Bangaluru rain: ಬೆಂಗಳೂರಲ್ಲಿ ಧಾರಾಕಾರ ಮಳೆ; ಕೆರೆಯಂತಾದ ರಸ್ತೆಗಳು, ವಾಹನ ಸವಾರರ ಪರದಾಟ!

ಬೆಂಗಳೂರು ಮಳೆ: ಬೆಂಗಳೂರಿನಲ್ಲಿ ಎರಡು ದಿನಗಳಿಂದ ಮಳೆಯ ಅಬ್ಬರ ಜೋರಾಗಿದೆ. ಇಂದು ಕೂಡ ಧಾರಾಕಾರ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರಮುಖ ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತಗೊಂಡು ಕೆರೆಯಂತೆ ಮಾರ್ಪಟ್ಟಿವೆ. ಭಾರೀ ಮಳೆಯಿಂದಾಗಿ ಟ್ರಾಫಿಕ್ ಜಾಮ್‌ ಕೂಡ ಉಂಟಾಗಿದೆ. ಫ್ಲೈಓವರ್‌ಗಳು ಮತ್ತು ಸ್ಕೈವಾಕ್‌ಗಳ ಕೆಳಗೆ ಸವಾರರು ಆಶ್ರಯ ಪಡೆದರು.

Bangaluru rain: ಬೆಂಗಳೂರಲ್ಲಿ ಧಾರಾಕಾರ ಮಳೆ; ಕೆರೆಯಂತಾದ ರಸ್ತೆಗಳು, ವಾಹನ ಸವಾರರ ಪರದಾಟ!
ಮಳೆ
Image Credit source: tv9 kannada

Updated on: Jun 14, 2026 | 5:38 PM

ಬೆಂಗಳೂರು, ಜೂನ್​​ 14: ನಗರದಲ್ಲಿ (bengaluru) ಕಳೆದೆರಡು ದಿನಗಳಿಂದ ಮಳೆ (Rain) ಚುರುಕುಗೊಂಡಿದೆ. ನಿನ್ನೆ ಸಂಜೆಯೂ ಮಳೆ ದರ್ಶನವಾಗಿದ್ದು, ಇಂದು ಮತ್ತೆ ಮಳೆ ಎಂಟ್ರಿಕೊಟ್ಟಿದೆ. ಎಲ್ಲೆಡೆ ಮೋಡ ಕವಿದ ವಾತಾವರಣವಿದ್ದು, ಸಂಜೆ ಆಗುತ್ತಿದ್ದಂತೆ ನಗರದ ಹಲವೆಡೆ ಗುಡುಗು ಸಹಿತ ಧಾರಾಕಾರ ಮಳೆ ಆರಂಭವಾಗಿದೆ. ಮಳೆಯಿಂದಾಗಿ ನಗರದ ಪ್ರಮುಖ ರಸ್ತೆಗಳು ಕೆರೆಯಂತಾಗಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ಪರದಾಡಿದ್ದಾರೆ.

ಮುಖ್ಯಾಂಶಗಳು

  • ಬೆಂಗಳೂರು ಮಹಾನಗರದ ಹಲವೆಡೆ ಧಾರಾಕಾರ ಮಳೆ
  • ಮಳೆಯಿಂದ ಟ್ರಾಫಿಕ್ ಜಾಮ್​, ವಾಹನ ಸವಾರರ ಪರದಾಟ
  • ಧಾರಾಕಾರ ಮಳೆಯಿಂದ ಕೆರೆಯಂತಾದ ಹಲವು ರಸ್ತೆಗಳು

Bengaluru Rain : ಸಂಜೆ ಆಗ್ತಿದ್ದಂತೆ ಮತ್ತೆ ಬೆಂಗಳೂರಿನಲ್ಲಿ ಮಳೆಯ ಅಬ್ಬರ.. ಜನರು ಪರದಾಟ!| #TV9D

ಎಲ್ಲೆಲ್ಲಿ ಮಳೆ?

