TV9 Network: ಸಾರಿಗೆ ಕ್ಷೇತ್ರದಲ್ಲಿ ತಂತ್ರಜ್ಞಾನ ಅಳವಡಿಕೆಗೆ ಸರಿಯಾದ ಸ್ಥಳ ಮತ್ತು ಸಮಯದಲ್ಲಿದ್ದೇವೆ: ವೇಣು ಕೊಂಡೂರು
TV9 Network The Leaders of Road Transport Conclave: ಟಿವಿ9 ನೆಟ್ವರ್ಕ್ ನೇತೃತ್ವದಲ್ಲಿ ಎರಡನೇ ಸೀಸನ್ನ ‘ಲೀಡರ್ ಆಫ್ ರೋಡ್ ಟ್ರಾನ್ಸ್ಪೋರ್ಟ್ ಕಾಂಕ್ಲೇವ್’ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆದಿದೆ. ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರದ ವಿವಿಧ ಪ್ರತಿನಿಧಿಗಳು ಇಂದಿನ ಕಾರ್ಯಕ್ರಮದಲ್ಲಿ ಪ್ಯಾನಲ್ ಚರ್ಚೆಯಲ್ಲಿ ಪಾಲ್ಗೊಂಡಿದ್ದು ವಿಶೇಷ. ಪ್ಯಾನಲ್ ಚರ್ಚೆಯಲ್ಲಿ ಲಾಬ್ ಲಾಜಿಸ್ಟಿಕ್ಸ್ನ ಸಹ-ಸಂಸ್ಥಾಪಕ ಮತ್ತು ಸಿಇಒ ವೇಣು ಕೊಂಡೂರು, ಆರೆಂಜ್ ಕೋಚಸ್ ಸಂಸ್ಥೆಯ ಮಾಲೀಕ ಪ್ರಶಾಂತ್ ರಾಮನ್ ಮೊದಲಾದವರು ಪಾಲ್ಗೊಂಡಿದ್ದರು.
ಬೆಂಗಳೂರು, ಅಕ್ಟೋಬರ್ 27: ಟಿವಿ9 ನೆಟ್ವರ್ಕ್ ನೇತೃತ್ವದಲ್ಲಿ ಎರಡನೇ ಸೀಸನ್ನ ‘ಲೀಡರ್ ಆಫ್ ರೋಡ್ ಟ್ರಾನ್ಸ್ಪೋರ್ಟ್ ಕಾಂಕ್ಲೇವ್’ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಿತು. ಈ ಎರಡನೇ ಸೀಸನ್ನ ಮೊದಲ ಹಂತದ ಅಭಿಯಾನದಲ್ಲಿ ರಸ್ತೆ ಸುರಕ್ಷತೆ, ತಂತ್ರಜ್ಞಾನ, ಸುಸ್ಥಿರತೆ ಇತ್ಯಾದಿ ಒಳಗೊಂಡಿರುವ ಸ್ಮಾರ್ಟ್ ಮೊಬಿಲಿಟಿ ಇಕೋಸಿಸ್ಟಂ ಅನ್ನು ರೂಪಿಸುವ ಬಗ್ಗೆ ಜಾಗತಿ ಮೂಡಿಸುವ ಕಾರ್ಯವಾಗಿದೆ. ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರದ ವಿವಿಧ ಪ್ರತಿನಿಧಿಗಳು ಇಂದಿನ ಕಾರ್ಯಕ್ರಮದಲ್ಲಿ ಪ್ಯಾನಲ್ ಚರ್ಚೆಯಲ್ಲಿ ಪಾಲ್ಗೊಂಡಿದ್ದು ವಿಶೇಷ.
ಸರಿಯಾದ ಸ್ಥಳದಲ್ಲಿದ್ದೇವೆ: ವೇಣು ಕೊಂಡೂರು
ಪ್ಯಾನಲ್ ಚರ್ಚೆಯಲ್ಲಿ ಲಾಬ್ ಲಾಜಿಸ್ಟಿಕ್ಸ್ನ ಸಹ-ಸಂಸ್ಥಾಪಕ ಮತ್ತು ಸಿಇಒ ವೇಣು ಕೊಂಡೂರು, ಆರೆಂಜ್ ಕೋಚಸ್ ಸಂಸ್ಥೆಯ ಮಾಲೀಕ ಪ್ರಶಾಂತ್ ರಾಮನ್ ಮೊದಲಾದವರು ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ವೇಣು ಕೊಂಡೂರು, ಭಾರತದ ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯನ್ನು ಮೆಚ್ಚಿಕೊಂಡರು.
