Hopcoms Bengaluru: ಹಾಪ್​ಕಾಮ್ಸ್​ನಿಂದ ಆನ್​ಲೈನ್ ಮೂಲಕ ಹೋಮ್ ಡೆಲಿವರಿ ಸೇವೆ ಲಭ್ಯ; ವಿವರ ಇಲ್ಲಿದೆ

Bengaluru: ಯೋಜನೆಯ ಸಾಧಕ ಬಾಧಕಗಳನ್ನು ಆಧರಿಸಿ ಮುಂದಿನ ದಿನಗಳಲ್ಲಿ ಬೆಂಗಳೂರಿನ ಎಲ್ಲಾ ವಲಯಗಳಿಗೆ ಯೋಜನೆಯನ್ನು ವಿಸ್ತರಿಸುವ ಆಶಯವನ್ನು ಸಂಸ್ಥೆ ಹೊಂದಿರುವ ಬಗ್ಗೆ ತಿಳಿಸಲಾಗಿದೆ.

Hopcoms Bengaluru: ಹಾಪ್​ಕಾಮ್ಸ್​ನಿಂದ ಆನ್​ಲೈನ್ ಮೂಲಕ ಹೋಮ್ ಡೆಲಿವರಿ ಸೇವೆ ಲಭ್ಯ; ವಿವರ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ganapathi bhat

Updated on:Aug 29, 2021 | 8:05 PM

ಬೆಂಗಳೂರು: ಹಾಪ್​ಕಾಮ್ಸ್, ಲಾಲ್​ಬಾಗ್ ಬೆಂಗಳೂರು ಸಂಸ್ಥೆಯ ವತಿಯಿಂದ ಬಿಬಿಎಂಪಿ ವ್ಯಾಪ್ತಿಯ ದಕ್ಷಿಣ ವಲಯದ ಗ್ರಾಹಕರುಗಳ ಮನೆ ಬಾಗಿಲಿಗೆ ಆನ್​ಲೈನ್ ಮಾರುಕಟ್ಟೆ ಮೂಲಕ ಹಣ್ಣು, ತರಕಾರಿಗಳನ್ನು ಒದಗಿಸಲು 3 ತಿಂಗಳ ಪೈಲಟ್ ಯೋಜನೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗುವ ಬಗ್ಗೆ ಪತ್ರಿಕಾ ಪ್ರಕಟಣೆಯ ಮೂಲಕ ಮಾಹಿತಿ ನೀಡಲಾಗಿದೆ. ಆನ್​ಲೈನ್ ಮಾರುಕಟ್ಟೆ ಉದ್ಘಾಟನಾ ಕಾರ್ಯಕ್ರಮವು ಸೋಮವಾರ (ಆಗಸ್ಟ್ 30) ಬೆಳಗ್ಗೆ 7 ಗಂಟೆಗೆ ನಡೆಯಲಿದೆ.

ಈ ಯೋಜನೆಯ ಸಾಧಕ ಬಾಧಕಗಳನ್ನು ಆಧರಿಸಿ ಮುಂದಿನ ದಿನಗಳಲ್ಲಿ ಬೆಂಗಳೂರಿನ ಎಲ್ಲಾ ವಲಯಗಳಿಗೆ ಯೋಜನೆಯನ್ನು ವಿಸ್ತರಿಸುವ ಆಶಯವನ್ನು ಸಂಸ್ಥೆ ಹೊಂದಿರುವ ಬಗ್ಗೆ ತಿಳಿಸಲಾಗಿದೆ. ಈ ಯೋಜನೆಗೆ ಇ- ಸಂಗ್ರಹಣೆ ಮೂಲಕ ಕೋಡ್ ಕೆಟಲಿಸ್ಟ್ಸ್ ಪ್ರೈವೇಟ್ ಲಿಮಿಟೆಡ್​ ಅವರನ್ನು ಪ್ಯಾಕಿಂಗ್ ಮತ್ತು ಡೆಲಿವರಿ ಪಾರ್ಟ್ನರ್ ಆಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.

