Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ತಿ ತೆರಿಗೆ ಪಾವತಿಗೆ ನೀಡಿದ್ದ ಒಟಿಎಸ್ ಗಡವು ಅಂತ್ಯ: ಬಿಬಿಎಂಪಿಯಿಂದ ಹರಾಜಿಗೆ ಸಿದ್ಧತೆ

ಬೆಂಗಳೂರು ಬಿಬಿಎಂಪಿ ಆಸ್ತಿ ತೆರಿಗೆ ಪಾವತಿಯ ಒನ್ ಟೈಮ್ ಸೆಟ್ಲಮೆಂಟ್ (ಒಟಿಎಸ್) ಗಡುವು ಮುಗಿದಿದೆ. ಬಾಕಿ ಉಳಿಸಿಕೊಂಡವರಿಗೆ ಡಿಸೆಂಬರ್ 1ರಿಂದ ದಂಡ ಮತ್ತು ಬಡ್ಡಿ ವಿಧಿಸಲಾಗುತ್ತದೆ. ಮೂರು ಹಂತದ ನೋಟೀಸ್ ನಂತರ, ತೆರಿಗೆ ಪಾವತಿಸದಿದ್ದರೆ ಆಸ್ತಿ ಜಪ್ತಿಗೆ ಕ್ರಮ ಕೈಗೊಳ್ಳಲಾಗುವುದು. ಬಾಕಿ ತೆರಿಗೆ ವಸೂಲಿಗೆ ಬಿಬಿಎಂಪಿ ತೀವ್ರ ಕ್ರಮ ಕೈಗೊಳ್ಳುತ್ತಿದೆ.

ಆಸ್ತಿ ತೆರಿಗೆ ಪಾವತಿಗೆ ನೀಡಿದ್ದ ಒಟಿಎಸ್ ಗಡವು ಅಂತ್ಯ: ಬಿಬಿಎಂಪಿಯಿಂದ ಹರಾಜಿಗೆ ಸಿದ್ಧತೆ
ಬಿಬಿಎಂಪಿ
Follow us
Vinayak Hanamant Gurav
| Updated By: ವಿವೇಕ ಬಿರಾದಾರ

Updated on:Dec 01, 2024 | 9:58 AM

ಬೆಂಗಳೂರು, ಡಿಸೆಂಬರ್​ 01: ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯ ಆಸ್ತಿ ತೆರಿಗೆ ಬಾಕಿ ಪಾವತಿಗೆ ನೀಡಿದ್ದ ಒನ್ ಟೈಮ್ ಸೆಟ್ಲಮೆಂಟ್ ಅವಕಾಶ ಶನಿವಾರ (ನ.30)ಕ್ಕೆ ಕೊನೆಗೊಂಡಿದೆ. ಆಸ್ತಿ ತೆರೆಗೆ ಬಾಕಿ ಉಳಿಸಿಕೊಂಡಿದ್ದ ತೆರಿಗೆದಾರರಿಗೆ ನೀಡಿದ್ದ ಡೆಡ್​ಲೈನ್ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ತೆರಿಗೆ ಕಟ್ಟದವರಿಗೆ ಬಿಸಿ ಮುಟ್ಟಿಸಲು ಪಾಲಿಕೆ ಸಜ್ಜಾಗಿದೆ. ಈಗಾಗಲೇ ಸಾಕಷ್ಟು ಅವಕಾಶ ಕೊಟ್ಟರೂ ಕೂಡ ಬಾಕಿ ತೆರಿಗೆ ಕಟ್ಟದವರಿಗೆ ಇಂದಿನಿಂದ (ಡಿಸೆಂಬರ್​ 1) ಬಡ್ಡಿ, ಹರಾಜು ಅಸ್ತ್ರ ಪ್ರಯೋಗಿಸಲುಕೆ ಪಾಲಿಕೆ ಸಜ್ಜಾಗಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ಒನ್ ಟೈಮ್ ಸೆಟ್ಲಮೆಂಟ್ ಯೋಜನೆಯಡಿ ಬಾಕಿ ಆಸ್ತಿ ತೆರಿಗೆ ಪಾವತಿಗೆ ಈ ತಿಂಗಳ ಕೊನೆವರೆಗೆ ಟೈಮ್ ನೀಡಿತ್ತು. ಬಾಕಿ ತೆರಿಗೆ ವಸೂಲಿಗೆ ಸರ್ಕಾರ ನೀಡಿದ್ದ ಗಡುವು ಇವತ್ತಿಗೆ ಅಂತ್ಯವಾಗಿದೆ. ಈವರೆಗೆ ಬೆಂಗಳೂರು ನಗರದಲ್ಲಿ ಓಟಿಎಸ್ ಮೂಲಕ ಶೇ 60 ರಷ್ಟು ಜನರು ಮಾತ್ರ ತೆರಿಗೆ ಪಾವತಿಸಿದ್ದಾರೆ. ಇತ್ತ ಅವಕಾಶ ಕೊಟ್ಟರೂ ತೆರಿಗೆ ಕಟ್ಟದ ಶೇ 40 ರಷ್ಟು ತೆರಿಗೆದಾರರಿಗೆ ಬಿಸಿ ಮುಟ್ಟಿಸಲು ಪಾಲಿಕೆ ತಯಾರಿ ನಡೆಸಿದೆ.

