ಪ್ರವಾಸಿಗರೇ ಎಚ್ಚರ: ಹಂಪಿ ಸಮೀಪದ ಬಳ್ಳಾರಿಯಲ್ಲಿ ಬೆಂಗಳೂರಿಗಿಂತಲೂ ಹೆಚ್ಚಿನ ವಾಯು ಮಾಲಿನ್ಯ
ಬೆಂಗಳೂರಿನಲ್ಲಿ ವಾಯು ಗುಣಮಟ್ಟ ಗಂಭೀರವಾಗಿ ಕುಸಿಯುತ್ತಿದೆ. ಮಕ್ಕಳ, ವೃದ್ಧರ ಹಾಗೂ ಉಸಿರಾಟದ ಸಮಸ್ಯೆ ಇರುವವರ ಆರೋಗ್ಯಕ್ಕೆ ಇದು ಅಪಾಯಕಾರಿಯಾಗಿ ಪರಿಣಮಿಸಿದೆ. ಆದರೆ, ಇದಕ್ಕಿಂತಲೂ ಆಘಾತಕಾರಿಯಾದ ವಿಚಾರ ಅತಿಹೆಚ್ಚು ಪ್ರವಾಸಿಗರು ಭೇಟಿ ನೀಡುವ ಹಂಪಿ ಸುತ್ತಲಿನ ವಾತಾವರಣವೂ ಕಲುಷಿತಗೊಂಡಿರುವುದು. ಬಳ್ಳಾರಿಯಲ್ಲಿ ಬೆಂಗಳೂರಿಗಿಂತಲೂ ಹೆಚ್ಚಿನ ವಾಯುಮಾಲಿನ್ಯ ಕಂಡುಬಂದಿದೆ.

ಬೆಂಗಳೂರು, ಡಿ.15: ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಗಾಳಿಯ ಗುಣಮಟ್ಟದಲ್ಲಿ ವ್ಯಾತ್ಯಾಸ ಕಾಣುತ್ತ ಇದೆ. ಇತ್ತೀಚೆಗೆ ಅಂದರೆ ಮೂರು-ನಾಲ್ಕು ದಿನಗಳಿಂದ ಗಾಳಿಯ ಗುಣಮಟ್ಟ ಕುಸಿಯುತ್ತ ಬಂದಿದೆ. ಬೆಂಗಳೂರಿನ ಜನ ಇಂದು ಕೂಡ ಕಳಪೆ ಗಾಳಿಯ ಗುಣಮಟ್ಟವನ್ನು ಎದುರಿಸುತ್ತಿದ್ದಾರೆ. ಇಂದು ಗಾಳಿಯ ಗುಣಮಟ್ಟ 168ಕ್ಕೆ ಇಳಿದೆ. ಕಳೆದ ಶನಿವಾರ ಗಾಳಿಯ ಗುಣಮಟ್ಟ 206ಕ್ಕೆ ಇಳಿದಿತ್ತು. ಇದು ಬೆಂಗಳೂರಿನಲ್ಲಿ ಇತಿಹಾಸದಲ್ಲೇ ಮೊದಲು ಎಂದು ಹೇಳಲಾಗಿತ್ತು. ಆದರೆ ಇಂದು ಈ ಗಾಳಿಯ ಗುಣಮಟ್ಟ ಅಂದಕ್ಕಿಂತ ಸ್ವಲ್ಪ ಸುಧಾರಿಸಿಕೊಂಡಿದೆ. ಈ ಹಿಂದೆ ತಜ್ಞರು ಕೂಡ ಹೇಳಿದ್ರು ಒಂದು ವೇಳೆ ಬೆಂಗಳೂರಿನ ಗಾಳಿಯ ಗುಣಮಟ್ಟ ಹೀಗೆ ಮುಂದುವರಿದರೆ ದೆಹಲಿಯ ಸ್ಥಿತಿ ಬರಬಹುದು. ಇದೀಗ ಇದರ ಜತೆಗೆ ಬಳ್ಳಾರಿಯಲ್ಲಿ ಬೆಂಗಳೂರಿಗಿಂತ ಗಾಳಿಯ ಗುಣಮಟ್ಟ 173ಕ್ಕೆ ಇಳಿದಿದೆ. ಬಳ್ಳಾರಿಯಲ್ಲಿ ವಾಯು ಮಾಲಿನ್ಯ ಹಾಗೂ ಕಳಪೆ ರಸ್ತೆಯಿಂದ ಈ ಸ್ಥಿತಿ ಕಂಡಿದೆ ಎಂದು ಹೇಳಲಾಗಿದೆ.