ಆನ್​ಲೈನ್ ಮಾರುಕಟ್ಟೆ ಯೋಜನೆಯ ವಿವರಗಳು ಹೀಗಿದೆ:

  • ಯೋಜನೆಗೆ ಅಗತ್ಯವಿರುವ ಮೊಬೈಲ್ ತಂತ್ರಾಂಶವನ್ನು ಪ್ಯಾಕಿಂಗ್ ಮತ್ತು ಡೆಲಿವರಿ ಪಾರ್ಟ್​ನರ್ ಅಭಿವೃದ್ಧಿಪಡಿಸಿರುತ್ತಾರೆ
  • ಗ್ರಾಹಕರು ಗೂಗಲ್ ಪ್ಲೇಸ್ಟೋರ್ ಮೂಲಕ ಮೊಬೈಲ್ ತಂತ್ರಾಂಶವನ್ನು ಡೌನ್​ಲೋಡ್ ಮಾಡಿಕೊಂಡು ಅಗತ್ಯವಿರುವ ಹಣ್ಣು ತರಕಾರಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು
  • ಗ್ರಾಹಕರು ಪ್ರತಿದಿನ ಸಂಜೆ 4 ಗಂಟೆಯ ಒಳಗೆ ಅಗತ್ಯವಿರುವ ಹಣ್ಣು, ತರಕಾರಿಗಳಿಗೆ ಆರ್ಡರ್ ಸಲ್ಲಿಸಿದಲ್ಲಿ ಮರುದಿನ ಬೆಳಗ್ಗೆ 12 ಗಂಟೆಯ ಒಳಗೆ ಅವುಗಳನ್ನು ಡೆಲಿವರಿ ಪಾರ್ಟ್​ನರ್​ಗಳು ಮನೆ ಬಾಗಿಲಿಗೆ ಪೂರೈಸುತ್ತಾರೆ
  • ಗ್ರಾಹಕರಿಗೆ ಹಾಪ್​ಕಾಮ್ಸ್ ಸಂಸ್ಥೆಯು ಹಣ್ಣು, ತರಕಾರಿಗಳಿಗೆ ನಿಗದಿಪಡಿಸುವ ದರ ಅನ್ವಯಿಸುತ್ತದೆ
  • ಮನೆ ಬಾಗಿಲಿಗೆ ಸರಬರಾಜು ಮಾಡುವ ಹಣ್ಣು, ತರಕಾರಿಗಳಿಗೆ ಡೆಲಿವರಿ ಪಾರ್ಟ್​ನರ್​ಗಳು ವಿಧಿಸುವ ಡೆಲಿವರಿ ಚಾರ್ಜಸ್ ಕೂಡ ಅನ್ವಯಿಸುತ್ತದೆ
  • ಡೆಲಿವರಿ ಪಾರ್ಟ್​ನರ್​ಗಳಿಗೆ ಸಂಸ್ಥೆಯಿಂದ ಪ್ರತ್ಯೇಕವಾಗಿ ಸ್ಥಳ, ತೂಕದ ಯಂತ್ರ ಹಾಗೂ ಇತರೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು
  • ಹಾಪ್​ಕಾಮ್ಸ್ ಸಂಸ್ಥೆಯ ಮೇಲ್ವಿಚಾರಣೆಯಲ್ಲಿ, ಸಂಸ್ಥೆಯ ಆವರಣದಲ್ಲಿ ಹಣ್ಣು, ತರಕಾರಿಗಳನ್ನು ಪ್ಯಾಕಿಂಗ್ ಮಾಡಲಾಗುವುದು

ಆನ್​ಲೈನ್ ಮಾರುಕಟ್ಟೆ ವಿಭಾಗವನ್ನು ತೋಟಗಾರಿಕೆ ಹಾಗೂ ಯೋಜನೆ ಮತ್ತು ಸಾಂಖಿಕ ಸಚಿವ ಮುನಿರತ್ನ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಉದಯ ಗರುಡಾಚಾರ್ ವಹಿಸಲಿದ್ದಾರೆ. ಹಾಪ್​ಕಾಮ್ಸ್, ಲಾಲ್​ಬಾಗ್ ಇಲ್ಲಿ ಬೆಳಗ್ಗೆ 7 ಗಂಟೆಗೆ ಸಮಾರಂಭ ನಡೆಯಲಿದೆ.

