ಚಾಲಕರ ಜೇಬಿನಿಂದಲೇ ರಿಯಾಯ್ತಿ ಟ್ರಾಫಿಕ್ ದಂಡ ಪಾವತಿಗೆ ಮುಂದಾದ ಬಿಎಂಟಿಸಿ, ಕೆರಳಿ ಕೆಂಡವಾದ ಸಿಬ್ಬಂದಿ!
ಟ್ರಾಫಿಕ್ ಫೈನ್ನ ಹಣವನ್ನೂ ಸಿಬ್ಬಂದಿ ಕೈಯಿಂದಲೇ ವಸೂಲಿ ಮಾಡಲು ಬಿಎಂಟಿಸಿ ಸಂಸ್ಥೆ ಮುಂದಾಗಿದೆ. ಯಾರು ಟ್ರಾಫಿಕ್ ನಿಯಮ ಉಲ್ಲಂಘಿಸಿ ಬಿಎಂಟಿಸಿ ಬಸ್ ಚಲಾಯಿಸುತ್ತರೋ ಅವರೇ ತಮ್ಮ ಸಂಬಳದಿಂದ ದಂಡ ಪಾವತಿಸಬೇಕು.
ಬೆಂಗಳೂರು: ಬೆಂಗಳೂರಲ್ಲಿ ಟ್ರಾಫಿಕ್ ರೂಲ್ಸ್ ಫಾಲೋ ಮಾಡದೇ ಬಹುತೇಕ ಎಲ್ಲಾ ವಾಹನಗಳ ಮೇಲೂ ಕೇಸ್ ಗಳಿವೆ. ರೂಲ್ಸ್ ಬ್ರೇಕ್ ಮಾಡಿದ್ದೀರಾ ಫೈನ್ ಕಟ್ಟಿ ಅಂದ್ರೆ ಜನರು ಜಗಳಕ್ಕೆ ಇಳಿತಾರೆ. ಹೀಗಾಗಿ ದಂಡ ವಸೂಲಿಗೆ 50% ಡಿಸ್ಕೌಂಟ್ ಕೊಟ್ಟಿದ್ದೇ ತಡ ಜನರು ದಂಡ ಪಾವತಿ ಮಾಡಿದ್ದಾರೆ. ಅದೇ ರೀತಿ ಬಿಎಂಟಿಸಿ ನಿಗಮವೂ ಕೂಡ ಸಿಗ್ನಲ್ ಜಂಪ್, ಪಾರ್ಕಿಂಕ್ ಇಲ್ಲದ ಜಾಗದಲ್ಲಿ ಪಾರ್ಕಿಂಗ್ ಮಾಡಿದಕ್ಕೆ ಲಕ್ಷಾಂತರ ರೂ ದಂಡ ಪಾವತಿಸಿದ್ದು ದಂಡವನ್ನು ಚಾಲಕರ ಸಂಬಳದಲ್ಲಿ ಕಟ್ ಮಾಡಲು ಮುಂದಾಗಿದ್ದಾರೆ. ಇದಕ್ಕೆ ನೌಕರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಎಂಟಿಸಿ.. ಸಿಟಿ ಜನರ ಜೀವನಾಡಿ. ದಿನ ಲಕ್ಷಾಂತರ ಪ್ರಯಾಣಿಕರು ಬಿಎಂಟಿಸಿಯಲ್ಲಿ ಪ್ರಯಾಣ ಮಾಡ್ತಾರೆ. ಆದ್ರೆ, ಬಿಎಂಟಿಸಿ ಬಸ್ ಡ್ರೈವರ್, ಕಂಡೆಕ್ಟರ್ಗಳ ಕಷ್ಟ ಮಾತ್ರ ಅಷ್ಟಿಷ್ಟಲ್ಲ. ಡ್ಯೂಟಿ ಪಡೆಯಲು ಲಂಚ ಕೊಡ್ಬೇಕು. ಸಂಬಳಕ್ಕಾಗಿ ಪ್ರತಿಭಟನೆ ಮಾಡ್ಬೇಕು. ಆದ್ರೀಗ, ಬಿಎಂಟಿಸಿ ಸಿಬ್ಬಂದಿಗೆ ಮತ್ತೊಂದು ಶಾಕ್ ಎದುರಾಗಿದೆ. ಟ್ರಾಫಿಕ್ ಫೈನ್ನ ಹಣವನ್ನೂ ಸಿಬ್ಬಂದಿ ಕೈಯಿಂದಲೇ ವಸೂಲಿ ಮಾಡಲು ಬಿಎಂಟಿಸಿ ಸಂಸ್ಥೆ ಮುಂದಾಗಿದೆ.
