ಬೆಂಗಳೂರು: ಬಿಹಾರದ ಯುವತಿಯ ಅಪಹರಿಸಿ ಅತ್ಯಾಚಾರ, ಇಬ್ಬರ ಬಂಧನ

ಬೆಂಗಳೂರಿನಲ್ಲಿ ಮತ್ತೆ ಕಾಮುಕರು ಅಟ್ಟಹಾಸ ಮೆರೆದಿದ್ದಾರೆ. ನಗರದ ಕೆಆರ್​ ಪುರಂ ರೈಲ್ವೆ ನಿಲ್ದಾಣದ ಕಡೆಯಿಂದ ಬೈಕ್​ನಲ್ಲಿ ತೆರಳುತ್ತಿದ್ದ ಅಣ್ಣ ತಂಗಿಯನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು, ಅಣ್ಣನ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಯುವತಿಯನ್ನು ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಘಟನೆ ಸಂಬಂಧ ಆರೋಪಿಗಳ ಬಂಧನವಾಗಿದೆ. ಅತ್ಯಾಚಾರಕ್ಕೊಳಗಾದ ಯುವತಿ ಬಿಹಾರ ಮೂಲದವರು ಎಂಬುದು ಗೊತ್ತಾಗಿದೆ.

ಬೆಂಗಳೂರು: ಬಿಹಾರದ ಯುವತಿಯ ಅಪಹರಿಸಿ ಅತ್ಯಾಚಾರ, ಇಬ್ಬರ ಬಂಧನ
ಸಾಂದರ್ಭಿಕ ಚಿತ್ರ ಮತ್ತು ಬಲ ಚಿತ್ರದಲ್ಲಿ ಎಫ್​ಐಆರ್ ಪ್ರತಿ
Edited By:

Updated on: Apr 03, 2025 | 9:13 AM

ಬೆಂಗಳೂರು, ಏಪ್ರಿಲ್ 3: ಬೆಂಗಳೂರು ಮತ್ತು ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ (Crimes in Karnataka) ಎಂಬ ಪ್ರತಿಪಕ್ಷಗಳ ಆರೋಪದ ನಡುವೆಯೇ ರಾಜ್ಯ ರಾಜಧಾನಿಯಲ್ಲಿ (Bengaluru) ಮತ್ತೊಂದು ಅತ್ಯಾಚಾರ ನಡೆದಿದೆ. ಬುಧವಾರ ಮಧ್ಯರಾತ್ರಿ ಕೆಆರ್​ ಪುರಂ ರೈಲ್ವೆ ಸ್ಟೇಷನ್​ನಿಂದ ಅಣ್ಣನೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ಬಿಹಾರದ (Bihar) ಯುವತಿಯನ್ನು ಅಪಹರಿಸಿದ ದುಷ್ಕರ್ಮಿಗಳು ಅತ್ಯಾಚಾರ ಎಸಗಿದ್ದಾರೆ. ಯುವತಿಯ ಅಣ್ಣನ ಮೇಲೂ ಹಲ್ಲೆ ನಡೆದಿದೆ. ಘಟನೆ ಸಂಬಂಧ ಮಾದೇವಪುರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಕೆಆರ್​ ಪುರಂ ಬಳಿ ದುಷ್ಕೃತ್ಯ

