ಕಿಡ್ನಿ ದಾನಕ್ಕೆ ಮನವಿ ಮಾಡಿದ್ದ ವೈದ್ಯೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್
ಬೆಂಗಳೂರಿನ ವೈದ್ಯೆಯೊಬ್ಬರು ಯಾವುದೇ ಪ್ರತಿಫಲ ಬಯಸದೆ ಕಿಡ್ನಿ ದಾನ ಮಾಡಲು ಮುಂದಾಗಿದ್ದರು, ಆದರೆ ಆಸ್ಪತ್ರೆ ಅವಕಾಶ ನೀಡಿರಲಿಲ್ಲ. ಈ ಅಪರೂಪದ ಪ್ರಕರಣವನ್ನು ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ವೈದ್ಯೆಯ ಮನವಿಯನ್ನು ಪುರಸ್ಕರಿಸಿದೆ. ಅಂಗಾಂಗ ಕಸಿ ಸಮಿತಿಗೆ ಅರ್ಹ ರೋಗಿಗಳನ್ನು ಪರಿಶೀಲಿಸಿ, ವೈದ್ಯೆಯ ದಾನವನ್ನು ಸ್ವೀಕರಿಸಲು ಸೂಚಿಸಿದೆ.

ಬೆಂಗಳೂರು,ಡಿ.16: ವೈದ್ಯರೊಬ್ಬರು ಕಿಡ್ನಿ ದಾನ ಮಾಡಲು ಆಸ್ಪತ್ರೆಯೊಂದು ಅವಕಾಶ ನೀಡಿಲ್ಲ ಎಂದು ಹೈಕೋರ್ಟ್ ( Karnataka High Court) ಮೆಟ್ಟಿಲೇರಿದ್ದರು. ಇದೊಂದು ಅಪರೂಪ ಪ್ರಕರಣವಾಗಿದ್ದು, ಇದೀಗ ಕೋರ್ಟ್ ಅವರಿಗೆ ಕಿಡ್ನಿ ದಾನ ಮಾಡಲು ಅವಕಾಶ ನೀಡಿದೆ. ಈ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ವೈದ್ಯೆಯ ಮನವಿಯನ್ನು ಕರ್ನಾಟಕ ಹೈಕೋರ್ಟ್ ಪುರಸ್ಕರಿ, ದಾನಕ್ಕೆ ಅರ್ಹತೆಯನ್ನು ಪಡೆದಿದ್ದಾರೆ ಅವಕಾಶ ನೀಡಿ ಎಂದು ಹೇಳಿದೆ. ನ್ಯಾ.ಸೂರಜ್ ಗೋವಿಂದರಾಜ್ ಅವರ ಹೈಕೋರ್ಟ್ ಪೀಠ ಈ ಸೂಚನೆಯನ್ನು ನೀಡಿದೆ. ಆಸ್ಪತ್ರೆ ಕೆಲವು ಕಾರಣಗಳನ್ನು ನೀಡಿ, ಅವರಿಗೆ ಕಿಡ್ನಿ ದಾನ ಮಾಡಲು ಅವಕಾಶವನ್ನು ನೀಡಿರಲಿಲ್ಲ, ಇದೀಗ ವೈದ್ಯೆಯ ಮನವಿಗೆ ಅವಕಾಶ ನೀಡಿದೆ.
ಯಾವುದೇ ಪರಿಹಾರ ಬಯಸದೇ ಅಂದರೆ ತಾವು ಮಾಡಿದ ದಾನಕ್ಕೆ ಯಾವುದೇ ಪ್ರತಿಫಲ ಇಲ್ಲದೆ, ಉಚಿತವಾಗಿ ದಾನ ಮಾಡಲು ಮುಂದಾಗಿದ್ದರು. ತನ್ನ ಕಿಡ್ನಿಯನ್ನು ಯಾವುದೇ ರೀತಿಯಲ್ಲಿ ಹಣ ಪಡೆಯದೇ ಉಚಿತವಾಗಿ ದಾನ ಮಾಡುವೆ ಎಂಬ ಮನವಿಯನ್ನು ಅಂಗಾಗ ಕಸಿ ಸಮಿತಿ ಒಪ್ಪಿರಲಿಲ್ಲ. ಹೀಗಾಗಿ ವೈದ್ಯೆ ಹೈಕೋರ್ಟ್ ಮೊರೆ ಹೋಗಿದ್ದರು. 58 ವರ್ಷದ ಈ ವೈದ್ಯೆ ತನ್ನ ಕಿಡ್ನಿಗೆ ಸರಿಹೊಂದುವ ಮಣಿಪಾಲ್ ಆಸ್ಪತ್ರೆಯ ರೋಗಿಗೆ ದಾನ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ ಇದಕ್ಕೆ ಅಂಗಾಗ ಕಸಿ ಸಮಿತಿ ಒಪ್ಪಿಗೆ ನೀಡರಲಿಲ್ಲ.
ಇದನ್ನೂ ಓದಿ: “ನಮಗೆ ಹೊಸ ಸೇತುವೆ ಬೇಕು”: 30 ವರ್ಷಗಳಿಂದ ಮನವಿ, ಕ್ಯಾರೆ ಎನ್ನದ ಅಧಿಕಾರಿಗಳು
ಇದೀಗ ಹೈಕೋರ್ಟ್ ವೈದ್ಯೆ ಮನವಿ ಮಾಡಿದ ಅರ್ಜಿಯನ್ನು ವಿಚಾರಣೆ ನಡೆಸಿದೆ. ಈ ಬಗ್ಗೆ ಹೈಕೋರ್ಟ್ ಅಂಗಾಗ ಕಸಿ ಸಮಿತಿಗೆ ಒಂದು ಮಹತ್ವದ ಸೂಚನೆಯನ್ನು ನೀಡಿದೆ. ಕಿಡ್ನಿ ದಾನ ಪಡೆಯಲು ಅರ್ಹರಿದ್ದಾರೆಯೇ ಎಂದು ಮೊದಲು ಪರಿಶೀಲನೆ ನಡೆಸಿ ಎಂದು ಹೇಳಿದೆ. ಇದಕ್ಕೆ ಸಮಿತಿ ಅವರು ವೈದ್ಯೆ ಅರ್ಹತೆಯನ್ನು ಪಡೆದಿದ್ದಾರೆ. ಇದೀಗ ಕಿಡ್ನಿ ಕಸಿ ಮಾಡಲು ಐವರು ರೋಗಿಗಳಿದ್ದಾರೆಂದು ಹೇಳಿದೆ. ಸೂಕ್ತ ತಪಾಸಣೆ ನಡೆಸಿ ಕಿಡ್ನಿ ದಾನ ಪಡೆಯುವ ವ್ಯಕ್ತಿಯನ್ನು ಆಯ್ಕೆ ಮಾಡಿ. ಬಳಿಕ ವೈದ್ಯೆಯ ಅರ್ಜಿಯನ್ನು ಪರಿಗಣಿಸುವಂತೆ ಅಂಗಾಂಗ ಕಸಿ ಸಮಿತಿಗೆ ಹೈಕೋರ್ಟ್ ಸೂಚನೆಯನ್ನು ನೀಡಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



