AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜನಪ್ರನಿಧಿಗಳಿಲ್ಲದೇ ಸತತ 5 ನೇ ಬಾರಿಗೆ ಬಜೆಟ್ ಮಂಡಿಸಲು ಸಜ್ಜಾದ ಬಿಬಿಎಂಪಿ

ಬೆಂಗಳೂರು ಬಿಬಿಎಂಪಿ ಚುನಾವಣೆ ನಡೆದು 5 ವರ್ಷಗಳಾದರೂ, ಜನಪ್ರತಿನಿಧಿಗಳಿಲ್ಲದೆ 5ನೇ ಬಾರಿಗೆ ಬಜೆಟ್ ಮಂಡಿಸಲಿದೆ. ಇದೇ ಮೊದಲ ಬಾರಿಗೆ ವಲಯವಾರು ಬಜೆಟ್ ಮಂಡನೆ ಯೋಜನೆಯಾಗಿದ್ದು, ಎಂಟು ವಲಯಗಳಿಗೆ ಪ್ರತ್ಯೇಕ ಬಜೆಟ್ ನಿರೀಕ್ಷಿಸಲಾಗಿದೆ. ಬ್ರ್ಯಾಂಡ್ ಬೆಂಗಳೂರು ಯೋಜನೆಗಳಿಂದ ಬಜೆಟ್ ಗಾತ್ರ ಹೆಚ್ಚಾಗುವ ಸಾಧ್ಯತೆಯಿದೆ. ವಲಯವಾರು ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ.

ಜನಪ್ರನಿಧಿಗಳಿಲ್ಲದೇ ಸತತ 5 ನೇ ಬಾರಿಗೆ ಬಜೆಟ್ ಮಂಡಿಸಲು ಸಜ್ಜಾದ ಬಿಬಿಎಂಪಿ
ಜನಪ್ರನಿಧಿಗಳಿಲ್ಲದೇ ಸತತ 5 ನೇ ಬಾರಿಗೆ ಬಜೆಟ್ ಮಂಡಿಸಲು ಸಜ್ಜಾದ ಬಿಬಿಎಂಪಿ
ಶಾಂತಮೂರ್ತಿ
| Edited By: |

Updated on: Nov 26, 2024 | 2:56 PM

Share

ಬೆಂಗಳೂರು, ನವೆಂಬರ್​ 26: ಜನಪ್ರತಿನಿಧಿಗಳಿಲ್ಲದೇ ಬರೋಬ್ಬರಿ 5ನೇ ಬಾರಿಗೆ ಬಜೆಟ್ ಮಂಡಿಸುವುದಕ್ಕೆ ಪಾಲಿಕೆ ಸಜ್ಜಾಗಿದೆ. 2025-26ನೇ ಸಾಲಿನ ಪಾಲಿಕೆ (BBMP) ಬಜೆಟ್ ಮಂಡನೆಗೆ ಲೆಕ್ಕಾಚಾರ ನಡೆಯುತ್ತಿರುವ ಹೊತ್ತಲ್ಲೇ, ರಾಜಧಾನಿಯ ಬಜೆಟ್​ನಲ್ಲಿ ಈ ಬಾರೀ ಹೊಸ ಪ್ರಯೋಗ ನಡೆಸುವುದಕ್ಕೆ ಪಾಲಿಕೆ ತಯಾರಿ ನಡೆಸಿದೆ. ಸದ್ಯ ಬಿಬಿಎಂಪಿಯ ಎಂಟು ವಲಯಗಳಿಗೆ ವಲಯವಾರು ಬಜೆಟ್ ಮಂಡನೆಗೆ ಹಣಕಾಸು ವಿಭಾಗದಿಂದ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಇತ್ತ ಬ್ರ್ಯಾಂಡ್ ಬೆಂಗಳೂರಿನ ಪರಿಕಲ್ಪನೆ ಕೂಡ ಜೊತೆ ಸೇರಿರೋದರಿಂದ ಬಜೆಟ್ ಗಾತ್ರ ಹೆಚ್ಚಾಗುವ ಸಾಧ್ಯತೆಯಿದೆ.

ಜನಪ್ರನಿಧಿಗಳಿಲ್ಲದೇ ಬಜೆಟ್ ಮಂಡಿಸುವುದಕ್ಕೆ ಪಾಲಿಕೆ ಸಜ್ಜು

ಬಿಬಿಎಂಪಿಯ ಚುನಾವಣೆ ನಡೆದು ಬರೋಬ್ಬರಿ 5 ವರ್ಷ ಕಳೆಯುತ್ತ ಬಂದಿದೆ, ಇತ್ತ ಜನಪ್ರನಿಧಿಗಳಿಲ್ಲದೇ ಸತತ 5 ನೇ ಬಾರಿಗೆ ಬಜೆಟ್ ಮಂಡಿಸುವುದಕ್ಕೆ ಪಾಲಿಕೆ ಸಜ್ಜಾಗಿದ್ದು, ಇದೇ ಮೊದಲ ಬಾರಿಗೆ ವಲಯವಾರು ಬಜೆಟ್ ಮಂಡಿಸುವುದಕ್ಕೆ ಹಣಕಾಸು ವಿಭಾಗದಿಂದ ಬಿಬಿಎಂಪಿಯ ಆಯುಕ್ತರಿಗೆ ಪ್ರಸ್ತಾವನೆ ಬಂದಿದೆ. ಸದ್ಯ ಇಷ್ಟು ವರ್ಷ ಇಡೀ ಬೆಂಗಳೂರಿನ ಸಮಗ್ರ ಅಭಿವೃದ್ಧಿಯನ್ನ ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್ ಮಂಡಿಸುತ್ತಿದ್ದ ಪಾಲಿಕೆ, ಇದೀಗ ಮೊದಲ ಬಾರಿಗೆ ವಲಯವಾರು ಬಜೆಟ್ ಮಂಡನೆಗೆ ಲೆಕ್ಕಾಚಾರ ಹಾಕಿದೆ.