ಸದ್ಯ ಪ್ರಾಯೋಗಿಕವಾಗಿ ಈ ಸೇವೆ ಆರಂಭಿಸಲಾಗುತ್ತಿದೆ. ಲಾಲ್​ಬಾಗ್ ಹಾಪ್​ಕಾಮ್ಸ್ ಕೇಂದ್ರದಿಂದ ಹಣ್ಣು, ತರಕಾರಿಗಳನ್ನು ಆನ್​ಲೈನ್ ಸೇವೆಯಲ್ಲಿ ಒದಗಿಸಲಾಗುತ್ತಿದೆ. ಹೀಗಾಗಿ ಮೊದಲು ಬೆಂಗಳೂರು ದಕ್ಷಿಣದ ಭಾಗಗಳಿಗೆ (ಲಾಲ್​ಬಾಗ್ ಸಮೀಪದ) ಮಾತ್ರ ಅನ್ವಯವಾಗುವಂತೆ ಈ ಸೇವೆ ಆರಂಭಿಸಲಾಗುತ್ತಿದೆ. ಮುಂದೆ ಇದನ್ನು ವಿಸ್ತರಿಸುವ ಆಶಯವಿದೆ ಎಂದು ಹಾಪ್​ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಮಿರ್ಜಿ ಉಮೇಶ್ ಶಂಕರ್ ತಿಳಿಸಿದ್ದಾರೆ.

ಖಾಸಗಿ ಸಂಸ್ಥೆಗಳು ಹೋಮ್ ಡೆಲಿವರಿ ಸೇವೆಯನ್ನು ಒದಗಿಸುತ್ತಿವೆ. ಈ ನೆಲೆಯಲ್ಲಿ ನಾವೂ ಕೂಡ ಕಾರ್ಯಾರಂಭ ಮಾಡಬೇಕು. ನ್ಯಾಯಯುತ ಬೆಲೆಗೆ ಉತ್ತಮ ಗುಣಮಟ್ಟದ ಹಣ್ಣು, ತರಕಾರಿ ಒದಗಿಸಬೇಕು ಎಂಬ ಆಶಯದಿಂದ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗುತ್ತಿದೆ. ಆನ್​ಲೈನ್​ ಸೇವೆಯು ಸೋಮವಾರ (ಆಗಸ್ಟ್ 30) ಅಪ್ಲಿಕೇಷನ್ ಉದ್ಘಾಟನೆಯ ಬಳಿಕ ಲಭ್ಯವಿರಲಿದೆ. ರೈತರಿಂದ ಪಡೆದ ಉತ್ತಮ ಗುಣಮಟ್ಟದ ಬೆಳೆಯನ್ನು ಗ್ರಾಹಕರಿಗೆ ತಲುಪಿಸುವುದು ಯೋಜನೆಯ ಉದ್ದೇಶವಾಗಿದೆ ಎಂದು ಹಾಪ್​ಕಾಮ್ಸ್ ಅಧ್ಯಕ್ಷ ಎನ್ ದೇವರಾಜ್ ಹೇಳಿದ್ದಾರೆ.

ಇದನ್ನೂ ಓದಿ: ಕೈಮಗ್ಗ ಉತ್ಪನ್ನಗಳಿಗೆ ಆನ್​ಲೈನ್ ಮಾರಾಟ ವ್ಯವಸ್ಥೆ ರೂಪಿಸಲು ಸಿಎಂ ಬೊಮ್ಮಾಯಿ ಸೂಚನೆ

ರೈತರಿಗಾಗಿ ‘ರಾಷ್ಟ್ರೀಯ ಆಹಾರ ಮತ್ತು ಪೌಷ್ಠಿಕಾಂಶ ಅಭಿಯಾನ’ಕ್ಕೆ ಚಾಲನೆ ನೀಡಿದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್

(Bengaluru Hopcoms Lal Bagh to start online Market Vegetables Fruits Home Delivery App Service)

Published On - 7:38 pm, Sun, 29 August 21

ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