Bengaluru: ಹೆಣ್ಣುಮಕ್ಕಳೇ ಹುಷಾರ್ ! ಲೇಡಿಸ್ ಪಿಜಿಗಳನ್ನೇ ಟಾರ್ಗೆಟ್ ಮಾಡಿ ಸ್ನಾನ ಮಾಡುವ ವಿಡಿಯೋ ಶೋಟ್ ಮಾಡ್ತಿದ್ದ ಕಾಮುಕ ಅರೆಸ್ಟ್
ಮಹಾನಗರಕ್ಕೆ ರಾಜ್ಯ ಅಷ್ಟೇ ಅಲ್ಲದೇ ದೇಶ, ವಿದೇಶಗಳಿಂದಲೂ ಯುವಕ ಯುವತಿಯರು ಬಂದು ವಿದ್ಯಾಭ್ಯಾಸ, ಕೆಲಸ ಮಾಡುತ್ತ ಪಿಜಿಗಳಲ್ಲಿ ವಾಸಿಸುತ್ತಾರೆ. ಆದರೆ, ಅದನ್ನೇ ಟಾರ್ಗೆಟ್ ಮಾಡಿಕೊಂಡ ಕಾಮುಕನೊಬ್ಬ. ಹೆಣ್ಣುಮಕ್ಕಳ ಪಿಜಿಗೆ ನುಗ್ಗಿ, ಸ್ನಾನ ಮಾಡುತ್ತಿದ್ದ ವಿಡಿಯೋವನ್ನ ಮೊಬೈಲ್ಲ್ಲಿ ಸೆರೆ ಹಿಡಿಯುತ್ತಿದ್ದಾಗ ಸಿಕ್ಕಿಬಿದ್ದ ಘಟನೆ ನಡೆದಿದೆ.
ಬೆಂಗಳೂರು: ಪಿಜಿ(PG)ಗಳಲ್ಲಿ ವಾಸಿಸುವ ಯುವತಿಯರೇ ಹುಷಾರ್ ಆಗಿರುವುದು ಒಳ್ಳೆಯದು. ನಿಮ್ಮ ಅಕ್ಕಪಕ್ಕದಲ್ಲೂ ಇಂತಹ ಕಾಮುಕರು ಇರಬಹುದು ಎಚ್ಚರ. ಹೌದು ಮಹಾನಗರಕ್ಕೆ ರಾಜ್ಯ ಅಷ್ಟೇ ಅಲ್ಲದೇ ದೇಶ, ವಿದೇಶಗಳಿಂದಲೂ ಯುವಕ ಯುವತಿಯರು ಬಂದು ವಿದ್ಯಾಭ್ಯಾಸ, ಕೆಲಸ ಮಾಡುತ್ತ ಪಿಜಿಗಳಲ್ಲಿ ವಾಸಿಸುತ್ತಾರೆ. ಆದರೆ, ಅದನ್ನೇ ಟಾರ್ಗೆಟ್ ಮಾಡಿಕೊಂಡ ಕಾಮುಕನೊಬ್ಬ. ಹೆಣ್ಣುಮಕ್ಕಳ ಪಿಜಿಗೆ ನುಗ್ಗಿ, ಸ್ನಾನ ಮಾಡುತ್ತಿದ್ದ ವಿಡಿಯೋವನ್ನ ಮೊಬೈಲ್ಲ್ಲಿ ಸೆರೆ ಹಿಡಿಯುತ್ತಿದ್ದಂತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ಜೂ.21 ರಂದು ಮಹದೇವಪುರ(Mahadevapura) ಹೂಡಿಯಲ್ಲಿರುವ ಪಿಜಿನಲ್ಲಿ ನಡೆದಿದೆ. ಕೂಡಲೇ ಆರೋಪಿಯನ್ನ ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ.
ಇನ್ನು ಬಂಧಿತ ಆರೋಪಿ ಚಿಕ್ಕಬಳ್ಳಾಪುರ ಮೂಲದ ಅಶೋಕ್ ಎಂದು ತಿಳಿದು ಬಂದಿದೆ. ಇತ ಕೂಡ ಮಹದೇವಪುರ ಹೂಡಿಯಲ್ಲಿರುವ ಪಿಜಿ ನಲ್ಲಿ ವಾಸ ಮಾಡುತ್ತಿದ್ದ ಆರೋಪಿ, ಅಲ್ಲಿಯೇ ಖಾಸಗಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಅಶೋಕ್ ವಾಸ ಮಾಡುತ್ತಿರುವ ಪಿಜಿ ಮುಂಭಾಗದಲ್ಲೇ ಲೇಡಿಸ್ ಪಿಜಿ ಕೂಡ ಇದೆ. ಯಾರಾದರೂ ಸ್ನಾನಕ್ಕೆ ಹೋಗುತ್ತಾರೋ ಎನ್ನುವುದನ್ನೇ ನೋಡುತ್ತಿರುತ್ತಿದ್ದ ಅಸಾಮಿ, ಯುವತಿಯತಿಯರು ಸ್ನಾನ ಮಾಡಲು ಬರುತ್ತಿದ್ದಂತೆ ಅಲರ್ಟ್ ಆಗಿ, ಸ್ನಾನ ಮಾಡ್ತಿದ್ದ ವಿಡಿಯೋವನ್ನ ವೆಂಟಿಲೇಷನ್ ಮೂಲಕ ಮೊಬೈಲ್ ನಲ್ಲಿ ಚಿತ್ರೀಕರಣ ಮಾಡುತ್ತಿದ್ದ.
ಇದನ್ನೂ ಓದಿ:Uttara Kannada: ಶಿರಸಿಯಲ್ಲಿ 4 ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿ, ಕೊಲೆಗೆ ಯತ್ನ; ಆರೋಪಿ ಬಂಧನ
ಮೊಬೈಲ್ ನಲ್ಲಿ 7 ಯುವತಿಯರ ಸ್ನಾನದ ವಿಡಿಯೋ ಪತ್ತೆ
ಹೀಗೆ ಸ್ನಾನ ಮಾಡುತ್ತಿದ್ದ ವಿಡಿಯೋ ಚಿತ್ರೀಕರಿಸುತ್ತಿದ್ದಂತೆ ಇದೀಗ ರೆಡ್ ಹ್ಯಾಂಡ್ ಆಗಿ ಆರೋಪಿ ಸಿಕ್ಕಿಬಿದ್ದಿದ್ದಾನೆ. ಇತನ ವಿಚಾರಣೆ ವೇಳೆ ಮೊಬೈಲ್ ಪರಿಶೀಲನೆ ಮಾಡಿದಾಗ ಪೊಲೀಸರೇ ಬೆರಗಾಗಿದ್ದಾರೆ. ಇತ ಈಗಾಗಲೇ 7 ಯುವತಿಯರು ಸ್ನಾನ ಮಾಡುವ ವಿಡಿಯೋ ಮೊಬೈಲ್ನಲ್ಲಿ ಪತ್ತೆಯಾಗಿದೆ. ಇದೀಗ ಆರೋಪಿಯನ್ನ ಮಹದೇವಪುರ ಪೊಲೀಸರು ಜೈಲಿಗಟ್ಟಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