ಡಿ. 30ರಂದು ಕಸ್ಟಮ್ಸ್ ಇಲಾಖೆಯಿಂದ ಹರಾಜು: ಅತ್ಯಂತ ಕಡಿಮೆ ಬೆಲೆಗೆ ಸಿಗಲಿವೆ ಈ ವಸ್ತುಗಳು
ವಶಪಡಿಸಿಕೊಂಡ ವಸ್ತುಗಳ ಆನ್‌ಲೈನ್ ಹರಾಜನ್ನು ಬೆಂಗಳೂರು ಕಸ್ಟಮ್ಸ್ ಇಲಾಖೆ ಡಿಸೆಂಬರ್ 30ರಂದು ಆಯೋಜಿಸಿದೆ. ಮೊಬೈಲ್, ಲ್ಯಾಪ್‌ಟಾಪ್, ಟಿವಿ ಸೇರಿದಂತೆ ವಿವಿಧ ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ವಸ್ತುಗಳು ಮಾರುಕಟ್ಟೆ ಬೆಲೆಗಿಂತ ಕಡಿಮೆ ದರದಲ್ಲಿ ಸಿಗಲಿದೆ. ಎಂಎಸ್‌ಟಿಸಿ (MSTC) ಇ-ಕಾಮರ್ಸ್ ಪೋರ್ಟಲ್ ಮೂಲಕ ನಾಗರಿಕರು ನೋಂದಾಯಿಸಿಕೊಂಡು ಈ ಹರಾಜಿನಲ್ಲಿ ಭಾಗವಹಿಸಬಹುದು ಎಂದು ಇಲಾಖೆ ತಿಳಿಸಿದೆ.

ಬೆಂಗಳೂರು, ಡಿಸೆಂಬರ್ 23: ಕೇಂದ್ರ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (CBIC) ಅಡಿಯಲ್ಲಿ ಕಾರ್ಯನಿರ್ವಹಿಸುವ ಬೆಂಗಳೂರು ಕಸ್ಟಮ್ಸ್ ಇಲಾಖೆ ವಶಪಡಿಸಿಕೊಂಡಿರುವ ದೇಶಕ್ಕೆ ಅಕ್ರಮವಾಗಿ ಸಾಗಾಟ ಮಾಡಿದ ವಸ್ತುಗಳ ಹರಾಜು ಪ್ರಕ್ರಿಯೆ ಡಿಸೆಂಬರ್ 30ರಂದು ನಡೆಯಲಿದೆ. ಎಕ್ಸ್ ಖಾತೆಯಲ್ಲಿ ಕಸ್ಟಮ್ಸ್ ಇಲಾಖೆ ನೀಡಿರುವ ಮಾಹಿತಿಯಂತೆ, ಈ ಹರಾಜಿನಲ್ಲಿ ಮೊಬೈಲ್ ಫೋನ್‌ಗಳು, ಕಂಪ್ಯೂಟರ್‌ಗಳು, ಐಪ್ಯಾಡ್‌ಗಳು ಹಾಗೂ ಟಿವಿಗಳಂತಹ ಉತ್ಪನ್ನಗಳು ಮಾರುಕಟ್ಟೆ ಬೆಲೆಗೆ ಹೋಲಿಸಿದರೆ ಬಹಳ ಕಡಿಮೆ ದರದಲ್ಲಿ ಲಭ್ಯವಾಗಲಿವೆ.
ವಸ್ತುಗಳ ಖರೀದಿ ಹೇಗೆ?
“Auction of Electronics Goods through MSTC” Bengaluru Customs(Airport) has initiated Aucton of total 227 Nos. of Electronics Goods (viz. phones, smart watches, i-pads and a TV), all MSTC registered buyers are invited to take part in the Auction scheduled on 30.12.2025.
