ಬೆಂಗಳೂರು: ಚಾಲಕರು, ನಿರ್ವಾಹಕರಿಗೆ ಸಿಹಿ ಸುದ್ದಿ ನೀಡಿದ ಬಿಎಂಟಿಸಿ ಅಧಿಕಾರಿಗಳು

ಬಿಎಂಟಿಸಿ ಬಸ್ ಚಾಲಕರ ಮೇಲಿನ ಹಲ್ಲೆ ಮತ್ತು ಅಪಘಾತಗಳನ್ನು ತಗ್ಗಿಸಲು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಪ್ರತಿ ಮಾರ್ಗದ ಪ್ರಯಾಣ ಸಮಯವನ್ನು ಹೆಚ್ಚಿಸಿದೆ. ಕಡಿಮೆ ಸಮಯದ ಒತ್ತಡದಿಂದ ಉಂಟಾಗುವ ಅಪಾಯವನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. 1800 ಮಾರ್ಗಗಳಲ್ಲಿ ಈ ಬದಲಾವಣೆ ಜಾರಿಯಲ್ಲಿದೆ. ಪ್ರಯಾಣಿಕರು ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

ಬೆಂಗಳೂರು: ಚಾಲಕರು, ನಿರ್ವಾಹಕರಿಗೆ ಸಿಹಿ ಸುದ್ದಿ ನೀಡಿದ ಬಿಎಂಟಿಸಿ ಅಧಿಕಾರಿಗಳು
ಬಿಎಂಟಿಸಿ
Follow us
Kiran Surya
| Updated By: ವಿವೇಕ ಬಿರಾದಾರ

Updated on: Nov 26, 2024 | 8:19 AM

ಬೆಂಗಳೂರು, ನವೆಂಬರ್​ 26: ಇತ್ತೀಚಿಗೆ ಬಿಎಂಟಿಸಿ (BMTC) ಬಸ್​ ಚಾಲಕ ಮತ್ತು ನಿರ್ವಾಹಕರ ಮೇಲೆ ನಿರಂತರವಾಗಿ ಹಲ್ಲೆ ಆಗಿದ್ದವು. ಇದಕ್ಕೆ ಪ್ರಮುಖ ಕಾರಣ ಚಾಲಕರಿಗೆ ನೀಡಿದ್ದ ಟೈಮ್ ಬಾಂಡ್ ಎಂದು ತಿಳಿದು ಬಂದಿದೆ. ಇದೀಗ, ಬಿಎಂಟಿಸಿ ಅಧಿಕಾರಿಗಳು ಪ್ರತಿ ಮಾರ್ಗದಲ್ಲೂ ಬಸ್​ ಸಂಚಾರದ ಸಮಯ ಹೆಚ್ಚಳ ಮಾಡುವ ಮೂಲಕ ಚಾಲಕರ ಟೆನ್ಷನ್​ ಕಡಿಮೆ ಮಾಡಿದ್ದಾರೆ.

ಬಿಎಂಟಿಸಿ ಬಸ್​ ಸಂಚಾರ ಸಮಯವನ್ನು ಅಧಿಕಾರಿಗಳು ಏರಿಕೆ ಮಾಡಿದ್ದಾರೆ. ಇದರಿಂದ, ಕಡಿಮೆ ಸಮಯದಲ್ಲಿ ವೇಗವಾಗಿ ತೆರಳಲಿ ನಿಗದಿತ ನಿಲ್ದಾಣ ತಲುಪಬೇಕೆಂಬ ಟೆನ್ಷನ್​ನಿಂದ ಚಾಲಕರು ನಿರಾಳರಾಗಿದ್ದಾರೆ. ಬಿಎಂಟಿಸಿ ಬಸ್​ಗಳು ಸಂಚಾರ ಮಾಡುವ 1800 ಮಾರ್ಗಳಲ್ಲೂ ಟೈಮ್ ಲಿಮಿಟ್ ಕಡಿಮೆ ಮಾಡಲಾಗಿದೆ.

