AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಟೋ ಚಾಲಕ ಕೇಳಿದ್ದಕ್ಕೆ ಲ್ಯಾಂಬೋರ್ಗಿನಿ ಕೀಯನ್ನೇ ಕೊಟ್ಟ ಉದ್ಯಮಿ: ವಿಡಿಯೋ ವೈರಲ್​

Viral News: ಬೆಂಗಳೂರಿನ ರಸ್ತೆಯಲ್ಲಿ ಆಟೋ ಚಾಲಕನೊಬ್ಬ ತನ್ನ ಕನಸನ್ನು ಹೇಳಿಕೊಂಡಾಗ, ಕೋಟ್ಯಂತರ ಮೌಲ್ಯದ ಲ್ಯಾಂಬೋರ್ಗಿನಿ ಸೂಪರ್‌ಕಾರ್ ಕೀ ನೀಡಿ ತಾನು ಆಟೋ ಹತ್ತಿದ ಉದ್ಯಮಿಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ಗಳಿಸಿದ್ದು, ಲಕ್ಷಾಂತರ ಮಂದಿ ಪ್ರತಿಕ್ರಿಯಿಸಿದ್ದಾರೆ.

ಆಟೋ ಚಾಲಕ ಕೇಳಿದ್ದಕ್ಕೆ ಲ್ಯಾಂಬೋರ್ಗಿನಿ ಕೀಯನ್ನೇ ಕೊಟ್ಟ ಉದ್ಯಮಿ: ವಿಡಿಯೋ ವೈರಲ್​
ಆಟೋ ಚಾಲಕ ಕೇಳಿದ್ದಕ್ಕೆ ಲ್ಯಾಂಬೋರ್ಗಿನಿ ಕೀಯನ್ನೇ ಕೊಟ್ಟ ಉದ್ಯಮಿImage Credit source: rakesh_knv Instagram
ಪ್ರಸನ್ನ ಹೆಗಡೆ
|

Updated on:Jul 05, 2026 | 12:21 PM

Share

ಬೆಂಗಳೂರು, ಜುಲೈ 05: ಒಂದು ಸಾಮಾನ್ಯ ಮಾತುಕತೆ ಅಚ್ಚರಿಯ ಕ್ಷಣವಾಗಿ ಮಾರ್ಪಟ್ಟಿದ್ದು, ಉದ್ಯಮಿ ತಮ್ಮ ಲ್ಯಾಂಬೋರ್ಗಿನಿ (Lamborghini) ಸೂಪರ್‌ಕಾರಿನ ಕೀ ಅನ್ನು ಆಟೋ ಚಾಲಕನಿಗೆ ನೀಡಿ ಕಾರು ಓಡಿಸುವ ಅವಕಾಶ ಕಲ್ಪಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಅಪರೂಪದ ಮಾನವೀಯ ನಡೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಲಕ್ಷಾಂತರ ಮಂದಿ ಪ್ರತಿಕ್ರಿಯಿಸಿದ್ದಾರೆ. ಕೋಟ್ಯಂತರ ರೂಪಾಯಿ ಮೌಲ್ಯದ ಲ್ಯಾಂಬೋರ್ಗಿನಿಯನ್ನು ಅಪರಿಚಿತ ವ್ಯಕ್ತಿಗೆ ಚಾಲನೆ ಮಾಡಲು ನೀಡಿದ ಉದ್ಯಮಿಯ ವಿಶ್ವಾಸವನ್ನು ಅನೇಕರು ಶ್ಲಾಘಿಸಿದ್ದಾರೆ.

ವೈರಲ್​​ ಆದ ವಿಡಿಯೋದಲ್ಲಿ ಏನಿದೆ?

View this post on Instagram

A post shared by RAKESH KUMAR (@rakesh_knv)