ಪೊಲೀಸ್ ಮೂಲಗಳ ಪ್ರಕಾರ, ಬಿಹಾರ ಮೂಲದ ಯುವತಿ ಕೇರಳದ ಎರ್ನಾಕುಲಂನಿಂದ ಬೆಂಗಳೂರಿನ ಕೆ.ಆರ್.ಪುರಂ ರೈಲ್ವೆ ನಿಲ್ದಾಣಕ್ಕೆ ಬಂದಿದ್ದಳು. ಇದಕ್ಕೂ ಮುನ್ನ, ತನ್ನ ದೊಡ್ಡಮ್ಮನ ಮಗನಿಗೆ ಕರೆ ಮಾಡಿ, ಬೆಂಗಳೂರಿಗೆ ಬರುತ್ತಿದ್ದೇನೆ ಎಂದು ಮಾಹಿತಿ ನೀಡಿದ್ದಳು. ಅಣ್ಣನ ಸೂಚನೆಯಂತೆ ಕೆ.ಆರ್.ಪುರಂ ರೈಲ್ವೆ ನಿಲ್ದಾಣದಲ್ಲಿ ಇಳಿದಿದ್ದಳು. ಬಳಿಕ, ಊಟಕ್ಕಾಗಿ ಮಹದೇವಪುರ ಕಡೆಗೆ ತನ್ನ ಅಣ್ಣನೊಂದಿಗೆ ತೆರಳುತ್ತಿದ್ದಾಗ ಇಬ್ಬರು ಅಪರಿಚಿತರು ಬೈಕ್​​ ಅಡ್ಡಗಟ್ಟಿದ್ದಾರೆ. ಅಪರಿಚಿತರು ಯುವತಿಯ ಅಣ್ಣನ ಮೇಲೆ ಹಲ್ಲೆ ನಡೆಸಿ, ಯುವತಿಯನ್ನು ಅಪಹರಿಸಿದ್ದಾರೆ. ನಂತರ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಎಳೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ.

ಯುವತಿಯ ಕಿರುಚಾಟ ಕೇಳಿ ಧಾವಿಸಿದ್ದ ಸ್ಥಳೀಯರು

ದುಷ್ಕೃತ್ಯದ ವೇಳೆ ಯುವತಿಯ ಕಿರುಚಾಟ ಕೇಳಿದ ಸ್ಥಳೀಯರು ಕೂಡಲೇ ಸ್ಥಳಕ್ಕೆ ಧಾವಿಸಿದ್ದು, ಒಬ್ಬ ಆರೋಪಿಯನ್ನು ಹಿಡಿದು ಪೋಲೀಸರಿಗೆ ಒಪ್ಪಿಸಿದ್ದಾರೆ. ಮಹದೇವಪುರ ಪೊಲೀಸರು ಘಟನೆ ಸಂಬಂಧ ದೂರು ದಾಖಲಿಸಿಕೊಂಡಿದ್ದು, ಆಶಿಫ್ ಎಂಬಾತ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ
ಕೊಲೆ ಆರೋಪದಲ್ಲಿ ಜೈಲು ಸೇರಿದ್ದ ಪತಿ: 5 ವರ್ಷ ಬಳಿಕ ಲವರ್ ಜತೆ ಸಿಕ್ಕ ಪತ್ನಿ
ಪತ್ನಿ ಕೊಲೆ ಮಾಡಿ ಸೂಟ್​ಕೇಸ್​ನಲ್ಲಿ ತುಂಬಿದ್ದ ಪತಿ: ಹತ್ಯೆಯ ಕಾರಣ ಬಹಿರಂಗ!
ಒಂದು ಕಿಸ್​ಗೆ 50 ಸಾವಿರ! ಲಕ್ಷ ರೂ. ಸುಲಿಗೆ: ಟೀಚರ್ ಹಾಗೂ ಗ್ಯಾಂಗ್ ಬಂಧನ
ಪತ್ನಿ ಕೊಂದು ಟ್ರ್ಯಾಲಿ ಬ್ಯಾಗ್‌ಗೆ ತುಂಬಿದ್ದ ಗಂಡ: 14 ದಿನ ನ್ಯಾಯಾಂಗ ಬಂಧನ

ಇದನ್ನೂ ಓದಿ: ಪತ್ನಿ ಕೊಲೆ ಮಾಡಿ ಸೂಟ್​ಕೇಸ್​ನಲ್ಲಿ ತುಂಬಿದ್ದ ಕೇಸ್: ಕೊಲೆಗೆ ಕಾರಣ ಬಿಚ್ಚಿಟ್ಟ ಪತಿ​

ಘಟನೆ ಸಂಬಂಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ, ಮತ್ತು ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.  ಈ ಘಟನೆಯು ಬೆಂಗಳೂರು ನಗರದಲ್ಲಿ ಮಹಿಳಾ ಸುರಕ್ಷತೆಯ ಬಗ್ಗೆ ಮತ್ತೆ ಚರ್ಚೆ ಹುಟ್ಟುಹಾಕುವಂತೆ ಮಾಡಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:10 am, Thu, 3 April 25