ಡಿಸೆಂಬರ್ 1 ದುಪ್ಪಟ್ಟು ದಂಡದ ಜೊತೆಗೆ ತೆರಿಗೆ ವಸೂಲಿ ಮಾಡಲು ಬಿಬಿಎಂಪಿ ಮುಂದಾಗಿದ್ದು, ಬಾಕಿ ತೆರಿಗೆಗೆ ಬಾಕಿಯಷ್ಟೇ ದಂಡ ಕೂಡ ಬೀಳಲಿದೆ. ನೂರಕ್ಕೆ ನೂರರಷ್ಟು ದಂಡ ವಸೂಲಿ ಮಾಡಲು ಬಿಬಿಎಂಪಿ ಮುಂದಾಗಲಿದ್ದು ಜೊತೆಗೆ ಡಿಸೆಂಬರ್ ತಿಂಗಳಲ್ಲಿ ಮೂರು ಹಂತದಲ್ಲಿ ನೋಟೀಸ್ ನೀಡಲಿದ್ದು, ಮೊದಲ ನೋಟೀಸ್‌ಗೆ ಪಾವತಿಸಿದರೆ ದಂಡ ಮಾತ್ರ ವಸೂಲಿ ಆಗಲಿದೆ.

ಇದನ್ನೂ ಓದಿ: ಅಕ್ರಮ: ಬಿಬಿಎಂಪಿ ಅಧಿಕಾರಿಗಳ ನಿವಾಸದ ಮೇಲೆ ಲೋಕಾಯುಕ್ತ ದಾಳಿ

ಎರಡನೇ ನೋಟೀಸ್‌ಗೆ ಪಾವತಿಸಿದರೆ ದಂಡದ ಜೊತೆಗೆ ಮೂಲ ಬಾಕಿ ತೆರಿಗೆಗೆ ಶೇ 15 ರಷ್ಟು ಬಡ್ಡಿ ಬೀಳಲಿದೆ. ಮೂರನೇ ನೋಟೀಸ್‌ನಲ್ಲಿ ಪಾವತಿಸಿದರೆ ದಂಡದ ಜೊತೆಗೆ ಮೂಲ ಬಾಕಿಗೆ ಶೇ 25 ರಷ್ಟು ಬಡ್ಡಿ ವಸೂಲಿ ಆಗಲಿದೆ. ಇದಲ್ಲದೆ ಮೂರು ನೋಟೀಸ್​ಗೂ ತೆರಿಗೆ ಪಾವತಿಸದಿದ್ದರೆ ಆಸ್ತಿ ಮುಟ್ಟುಗೋಲಿಗೆ ಕೋರ್ಟ್ ಮೊರೆ ಹೋಗಲಿದೆ. ಇದುವರೆಗೆ 3,751ಕೋಟಿ ರೂಪಾಯಿಯಷ್ಟೇ ಬಾಕಿ ವಸೂಲಿ ಮಾಡಿರುವ ಪಾಲಿಕೆ, 4 ಕೋಟಿ ರೂ. ಟಾರ್ಗೆಟ್ ರೀಚ್ ಮಾಡಲು ಸಾಧ್ಯವಾಗಿಲ್ಲ. ಸದ್ಯ ಯಾರೆಲ್ಲ ಇನ್ನೂ ಆಸ್ತಿ ತೆರಿಗೆ ಕಟ್ಟಿಲ್ಲ ಅವರಿಗೆ ದಂಡ ವಿಧಿಸುವುದರ ಜೊತೆಗೆ ಹಣ ವಸೂಲಿ ಮಾಡುವುದಾಗಿ ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಹೇಳಿದ್ದರು.

ಆಸ್ತಿ ತೆರಿಗೆ ಪಾವತಿ ಮಾಡದ ಕಾರಣಕ್ಕಾಗಿ ಈವರೆಗೆ 6381 ವಾಣಿಜ್ಯ ಮಳಿಗೆಗಳಿಗೆ ಬೀಗ ಹಾಕಿ ಸೀಜ್ ಮಾಡಲಾಗಿತ್ತು. ಜತೆಗೆ ಅತಿ ಹೆಚ್ಚಿನ ಪ್ರಮಾಣದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ವಸತಿ ಹಾಗೂ ಇನ್ನಿತರೆ ಆಸ್ತಿಗಳ ಮಾಲೀಕರ 82 ಸಾವಿರ ಬ್ಯಾಂಕ್ ಖಾತೆಯನ್ನು ಬಿಬಿಎಂಪಿಯ ಬ್ಯಾಂಕ್ ಖಾತೆಗೆ ಜೋಡಣೆ ಮಾಡಲಾಗಿತ್ತು. ​

ಒಟ್ಟಿನಲ್ಲಿ ಬಾಕಿ ಅಸ್ತಿ ತೆರಿಗೆ ಉಳಿಸಿಕೊಂಡು ಕಟ್ಟಡ ಮಾಲೀಕರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಕ್ಕೆ ಪಾಲಿಕೆ ಸಿದ್ದತೆ ನಡೆಸಿದೆ. ಒಟಿಎಸ್ ಮೂಲಕ ತೆರಿಗೆ ಕಟ್ಟಲು ಅವಕಾಶ ನೀಡಿದರೂ ಕೂಡ ನಿರ್ಲಕ್ಷ ವಹಿಸಿದ ತೆರಿಗೆದಾರರಿಗೆ ಪಾಲಿಕೆ ಬಿಸಿ ಮುಟ್ಟಿಸಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:14 am, Sun, 1 December 24