ವಿಡಿಯೊದಲ್ಲಿ ಉದ್ಯಮಿ ತಮ್ಮ ಲ್ಯಾಂಬೋರ್ಗಿನಿಯನ್ನು ಬೆಂಗಳೂರಿನ ರಸ್ತೆಯಲ್ಲಿ ಚಲಾಯಿಸುತ್ತಿರುವಾಗ, ಪಕ್ಕದಲ್ಲಿ ಬಂದ ಆಟೋ ಚಾಲಕ ಅವರನ್ನು ಗುರುತಿಸುತ್ತಾನೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿಡಿಯೊಗಳನ್ನು ನೋಡುತ್ತಿದ್ದೇನೆ ಎಂದು ಹೇಳಿದ ಚಾಲಕ, ಲ್ಯಾಂಬೋರ್ಗಿನಿ ಓಡಿಸಬೇಕು ಎಂಬ ತನ್ನ ಕನಸನ್ನು ವ್ಯಕ್ತಪಡಿಸುತ್ತಾನೆ. ಇದನ್ನು ಕೇಳಿದ ಉದ್ಯಮಿ, ಕೇವಲ ಧನ್ಯವಾದ ಹೇಳಿ ಮುಂದೆ ಸಾಗದೆ, ರಸ್ತೆಯ ಬದಿಗೆ ವಾಹನ ನಿಲ್ಲಿಸುವಂತೆ ಹೇಳಿ ತಮ್ಮ ಲ್ಯಾಂಬೋರ್ಗಿನಿಯ ಕೀಯನ್ನು ಆಟೋ ಚಾಲಕನ ಕೈಗೆ ನೀಡುತ್ತಾರೆ. ನಂತರ ಇಬ್ಬರೂ ತಮ್ಮ ತಮ್ಮ ವಾಹನಗಳನ್ನು ಪರಸ್ಪರ ಬದಲಾಯಿಸಿಕೊಂಡು ಪ್ರಯಾಣ ಆರಂಭಿಸುತ್ತಾರೆ. ಆಟೋ ಚಾಲಕ ಅತ್ಯಂತ ಎಚ್ಚರಿಕೆಯಿಂದ ಸೂಪರ್‌ಕಾರನ್ನು ಚಲಾಯಿಸಿದರೆ, ಉದ್ಯಮಿ ನಗುತ್ತಲೇ ಆಟೋದಲ್ಲಿ ಪ್ರಯಾಣಿಸುತ್ತಾರೆ.

ಇದನ್ನೂ ಓದಿ: ಇದೇ ನೋಡಿ ತಾಯಿ ಪ್ರೀತಿ; ತನ್ನ ಕರುವನ್ನು ತೋರಿಸಲು ಮಾಲೀಕನನ್ನು ಕರೆದೊಯ್ದ ಹಸು

ಭಾವುಕ ಸಂದೇಶ

ವಿಡಿಯೊದಲ್ಲಿ ಇಬ್ಬರೂ ತಮ್ಮ ತಮ್ಮ ವಿಭಿನ್ನ ವಾಹನಗಳಲ್ಲಿ ಪಕ್ಕಪಕ್ಕದಲ್ಲೇ ಸಾಗುತ್ತಿರುವ ದೃಶ್ಯಗಳು ಕಾಣಿಸುತ್ತವೆ. ಈ ವಿಡಿಯೊವನ್ನು ಹಂಚಿಕೊಂಡಿರುವ ಉದ್ಯಮಿ, ಆಟೋದಲ್ಲಿ ಕುಳಿತ ಕ್ಷಣವೇ ತಮ್ಮ ಜೀವನದ ಆರಂಭದ ದಿನಗಳು ಕಣ್ಣಮುಂದೆ ಬಂದವು ಎಂದು ಬರೆದುಕೊಂಡಿದ್ದಾರೆ. ವೃತ್ತಿ ಜೀವನದ ಆರಂಭದಲ್ಲಿ ಆರ್ಥಿಕ ಸಂಕಷ್ಟಗಳನ್ನು ಎದುರಿಸಿದ್ದ ಸಂದರ್ಭಗಳಲ್ಲಿ, ಆಟೋ ದರವನ್ನು ಪಾವತಿಸುವುದೇ ಕಷ್ಟವಾಗುತ್ತಿತ್ತು. ಹಲವು ವರ್ಷಗಳ ನಂತರ ಮತ್ತೆ ಆಟೋದಲ್ಲಿ ಪ್ರಯಾಣಿಸಿದಾಗ ತಾವು ಎಷ್ಟು ದೂರ ಬಂದಿದ್ದೇವೆ ಎಂಬುದು ಅರಿವಾಯಿತು ಎಂದು ಅವರು ಹೇಳಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ಗಳಿಸಿದ್ದು, ಒಬ್ಬ ನೆಟ್ಟಿಗ “ಬ್ರೋ, ನೀವು ನನ್ನ ಗೌರವ ಗಳಿಸಿದ್ದೀರಿ” ಎಂದು ಪ್ರತಿಕ್ರಿಯಿಸಿದರೆ, ಮತ್ತೊಬ್ಬರು “ಆಟೋ ಚಾಲಕನ ಮುಖದಲ್ಲಿನ ನಗು ಎಲ್ಲವನ್ನೂ ಹೇಳುತ್ತದೆ” ಎಂದು ಕಾಮೆಂಟ್ ಮಾಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 12:18 pm, Sun, 5 July 26

