
ಬೆಂಗಳೂರು, ಆ.31: ಸಿಲಿಕಾನ್ ಸಿಟಿ ಬೆಂಗಳೂರಿನ ಭವ್ಯ ಪರಂಪರೆ, ಆಡಳಿತ ಕೇಂದ್ರಗಳು, ಹಸಿರು ತಾಣಗಳು ಮತ್ತು ಕ್ರೀಡಾಂಗಣಗಳನ್ನು ಕಣ್ಣುಂಬಿಕೊಳ್ಳಲು ಬಯಸುವ ಪ್ರವಾಸಿಗರು ಹಾಗೂ ಸಾರ್ವಜನಿಕರಿಗಾಗಿ ‘ಬೆಂಗಳೂರು ಡಬಲ್ ಡೆಕ್ಕರ್ ಸಿಟಿ ಟೂರ್’ (Bengaluru Double Decker City Tour) ಶೈಲಿಯ ಪ್ರವಾಸ ಸೌಲಭ್ಯ ಲಭ್ಯವಿದೆ. ಮುಕ್ತ ಮೇಲ್ಚಾವಣಿ (Open-top) ಹೊಂದಿರುವ ಡಬಲ್ ಡೆಕ್ಕರ್ ಬಸ್‌ನ ಮೇಲಿನ ಡೆಕ್‌ನಲ್ಲಿ ಕುಳಿತು ಬೆಂಗಳೂರು ನಗರದ ವೈಭವವನ್ನು ಕಣ್ಣುಂಬಿಕೊಳ್ಳಬಹುದಾಗಿದೆ.
ಸಾಂಸ್ಕೃತಿಕ ಹಾಗೂ ಪಾರಂಪರಿಕ ತಾಣಗಳಾದ ರವೀಂದ್ರ ಕಲಾಕ್ಷೇತ್ರ, ಟೌನ್ ಹಾಲ್, ಸರ್ಕಾರಿ ವಸ್ತುಸಂಗ್ರಹಾಲಯ (Government Museum) ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಸ್ತುಸಂಗ್ರಹಾಲಯಗಳನ್ನು ನೋಡಬಹುದು. ಹಾಗೂ ಆಡಳಿತಾತ್ಮಕ ಮತ್ತು ಐತಿಹಾಸಿಕ ಕೇಂದ್ರಗಳಾದ ಬಿಬಿಎಂಪಿ ಮಹಾನಗರ ಪಾಲಿಕೆ ಕಚೇರಿ, ಕರ್ನಾಟಕ ಹೈಕೋರ್ಟ್ (ಕೆಂಪು ಕಟ್ಟಡ), ವಿಧಾನ್ ಸೌಧ, ವಿಕಾಸ ಸೌಧ ಹಾಗೂ ಎಂ.ಎಸ್. ಬಿಲ್ಡಿಂಗ್ಗಳನ್ನು ನೋಡಬಹುದು.
ಪ್ರಕೃತಿ ಮತ್ತು ಹಸಿರು ತಾಣಗಳಾದ ಕಬ್ಬನ್ ಪಾರ್ಕ್, ಕ್ವೀನ್ಸ್ ರಸ್ತೆ ಮತ್ತು ಕಬ್ಬನ್ ರಸ್ತೆಯ ಹಸಿರು ಸೌಂದರ್ಯವನ್ನು ನೋಡಬಹುದು. ಆಧುನಿಕ ಹಾಗೂ ಕ್ರೀಡಾ ಸಂಕೀರ್ಣ ಕಂಟೀರವ ಕ್ರೀಡಾಂಗಣ, ಎಂ. ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣ ಹಾಗೂ ಯುಬಿ ಸಿಟಿಗೂ ಭೇಟಿ ನೋಡಬಹುದು.
ಇದನ್ನೂ ಓದಿ: ಸೆಪ್ಟೆಂಬರ್ ತಿಂಗಳಿನಲ್ಲಿ ಆಚರಿಸಲಾಗುವ ರಾಷ್ಟ್ರೀಯ, ಅಂತಾರಾಷ್ಟ್ರೀಯ ದಿನಾಚರಣೆಗಳಿವು
ರವೇಂದ್ರ ಕಲಾಕ್ಷೇತ್ರದಿಂದ ಶುರುವಾಗಿ ಟೌನ್ ಹಾಲ್ ಅಲ್ಲಿಂದ ಕಾರ್ಪೊರೇಷನ್, ನಂತರ ಹಡ್ಸನ್ ವೃತ್ತ, ಕಸ್ತೂರಿಬಾ ರಸ್ತೆ , ಕಂಟೀರವ ಕ್ರೀಡಾಂಗಣ, ವಿಠಲ್ ಮಲ್ಯ ರಸ್ತೆ, ಯುಬಿ ಸಿಟಿ (UB City), ಸರ್ಕಾರಿ ವಸ್ತುಸಂಗ್ರಹಾಲಯ, ವಿಶ್ವೇಶ್ವರಯ್ಯ ಮ್ಯೂಸಿಯಂ, ಅನಿಲ್ ಕುಂಬ್ಳೆ ವೃತ್ತ, ಕಬ್ಬನ್ ಪಾರ್ಕ್, ಕ್ವೀನ್ಸ್ ರಸ್ತೆ, ಚಿನ್ನಸ್ವಾಮಿ ಕ್ರೀಡಾಂಗಣ, ಕಬ್ಬನ್ ರಸ್ತೆ, ಮಿನ್ಸ್ಕ್ ಸ್ಕ್ವೇರ್, ಪ್ರಧಾನ ಅಂಚೆ ಕಚೇರಿ (GPO), ಯುಟಿಲಿಟಿ ಬಿಲ್ಡಿಂಗ್, ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ, ಬಾರ್ ಕೌನ್ಸಿಲ್, ಹೈಕೋರ್ಟ್, ವಿಧಾನ್ ಸೌಧ, ವಿಕಾಸ ಸೌಧ, ಎಂ.ಎಸ್. ಬಿಲ್ಡಿಂಗ್, ಕೆ.ಆರ್. ವೃತ್ತ , ನೃಪತುಂಗ ರಸ್ತೆ, ಅಲ್ಲಿಂದ ಮರಳಿ ರವೀಂದ್ರ ಕಲಾಕ್ಷೇತ್ರ.
ಇನ್ನು ಈ ಪ್ರವಾಸದಲ್ಲಿ ಮಾರ್ಗದರ್ಶನ ಸಹಿತ ನಗರ ವೀಕ್ಷಣೆ ಮಾಡಬಹುದು. ವೃತ್ತಾಕಾರದ ಮಾರ್ಗಗಳನ್ನು ಕೂಡ ಇಲ್ಲಿ ಆಯ್ಕೆ ಮಾಡಿಕೊಳ್ಳಬಹುದು. ಹಗಲು ಮತ್ತು ರಾತ್ರಿ ವೇಳೆಯ ಪ್ರವಾಸಗಳನ್ನು ಕೂಡ ಮಾಡಬಹುದು. ಉನ್ನತ ನೋಟದ (Panoramic views) ಅನುಭವಕ್ಕಾಗಿ ಮೇಲಿನ ಡೆಕ್‌ನಲ್ಲಿ ಕುಳಿತುಕೊಳ್ಳಿ ಹಾಗೂ ವಿಧಾನ್ ಸೌಧ, ಕಬ್ಬನ್ ಪಾರ್ಕ್, ಯುಬಿ ಸಿಟಿ ಬಳಿ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳಿ ಎಂಬ ಸಲಹೆಯನ್ನು ಕೂಡ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನೀಡಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