ಇಂದು ವಾಯು ಗುಣಮಟ್ಟ ಸೂಚ್ಯಂಕ (AQI) ಸರಿಸುಮಾರು 138 ರಿಂದ 218 ರವರೆಗೆ ಇರುತ್ತದೆ ಎಂದು ಹೇಳಲಾಗಿದೆ. ಇದು ಮಧ್ಯಾಹ್ನದ ಹೊತ್ತಿಗೆ ಬದಲಾಗಬಹುದು. ಸಂಜೆ ಮತ್ತೆ ಅದೇ ಸ್ಥಿತಿಗೆ ಬರುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ. ಸಾಮಾನ್ಯವಾಗಿ ಇದರಿಂದ ಮಕ್ಕಳು ಹಾಗೂ ವೃದ್ಧರಿಗೆ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಮನೆಯಲ್ಲಿ ಇದಕ್ಕೆ ಆರೋಗ್ಯ ಮುಂಜಾಗೃತ ಕ್ರಮಗಳನ್ನು ಅನುಸರಿಸುವಂತೆ ತಜ್ಙರು ಸಲಹೆ ನೀಡಿದ್ದಾರೆ. ಪ್ರಾಥಮಿಕ ಮಾಲಿನ್ಯಕಾರಕಗಳು ಪರ್ಟಿಕ್ಯುಲೇಟ್ ಮ್ಯಾಟರ್ (PM2.5 ಮತ್ತು PM10) ಇದೆ. ಇನ್ನು ರಾಜ್ಯಗಳು WHO ಮಾರ್ಗಸೂಚಿಯನ್ನು ಪಾಲಿಸುವಂತೆ ಹೇಳಿದೆ.
ಇನ್ನು ಈ ಗಾಳಿಯ ಗುಣಮಟ್ಟದಿಂದ ಗಮನಾರ್ಹ ಆರೋಗ್ಯ ಅಪಾಯಗಳನ್ನುಂಟುಮಾಡುತ್ತದೆ. ಮಕ್ಕಳು, ವೃದ್ಧರು, ಉಸಿರಾಟ ಅಥವಾ ಹೃದಯ ಸಂಬಂಧಿ ಕಾಯಿಲೆ ಇರುವ ಜನರು ಸ್ವಲ್ಪ ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಲಾಗಿದೆ. ಅದಷ್ಟು ಹೊರಗೆ ಹೋಗುವುದನ್ನು ತಪ್ಪಿಸಿ, ಹಾಗೂ ಹೊರಗೆ ಹೋಗುವಾಗ ಮಾಸ್ಕ್ಗಳನ್ನು ಹಾಕಿಕೊಳ್ಳಬೇಕು ಎಂದು ಹೇಳಲಾಗಿದೆ.
ವೈದ್ಯರ ಈ ಸಲಹೆ ಪಾಲಿಸಿ
“ಬೆಂಗಳೂರಿನಲ್ಲಿ ಚಳಿಗಾಲದ ಮಂಜಿನ ವಾತಾವರಣದ ನಡುವೆ ವಾಯುಮಾಲಿನ್ಯವೂ ಹೆಚ್ಚಿರುವುದು ಶ್ವಾಸಕೋಶ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗಬಹುದು. ಅದರಲ್ಲಿಯೂ ವಯಸ್ಕರಲ್ಲಿ ಈ ಅಪಾಯ ಹೆಚ್ಚು. ಮುಂಜಾನೆ ಮತ್ತು ಮುಸ್ಸಂಜೆ ಸಮಯದಲ್ಲಿ ಕಂಡುಬರುತ್ತಿರುವ ಮಂಜಿನ ವಾತಾವರಣದಲ್ಲಿ ಅನಗತ್ಯ ಹೊರಾಂಗಣ ಚಟುವಟಿಕೆಗಳು ಬೇಡ. ಈಗಾಗಲೇ ಉಸಿರಾಟ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರಲ್ಲಿ ಏನಾದರೂ ಸಮಸ್ಯೆ ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಯಾವುದೇ ಕಾರಣಕ್ಕೂ ಈ ರೀತಿಯ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡಬೇಡಿ.”
ಡಾ. ಪ್ರದೀಪ್ ಹಾರನಹಳ್ಳಿ, ಕನ್ಸಲ್ಟೆಂಟ್ ಇಂಟರ್ವೆನ್ಷನಲ್ ಕಾರ್ಡಿಯಾಲಜಿ , ಮಣಿಪಾಲ ಆಸ್ಪತ್ರೆ ವೈಟ್ ಫೀಲ್ಡ್
ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ: ಬೆಂಗಳೂರಿನಲ್ಲಿ ಚಳಿಯೋ ಚಳಿ! ಬಾಗಲಕೋಟೆಗೆ ಆರೆಂಜ್ ಅಲರ್ಟ್
ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ:
ಬೆಂಗಳೂರು – 168
ಮಂಗಳೂರು – 138
ಮೈಸೂರು – 100
ಬೆಳಗಾವಿ – 168
ಕಲಬುರ್ಗಿ – 99
ಶಿವಮೊಗ್ಗ – 96
ಬಳ್ಳಾರಿ – 173
ಹುಬ್ಬಳ್ಳಿ- 96
ಉಡುಪಿ – 118
ವಿಜಯಪುರ – 115
ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?
ಉತ್ತಮ- 0-50
ಮಧ್ಯಮ – 50-100
ಕಳಪೆ – 100-150
ಅನಾರೋಗ್ಯಕರ – 150-200
ಗಂಭೀರ – 200 – 300
ಅಪಾಯಕಾರಿ – 300 -500+
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:39 am, Mon, 15 December 25