— Bengaluru Customs (@blrcustoms) December 22, 2025
ವಿದೇಶಗಳಿಂದ ಖರೀದಿಸಿ ತಂದ ವಸ್ತುಗಳಿಗೆ ದಾಖಲೆಗಳನ್ನು ಪ್ರಯಾಣಿಕರು ಒದಗಿಸಲು ವಿಫಲವಾದಲ್ಲಿ, ಆ ವಸ್ತುಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಳ್ಳುತ್ತಾರೆ. ವಶಪಡಿಸಿಕೊಂಡ ವಸ್ತುಗಳನ್ನು ದಂಡ ಮತ್ತು ಶುಲ್ಕಗಳನ್ನು ಪಾವತಿಸುವ ಮೂಲಕ ನಿಗದಿತ ಅವಧಿಯಲ್ಲಿ ಮರಳಿ ಪಡೆಯಬಹುದು. ಆದರೆ, ಅವನ್ನು ಪಡೆಯಲು ಪ್ರಯಾಣಿಕರು ವಿಫಲವಾದಲ್ಲಿ ಆ ವಸ್ತುಗಳನ್ನು ಕಸ್ಟಮ್ಸ್ ಗೋದಾಮುಗಳಿಗೆ ಕಳುಹಿಸಲಾಗುತ್ತದೆ. ಗೋದಾಮುಗಳಲ್ಲಿ ಸಂಗ್ರಹವಾಗಿರುವ ವಸ್ತುಗಳನ್ನು ವಿಲೇವಾರಿ ಮಾಡಲು ಕಸ್ಟಮ್ಸ್ ಇಲಾಖೆ ನಿಯಮಿತವಾಗಿ ಹರಾಜುಗಳನ್ನು ನಡೆಸುತ್ತದೆ. ಇದೇ ರೀತಿಯಲ್ಲಿ, ಬೆಂಗಳೂರು ಕಸ್ಟಮ್ಸ್ ಕೂಡ ಈ ತಿಂಗಳ ಕೊನೆಯಲ್ಲಿ ಹರಾಜು ಆಯೋಜಿಸಲು ಮುಂದಾಗಿದೆ.
ಸರ್ಕಾರದ ಅಧಿಕೃತ ವೆಬ್‌ಸೈಟ್ ಎಂಎಸ್‌ಟಿಸಿ (ಮೆಟಲ್ ಸ್ಕ್ರ್ಯಾಪ್ ಟ್ರೇಡ್ ಕಾರ್ಪೊರೇಷನ್) ಇ-ಕಾಮರ್ಸ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ಆನ್‌ಲೈನ್ ಹರಾಜಿನಲ್ಲಿ ಭಾರತೀಯ ನಾಗರಿಕರು ಈ ವಸ್ತುಗಳನ್ನು ಖರೀದಿಸಬಹುದಾಗಿದೆ. ಎಲೆಕ್ಟ್ರಾನಿಕ್ಸ್ ವಸ್ತುಗಳಷ್ಟೇ ಅಲ್ಲದೆ, ವಾಹನಗಳು, ವಿದ್ಯುತ್ ಉಪಕರಣಗಳು, ಫರ್ನಿಚರ್ ಹಾಗೂ ಉಡುಪುಗಳು ಸಹ ಎಂಎಸ್‌ಟಿಸಿ ಪೋರ್ಟಲ್‌ನಲ್ಲಿ ಮಾರುಕಟ್ಟೆಯ ಬೆಲೆಗಿಂತ ಕಡಿಮೆ ದರದಲ್ಲಿ ದೊರೆಯಲಿವೆ.
ಇದನ್ನೂ ಓದಿ: ಕೈಕೊಟ್ಟ ಕೇಂದ್ರದ ವಾಹನ್-4, ಬೇರೆ ರಾಜ್ಯಗಳಿಗೆ ತೆರಳುವ ವಾಹನ ಮಾಲೀಕರು ಪರದಾಟ
ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸೋದು ಹೇಗೆ?
ಹಂತ 1: ಎಂಎಸ್‌ಟಿಸಿ ಇ-ಕಾಮರ್ಸ್ ವೆಬ್‌ಸೈಟ್‌ಗೆ ಭೇಟಿ ನೀಡಿ.
ಹಂತ 2: ಮಧ್ಯಭಾಗದಲ್ಲಿರುವ ನೀಲಿ ಬಣ್ಣದ ‘Search Auction’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
ಹಂತ 3: ‘Upcoming Auction’ ಆಯ್ಕೆ ಮಾಡಿ >> ‘Select: All’ ಆಯ್ಕೆ ಮಾಡಿ ಮತ್ತು ‘from’ ಹಾಗೂ ‘to’ ದಿನಾಂಕಗಳನ್ನು ನಮೂದಿಸಿ.
