ಕೃಷಿಕರಿಗೆ ತರಬೇತಿ ಕಾರ್ಯಾಗಾರ: ಅಡಿಕೆಯ ಸುಧಾರಿತ ಬೇಸಾಯ ಕ್ರಮಗಳ ಕುರಿತು ಮಾಹಿತಿ ಪಡೆಯಲು ಹೀಗೆ ಮಾಡಿ
ನಿಮ್ಮದೇ ಸ್ಮಾರ್ಟ್ಫೋನ್ನಲ್ಲಿ ಅತ್ಯುತ್ತಮ ಅಂತರ್ಜಾಲ ಸಂಪರ್ಕದೊಂದಿಗೆ ನೀವು ಈ ತರಬೇತಿಯಲ್ಲಿ ಭಾಗವಹಿಸಬಹುದು.
ರೈತ ಸಮುದಾಯದ ಕಷ್ಟ ಸುಖಗಳಲ್ಲಿ ಭಾಗಿಯಾಗಬೇಕಾದದ್ದು ಇಡೀ ಸಮಾಜದ ಜವಾಬ್ದಾರಿ. ಹೀಗಾಗಿ . ಕೃಷಿ ಸಮುದಾಯಕ್ಕೆ ನೆರವು ನೀಡಲು ಕಾಲಕಾಲಕ್ಕೆ ವಿವಿಧ ಸೆಮಿನಾರು, ಸಲಹಾ ಕಾರ್ಯಕ್ರಮಗಳನ್ನು ಕೃಷಿ ಸಂಬಂಧಿತ ಸಂಸ್ಥೆಗಳು ನೀಡುತ್ತಲೇ ಇರುತ್ತವೆ. ಇಂದು (ಸೆಪ್ಟೆಂಬರ್ 20) ಇಂತಹುದೇ ಒಂದು ಉಪಯುಕ್ತ ತರಬೇತಿ ಕಾರ್ಯಕ್ರಮ ನಡೆಯುತ್ತಿದೆ. ಈಕಾರ್ಯಕ್ರಮದಲ್ಲಿ ಭಾಗವಹಿಸಲು ನೀವು ಎಲ್ಲಿಗೂ ಪ್ರಯಾಣ ಬೆಳೆಸಬೇಕಿಲ್ಲ. ಗೂಗಲ್ ಮೀಟ್ನ ಮೂಲಕವೇ ತರಬೆತಿ ಪಡೆಯಬಹುದು.
ಅಡಿಕೆ ಬೆಳೆಯಲ್ಲಿ ಸುಧಾರಿತ ಮತ್ತು ಸಂಕರಣ ತಳಿಗಳು ಮತ್ತು ಸುಧಾರಿತ ಬೇಸಾಯ ಕ್ರಮಗಳು ಎಂಬ ವಿಷಯದ ಬಗ್ಗೆ ಪರಿಣಿತರು ತರಬೇತಿ ನೀಡಲಿದ್ದಾರೆ. ನಿಮ್ಮದೇ ಸ್ಮಾರ್ಟ್ಫೋನ್ನಲ್ಲಿ ಅತ್ಯುತ್ತಮ ಅಂತರ್ಜಾಲ ಸಂಪರ್ಕದೊಂದಿಗೆ ನೀವು ಈ ತರಬೇತಿಯಲ್ಲಿ ಭಾಗವಹಿಸಬಹುದು.
ತರಬೇತಿಯ ದಿನಾಂಕ ಮತ್ತು ಸಮಯ: ದಿನಾಂಕ: 20-09-21, ಸೋಮವಾರ, ಸಮಯ: ಬೆಳಿಗ್ಗೆ 11.30 ರಿಂದ 12.30 ರವರೆಗೆ ವಿಷಯ: ಅಡಿಕೆ ಬೆಳೆಯಲ್ಲಿ ಸುಧಾರಿತ ಮತ್ತು ಸಂಕರಣ ತಳಿಗಳು ಮತ್ತು ಸುಧಾರಿತ ಬೇಸಾಯ ಕ್ರಮಗಳು ಹೇಗೆ ಭಾಗವಹಿಸಬಹುದು: ಗೂಗಲ್ ಮೀಟ್ ಆ್ಯಪ್ ಬಳಸಿ ಅಂತರ್ಜಾಲ ತರಬೇತಿಯಲ್ಲಿ ಈ ಕೆಳಗಿನ ಲಿಂಕ್ ಮುಖಾಂತರ ಪಾಲ್ಗೊಳ್ಳಬಹುದು. ಲಿಂಕ್: http/:meet.google.com/cxe-vsus-dnh ತರಬೇತಿ ನೀಡುವವರು ಯಾರು? : ಡಾ. ಎನ್. ಆರ್. ನಾಗರಾಜ ವಿಜ್ಞಾನಿಗಳು (ಸಸ್ಯ ತಳಿ ಅಭಿವೃದ್ಧಿ ವಿಭಾಗ) ಭಾ.ಕೃ.ಸಂ.ಪ.-ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ, ಪ್ರಾಂತೀಯ ಕ್ಷೇತ್ರ, ವಿಟ್ಲ,ದ.ಕ.ಜಿಲ್ಲೆ. ತರಬೇತಿಯ ಆಯೋಜಕರು: ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಬೆಳ್ತಂಗಡಿ, ದಕ್ಷಿಣ ಕನ್ನಡ ಜಿಲ್ಲೆ
ಇದನ್ನೂ ಓದಿ:
Naga Panchami 2021: ಕೃಷಿಕ ಮಹಿಳೆಯರ ಹಬ್ಬ ನಾಗರಪಂಚಮಿ, ಶ್ರಾವಣ ಮಾಸದಲ್ಲಿ ಆಚರಿಸುವ ನಾಗಪೂಜೆಯ ವಿಶೇಷವೇನು?
ಮೇಘದೂತ್ ಆ್ಯಪ್: ಸ್ಥಳೀಯ ಹವಾಮಾನ ಮೂನ್ಸೂಚನೆಯನ್ನು ಪ್ರಾದೇಶಿಕ ಭಾಷೆಯಲ್ಲಿ ರೈತರಿಗೆ ತಲುಪಿಸುವ ಪ್ರಯತ್ನ
(Arecanut farming Training Workshop in Google Meet here is the link)