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಂಜೆ ಆಗುತ್ತಿದ್ದಂತೆ ವರುಣನ ಆರ್ಭಟ ಶುರುವಾಗಿದೆ. ನಗರದ ಮೆಜೆಸ್ಟಿಕ್, ಟೌನ್ ಹಾಲ್, ಶೇಷಾದ್ರಿಪುರಂ, ಮಲ್ಲೇಶ್ವರಂ, ಶಿವಾಜಿನಗರ, ಫ್ರೀಡಂಪಾರ್ಕ್, ಗಾಂಧಿನಗರ, ಚಾಮರಾಜಪೇಟೆ, ಕಾರ್ಪೊರೇಷನ್, ಚಿಕ್ಕಪೇಟೆ, ರಾಜಾಜಿನಗರ, ವಿಜಯನಗರ, ಶಾಂತಿನಗರ ಹಾಗೂ ಮಡಿವಾಳ ಸೇರಿದಂತೆ ಹಲವೆಡೆ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ.

ಇದನ್ನೂ ಓದಿ: Karnataka Weather Forecast: ರಾಜ್ಯದಲ್ಲಿ ಮುಂಗಾರು ಚುರುಕು; ಯೆಲ್ಲೋ ಅಲರ್ಟ್​ ಘೋಷಣೆ

ಮಧ್ಯಾಹ್ನವಿದ್ದ ಜಿಟಿ ಜಿಟಿ ಮಳೆ, ಸಂಜೆ ಆಗುತ್ತಿದ್ದಂತೆ ಬಿರುಸು ಪಡೆದುಕೊಂಡಿದ್ದು ಮಹಾನಗರವನ್ನು ಮತ್ತಷ್ಟು ಕೂಲ್ ಮಾಡಿದೆ. ಆದರೆ, ಈ ದಿಢೀರ್ ಮಳೆಯಿಂದಾಗಿ ಕಚೇರಿ ಮುಗಿಸಿ ಮನೆಗೆ ಮರಳುತ್ತಿದ್ದ ಸಾರ್ವಜನಿಕರು ಹಾಗೂ ರಸ್ತೆ ಬದಿಯ ವ್ಯಾಪಾರಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಕೆರೆಯಂತೆ ತುಂಬಿ ತುಳುಕುತ್ತಿರುವ ರಸ್ತೆಗಳು

ಇನ್ನು ಧಾರಾಕಾರ ಮಳೆ ಹಿನ್ನೆಲೆ ನಗರದ ಪ್ರಮುಖ ರಸ್ತೆಗಳು ಕೆರೆಯಂತಾಗಿವೆ. ರಸ್ತೆಗಳ ಮೇಲೆ ಮೊಣಕಾಲುದ್ದ ನೀರು ನಿಂತಿರುವುದರಿಂದ ವಾಹನ ಸವಾರರು ಸಂಚರಿಸಲು ಹರಸಾಹಸ ಪಡುತ್ತಿದ್ದಾರೆ. ದಿಢೀರ್ ಮಳೆಗೆ ಸಿಲುಕಿದ ನೂರಾರು ಸಾರ್ವಜನಿಕರು ಮತ್ತು ದ್ವಿಚಕ್ರ ವಾಹನ ಸವಾರರು ಕೆ.ಆರ್. ಮಾರ್ಕೆಟ್ ಫ್ಲೈಓವರ್ ಕೆಳಗೆ ನಿಂತು ಆಶ್ರಯ ಪಡೆದರು. ಜನಸಾಮಾನ್ಯರು ಛತ್ರಿ ಹಿಡಿದು ಮಳೆಯಲ್ಲೇ ಹೋಗುತ್ತಿರುವ ದೃಶ್ಯಗಳು ಕಂಡುಬಂದಿವೆ. ಮಳೆಯಿಂದಾಗಿ ಕೆಲವೆಡೆ ಟ್ರಾಫಿಕ್ ಜಾಮ್ ಕೂಡ ಉಂಟಾಗಿದೆ.

ವರದಿ: ನಟರಾಜ್​​ 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:33 pm, Sun, 14 June 26

Follow Us