‘ಭಾರತದಲ್ಲಿ ಕಳೆದ ಕೆಲ ವರ್ಷಗಳಲ್ಲಿ ನಾವು ಕಂಡ ದೊಡ್ಡ ಸಂಗತಿಗಳಲ್ಲಿ ಇಂಟರ್ನೆಟ್ ಪ್ರಸರಣೆ ಒಂದು. ತಂತ್ರಜ್ಞಾನವನ್ನು ಅಳವಡಿಸಲು ಸರಿಯಾದ ಸಮಯ ಮತ್ತು ಸರಿಯಾದ ಸ್ಥಳದಲ್ಲಿದ್ದೇವೆ. ನ್ಯಾಷನಲ್ ಲಾಜಿಸ್ಟಿಕ್ಸ್ ಪಾಲಿಸಿಯನ್ನು ಜಾರಿಗೊಳಿಸಲಾಗುತ್ತಿದೆ. ಪ್ರತಿಯೊಬ್ಬ ಟ್ರಾನ್ಸ್ಪೋರ್ಟರ್ ಮತ್ತು ಸಾರಿಗೆ ವಾಹನಗಳ ಮಾಲೀಕರ ಬಳಿ ಇವತ್ತು ಸ್ಮಾರ್ಟ್ಫೋನ್ ಇದೆ. ಸಾರಿಗೆ ವಲಯವನ್ನು ಡಿಜಿಟೈಸ್ ಮಾಡಲು ನಮ್ಮ ಬಳಿ ಇನ್ಫ್ರಾಸ್ಟ್ರಕ್ಚರ್ ಇದೆ’ ಎಂದು ವೇಣು ಕೊಂಡೂರು ಹೇಳಿದರು.
ಟಿವಿ9 ಕನ್ನಡ ವಾಹಿನಿಯ ಎಂಡಿ ರಾಹುಲ್ ಚೌಧುರಿ, ಕಾಂಟಿನೆಂಟಲ್ ಸಂಸ್ಥೆಯ ಹಿರಿಯ ಪ್ರತಿನಿಧಿ ರಜನೀಶ್ ಕೊಚಗಾವೆ ಅವರು ಈ ಸಂದರ್ಭದಲ್ಲಿ ಕೆಎಸ್ಸಾರ್ಟಿಸಿಯ ನಿರ್ದೇಶಕಿ ಡಾ. ನಂದಿನಿದೇವಿ ಅವರನ್ನು ಸನ್ಮಾನಿಸಿದರು.
ಹೈಲೈಟ್ ಆದ ಕಾಂಟಿನೆಂಟಲ್
ದೆಹಲಿಯಲ್ಲಿ ಆರಂಭವಾದ ಎರಡನೇ ಸೀಸನ್ನ ಸಮಾವೇಶ ಜೈಪುರ್, ಮುಂಬೈ ಮತ್ತು ಬೆಂಗಳೂರಿನಲ್ಲೂ ನಡೆದಿದೆ. ಬೆಂಗಳೂರಿನಲ್ಲಿ ಇಂದು ನಡೆದ ಕಾನ್ಕ್ಲೇವ್ನಲ್ಲಿ ಕಾಂಟಿನೆಂಟಲ್ ಎಂಬ ಜರ್ಮನ್ ಕಂಪನಿಯ ತಂತ್ರಜ್ಞಾನ ವೈಶಿಷ್ಟ್ಯತೆಗಳನ್ನು ಶ್ಲಾಘಿಸಲಾಯಿತು.
ಜರ್ಮನ್ ಮೂಲದ ಕಾಂಟಿನೆಂಟಲ್ ಎಜಿ ಸಂಸ್ಥೆ ವಾಹನದ ವಿವಿಧ ಬಿಡಿಭಾಗಗಳನ್ನು ತಯಾರಿಸುವ ಕಂಪನಿ. ವಾಹನಗಳ ಟಯರ್ ಅನ್ನು ರಿಯಲ್-ಟೈಮ್ನಲ್ಲಿ ಪರಿಶೀಲಿಸಬಲ್ಲಂತಹ ಕಾಂಟಿ ಕನೆಕ್ಟ್ ಟೆಕ್ನಾಲಜಿಯನ್ನು ಈ ಸಂಸ್ಥೆ ಹೊಂದಿದೆ. ಇದರಿಂದ ಟಯರ್ ಮತ್ತು ವಾಹನದ ಸುರಕ್ಷತೆಯನ್ನು ಕಾಪಾಡಲು ಸಾಧ್ಯ.
Published On - 1:31 pm, Fri, 27 October 23