ಇದನ್ನೂ ಓದಿ: BBMP Budget: ಬೆಂಗಳೂರಿನ ರಸ್ತೆ ಅಭಿವೃದ್ಧಿ, ಮೂಲಸೌಕರ್ಯ ಕ್ಷೇತ್ರಕ್ಕೆ ಬಿಬಿಎಂಪಿ ಬಜೆಟ್​ನಲ್ಲಿ ಸಿಕ್ಕಿದ್ದೇನು? ಇಲ್ಲಿದೆ ವಿವರ

ಇನ್ನು ಕೇಂದ್ರಿಕೃತ ಬಜೆಟ್ ಬದಲು ವಲಯವಾರು ಅಭಿವೃದ್ಧಿ ಕಾರ್ಯಗಳ ಬಗ್ಗೆ ಗಮನಹರಿಸಿ ಬಜೆಟ್ ಮಂಡಿಸುವುದಕ್ಕೆ ಚಿಂತನೆ ನಡೆಸಿರುವ ಪಾಲಿಕೆ, ಸದ್ಯ ಪಾಲಿಕೆ ವ್ಯಾಪ್ತಿಯ ಎಂಟು ವಲಯಗಳಲ್ಲಿ ತಮ್ಮ ವಲಯದ ನಿರ್ವಹಣೆ ಕಾಮಗಾರಿ, ಕಚೇರಿ ವೆಚ್ಚ ಹಾಗೂ ಕೈಗೆತ್ತಿಕೊಳ್ಳಬೇಕಾದ ಕಾಮಗಾರಿಗಳ ವರದಿ ಸಿದ್ಧಪಡಿಸಿ ಕೊಡುವಂತೆ ಪಾಲಿಕೆ ಸೂಚಿಸಿದೆ. ಈ ವರದಿಯನ್ನ ಹಣಕಾಸು ವಿಭಾಗದ ವಿಶೇಷ ಆಯುಕ್ತರಿಗೆ ನೀಡುವಂತೆ ಸೂಚನೆ ಕೊಡಲಾಗಿದೆ. ಇತ್ತ ಯಾವ ವಲಯಕ್ಕೆ ಎಷ್ಟು ಹಣ ಬೇಕು, ಎಷ್ಟು ಅಭಿವೃದ್ಧಿ ಕೆಲಸವಾಗುತ್ತಿದೆ. ಅನ್ನೋದನ್ನ ಪರಿಶೀಲಿಸಿ ಬಳಿಕ ವಲಯವಾರು ಬಜೆಟ್ ಮಂಡನೆಗೆ ಪ್ಲ್ಯಾನ್ ಮಾಡುತ್ತೇವೆ ಅಂತಾ ಪಾಲಿಕೆ ಆಯುಕ್ತ ತುಷಾರ್ ಗಿರಿನಾಥ್​ ಹೇಳುತ್ತಿದ್ದಾರೆ.

ಇದನ್ನೂ ಓದಿ: ರಾಜ್ಯ ಸರ್ಕಾರಕ್ಕೆ ಬೃಹತ್ ಅನುದಾನದ ಪ್ರಸ್ತಾವನೆ ಇಟ್ಟ ಬಿಬಿಎಂಪಿ, 2024-25 ನೇ ಬಜೆಟ್ ನಲ್ಲಿ 8050 ಕೋಟಿಗೆ ಡಿಮ್ಯಾಂಡ್

ಇತ್ತ ಕಳೆದ ಬಾರಿ 12,369 ಕೋಟಿ ರೂ. ಬಜೆಟ್ ಮಂಡಿಸಿದ್ದ ಪಾಲಿಕೆ, ಈ ಬಾರೀ ಇನ್ನೂ ಹೆಚ್ಚಿನ ಗಾತ್ರದ ಬಜೆಟ್ ಮಂಡಿಸುವ ನಿರೀಕ್ಷೆಯಿದೆ. ಇತ್ತ ಬ್ರ್ಯಾಂಡ್ ಬೆಂಗಳೂರಿನ ಕೆಲ ಯೋಜನೆಗಳು ಸೇರಿದಂತೆ ಕೆಲ ಅಭಿವೃದ್ಧಿ ಕಾರ್ಯಗಳು ಕೂಡ ಇರೋದರಿಂದ ಈ ಬಾರೀ ಬಜೆಟ್​ನಲ್ಲಿ ಆಯವ್ಯಯದ ಮೊತ್ತ ಏರಿಳಿತವಾಗುವ ಸಾಧ್ಯತೆ ಕೂಡ ಇದೆ ಎನ್ನಲಾಗ್ತಿದೆ. ಸದ್ಯ ಇದೇ ಮೊದಲ ಬಾರಿಗೆ ವಲಯವಾರು ಬಜೆಟ್ ಸಿದ್ಧಪಡಿಸೋಕೆ ಪಾಲಿಕೆ ಪ್ರಯೋಗ ಮಾಡೋಕೆ ಹೊರಟಿದ್ದು, ಇದು ರಾಜಧಾನಿಯ ಜನರಿಗೆ ಎಷ್ಟರಮಟ್ಟಿಗೆ ಪ್ರಯೋಜನಕಾರಿಯಾಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.