ಪ್ಲಾಸ್ಟಿಕ್ ಬ್ಯಾಗ್ನಿಂದ ಉಸಿರುಗಟ್ಟಿಸಿ ಪತ್ನಿ, ಪುತ್ರನನ್ನು ಕೊಂದು ಕೊನೆಗೆ ತಾನೂ ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ
ಸಾಫ್ಟ್ವೇರ್ ಎಂಜಿನಿಯರ್ ಒಬ್ಬರು ಪತ್ನಿ ಹಾಗೂ ಮಗನನ್ನು ಪ್ಲಾಸ್ಟಿಕ್ ಬ್ಯಾಗ್ನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿ, ಕೊನೆಗೆ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪುಣೆಯ ಅರುಂಧ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ,
ಸಾಫ್ಟ್ವೇರ್ ಎಂಜಿನಿಯರ್ ಒಬ್ಬರು ಪತ್ನಿ ಹಾಗೂ ಮಗನನ್ನು ಪ್ಲಾಸ್ಟಿಕ್ ಬ್ಯಾಗ್ನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿ, ಕೊನೆಗೆ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪುಣೆಯ ಅರುಂಧ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ, ಟೆಕ್ಕಿ ಮೊದಲು ಪತ್ನಿಯನ್ನು ಹತ್ಯೆ ಮಾಡಿ, ಬಳಿಕ ಮಗನನ್ನು ಕೊಂದು ಅಂತಿಮವಾಗಿ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ.
ವ್ಯಕ್ತಿಯನ್ನು ಸುದೀಪ್ತೋ ಗಂಗೂಲಿ ಎಂದು ಗುರುತಿಸಲಾಗಿದೆ, ಪತ್ನಿ ಪ್ರಿಯಾಂಕಾ ಹಾಗೂ ಪುತ್ರ ತನಿಷ್ಕಾ ಎಂದು ಗುರುತಿಸಲಾಗಿದೆ. ಸುದೀಪ್ತೋ ಅವರ ಸಹೋದರ ಬೆಂಗಳೂರಿನಲ್ಲಿ ವಾಸವಿದ್ದಾರೆ, ಅಣ್ಣ ಹಾಗೂ ಅತ್ತಿಗೆ ಇಬ್ಬರೂ ಕರೆಗೆ ಪ್ರತಿಕ್ರಿಯಿಸದ ಕಾರಣ ಸ್ನೇಹಿತರೊಬ್ಬರಿಗೆ ಸಹೋದರನ ಮನೆಗೆ ಹೋಗುವಂತೆ ಹೇಳಿದ್ದರು.
ಮತ್ತಷ್ಟು ಓದಿ: ಬೆಂಗಳೂರು: ಮನೆಗೆ ನುಗ್ಗಿ ಪ್ರಿಯತಮೆಯನ್ನೇ ಕೊಂದ ಪಾಗಲ್ ಪ್ರೇಮಿ, ಕಾರಣವೇನು?
ಮನೆಯ ಬಾಗಿಲು ಲಾಕ್ ಆಗಿತ್ತು ತಕ್ಷಣ ಪೊಲೀಸರಿಗೆ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ಲೊಕೇಷನ್ ಟ್ರೇಸ್ ಮಾಡಿದಾಗ ದಂಪತಿ ಮೊಬೈಲ್ಗಳು ಮನೆಯ ಒಳಗೆ ಪತ್ತೆಯಾಗಿದ್ದವು.
ನಕಲಿ ಕೀ ಬಳಸಿ ಮನೆಯ ಒಳಗೆ ಪೊಲೀಸರು ಪ್ರವೇಶಿಸಿದಾಗ ಸುದೀಪ್ತೋ ಗಂಗೂಲಿ ನೇಣುಬಿಗಿದ ಸ್ಥಿತಿಯಲ್ಲಿ, ಪತ್ನಿ ಹಾಗೂ ಮಗನ ಮುಖದ ಮೇಲೆ ಪಾಲಿಥಿನ್ ಬ್ಯಾಗ್ಗಳಿದ್ದವು. ಸ್ಥಳದಲ್ಲಿ ಯಾವುದೇ ಸೂಸೈಡ್ ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸುದೀಪ್ತೋ ಅವರು ನೌಕರಿಯನ್ನು ಬಿಟ್ಟು ಸ್ವಂತ ಉದ್ಯಮ ಆರಂಭಿಸಿದ್ದರು ಎನ್ನುವುದು ತಿಳಿದುಬಂದಿದೆ, ಹೆಚ್ಚಿನ ಮಾಹಿತಿ ತನಿಖೆಯ ಬಳಿಕ ತಿಳಿದುಬರಲಿದೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