Follow Us
ಪ್ರಸನ್ನ ಹೆಗಡೆ
ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
ರಾಮ್‌ಲೀಲಾ ಮೈದಾನದಲ್ಲಿ ಪ್ರಧಾನಿ ಮೋದಿಯಿಂದ ರಾವಣನ ಪ್ರತಿಕೃತಿ ದಹನ
ರಾಮ್‌ಲೀಲಾ ಮೈದಾನದಲ್ಲಿ ಪ್ರಧಾನಿ ಮೋದಿಯಿಂದ ರಾವಣನ ಪ್ರತಿಕೃತಿ ದಹನ
ಮದ್ವೆಯಾದ ಹತ್ತೇ ದಿನಕ್ಕೆ ಮನೆಬಿಟ್ಟು ಓಡಿ ಹೋದ ಗಂಡ: ಟವರ್ ಏರಿ ಪತ್ನಿ!
ಮದ್ವೆಯಾದ ಹತ್ತೇ ದಿನಕ್ಕೆ ಮನೆಬಿಟ್ಟು ಓಡಿ ಹೋದ ಗಂಡ: ಟವರ್ ಏರಿ ಪತ್ನಿ!
ದ್ವಾರಕಾದಲ್ಲಿ ಬಾಣ ಬಿಟ್ಟು ರಾವಣ ದಹನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ದ್ವಾರಕಾದಲ್ಲಿ ಬಾಣ ಬಿಟ್ಟು ರಾವಣ ದಹನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಕುಂಭಕರ್ಣನ ಜೊತೆ 30 ಅಡಿ ಎತ್ತರದ ಬೃಹತ್ 'ಕಾಕ್ರೋಚ್' ದಹನ
ಕುಂಭಕರ್ಣನ ಜೊತೆ 30 ಅಡಿ ಎತ್ತರದ ಬೃಹತ್ 'ಕಾಕ್ರೋಚ್' ದಹನ
ವಿಡಿಯೋ ಮಾಡಿ, 1,700 ಅಡಿ ಆಳದ ಕಣಿವೆಗೆ ಹಾರಿದ ವ್ಯಕ್ತಿ!
ವಿಡಿಯೋ ಮಾಡಿ, 1,700 ಅಡಿ ಆಳದ ಕಣಿವೆಗೆ ಹಾರಿದ ವ್ಯಕ್ತಿ!
ಶೋ ರೂಮ್‌ನಿಂದ ಏಕಾಏಕಿ ರಸ್ತೆಗೆ ನುಗ್ಗಿದ ಹೊಸ ಕಾರು!
ಶೋ ರೂಮ್‌ನಿಂದ ಏಕಾಏಕಿ ರಸ್ತೆಗೆ ನುಗ್ಗಿದ ಹೊಸ ಕಾರು!
ಅಪ್ಪನ ಅಂಬಾಸಿಡರ್ ಕಾರಿನಲ್ಲಿ ಹೆಂಡ್ತಿ ಜೊತೆ ಡಿಸಿಎಂ ಜಾಲಿರೈಡು: ವಿಡಿಯೋ
ಅಪ್ಪನ ಅಂಬಾಸಿಡರ್ ಕಾರಿನಲ್ಲಿ ಹೆಂಡ್ತಿ ಜೊತೆ ಡಿಸಿಎಂ ಜಾಲಿರೈಡು: ವಿಡಿಯೋ
ಮೈಸೂರು ರಾಜರ ಕಾರುಗಳಿಗೆ ವಿಶೇಷ ಪೂಜೆ: ಎಲ್ಲಾ ಕಾರುಗಳ ಸಂಖ್ಯೆ 1953
ಮೈಸೂರು ರಾಜರ ಕಾರುಗಳಿಗೆ ವಿಶೇಷ ಪೂಜೆ: ಎಲ್ಲಾ ಕಾರುಗಳ ಸಂಖ್ಯೆ 1953
ಪತ್ನಿ ಉಷಾ, ಕುಟುಂಬಸ್ಥರ ಜೊತೆಗೆ ಆಯುಧ ಪೂಜೆ ಮಾಡಿದ ಸಿಎಂ ಡಿಕೆ ಶಿವಕುಮಾರ್
ಪತ್ನಿ ಉಷಾ, ಕುಟುಂಬಸ್ಥರ ಜೊತೆಗೆ ಆಯುಧ ಪೂಜೆ ಮಾಡಿದ ಸಿಎಂ ಡಿಕೆ ಶಿವಕುಮಾರ್
ಮೈಸೂರು ದಸರಾ: ಪೂಜೆ ನಡುವೆ ಮೊಮ್ಮಗನ ಜೊತೆ ಆಟವಾಡಿದ ರಾಜಮಾತೆ ಪ್ರಮೋದಾ ದೇವಿ
ಮೈಸೂರು ದಸರಾ: ಪೂಜೆ ನಡುವೆ ಮೊಮ್ಮಗನ ಜೊತೆ ಆಟವಾಡಿದ ರಾಜಮಾತೆ ಪ್ರಮೋದಾ ದೇವಿ