AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತ್ನಿ ಕೊಲೆ ಮಾಡಿ ಸೂಟ್​ಕೇಸ್​ನಲ್ಲಿ ತುಂಬಿದ್ದ ಕೇಸ್: ಕೊಲೆಗೆ ಕಾರಣ ಬಿಚ್ಚಿಟ್ಟ ಪತಿ​

ಬೆಂಗಳೂರಿನ ಹುಳಿಮಾವು ಸಮೀಪದಲ್ಲಿ ನಡೆದ ಗೌರಿ ಹತ್ಯೆ ಪ್ರಕರಣ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಪ್ರಕರಣದ ತನಿಖೆಯನ್ನು ಬೆಂಗಳೂರು ಪೊಲೀಸರು ನಡೆಸುತ್ತಿದ್ದಾರೆ. ಪತ್ನಿ ಗೌರಿಯನ್ನು ಕೊಲೆ ಮಾಡಿರುವ ಪತಿ, ಆರೋಪಿ ರಾಕೇಶ್​ನನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಪತ್ನಿ ಗೌರಿಯನ್ನು ಕೊಲೆ ಮಾಡಲು ಕಾರಣವೇನು ಎಂದು ಪತಿ, ಆರೋಪಿ ರಾಕೇಶ್​ ಬಾಯಿಬಿಟ್ಟಿದ್ದಾನೆ. ಇನ್ನು ಗೌರಿ ಮತ್ತು ರಾಕೇಶ್ ಪ್ರೀತಿಸಿ ಮದುವೆಯಾಗಿದ್ದರು.

ಪತ್ನಿ ಕೊಲೆ ಮಾಡಿ ಸೂಟ್​ಕೇಸ್​ನಲ್ಲಿ ತುಂಬಿದ್ದ ಕೇಸ್: ಕೊಲೆಗೆ ಕಾರಣ ಬಿಚ್ಚಿಟ್ಟ ಪತಿ​
ಕೊಲೆಯಾದ ಗೌರಿ, ಆರೋಪಿ ರಾಕೇಶ್​
ಪ್ರಜ್ವಲ್​ ಕುಮಾರ್ ಎನ್​ ವೈ
| Updated By: ವಿವೇಕ ಬಿರಾದಾರ|

Updated on: Apr 02, 2025 | 4:05 PM

Share

ಬೆಂಗಳೂರು, ಏಪ್ರಿಲ್​ 02: ಬೆಂಗಳೂರಿನ (Bengaluru) ಹುಳಿಮಾವು ಸಮೀಪದ ದೊಡ್ಡಕಮ್ಮನಹಳ್ಳಿಯ ಗೌರಿ (Gowri) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ರಾಕೇಶ್​ನನ್ನು​ ಆರು ದಿನಗಳ ಕಾಲ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಪತ್ನಿ ಗೌರಿಯನ್ನು ಕೊಲೆ ಮಾಡಿ, ಶವವನ್ನು ಸೂಟ್​ಕೇಸ್​ನಲ್ಲಿ ತುಂಬಿ ಪರಾರಿಯಾಗಲು ಯತ್ನಿಸಿದ್ದ ಪತಿ ರಾಕೇಶ್​ನನ್ನು ಬೆಂಗಳೂರು ಪೊಲೀಸರು ಪುಣೆಯಲ್ಲಿ ಬಂಧಿಸಿ ಕರೆತಂದಿದ್ದಾರೆ. ಆರೋಪಿ ರಾಕೇಶ್​ನನ್ನು 9ನೇ ಎಸಿಜೆಎಂ ನ್ಯಾಯಾಲಯಕ್ಕೆ ಹಾಜರುಪಡಿಸಿ ಆರು ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ.

ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಮುನ್ನ ಪ್ರಾಥಮಿಕ ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಆರೋಪಿ ರಾಕೇಶ್​ ಹಲವು ವಿಚಾರಾಗಳನ್ನು ಪೊಲೀಸರ ಮುಂದೆ ಬಾಯಿಟ್ಟಿದ್ದಾನೆ. “ ಗೌರಿ ನಡವಳಿಕೆಯಿಂದ ಬೇಸತ್ತು ಕೊಲೆ ಮಾಡಿದ್ದಾಗಿ” ಹೇಳಿದ್ದಾನೆ. ಇಷ್ಟೇ ಅಲ್ಲದೇ, ಆರೋಪಿ ರಾಕೇಶ್​ ಇನ್ನೂ ಹಲವು ವಿಚಾರಗಳನ್ನು ಪೊಲೀಸರ ಮುಂದೆ ಹೇಳಿದ್ದಾನೆ.

