ವಲಸಿಗರನ್ನುಆಕರ್ಷಿಸುವ ವಿಶ್ವದ 6 ನಗರಗಳ ಪಟ್ಟಿಯಲ್ಲಿದೆ ಬೆಂಗಳೂರು
ಕುಟುಂಬವನ್ನು ಅಲ್ಲೇ ಬಿಟ್ಟು 49ರ ಹರೆಯದ ವ್ಯಕ್ತಿಯೊಬ್ಬರು ಲೀಲಾ ಗೇಮ್ಸ್ ಪ್ರೈವೆಟ್ ಲಿಮಿಟೆಡ್ ಆರಂಭಿಸಿದ್ದಾರೆ. ಇಬ್ಬರು ಸಹಸಂಸ್ಥಾಪಕರೊಂದಿಗೆ ಈ ಗೇಮ್ ಸ್ಟುಡಿಯೊ ಆರಂಭಿಸಿದ್ದು ಸಿಕೋಯಾ ಇವರಿಗೆ ಹಣಕಾಸು ನೆರವು ಒದಗಿಸಿದೆ.
ಜಗತ್ತಿನಲ್ಲಿ ವಲಸಿಗರಿಗೆ ಅನುಕೂಲಕರವಾಗಿರುವ ಆರು ನಗರಗಳಲ್ಲಿ ಬೆಂಗಳೂರು (Bengaluru) ಕೂಡಾ ಇದೆ. ಇದು ಶ್ರೀಮಂತ ನಗರವಾಗಿದ್ದು ಕಲಿಯುವ ಹಂಬಲ ಇರುವ ಜನರು ಇಲ್ಲಿದ್ದಾರೆ ಎಂದು ಬ್ಲೂಮ್ ಬರ್ಗ್ ವರದಿ ಮಾಡಿದೆ.ಬೆಂಗಳೂರಿನ ಇಂದಿರಾನಗರದಲ್ಲಿ ಗೇಮಿಂಗ್ ಸ್ಟುಡಿಯೊ ಆರಂಭಿಸಲು ಸ್ಯಾನ್ ಫ್ರಾನ್ಸಿಸ್ಕೊದಲ್ಲಿನ ಬದುಕು ತೊರೆದು ಬಂದ ವ್ಯಕ್ತಿಯೊಬ್ಬರಲ್ಲಿ ಬ್ಲೂಮ್ ಬರ್ಗ್ ಮಾತನಾಡಿದೆ. ಕುಟುಂಬವನ್ನು ಅಲ್ಲೇ ಬಿಟ್ಟು 49ರ ಹರೆಯದ ವ್ಯಕ್ತಿಯೊಬ್ಬರು ಲೀಲಾ ಗೇಮ್ಸ್ ಪ್ರೈವೆಟ್ ಲಿಮಿಟೆಡ್ ಆರಂಭಿಸಿದ್ದಾರೆ. ಇಬ್ಬರು ಸಹಸಂಸ್ಥಾಪಕರೊಂದಿಗೆ ಈ ಗೇಮ್ ಸ್ಟುಡಿಯೊ ಆರಂಭಿಸಿದ್ದು ಸಿಕೋಯಾ ಇವರಿಗೆ ಹಣಕಾಸು ನೆರವು ಒದಗಿಸಿದೆ. ಬೆಂಗಳೂರಲ್ಲಿ ಬಂದು ನೆಲೆಯೂರುವ ಮುನ್ನ ನಾವು ಫಿನ್ ಲ್ಯಾಂಡ್, ಲ್ಯಾಟಿನ್ ಅಮೆರಿಕ ಮತ್ತು ಕೆನಡಾವನ್ನು ಪರಿಗಣಿಸಿದ್ದೆವು ಎಂದು ಅವರು ಬ್ಲೂಮ್ ಬರ್ಗ್ ಗೆ ಹೇಳಿದ್ದಾರೆ. ಜನರು ಸಿಲಿಕಾನ್ ವ್ಯಾಲಿ, ಅಲ್ಲಿನ ರಾಜಕೀಯ, ಅಪರಾಧ ಮತ್ತು ಶಿಕ್ಷಣದ ನೀರಸ ಸ್ಥಿತಿಯಿಂದ ಹೆಚ್ಚು ಅಸಮಾಧಾನಗೊಂಡಿದ್ದಾರೆ ಎಂದ ಅವರು ಅಮೆರಿಕದಿಂದ ಸಾಮೂಹಿಕ ವಲಸೆಯ ಸೂಚನೆಯನ್ನೂ ನೀಡಿದ್ದಾರೆ. ಪ್ರತಿ ಮೂರು ತಿಂಗಳಿಗೊಮ್ಮೆ ಹೋಗಿ ಹೆಂಡತಿ ಮತ್ತು ಮಗುವನ್ನು ನೋಡಿಕೊಂಡು ಬರುತ್ತೇನೆ. ಅಂದಹಾಗೆ ರಸ್ತೆ, ಕಟ್ಟಡ ಮೊದಲಾದವುಗಳು ಬೆಂಗಳೂರಿನಲ್ಲಿ ಪೂರ್ಣ ಸ್ವರೂಪದಲ್ಲಿಲ್ಲ. ನಾನೀಗ ಒಂದೊಳ್ಳೆ ಕೆಲಸ ಮಾಡುತ್ತೇನೆ ಎಂದು ಅನಿಸುತ್ತಿದೆ ಎಂದಿದ್ದಾರೆ.
