾಲರ್ಸ್ ಕಾಲೋನಿಯ ಎಸ್ಎಂಸಿ ಬೆವೆರ್ಲಿ ಅಪಾರ್ಟ್ಮೆಂಟ್ನಲ್ಲಿರುವ ಪ್ಲಾಟನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಸ್ವಾಧೀನಕ್ಕೆ ಪಡೆದ ಮನೆಯನ್ನ ಕಸ್ಟಮರ್ಗಳನ್ನ ಹುಡುಕಿ ಹರಾಜು ಹಾಕಲು ಬ್ಯಾಂಕ್ ಅಧಿಕಾರಿಗಳು ಸಿದ್ದತೆ ನಡೆಸುತ್ತಿದ್ದರು. ಈ ಮಧ್ಯೆ ನಿನ್ನೆ ರಾತ್ರಿ ಬ್ಯಾಂಕ್ ಸಿಬ್ಬಂದಿ ಹಾಕಿದ್ದ ಸೀಲ್ ಓಪನ್ ಮಾಡಿ ಬೀಗ ಹೊಡೆದು ಫ್ಲಾಟ್ ಗೆ ಅಕ್ರಮ ಪ್ರವೇಶ ಮಾಡಿ ಬೇಳೂರು ರಾಘವೇಂದ್ರ ಶೆಟ್ಟಿ ಕಡೆಯವರು ದರ್ಪ ಮೆರೆದಿದ್ದಾರೆ. ಅವರನ್ನು ಬಲವಂತವಾಗಿ ಹೊರ ಹಾಕಲು ಪ್ರಯತ್ನಿಸಿದ್ರೆ ಆತ್ಮಹತ್ಯೆ ಬೆದರಿಕೆ ಹಾಕಿದ್ದಾರೆ.
ಇದನ್ನೂ ಓದಿ: ಪ್ಲಾಸ್ಟಿಕ್ ಬ್ಯಾಗ್ನಿಂದ ಉಸಿರುಗಟ್ಟಿಸಿ ಪತ್ನಿ, ಪುತ್ರನನ್ನು ಕೊಂದು ಕೊನೆಗೆ ತಾನೂ ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ
ಬ್ಯಾಂಕ್ನವರು ಪ್ಲಾಟ್ ಬಳಿ ಇರಿಸಿದ್ದ ಸೆಕ್ಯುರಿಟಿ ಗಾರ್ಡ್ ಕಣ್ತಪ್ಪಿಸಿ ಅಕ್ರಮ ಪ್ರವೇಶ ಮಾಡಿದ್ದಾರೆ. ಪೊಲೀಸರು ಹಾಗೂ ಬ್ಯಾಂಕ್ ಅಧಿಕಾರಿಗಳು ಬಾಗಿಲು ತೆರೆಯುವಂತೆ ಸೂಚಿಸಿದ್ರು ಬಾಗಿಲು ತೆರೆಯದೆ ಮಹಿಳೆ ಫ್ಲಾಟ್ನಲ್ಲಿ ಅಡಗಿದ್ದಾರೆ. ಅತಿಕ್ರಮ ಪ್ರವೇಶಕ್ಕೆ ಸಂಬಂಧಿಸಿದಂತೆ ಸಂಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:00 am, Thu, 16 March 23