AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಐಟಿ ಕಂಪನಿಗೆ 87 ಕೋಟಿ ರೂ. ವಂಚನೆ! ಮಾಜಿ ಉದ್ಯೋಗಿಯಿಂದ ಸೋರ್ಸ್ ಕೋಡ್ ಕಳವು

ಬೆಂಗಳೂರಿನ ಐಟಿ ಕಂಪನಿಯ ಮಾಜಿ ಉದ್ಯೋಗಿಯೊಬ್ಬರು ಸುಮಾರು 87 ಕೋಟಿ ರೂ. ಮೌಲ್ಯದ ಸಾಫ್ಟ್‌ವೇರ್ ಸೋರ್ಸ್ ಕೋಡ್ ಕದ್ದ ಆರೋಪಕ್ಕೆ ಗುರಿಯಾಗಿದ್ದಾರೆ. ಕಂಪನಿಯ ಆಂತರಿಕ ತನಿಖೆಯ ನಂತರ ಈ ಕೃತ್ಯ ಬೆಳಕಿಗೆ ಬಂದಿದ್ದು, ವೈಟ್‌ಫೀಲ್ಡ್ ಪೊಲೀಸರು FIR ದಾಖಲಿಸಿದ್ದಾರೆ. ಈ ಡೇಟಾ ಕಳ್ಳತನದಿಂದ ಕಂಪನಿಗೆ ಭಾರೀ ಆರ್ಥಿಕ ನಷ್ಟ ಹಾಗೂ ಬೌದ್ಧಿಕ ಸ್ವತ್ತಿಗೆ ಗಂಭೀರ ಹಾನಿಯಾಗಿದೆ ಎಂದು ಆರೋಪಿಸಲಾಗಿದೆ.

ಬೆಂಗಳೂರು ಐಟಿ ಕಂಪನಿಗೆ 87 ಕೋಟಿ ರೂ. ವಂಚನೆ! ಮಾಜಿ ಉದ್ಯೋಗಿಯಿಂದ ಸೋರ್ಸ್ ಕೋಡ್ ಕಳವು
ಬೆಂಗಳೂರು ಐಟಿ ಕಂಪನಿಗೆ 87 ಕೋಟಿ ರೂ. ಶಾಕ್!
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on:Jan 28, 2026 | 1:11 PM

Share

ಬೆಂಗಳೂರು, ಜನವರಿ 28: ನಗರದ ಐಟಿ ಕಂಪನಿಯೊಂದರ (Bengaluru) ಉದ್ಯೋಗಿಯೊಬ್ಬರು ಸುಮಾರು 87 ಕೋಟಿ ರೂ. ಮೌಲ್ಯದ ಕಂಪನಿಯ ಡಾಟಾವನ್ನು ಕಳವು  ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ. ಕಂಪನಿಯ ಸಾಫ್ಟ್‌ವೇರ್ ಸೋರ್ಸ್ ಕೋಡ್ ಅನ್ನು ಅಕ್ರಮವಾಗಿ ಕದ್ದ ಆರೋಪದಡಿ ಉದ್ಯೋಗಿ ವಿರುದ್ಧ ಮಂಗಳವಾರ FIR ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವೈಯಕ್ತಿಕ ಇಮೇಲ್ ಮೂಲಕ ಸೋರ್ಸ್ ಕೋಡ್ ಲೀಕ್

ಆಶುತೋಷ್ ನಿಗಮ್ 2020 ಫೆಬ್ರವರಿ 1ರಿಂದ ಅಮಾಡಿಯಸ್ ಸಾಫ್ಟ್‌ವೇರ್ ಲ್ಯಾಬ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನಲ್ಲಿ ಸೀನಿಯರ್ ಮ್ಯಾನೇಜರ್ ರಿಸರ್ಚ್ ಸೈಂಟಿಸ್ಟ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಎಫ್‌ಐಆರ್ ಪ್ರಕಾರ, 2025ರ ಅಕ್ಟೋಬರ್ 11ರಂದು ಕಂಪನಿಯ ಅನುಮತಿ ಇಲ್ಲದೆ, ತಮ್ಮ ವೈಯಕ್ತಿಕ ಇಮೇಲ್ ಖಾತೆಯ ಮೂಲಕ ಕಂಪನಿಗೆ ಸೇರಿದ ಸಾಫ್ಟ್‌ವೇರ್ ಸೋರ್ಸ್ ಕೋಡ್ ಹಾಗೂ ಇತರೆ ಅತ್ಯಂತ ಗೌಪ್ಯ ಮಾಹಿತಿಗಳನ್ನು ಅಕ್ರಮವಾಗಿ ವರ್ಗಾಯಿಸಿದ್ದಾರೆ ಎನ್ನಲಾಗಿದೆ.

ಕಂಪನಿಯ ಆಂತರಿಕ ತನಿಖೆ ವೇಳೆ ಸಂಗ್ರಹಿಸಿದ ದಾಖಲೆಗಳು ಮತ್ತು ವರದಿಗಳ ಆಧಾರದ ಮೇಲೆ ಆರೋಪಿಯನ್ನು ವಿಚಾರಣೆ ನಡೆಸಿದಾಗ, ನಿಗಮ್ ಸೋರ್ಸ್ ಕೋಡ್ ಎಕ್ಸ್‌ಫಿಲ್ಟ್ರೇಷನ್ ಮಾಡಿದುದನ್ನು ಒಪ್ಪಿಕೊಂಡಿದ್ದು, ಅದರ ವಿಡಿಯೋ ದಾಖಲೆ ಕಂಪನಿಯ ಬಳಿ ಇದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಈ ಘಟನೆಯ ನಂತರ ಕಳೆದ ಡಿಸೆಂಬರ್ 3ರಂದು ಉದ್ಯೋಗಿಯನ್ನು ಕಂಪನಿಯಿಂದ ವಜಾಗೊಳಿಸಲಾಗಿದೆ. ಕಂಪನಿಯ ಪ್ರಕಾರ, ಸಾಫ್ಟ್‌ವೇರ್ ಹಾಗೂ ಅದರ ಸೋರ್ಸ್ ಕೋಡ್‌ನ ಒಟ್ಟು ಮೌಲ್ಯವು ಸುಮಾರು 8 ಮಿಲಿಯನ್ ಯೂರೋಗಳಾಗಿದೆ (87,98,48,000 ರೂ.). ಈ ಅಕ್ರಮ ಕೃತ್ಯದಿಂದ ಕಂಪನಿಯ ವ್ಯಾಪಾರದಲ್ಲಿ ಭಾರೀ ನಷ್ಟವಾಗಿದ್ದು, ಬೌದ್ಧಿಕ ಸ್ವತ್ತು ಹಕ್ಕುಗಳಿಗೆ ಗಂಭೀರ ಹಾನಿ ಉಂಟಾಗಿದೆ ಎಂದು ಕಂಪನಿಯು ಆರೋಪಿಸಿದೆ. ಸಂಸ್ಥೆಯ ಪ್ರತಿನಿಧಿಯ ದೂರು ಆಧರಿಸಿ ಜನವರಿ 23ರಂದು ವೈಟ್‌ಫೀಲ್ಡ್ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆಯ ಸಂಬಂಧಿತ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:16 pm, Wed, 28 January 26