ಈ ಹಿಂದೆ ಮೆಜೆಸ್ಟಿಕ್ ನಿಲ್ದಾಣದಿಂದ ಉತ್ತರಹಳ್ಳಿಗೆ ಸಂಚಾರ ಮಾಡಲು 55 ನಿಮಿಷಗಳ ಕಾಲಾವಕಾಶ ನೀಡಲಾಗಿತ್ತು. ಇನ್ಮುಂದೆ ಈ ಸಮಯವನ್ನು 01 ಗಂಟೆ 15 ನಿಮಿಷ ಏರಿಸಲಾಗಿದೆ. ಈ ಮಾರ್ಗದಲ್ಲಿ 20 ನಿಮಿಷಗಳ ಕಾಲ ಹೆಚ್ಚಿನ ಸಮಯ ನೀಡಲಾಗಿದೆ ಎಂದು ಬಿಎಂಟಿಸಿ ಚೀಫ್ ಟ್ರಾಫಿಕ್ ಮ್ಯಾನೇಜರ್ ಪ್ರಭಾಕರ್ ರೆಡ್ಡಿ ತಿಳಿಸಿದರು.

ಇದನ್ನೂ ಓದಿ: ಕೆಎಸ್​​ಆರ್​ಟಿಸಿ, ಬಿಎಂಟಿಸಿ ನೌಕರರ ಮುಷ್ಕರಕ್ಕೆ ದಿನಾಂಕ ನಿಗದಿ: ಬಸ್ ಸಂಚಾರ ಬಂದ್ ಯಾವಾಗಿನಿಂದ ನೋಡಿ

ಪ್ರತಿಯೊಂದು ಮರ್ಗಾದಲ್ಲೂ 15 ರಿಂದ 20 ನಿಮಿಷಗಳ ಕಾಲ ಹೆಚ್ಚಿನ ಸಮಯ ನೀಡಲಾಗುತ್ತದೆ. ಇದರಿಂದ ನಗರದಲ್ಲಿ ಆಗುತ್ತಿರುವ ಚಾಲಕ, ನಿರ್ವಾಹಕರ ಮೇಲಿನ ಹಲ್ಲೆ ಮತ್ತು ಅಪಘಾತಗಳು ಕಡಿಮೆ ಆಗಲಿವೆ. ಈ ಹಿಂದೆ ನಡೆದಿರುವ ಸಾಕಷ್ಟು ಹಲ್ಲೆ ಮತ್ತು ಅಪಘಾತಗಳಲ್ಲಿ ಬಿಎಂಟಿಸಿಯ ಚಾಲಕರು ಟೈಮ್ ಕವರ್ ಮಾಡಲು, ವೇಗವಾಗಿ ಬಸ್​ ಚಲಾಯಿಸುತ್ತಿದ್ದರು. ಇದರಿಂದ ಅಪಘಾತಗಳು ಸಂಭವಿಸುತ್ತಿದ್ದವು.

ಬಿಎಂಟಿಸಿಯ 58 ಸಾವಿರ ಟ್ರಿಪ್​ಗಳಲ್ಲೂ ಟೈಮ್ ಲಿಮಿಟ್ ಹೆಚ್ಚು ಮಾಡಲು ಬಿಎಂಟಿಸಿ ಮುಂದಾಗಿದೆ. ಈ ವಿಚಾರ ತಿಳಿದು ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಬಿಎಂಟಿಸಿಯ ಚಾಲಕ ಮತ್ತು ನಿರ್ವಾಹಕರಿಗೆ ಇಂತಿಷ್ಟು ಸಮಯದಲ್ಲಿ ಈ ರೂಟ್ ಕ್ಲಿಯರ್ ಮಾಡಬೇಕು ಅನ್ನೋ ಅಧಿಕಾರಿಗಳ ರೂಲ್ಸ್​ನಿಂದ ಬಿಎಂಟಿಸಿ ಬಸ್ಸುಗಳು ವೇಗವಾಗಿ ಸಂಚಾರ ಮಾಡುತ್ತಿದ್ದವು. ಆದರೆ ಈ ಟೈಮ್ ಲಿಮಿಟ್ ಹೆಚ್ಚಳದಿಂದ ಹಲ್ಲೆ ಮತ್ತು ಅಪಘಾತ ಕಡಿಮೆ ಆಗುತ್ತಾ ಎಂದು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್
ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್