ಕುಟುಂಬದ ಒಳಗೆ ದಬ್ಬಾಳಿಕೆ ಮಾಡುತ್ತಿದ್ದಳು ಗೌರಿ

“ಗೌರಿ ನನ್ನ ಕುಟುಂಬದ ಜೊತೆಗೆ ಹೊಂದಾಣಿಕೆ ಆಗಲಿಲ್ಲ. ಆಕೆ ಕುಟುಂಬದ ಒಳಗೆ ದಬ್ಬಾಳಿಕೆ ಮಾಡುತ್ತಿದ್ದಳು. ಕುಟುಂಬದ ಯಾವ ಸದಸ್ಯರ ಜೊತೆಗೆ ಹೊಂದಿಕೊಳ್ಳಲಿಲ್ಲಾ. ಬದಲಾಗಿ ಬೆಂಗಳೂರಿಗೆ ಹೋಗುವ, ಅಲ್ಲಿಯೇ ಇಬ್ಬರು ಕೆಲಸ ಮಾಡುವ ಎಂದು ಒತ್ತಾಯ ಮಾಡಿ ಇಲ್ಲಿಗೆ ಕರೆಸಿದಳು. ಒಂದು ತಿಂಗಳಾದರೂ ಆಕೆಗೆ ಕೆಲಸ ಸಿಗಲಿಲ್ಲ. ಕೆಲಸ ಹುಡುಕಲು ಆಕೆಗೆ ಸಹಾಯ ಮಾಡಿದರೂ ನೀನು ನನಗೆ ಕೆಲಸ ಹುಡುಕಲು ಸಹಾಯ ಮಾಡಿಲ್ಲ ಎಂದು ಪದೇ ಪದೇ ಗಲಾಟೆ ಮಾಡುತ್ತಿದ್ದಳು” ಎಂದು ಪತಿ, ಆರೋಪಿ ರಾಕೇಶ್​ ಹೇಳಿದ್ದಾನೆ.

ಇದನ್ನೂ ಓದಿ
Image
ಒಂದು ಕಿಸ್​ಗೆ 50 ಸಾವಿರ! ಲಕ್ಷ ರೂ. ಸುಲಿಗೆ: ಟೀಚರ್ ಹಾಗೂ ಗ್ಯಾಂಗ್ ಬಂಧನ
Image
ರನ್ಯಾ ಪ್ರಕರಣ: ಡಿಜಿಟಲ್ ಸಾಕ್ಷಿಯಲ್ಲಿ ಸ್ಮಗ್ಲಿಂಗ್ ರಹಸ್ಯ ಬಯಲು
Image
ರನ್ಯಾ ಪೊಲೀಸ್​ ಪ್ರೋಟೋಕಾಲ್​ ಬಳಸುತ್ತಿದ್ದು DGP ರಾಮಚಂದ್ರಗೆ ಗೊತ್ತಿತ್ತಾ?
Image
ಪತ್ನಿ ಕೊಂದು ಟ್ರ್ಯಾಲಿ ಬ್ಯಾಗ್‌ಗೆ ತುಂಬಿದ್ದ ಗಂಡ: 14 ದಿನ ನ್ಯಾಯಾಂಗ ಬಂಧನ

ಇದನ್ನೂ ಓದಿ: ಕೊಲೆ ಮಾಡಿ ಸೂಟ್​ಕೇಸ್​ನಲ್ಲಿ ತುಂಬಿಟ್ಟ ಪ್ರಕರಣ: ಆರೋಪಿ ಸಿಕ್ಕಿಬಿದ್ದಿದ್ಹೇಗೆ? ಬೆಂಗಳೂರು ಪೊಲೀಸರು ಹೇಳಿದ್ದಿಷ್ಟು

“ನಾನು ಮನೆಯಿಂದಲೇ (Work From Home) ಕೆಲಸ ಮಾಡುತ್ತಿದ್ದ ಕಾರಣ ಗಲಾಟೆ ಮಾಡುತ್ತಿದ್ದಳು. ಆಕೆಯದ್ದೇ ನಡೆಯಬೇಕು ಎನ್ನುವ ರೀತಿಯಲ್ಲಿ ಇದ್ದಳು. ಆ ದಿನ (ಮಾ.26) ರಂದು ಸಹ ಇದೇ ವಿಚಾರಗಳುಗೆ ಜೋರು ಜಗಳಕ್ಕೆ ಕಾರಣವಾದವು. ಈ ವೇಳೆ ಆಕೆ ನನಗೆ ಚಾಕುವಿನಿಂದ ಹೊಡೆದಳು. ಬಳಿಕ ನಾನು ಚಾಕುವಿನಿಂದ ಆಕೆಯ ಕುತ್ತಿಗೆಗೆ ಚುಚ್ಚಿದೆ. ನಾನು ಸೆಲ್ಫ್ ಡಿಫೆನ್ಸ್​ಗಾಗಿ ಕೊಲೆ ಮಾಡಿದೆ. ನಂತರ ಕೃತ್ಯ ಮುಚ್ಚಿಹಾಕಲು ಬ್ಯಾಗ್​ಗೆ ತುಂಬಿದೆ. ಆದರೆ,  ಮೃತದೇಹ ಸಾಗಿಸುವುದು ಕಷ್ಟವಾದ ಕಾರಣ ಅಲ್ಲಿಯೇ ಬಿಟ್ಟು ಹೋದೆ” ಎಂದು ಬಾಯಿಬಿಟ್ಟಿದ್ದಾನೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