Namma Metro: ನಮ್ಮ ಮೆಟ್ರೋಗೆ ಬಸವೇಶ್ವರ ಮೆಟ್ರೋ ಅಂತ ಹೆಸರಿಡಲು‌ ಸಿಎಂ ಬಳಿ‌ ಚರ್ಚಿಸಿ ತೀರ್ಮಾನ; ಎಂಬಿ ಪಾಟೀಲ್​​

ವಿಜಯಪುರ ಜಿಲ್ಲೆ ಮೊದಲು ಬಿಜಾಪುರ ಜಿಲ್ಲೆ ಆಗಿತ್ತು. ಬಸವೇಶ್ವರ ಜಿಲ್ಲೆಯಾಗಲಿ ಅದರಲ್ಲಿ‌ ತಪ್ಪೇನಿಲ್ಲ. ಸಿಎಂ ಜೊತೆ ಚರ್ಚೆ ಮಾಡಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ. ನಮ್ಮ ನಾಡು ಬಸವ ನಾಡು, ಬಸವ ಸಂಸ್ಕೃತಿ ಆಗಬೇಕು. ಈ ಮಾತನ್ನು ಹಲವುಬಾರಿ ಹೇಳಿದ್ದೇವೆ ಎಂದು ಸಚಿವ ಎಂಬಿ ಪಾಟೀಲ್​ ಹೇಳಿದರು.

Namma Metro: ನಮ್ಮ ಮೆಟ್ರೋಗೆ ಬಸವೇಶ್ವರ ಮೆಟ್ರೋ ಅಂತ ಹೆಸರಿಡಲು‌ ಸಿಎಂ ಬಳಿ‌ ಚರ್ಚಿಸಿ ತೀರ್ಮಾನ; ಎಂಬಿ ಪಾಟೀಲ್​​
ಸಚಿವ ಎಂಬಿ ಪಾಟೀಲ್​
Follow us
| Updated By: Digi Tech Desk

Updated on:Oct 30, 2023 | 12:59 PM

ಬೆಂಗಳೂರು ಅ.27: ನಮ್ಮ ಮೆಟ್ರೋಗೆ (Namma Metro) ಬಸವೇಶ್ವರ ಮೆಟ್ರೋ (Basaveshwara Metro) ಎಂದು ಹೆಸರಿಡಲು‌ ಮನವಿ ಬಂದಿದೆ. ಈ ಬಗ್ಗೆ ಸಿಎಂ ಬಳಿ‌ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ (MB Patil) ತಿಳಿಸಿದರು. ವಿಜಯಪುರ ಹೆಸರು ಬದಲಾವಣೆ ವಿಚಾರವಾಗಿ ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ವಿಜಯಪುರ ಜಿಲ್ಲೆ ಮೊದಲು ಬಿಜಾಪುರ ಜಿಲ್ಲೆ ಆಗಿತ್ತು. ಬಸವೇಶ್ವರ ಜಿಲ್ಲೆಯಾಗಲಿ ಅದರಲ್ಲಿ‌ ತಪ್ಪೇನಿಲ್ಲ. ಸಿಎಂ ಜೊತೆ ಚರ್ಚೆ ಮಾಡಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ. ನಮ್ಮ ನಾಡು ಬಸವ ನಾಡು, ಬಸವ ಸಂಸ್ಕೃತಿ ಆಗಬೇಕು. ಈ ಮಾತನ್ನು ಹಲವುಬಾರಿ ಹೇಳಿದ್ದೇವೆ ಎಂದರು.

ಆಣೆ, ಪ್ರಮಾಣ ವಿಚಾರವಾಗಿ ಹೆಚ್​​ಡಿ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಯಾವ ಮಟ್ಟಕ್ಕೆ ಹೋಯ್ತು ರಾಜಕಾರಣ. ಇದು ಗ್ರಾಮ ಪಂಚಾಯಿತಿಗೆ ರೀತಿ ಆಯ್ತಲ್ಲ. ಮೊದಲು‌ ಅವರು ಹೋಗಿ ಆಣೆ ಮಾಡಿ ಬರಲಿ. ಬಿಜೆಪಿಗೆ ನಮ್ಮ ಪಕ್ಷದ ಐದು ಶಾಸಕರನ್ನು ಸೇರಿಸಿಕೊಳ್ಳಲು ಆಗಲ್ಲ. ಸರ್ಕಾರ ರಚಿಸಲು ಬಿಜೆಪಿಗೆ 65 ಶಾಸಕರು ಬೇಕು. ಸರ್ಕಾರ ಬೀಳಿಸುವುದು ಹುಡುಗಾಟದ ಮಾತಾ? ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ: ಬೆಂಗಳೂರಿನ ನಮ್ಮ ಮೆಟ್ರೋ ವಿಸ್ತೃತ ಮಾರ್ಗ ಉದ್ಘಾಟಿಸಿದ ಮೋದಿ, ಸಿದ್ದರಾಮಯ್ಯ ಹೇಳಿದ್ದೇನು? 

ಎರಡೂವರೆ ವರ್ಷದ ಬಳಿಕ ಸಿಎಂ ಬದಲಾಗುತ್ತಾರೆ ಎಂಬ ಸ್ವಪಕ್ಷದಲ್ಲೇ ಕೆಲವರ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ನಮ್ಮಲ್ಲಿ‌ ಯಾರು ಸಿಎಂ ಆಗಬೇಕು. ಎಲ್ಲವನ್ನ ಪಕ್ಷ ಹಾಗೂ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಈ ಎಲ್ಲ ಹೇಳಿಕೆಗಳು ಅವರ ವೈಯಕ್ತಿಕ ಹೇಳಿಕೆ. ಏನೇ ಇದ್ದರೂ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಯಾರು ಸಚಿವರಾಗಬೇಕು, ಸಿಎಂ ಆಗಬೇಕು ಎಲ್ಲವನ್ನೂ ಹೈಕಮಾಂಡ್ ನಿರ್ಧರಿಸುತ್ತೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:17 pm, Fri, 27 October 23