ಭಾರತದ ಸ್ಟಾರ್ಟ್ ಅಪ್ ರಾಜಧಾನಿ ಎಂದೂ ಕರೆಯಲ್ಪಡುವ ಬೆಂಗಳೂರು, ವಿದೇಶಿ ಹೂಡಿಕೆದಾರರಿಂದ ಹಣವನ್ನು ಪಡೆಯುತ್ತದೆ,ಒಂದು ಅಂದಾಜಿನ ಪ್ರಕಾರ ಇಲ್ಲಿ ಹೂಡಿಕೆ ಲಂಡನ್ ಅಥವಾ ಸ್ಯಾನ್ ಫ್ರಾನ್ಸಿಸ್ಕೋಗಿಂತ ವೇಗವಾಗಿ ಹರಿಯುತ್ತಿದೆ, 2016 ರಲ್ಲಿ 1.3 ಶತಕೋಟಿ ಅಮೆರಿಕ ಡಾಲರ್ ನಿಂದ 2020 ರಲ್ಲಿ 7.2 ಶತಕೋಟಿ ಅಮೆರಿಕನ್ ಏರಿದೆ ಎಂದು ವರದಿ ಹೇಳಿದೆ.
ವೇಗವಾಗಿ ಬೆಳೆಯುತ್ತಿರುವ ಟೆಕ್ ಹಬ್‌ಗಳಲ್ಲಿ ಒಂದಾಗಿ, ನಗರವು ಸಾವಿರಾರು ಯಶಸ್ವಿ ಸ್ಟಾರ್ಟ್‌ಅಪ್‌ಗಳು ಮತ್ತು ಐಟಿ ಕಂಪನಿಗಳಿಗೆ ನೆಲೆಯಾಗಿದೆ, ಹೆಚ್ಚು ಹೆಚ್ಚು ವಲಸಿಗರನ್ನು ಆಕರ್ಷಿಸುತ್ತಿದೆ. ಅದರೊಂದಿಗೆ, ಹೆಚ್ಚುತ್ತಿರುವ ವಲಸಿಗರಿಗೆ ಅನುಕೂಲವಾಗುವಂತೆ ಅಂತರರಾಷ್ಟ್ರೀಯ ಶಾಲೆಗಳು, ಬಾರ್‌ಗಳು ಮತ್ತು ಬಿಸ್ಟ್ರೋಗಳಲ್ಲಿ ಏರಿಕೆ ಕಂಡುಬಂದಿದೆ.
ಹೆಚ್ಚಿನ ಸಂಬಳದ ಉದ್ಯೋಗಗಳು ಮತ್ತು ಕೈಗೆಟುಕುವ ಐಷಾರಾಮಿ ಜೀವನಶೈಲಿಯೊಂದಿಗೆಅಂತರರಾಷ್ಟ್ರೀಯ ಸಮುದಾಯವನ್ನು ನಿರ್ಮಿಸುವ ಮೂಲಕ ಬೆಂಗಳೂರು ಜಾಗತಿಕ ನಗರವಾಗುವ ಸಾಮರ್ಥ್ಯವನ್ನು ಹೊಂದಿದೆ ಎಂದು ಬ್ಲೂಮ್‌ಬರ್ಗ್ ಹೇಳಿದೆ. ವರದಿಯು ಕೌಲಾಲಂಪುರ್, ಲಿಸ್ಬನ್, ದುಬೈ, ಮೆಕ್ಸಿಕೊ ಸಿಟಿ ಮತ್ತು ರಿಯೊ ಡಿ ಜನೈರೊಗಳನ್ನು ಪಟ್ಟಿಯಲ್ಲಿ ಹೆಸರಿಸಿದೆ.