AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಣ್ಣೆ ಕೊಡಿಸದ್ದಕ್ಕೆ ಕಿರಿಕ್​: ಮಾರಮ್ಮ ದೇಗುಲದ ಬಳಿಯೇ ಮಾರಾಮಾರಿ; ಲಾಂಗ್​ನಿಂದ ದಾಳಿ

ಮದ್ಯ ಕೊಡಿಸಿಲ್ಲ ಎಂಬ ವಿಚಾರಕ್ಕೆ ಸಿಟ್ಟಾಗಿ ಸ್ನೇಹಿತನ ಮೇಲೆ ಲಾಂಗ್​ನಿಂದ ದಾಳಿ ಮಾಡಿರುವ ಘಟನೆ ಬೆಂಗಳೂರಿನ ಅರಸು ಕಾಲೋನಿಯ ಮಾರಮ್ಮ ದೇಗುಲ ಬಳಿ ನಡೆದಿದೆ. ಅ.21ರಂದು ರಾತ್ರಿ 10 ಗಂಟೆಗೆ ನಡೆದಿರುವ ಕೃತ್ಯ ತಡವಾಗಿ ಬೆಳಕಿಗೆ ಬಂದಿದ್ದು, ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

ಎಣ್ಣೆ ಕೊಡಿಸದ್ದಕ್ಕೆ ಕಿರಿಕ್​: ಮಾರಮ್ಮ ದೇಗುಲದ ಬಳಿಯೇ ಮಾರಾಮಾರಿ; ಲಾಂಗ್​ನಿಂದ ದಾಳಿ
ಸಾಂದರ್ಭಿಕ ಚಿತ್ರImage Credit source: Google
ರಾಚಪ್ಪಾಜಿ ನಾಯ್ಕ್
| Edited By: |

Updated on: Oct 27, 2025 | 5:00 PM

Share

ಬೆಂಗಳೂರು, ಅಕ್ಟೋಬರ್​ 27: ಕುಡಿಯಲು ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಸ್ನೇಹಿತನ ಮೇಲೆ ಲಾಂಗ್​ನಿಂದ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ (Bengaluru) ಅರಸು ಕಾಲೋನಿಯ ಮಾರಮ್ಮ ದೇಗುಲ ಬಳಿ ನಡೆದಿದೆ. ಡೆಲಿವರಿ ಬಾಯ್ ಮುನಿಯಪ್ಪ ಎಂಬವರ ಮೇಲೆ ಗೌತಮ್ ಮತ್ತು ಸೂರ್ಯ ಹಲ್ಲೆ ನಡೆಸಿದ್ದಾರೆ. ಅ.21ರಂದು ರಾತ್ರಿ 10 ಗಂಟೆಗೆ ನಡೆದಿರುವ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಆರೋಪಿಗಳನ್ನ ತಿಲಕ್​ನಗರ ಪೊಲೀಸರು ಬಂಧಿಸಿದ್ದಾರೆ.

ಈಸ್ಟ್ ಎಂಡ್ ಬಾರ್​ವೊಂದರಲ್ಲಿ ಮುನಿಯಪ್ಪಮದ್ಯ ಸೇವಿಸುತ್ತಿದ್ದ ವೇಳೆ ಅಲ್ಲಿಗೆ ಬಂದ ಆರೋಪಿಗಳು ಎಣ್ಣೆ ಕೊಡಿಸು ಎಂದು ಕೇಳಿದ್ದಾರೆ. ಈ ವೇಳೆ ನನ್ನ ಬಳಿ ಹಣ ಇಲ್ಲ, ನಿನಗೆ ಯಾಕೆ ಎಣ್ಣೆ ಕೊಡಿಸಬೇಕು ಎಂದು ಮುನಿಯಪ್ಪ ಪ್ರಶ್ನಿಸಿದ್ದಾರೆ. ಇದೇ ಕೋಪದಲ್ಲಿದ್ದ ಆರೋಪಿಗಳು, ಕಾಲೋನಿ ಮಾರಮ್ಮ ದೇವಸ್ಥಾನ ಬಳಿ ಕಿರಿಕ್ ಮಾಡಿದ್ದಾರೆ. ನಾನು ಜೈಲಿನಿಂದ ಹೊರ ಬಂದು 15 ದಿನ ಅಷ್ಟೇ ಆಗಿದ್ದು, ನನ್ನನ್ನು ಕಂಡ್ರೆ ಭಯ ಇಲ್ವಾ ಎಂದು ಗೌತಮ್ ಗಲಾಟೆ ಮಾಡಿದ್ದಾನೆ. ಈ ವೇಳೆ ಮಾತಿಗೆ ಮಾತಿಗೆ ಮಾತು ಬೆಳೆದು ಮುನಿಯಪ್ಪ ಮೇಲೆ ಆರೋಪಿಗಳಾದ ಗೌತಮ್ ಮತ್ತು ಸೂರ್ಯ ಲಾಂಗ್​ನಿಂದ ಹಲ್ಲೆ ನಡೆಸಿದ್ದಾರೆ. ಘಟನೆ ಸಂಬಂಧ ತಿಲಕ್​ನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

ಇದನ್ನೂ ಓದಿ: ವೀಕೆಂಡ್​ ಪಾರ್ಟಿ ವೇಳೆ ಕಿರಿಕ್​: ಸ್ನೇಹಿತನನ್ನೇ ಕೊಂದು ಆರೋಪಿ ಪರಾರಿ

ಬಾರ್ ಕ್ಯಾಶಿಯರ್ ಕೊಲೆ: ಆರೋಪಿ ಅರೆಸ್ಟ್​

ಮದ್ಯಸೇವನೆ ಬಳಿಕ ಸ್ನ್ಯಾಕ್ಸ್‌ ನೀಡದ್ದಕ್ಕೆ ಬಾರ್ ಕ್ಯಾಶಿಯರ್ ಕೊಲೆ ಕೇಸ್ ಸಂಬಂಧ ಘಟನೆ ನಡೆದು 24 ಗಂಟೆಯಲ್ಲೇ ಆರೋಪಿಯನ್ನು ಪೊಲೀಸರು‌ ಬಂಧಿಸಿದ್ದಾರೆ. ಸುಭಾಷ್ ಅಲಿಯಾಸ್ ಮಿಯಾ ಎಂಬಾತನನ್ನು ಮಾಲೂರು ಠಾಣೆ ಪೊಲೀಸರು ಬಂಧಿಸಿದ್ದು, ಕಳೆದ ರಾತ್ರಿ ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಲಕ್ಕೂರು ಗ್ರಾಮದಲ್ಲಿ ಕೊಲೆ ನಡೆದಿತ್ತು. ಮನೆ ಬಳಿ ಹೊಂಚು ಹಾಕಿ ಚಾಕುವಿನಿಂದ ಇರಿದು ಹಾಸನ ಮೂಲದ ಕುಮಾರ್​ ಎಂಬಾತನನ್ನು ಪತ್ನಿ, ಮಕ್ಕಳ ಎದುರೇ ಆರೋಪಿ ಕೊಲೆಗೈದಿದ್ದ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್