AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಕ್ಕಳೇ ಎಚ್ಚರ ಎಚ್ಚರ! ಕೊರೊನಾ ಮೂರನೇ ಅಲೆ ಭೀತಿ ಮಧ್ಯೆ ರಾಜ್ಯಕ್ಕೆ ಮತ್ತೊಂದು ಶಾಕಿಂಗ್ ನ್ಯೂಸ್

ಕೆಸಿ ಜನರಲ್ ಆಸ್ಪತ್ರೆ ವೈದ್ಯರ ತಂಡ ಸಂಶೋಧನೆಯನ್ನು ನಡೆಸಿತ್ತು. ಇತ್ತಿಚೆಗೆ ಮಕ್ಕಳಲ್ಲಿ ವೈರಾಣು ಜ್ವರ, ನಾರ್ಮಲ್ ನ್ಯೂಮೊನೀಯಾ ಕಾಣಿಸಿಕೊಳುತ್ತಿತ್ತು.

ಮಕ್ಕಳೇ ಎಚ್ಚರ ಎಚ್ಚರ! ಕೊರೊನಾ ಮೂರನೇ ಅಲೆ ಭೀತಿ ಮಧ್ಯೆ ರಾಜ್ಯಕ್ಕೆ ಮತ್ತೊಂದು ಶಾಕಿಂಗ್ ನ್ಯೂಸ್
ಸಾಂದರ್ಭಿಕ ಚಿತ್ರ
TV9 Web
| Updated By: sandhya thejappa|

Updated on: Sep 20, 2021 | 10:36 AM

Share

ಬೆಂಗಳೂರು: ಈಗಾಗಲೇ ರಾಜ್ಯದಲ್ಲಿ ಕೊರೊನಾ (Coronavirus) ಮೂರನೇ ಅಲೆ ಭೀತಿ ಶುರುವಾಗಿದೆ. ತಜ್ಞರು ಹೇಳಿದ್ದಂತೆ ಕೊರೊನಾ ಮೂರನೇ ಅಲೆ ರಾಜ್ಯದಲ್ಲಿ ಶುರುವಾಯ್ತಾ? ಎನ್ನುವ ಆತಂಕ ಹೆಚ್ಚಾಗುತ್ತಿದೆ. ಈ ನಡುವೆ ರಾಜ್ಯಕ್ಕೆ ಮತ್ತೊಂದು ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಮಕ್ಕಳಲ್ಲಿ ವೈರಾಣು ಜ್ವರ ಹೆಚ್ಚಾಗುತ್ತಿರುವ ಹೊತ್ತಲ್ಲೆ ಸ್ಫೋಟಕ ಮಾಹಿತಿ ಇರುವ ವರದಿ ಹೊರಬಿದ್ದಿದೆ. ಮಕ್ಕಳ ಮೇಲೆ ನಡೆಸಿದ್ದ ಆಂಟಿ ಬಾಡಿ ಸರ್ವೆ ರಿಪೋರ್ಟ್​ನಲ್ಲಿ ಮಕ್ಕಳಿಗೆ ಕೊರೊನಾ ಸೋಂಕು ಬಂದು ಹೋಗಿರುವ ಶಾಕಿಂಗ್ ವಿಚಾರ ಬಯಲಾಗಿದೆ.

ಕೆಸಿ ಜನರಲ್ ಆಸ್ಪತ್ರೆ ವೈದ್ಯರ ತಂಡ ಸಂಶೋಧನೆಯನ್ನು ನಡೆಸಿತ್ತು. ಇತ್ತಿಚೆಗೆ ಮಕ್ಕಳಲ್ಲಿ ವೈರಾಣು ಜ್ವರ, ನಾರ್ಮಲ್ ನ್ಯೂಮೊನೀಯಾ ಕಾಣಿಸಿಕೊಳುತ್ತಿತ್ತು. ನ್ಯೂಮೊನೀಯಾ, ವೈರಲ್ ಫೀವರ್ ಮತ್ತು ಕೊರೊನಾ ರೋಗ ಲಕ್ಷಣಗಳು ಸಾಮ್ಯತೆ ಹಿನ್ನೆಲೆ ಆಂಟಿ ಬಾಡಿ ಸರ್ವೆ ನಡೆಸಲಾಗಿತ್ತು. ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ಸೋಂಕು ತಗುಲುತ್ತದೆ ಎಂಬ ಭೀತಿ ಹಿನ್ನೆಲೆ ಆಂಟಿ ಬಾಡಿ ಸರ್ವೆ ಮಾಡಲಾಗಿತ್ತು. ಈ ಸರ್ವೆಯಲ್ಲಿ ಮಕ್ಕಳಿಗೆ ಕೊರೊನಾ ಬಂದು ಹೋಗಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ.

ಮೊದಲನೇ ಅಲೆ, ಎರಡನೇ ಅಲೆಯಲ್ಲಿ ಕಡಿಮೆ ಮಕ್ಕಳಿಗೆ ಕೊರೊನಾ ಸೋಂಕು ತಗುಲಿದೆ ಅಂತಿದ್ದವರಿಗೆ ಈ ರಿಪೋರ್ಟ್ ಶಾಕ್ ನೀಡಿದೆ. ಆಂಟಿ ಬಾಡಿ ಸರ್ವೆಗೆ ಒಟ್ಟು 100 ಮಕ್ಕಳನ್ನ ಒಳಪಡಿಸಲಾಗಿತ್ತು. 100 ಮಕ್ಕಳಲ್ಲಿ 60 ಮಕ್ಕಳಿಗೆ ಆಂಟಿ ಬಾಡಿ ಪಾಸಿಟಿವ್ ಬಂದಿದೆ. ಅಂದರೆ ಮಕ್ಕಳಿಗೆ ಕೊರೊನಾ ಬಂದು ಹೋಗಿರುವುದು ತಿಳಿದುಬಂದಿದೆ. ಹೀಗಾಗಿ ಮನೆಯಲ್ಲಿ ಪೋಷಕರು ಮತ್ತು ಮಕ್ಕಳು ಕೊರೊನಾದಿಂದ ದೂರವಿರಲು ಕೆಲ ಮಾರ್ಗಸೂಚಿಗಳನ್ನು ಪಾಲಿಸಬೇಕಿದೆ ಎಂದು ವೈದ್ಯರು ಹೇಳುತ್ತಿದ್ದಾರೆ.

ಇದನ್ನೂ ಓದಿ

Big News: ಸಾರ್ವಜನಿಕ ದೇಗುಲ ತೆರವು ತಡೆಯಲು ಪ್ರತ್ಯೇಕ ವಿಧೇಯಕ ಮಂಡನೆಗೆ ಸಂಪುಟ ಸಭೆ ನಿರ್ಧಾರ

ಮೂಲ ಸೌಕರ್ಯಗಳಿಂದ ವಂಚಿತವಾದ 19 ಕುಟುಂಬಗಳು; ಕನಿಷ್ಠ ವಾಹನ ವ್ಯವಸ್ಥೆಯಾದರೂ ಕಲ್ಪಿಸುವಂತೆ ಸ್ಥಳೀಯರಿಂದ ಮನವಿ

(Coronavirus infection in children is clear in the Anti Body survey at Karnataka)