ಹಂತ 4: ನಂತರ ‘Filter by Office’ ಆಯ್ಕೆ ಮಾಡಿ >> State: ಕರ್ನಾಟಕ >> City: ‘BLR-MSTC Bangalore Office’ ಆಯ್ಕೆ ಮಾಡಿ >> Item Type (ಎಡಭಾಗ): ‘Electronics’ >> Computers / Phones / Tablet / Peripherals ಆಯ್ಕೆ ಮಾಡಿ ಮತ್ತು ‘Search’ ಮೇಲೆ ಕ್ಲಿಕ್ ಮಾಡಿ.
ಹಂತ 5: ಕ್ಯಾಪ್ಚಾ ನಮೂದಿಸಲು ಕೇಳಲಾಗುತ್ತದೆ. ನಂತರ ಮುಂದಿನ ಪುಟಕ್ಕೆ ಅನುಮತಿ ದೊರಕಿದ ಮೇಲೆ, ಕೆಳಗೆ ಸ್ಕ್ರೋಲ್ ಮಾಡಿ ‘mobile/tablet’ ವಿಭಾಗವನ್ನು ಹುಡುಕಿ. ಅಲ್ಲಿ MSTC/BLR/Additional Commissioner of Customs Air Cargo Complex Division/1/Bengaluru/25-26/50088 ಎಂಬ ಲಿಂಕ್ ಕಾಣುತ್ತದೆ. ಅದರಲ್ಲಿ ‘Click Here’ ಮೇಲೆ ಕ್ಲಿಕ್ ಮಾಡಿ.
ಹಂತ 6: ಬಳಿಕ ಹೊಸ ಬಳಕೆದಾರರಾಗಿ ನಿಮ್ಮ ನೋಂದಣಿ ಆಗುತ್ತದೆ. ‘New Registration’ ಟ್ಯಾಬ್ ಪಕ್ಕದಲ್ಲೇ ನೋಂದಣಿ ಕುರಿತು ವೀಡಿಯೋ ಮಾರ್ಗದರ್ಶಿಯೂ ಲಭ್ಯವಿರುತ್ತದೆ. ನೋಂದಣಿ ವೇಳೆ ‘Buyer’ ಆಗಿ ನೋಂದಾಯಿಸಲು ಇ-ಹರಾಜಿನ ಸಾಮಾನ್ಯ ನಿಯಮಗಳು ಮತ್ತು ಷರತ್ತುಗಳನ್ನು (GTC) ಅಂಗೀಕರಿಸಬೇಕು. ಮುಂದಿನ ಪುಟದಲ್ಲಿ ‘Buyer Specific Terms and Conditions’ (BSTC) ಅನ್ನು ಅಂಗೀಕರಿಸಿ ‘Agree’ ಮೇಲೆ ಕ್ಲಿಕ್ ಮಾಡಬೇಕು.
ಹಂತ 7: ನಂತರ ಖರೀದಿದಾರರ ನೋಂದಣಿ ಫಾರ್ಮ್ ತೆರೆಯುತ್ತದೆ. ಅಲ್ಲಿ ‘General Auction’ ಆಯ್ಕೆ ಮಾಡಿ ಮತ್ತು ‘Proceed’ ಬಟನ್ ಒತ್ತಿರಿ.
ಹಂತ 8: ನಿಮ್ಮ ಇಮೇಲ್ ಐಡಿ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ಕ್ಯಾಪ್ಚಾ ಭದ್ರತಾ ಪರಿಶೀಲನೆ ಪೂರ್ಣಗೊಳಿಸಿ. ನಿಮ್ಮ ಇಮೇಲ್ ಮತ್ತು ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ಮೊಬೈಲ್ OTP ಮತ್ತು ಇಮೇಲ್ OTP ನಮೂದಿಸಿದ ಬಳಿಕ ‘Submit’ ಮೇಲೆ ಕ್ಲಿಕ್ ಮಾಡಿ.
ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ನಲ್ಲಿ ಉದ್ಯೋಗವಕಾಶ; ಸಂಶೋಧನಾ ಸಹಾಯಕ ಹುದ್ದೆಗೆ ನೇಮಕಾತಿ
ಹಂತ 9: OTP ಪರಿಶೀಲನೆ ಯಶಸ್ವಿಯಾದ ನಂತರ, ಹೊಸ ‘Buyer Registration Form’ ವೆಬ್‌ಪೇಜ್ ತೆರೆಯುತ್ತದೆ. ಅಲ್ಲಿ ಖರೀದಿದಾರರ ಪ್ರಕಾರ (General Auction), ಸಂಸ್ಥೆಯ ಹೆಸರು (ಇದ್ದರೆ), ವಿಳಾಸ (ದೇಶ, ರಾಜ್ಯ, ನಗರ, ಪಿನ್‌ಕೋಡ್), ಇಮೇಲ್ ಐಡಿ, ಮೊಬೈಲ್ ಸಂಖ್ಯೆ, ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್ ಸೇರಿದಂತೆ ಎಲ್ಲಾ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಬೇಕು. ಜಿಎಸ್‌ಟಿ ನೋಂದಣಿ ಸಂಖ್ಯೆ ಇದ್ದಲ್ಲಿ ಅದನ್ನು ನಮೂದಿಸಬಹುದು. ಇದಲ್ಲದೆ, ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಮಾಣೀಕೃತ / ನಿರ್ಬಂಧಿತ ವಸ್ತುಗಳಿಗೆ ಸಂಬಂಧಿಸಿದ ಮಾಹಿತಿಯನ್ನೂ ಕೇಳಲಾಗುತ್ತದೆ. ಅನ್ವಯವಾಗಿದ್ದರೆ ಸೂಕ್ತ ಆಯ್ಕೆಯನ್ನು ಮಾಡಿ ಮುಂದಿನ ಹಂತಕ್ಕೆ ಸಾಗಬೇಕು. ಈ ಮೂಲಕ ನೋಂದಣಿ ಪೂರ್ಣಗೊಳ್ಳುತ್ತದೆ.
ಹಂತ 10: ನಂತರ ಮತ್ತೆ ನೋಂದಣಿ ಪೋರ್ಟಲ್‌ಗೆ ಹೋಗಿ ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್ ನಮೂದಿಸಿ ಲಾಗಿನ್ ಆಗಬೇಕು. ಅದಾದ ಬಳಿಕ ಇ-ಪಾವತಿ ಪೋರ್ಟಲ್‌ಗೆ ಕಳುಹಿಸಲಾಗುತ್ತದೆ. ಇಲ್ಲಿ NEFT ಅಥವಾ RTGS ಮೂಲಕ ಶುಲ್ಕ ಪಾವತಿಸಬೇಕು. ಪರದೆ ಮೇಲಿನ ಸೂಚನೆಗಳನ್ನು ಅನುಸರಿಸಿ ಬ್ಯಾಂಕ್ ವಿವರಗಳನ್ನು ಭರ್ತಿ ಮಾಡಿ. ಪಾವತಿ ಮುಗಿದ ನಂತರ ಆನ್‌ಲೈನ್ ಪಾವತಿ ಚಲನ್ ಪಡೆಯಬೇಕು.
ಪಾವತಿ ಯಶಸ್ವಿಯಾದ ಬಳಿಕ ಖರೀದಿದಾರರ ಖಾತೆ ಸಕ್ರಿಯಗೊಳ್ಳುತ್ತದೆ ಮತ್ತು ನೋಂದಾಯಿತ ಹರಾಜುದಾರರ ಪೇಜ್ಗೆ ಪ್ರವೇಶ ದೊರೆಯುತ್ತದೆ. ನಂತರ, ಹರಾಜು ನಡೆಯುವ ದಿನ ಎಂಎಸ್‌ಟಿಸಿ ಇ-ಕಾಮರ್ಸ್ ಪೋರ್ಟಲ್‌ಗೆ ಭೇಟಿ ನೀಡಿ, ಆನ್‌ಲೈನ್ ಮೂಲಕ ಬೇಕಾದ ವಸ್ತುಗಳನ್ನು ಖರೀದಿಸಬಹುದು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:43 pm, Tue, 23 December 25




