ದೇಶದ ಪ್ರಮುಖ ಸ್ಥಳ, ರಕ್ಷಣಾ ಸಂಸ್ಥೆಗಳ ಚಿತ್ರಗಳನ್ನು ತೆಗೆದು ವಿದೇಶೀ ಏಜೆನ್ಸಿಗೆ ಕಳಿಸುತ್ತಿದ್ದ ಆರೋಪಿಯ ಬಂಧನ

ದೇಶದ ಬೇರೆ ಬೇರೆ ಕಡೆಗಳಲ್ಲಿ ಕೃತ್ಯ ಎಸಗಿದ್ದ ಆರೋಪಿ ಈವರೆಗೂ ಕರ್ನಾಟಕದಲ್ಲಿ ದುಷ್ಕೃತ್ಯ ನಡೆಸಿರಲಿಲ್ಲ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ದೇಶದ ಪ್ರಮುಖ ಸ್ಥಳ, ರಕ್ಷಣಾ ಸಂಸ್ಥೆಗಳ ಚಿತ್ರಗಳನ್ನು ತೆಗೆದು ವಿದೇಶೀ ಏಜೆನ್ಸಿಗೆ ಕಳಿಸುತ್ತಿದ್ದ ಆರೋಪಿಯ ಬಂಧನ
ಸಾಂದರ್ಭಿಕ ಚಿತ್ರ