ಇದನ್ನೂ ಓದಿ: ಫಾಸ್ಟ್ ಕಾರ್ಡ್ನಲ್ಲಿ ಹಣ ಇಲ್ಲದೇ ಮಾರಸಂದ್ರ ಟೋಲ್ ಬಳಿ ನಿಂತ ಬರೋಬ್ಬರಿ 15 ಬಿಎಂಟಿಸಿ ಇವಿ ಬಸ್‌ಗಳು
ಬಿಎಂಟಿಸಿ ಸಿಬ್ಬಂದಿ ಸಂಬಳ ಕತ್ತರಿಸಿ ದಂಡ ಪಾವತಿ
2018 ರಿಂದ ಇಲ್ಲಿಯವರೆಗೂ ಬಿಎಂಟಿಸಿ ಮೇಲೆ 24,562 ಕೇಸ್ ಬಿದ್ದಿವೆ. 50% ಆಫರ್ ಬಂದ್ಮೇಲೆ, 70 ಲಕ್ಷ ದಂಡ ಕಟ್ಟಬೇಕಾಗಿರೋದು ಗೊತ್ತಾಗಿದೆ. ಕೂಡಲೇ ಅಲರ್ಟ್ ಆದ ಬಿಎಂಟಿಸಿ ಅಧಿಕಾರಿಗಳು 50 ಪರ್ಸೆಂಟ್ ಆಫರ್ ಬಳಸಿಕೊಂಡಿದ್ದಾರೆ. ಹೀಗಾಗಿ 70 ಲಕ್ಷದಲ್ಲಿ ಆಫರ್ ಪ್ರಕಾರ, 35 ಲಕ್ಷ ಪಾವತಿಸಿ ಕೇಸ್ ಕ್ಲಿಯರ್ ಮಾಡಿದ್ದಾರೆ. ಆದ್ರೆ ಆ ದಂಡದ ಹಣವನ್ನ, ರೂಲ್ಸ್ ಬ್ರೇಕ್ ಮಾಡಿರುವ ಚಾಲಕರ ಸಂಬಳದಿಂದ ಕಟ್ ಮಾಡಲು ಬಿಎಂಟಿಸಿ ನಿಗಮ ನಿರ್ಧರಿಸಿದೆ. ಈ ಬಗ್ಗೆ ಸ್ವತಃ ಬಿಎಂಟಿಸಿ ಎಂಡಿ ಸತ್ಯವತಿ ತಿಳಿಸಿದ್ದಾರೆ. ಇದರಿಂದ ಕೆರಳಿರೋ ಸಾರಿಗೆ ನೌಕರರ ಸಂಘಟನೆ, ಅಧಿಕಾರಿಗಳು ಚಾಲಕರಿಗೆ ಟಾರ್ಗೆಟ್ ಕೊಡ್ತಾರೆ. ಅದನ್ನ ರೀಚ್ ಮಾಡ್ಬೇಕು ಅಂದಾಗ ಕೆಲವೊಮ್ಮೆ ಟ್ರಾಫಿಕ್ಸ್ ರೂಲ್ಸ್ ಉಲ್ಲಂಘನೆಯಾಗಿದೆ. ಹಾಗಾಂತ ನೌಕರರ ಸಂಬಂಳದಿಂದ ಕಟ್ ಮಾಡಿ, ದಂಡು ಪಾವತಿಸುವುದು ಎಷ್ಟು ಸರಿ ಅಂತ ಪ್ರಶ್ನಿಸಿದ್ದಾರೆ.
ಇಷ್ಟೆಲ್ಲಾ ಲೆಕ್ಕಚಾರ ಹಾಕೋ ಬಿಎಂಟಿಸಿ, ಟೋಲ್ ಹಣ ಕಟ್ಟಲಾಗದೆ ಪರದಾಡಿದೆ. ದೊಡ್ಡಬಳ್ಳಾಪುರದಿಂದ ಬರುತ್ತಿದ್ದ ಎಲೆಕ್ಟ್ರಿಕಲ್ ಬಸ್‌ಗಳು ಮಾರಸಂದ್ರ ಟೋಲ್ ಬಳಿ ಬರುತ್ತಿದ್ದಂತೆ ನಿಂತು ಹೋಗಿವೆ. ಟೋಲ್‌ಗೆ ಹಣ ತುಂಬಲು ಫಾಸ್ಟ್ ಟ್ಯಾಗ್‌ನಲ್ಲಿ ಹಣ ಖಾಲಿಯಾಗಿತ್ತು. ಹಾಗಾಗಿ ಸುಮಾರು 15ಕ್ಕೂ ಹೆಚ್ಚು ಬಸ್‌ಗಳು ಟೋಲ್ ಬಳಿಯೇ ನಿಂತಿವೆ. ಆಗ ಪ್ರಯಾಣಿಕರು ವಿಧಿಯಿಲ್ಲದೇ ಬೇರೆ ಬಸ್ ಹತ್ತಿ ಅಲ್ಲಿಂದ ತೆರಳಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:38 am, Thu, 9 March 23