AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅವಸರವೇ ಅಪಘಾತಕ್ಕೆ ಕಾರಣ: ಓವರ್‌ ಟೇಕ್‌ ಮಾಡಲು ಹೋಗಿ ಮಗುಚಿ ಬಿದ್ದ ಆಟೋ

ಬೆಂಗಳೂರಿನ ಹೊಸೂರು ರಸ್ತೆಯಲ್ಲಿ ಆಟೋ ರಿಕ್ಷಾ ಟ್ರಕ್‌ ಓವರ್‌ಟೇಕ್ ಮಾಡುವಾಗ ಪಲ್ಟಿಯಾದ ಘಟನೆ ವೈರಲ್ ಆಗಿದೆ. ವೇಗ ಮತ್ತು ಅಜಾಗರೂಕತೆ ಚಾಲನೆಯೇ ಈ ಅಪಘಾತಕ್ಕೆ ಕಾರಣ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಸಾವುನೋವು ಸಂಭವಿಸಿಲ್ಲ. ಇಂತಹ ಘಟನೆಗಳು ರಸ್ತೆ ಸುರಕ್ಷತೆಯ ಬಗ್ಗೆ ಕಳವಳ ಮೂಡಿಸಿವೆ.

ಅವಸರವೇ ಅಪಘಾತಕ್ಕೆ ಕಾರಣ: ಓವರ್‌ ಟೇಕ್‌ ಮಾಡಲು ಹೋಗಿ ಮಗುಚಿ ಬಿದ್ದ ಆಟೋ
ವಿಡಿಯೋ ವೈರಲ್​
ಅಕ್ಷಯ್​ ಪಲ್ಲಮಜಲು​​
|

Updated on: Oct 27, 2025 | 4:20 PM

Share

ಬೆಂಗಳೂರು, ಅ.27: ಬೆಂಗಳೂರಿನ ಹೊಸೂರು ರಸ್ತೆಯಲ್ಲಿ ಆಟೋವೊಂದು ಓವರ್‌ ಟೇಕ್‌ (Bengaluru Auto Accident) ಮಾಡಲು ಹೋಗಿ, ಮಗುಚಿ ಬಿದ್ದ ಘಟನೆ ಸೋಮವಾರ ಮುಂಜಾನೆ ನಡೆದಿದೆ. ಇದೀಗ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿ ಆಟೋ ರಿಕ್ಷಾವೊಂದು ವೇಗವಾಗಿ ಹೋಗುತ್ತಿದ್ದ ಟ್ರಕ್​​​ವೊಂದನ್ನು ಓವರ್‌ ಟೇಕ್‌ ​ ಮಾಡಲು ಹೋಗಿ ಪಲ್ಟಿಯಾಗಿದೆ. ವಿಡಿಯೋವನ್ನು ನೋಡಿ ಸೋಶಿಯಲ್​ ಮೀಡಿಯಾ ಬಳಕೆದಾರರೂ ಕಮೆಂಟ್ ಮಾಡಿದ್ದು, ಬೆಂಗಳೂರಿನಲ್ಲಿ ಇಂತಹ ಅನೇಕ ಘಟನೆಗಳು ನಡೆಯುತ್ತಿದೆ. ಇದಕ್ಕೆ ಚಾಲಕರ ಅಜಾಗರೂಕತೆಯೇ ಕಾರಣ ಎಂದು ಹೇಳಿದ್ದಾರೆ.

ಇನ್ನು ಈ ಘಟನೆಯ ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಆಟೋರಿಕ್ಷಾ ಹೊಸೂರು ರಸ್ತೆಯಲ್ಲಿ ವೇಗವಾಗಿ ಹೋಗುತ್ತಿದ್ದ ಟ್ರಕ್​​ನ್ನುಓವರ್‌ ಟೇಕ್‌ ಮಾಡಲು ಹೋಗಿ, ಸ್ಕಿಡ್ ಆಗಿ ಮಗುಚಿ ಬಿದ್ದಿದೆ. ಈ ಅಪಘಾತದಿಂದ ಯಾವುದೇ ಸಾವು-ನೋವು ಆಗಿಲ್ಲ, ಚಾಲಕನಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ ಎಂದು ಹೇಳಲಾಗಿದೆ. ವೈರಲ್​​ ಆಗಿರುವ ಪೋಸ್ಟ್​​​​ನಲ್ಲಿ ಹೀಗೆ ವಿವರಿಸಿಲಾಗಿದೆ. ‘ಆಟೋವೊಂದು ವೇಗವಾಗಿ ಹೋಗಿ ಲಾರಿಯನ್ನುಓವರ್‌ ಟೇಕ್‌ ಮಾಡಿದೆ. ಈ ವೇಳೆ ಆಟೋ ಚಾಲಕ ಬ್ರೇಕ್ ಹಾಕಿದ್ದಾನೆ. ಈ ವೇಳೆ ಆಟೋ ನಿಯಂತ್ರಣ ಕಳೆದುಕೊಂಡು, ರಸ್ತೆಯಲ್ಲಿ ಪಲ್ಟಿಯಾಗಿ, ಆಟೋ ಚಾಲಕ ಮೇಲೆ ಬಿದ್ದಿದೆ. ಚಾಲಕನಿಗೆ ಯಾವುದೇ ಗಂಭೀರ ಗಾಯಗಳು ಆಗಿಲ್ಲ ಎಂದು ಹೇಳಲಾಗಿದೆ.

ಇದನ್ನೂ ಓದಿ: ಪ್ರಯಾಣಿಕರೊಬ್ಬರು ಆಟೋದಲ್ಲಿ ಬಿಟ್ಟು ಹೋದ ಇಯರ್‌ಫೋನ್​​​ನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಬೆಂಗಳೂರಿನ ಆಟೋ ಚಾಲಕ!

ವೈರಲ್​​ ವಿಡಿಯೋ ಇಲ್ಲಿದೆ ನೋಡಿ

ಈ ವೀಡಿಯೊವನ್ನು ಎಕ್ಸ್​​ ಖಾತೆಯಲ್ಲಿ ಹಂಚಿಕೊಂಡಿದ್ದು, 2000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ವಿಡಿಯೋ ನೋಡಿ ಹಲವು ಸೋಶಿಯಲ್​​ ಮೀಡಿಯಾ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರ, ಇದಕ್ಕಾಗಿಯೇ ಹೆದ್ದಾರಿಗಳಲ್ಲಿ ಆಟೋಗಳು ಮತ್ತು ಬೈಕ್‌ಗಳನ್ನು ಅನುಮತಿಸಬಾರದು. ಯಾಕೆಂದರೆ ಇಂತಹ ಅನಾಹುತಗಳಿಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ ಇಂತಹ ಘಟನೆಯನ್ನು ಬೆಂಗಳೂರಿನಲ್ಲಿ ಇತ್ತೀಚೆಗೆ ನೋಡಿದ್ದೇನೆ. ಒಬ್ಬ ಆಟೋ ಚಾಲಕ ವೇಗವಾಗಿ ಬಂದು ಯು-ಟರ್ನ್ ತೆಗೆದುಕೊಳ್ಳಲು ಹೋಗ ಪಲ್ಟಿಯಾಗಿ ಬಿದ್ದಿದ್ದಾನೆ ಎಂದು ಹೇಳಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