ಬೆಂಗಳೂರು: ದೇಶದ ಪ್ರಮುಖ ಸ್ಥಳಗಳು, ಕಟ್ಟಡ, ರಕ್ಷಣಾ ಸಂಸ್ಥೆಗಳ ಚಿತ್ರಗಳನ್ನು ಸೆರೆ ಹಿಡಿದು ವಿದೇಶಿ ಏಜೆನ್ಸಿಗೆ ಕಳಿಸುತ್ತಿದ್ದ ಆರೋಪದಡಿ ವ್ಯಕ್ತಿಯೋರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮಿಲಿಟರಿ ಇಂಟೆಲಿಜೆನ್ಸ್ ನೀಡಿದ ಮಾಹಿತಿಯನ್ನು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ರಾಜಸ್ಥಾನ ಮೂಲದವನಾಗಿದ್ದು, ದೇಶದ ವಿವಿಧೆಡೆ ಕೃತ್ಯವೆಸಗಿ ಬೆಂಗಳೂರಲ್ಲಿ ತಲೆಮರೆಸಿಕೊಂಡಿದ್ದ ಎಂದು ತಿಳಿದುಬಂದಿದೆ. ಅಫೀಷಿಯಲ್ ಸೀಕ್ರೆಟ್‌ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ದೇಶದ ಬೇರೆ ಬೇರೆ ಕಡೆಗಳಲ್ಲಿ ಕೃತ್ಯ ಎಸಗಿದ್ದ ಆರೋಪಿ ಈವರೆಗೂ ಕರ್ನಾಟಕದಲ್ಲಿ ದುಷ್ಕೃತ್ಯ ನಡೆಸಿರಲಿಲ್ಲ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ರಾಣೆಬೆನ್ನೂರಿನ ದರ್ಗಾ ಮಾರುಕಟ್ಟೆಯಲ್ಲಿ ಬೆಂಕಿ; 200ಕ್ಕೂ ಹೆಚ್ಚು ಅಂಗಡಿ ಭಸ್ಮ
ಹಾವೇರಿ: ಬೆಳ್ಳಂಬೆಳಗ್ಗೆ ಹಾವೇರಿಯಲ್ಲಿ ಬೆಂಕಿ ಅವಘಡವೊಂದು ಸಂಭವಿಸಿದೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಗರದ ದರ್ಗಾ ಮಾರುಕಟ್ಟೆಯಲ್ಲಿ ಬೆಂಕಿ ಬಿದ್ದು 200ಕ್ಕೂ ಹೆಚ್ಚು ಅಂಗಡಿಗಳು ಭಸ್ಮಗೊಂಡಿವೆ. ಬಹುತೇಕ ತರಕಾರಿ, ಹಣ್ಣು, ದಿನಸಿ ಅಂಗಡಿಗಳಲ್ಲಿನ‌ ವಸ್ತುಗಳು ಸುಟ್ಟು ಭಸ್ಮವಾಗಿದ್ದು, ದುಷ್ಕರ್ಮಿಗಳು ಮಾರ್ಕೆಟ್‌ಗೆ ಬೆಂಕಿ ಹಚ್ಚಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ರಾಣೆಬೆನ್ನೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಧಾರವಾಡದಲ್ಲಿ ಯುವಕರ ನಡುವೆ ಚೂರಿ ಇರಿತ
ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಕಾಮಧೇನು ಗ್ರಾಮದಲ್ಲಿ ಮೂವರು ಯುವಕರ ನಡುವೆ ಗಲಾಟೆ ನಡೆದು ಪರಸ್ಪರ ಚಾಕು ಇರಿದುಕೊಂಡು ಘಟನೆ ನಡೆದಿದೆ. ಪರಸ್ಪರ ಚೂರಿಯಲ್ಲಿ ಇರಿದುಕೊಂಡ ಯುವಕರನ್ನು ಯುವಕರನ್ನು ಕಟ್ಟಿಹಾಕಿದ ಗ್ರಾಮಸ್ಥರು ಪೊಲೀಸರಿಗೊಪ್ಪಿಸಿದ್ದಾರೆ. ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದಾರೆ. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಜಾಲಿಹಾಳದಲ್ಲಿ ಕಾಲುಜಾರಿ ಕೆರೆಯಲ್ಲಿ ಬಿದ್ದು ಶಿಕ್ಷಕ ಸಾವು‌
ರಾಯಚೂರು: ಸರ್ಕಾರಿ ಶಾಲೆ ಶಿಕ್ಷಕ ಶೇಖರಪ್ಪ ಹೆಡಗಿನಾಳ(45) ಎಂಬುವವರು ಕಾಲುಜಾರಿ ಕೆರೆಯಲ್ಲಿ ಬಿದ್ದು ಸಾವನ್ನಪ್ಪಿದ ದುರ್ಘಟನೆಯೊಂದು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಗ್ರಾಮದಲ್ಲಿ ನಡೆದಿದೆ. ಭೀಮರಾಜ ಕ್ಯಾಂಪ್ ಸರ್ಕಾರಿ ಶಾಲೆ ಶಿಕ್ಷಕರಾಗಿದ್ದರು. ತುರವಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಚಾಲಕನ ನಿಯಂತ್ರಣ ತಪ್ಪಿ ಲಾರಿ ಅಪಘಾತ; ಚಾಲಕ ಮೃತ್ಯು
ಚಾಲಕನ ನಿಯಂತ್ರಣ ತಪ್ಪಿ ಚೆಕ್‌ಪೋಸ್ಟ್‌ಗೆ ನುಗ್ಗಿದ ಪರಿಣಾಮ ಲಾರಿ ಚಾಲಕ ನೌಷಾದ್(22) ಎಂಬುವವರು ಸಾವನ್ನಪಿದ ದುರ್ಘಟನೆ ರಾಯಚೂರ ತಾಲೂಕಿನ ಶಕ್ತಿನಗರ ಚೆಕ್‌ಪೋಸ್ಟ್‌ನಲ್ಲಿ ನಡೆದಿದೆ. ಅವಘಡದಲ್ಲಿ ಲಾರಿಯ ಕ್ಲೀನರ್‌ಗೆ ಗಾಯವಾಗಿದೆ. ಅವರಿಗೆ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: 

ಕೃಷಿಕರಿಗೆ ತರಬೇತಿ ಕಾರ್ಯಾಗಾರ: ಅಡಿಕೆಯ ಸುಧಾರಿತ ಬೇಸಾಯ ಕ್ರಮಗಳ ಕುರಿತು ಮಾಹಿತಿ ಪಡೆಯಲು ಹೀಗೆ ಮಾಡಿ 

ರಷ್ಯಾದಲ್ಲಿ ಮತದಾನ ಮುಕ್ತಾಯ: ಪುಟಿನ್​ ಪಕ್ಷವೇ ಮತ್ತೊಮ್ಮೆ ಅಧಿಕಾರಕ್ಕೆ ಸಾಧ್ಯತೆ; ಆರಂಭಗೊಂಡ ಸಂಭ್ರಮಾಚರಣೆ

(Bengaluru CCB Police arrest of the accused who had taken pictures of the Indian main location and defense agencies and sent it to a foreign agency)

Read Full Article

Click on your DTH Provider to Add TV9 Kannada