Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ಮೆಟ್ರೋನಲ್ಲಿ ಮಡಚುವ ಸೈಕಲ್​ ಜೊತೆ ಪ್ರಯಾಣ: ಮಡಚುವ ಸೈಕಲ್ ಹೇಗಿದೆ? ಏನಿದರ ವೈಶಿಷ್ಟ್ಯ?

ಇತ್ತೀಚೆಗೆ ಪ್ರಾರಂಭಿಸಲಾದ ಪರ್ಪಲ್ ಲೈನ್ ಮೆಟ್ರೋದೊಳಗೆ ಮಡಚುವ ಸೈಕಲ್​​ನೊಂದಿಗೆ ಪ್ರಯಾಣ ಮಾಡಿದ ಫೋಟೋಗಳನ್ನು ವಿಕ್ರಮ್ ಲಿಮ್ಸೇ ಎಂಬ ಉದ್ಯಮಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕರ್ನಾಟಕ ಸಾರಿಗೆ ಇಲಾಖೆಯು 37 ಫೀಡರ್ ಬಸ್‌ಗಳನ್ನು ಪ್ರಾರಂಭಿಸಿತು. ನೇರಳೆ ಮಾರ್ಗದ ಕೆಆರ್ ಪುರಂ ಮೆಟ್ರೋ ನಿಲ್ದಾಣದಿಂದ ಫೀಡರ್ ಬಸ್‌ಗಳ ಸೇವೆಯನ್ನು ಪಡೆಯಬಹುದು.

ನಮ್ಮ ಮೆಟ್ರೋನಲ್ಲಿ ಮಡಚುವ ಸೈಕಲ್​ ಜೊತೆ ಪ್ರಯಾಣ: ಮಡಚುವ ಸೈಕಲ್ ಹೇಗಿದೆ? ಏನಿದರ ವೈಶಿಷ್ಟ್ಯ?
ಮೆಟ್ರೋನಲ್ಲಿ ಮಡಚುವ ಸೈಕಲ್​ ಜೊತೆ ಪ್ರಯಾಣ ಬೆಳೆಸಿದ ಯುವಕರು
Follow us
TV9 Web
| Updated By: ಆಯೇಷಾ ಬಾನು

Updated on: Oct 15, 2023 | 2:45 PM

ಬೆಂಗಳೂರು, ಅ.15: ನಮ್ಮ ಮೆಟ್ರೋ ಪ್ರಯಾಣಿಕರಿಗೆ BMRCL ಒಂದಲ್ಲಾ ಒಂದು ಖುಷಿ ಸುದ್ದಿಯನ್ನು ನೀಡುತ್ತಿದೆ. ಈಗ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ತನ್ನ ಪ್ರಯಾಣಿಕರಿಗೆ ಪ್ರಯಾಣವನ್ನು ಸುಲಭಗೊಳಿಸಲು ಮೆಟ್ರೋ ಹೊಸ ಮಾರ್ಗಕ್ಕೆ ಮುಂದಾಗಿದೆ. ಇನ್ಮುಂದೆ ನೀವು ಮೆಟ್ರೋದಲ್ಲಿ ಸೈಕಲ್ (Foldable Bicycle) ಕೊಂಡೊಯ್ಯಬಹುದು. ಈ ಹಿಂದೆ ಬಿಎಂಆರ್​ಸಿಎಲ್, ಮೆಟ್ರೋ ಒಳಗೆ ಕೊಂಡೊಯ್ಯಬಹುದಾಗಿರುವ ಬೈಸಿಕಲ್ ನ ತೂಕ 15 ಕೆ.ಜಿಗಿಂತಲೂ ಹೆಚ್ಚು ಇರುವಂತಿಲ್ಲ ಹಾಗೂ 60 cm x 45 cm x 25 cm ಅಳತೆಯನ್ನು ಮೀರುವಂತಿಲ್ಲ ಎಂದಿತ್ತು. ಈಗ ಯುವಕರ ಗುಂಪೊಂದು ಮಡಚುವ ಸೈಕಲ್​ನೊಂದಿಗೆ ಮೆಟ್ರೋ ಪ್ರಯಾಣ ಬೆಳೆಸಿದ್ದು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಪ್ರಾರಂಭಿಸಲಾದ ಪರ್ಪಲ್ ಲೈನ್ ಮೆಟ್ರೋದೊಳಗೆ ಮಡಚುವ ಸೈಕಲ್​​ನೊಂದಿಗೆ ಪ್ರಯಾಣ ಮಾಡಿದ ಫೋಟೋಗಳನ್ನು ವಿಕ್ರಮ್ ಲಿಮ್ಸೇ ಎಂಬ ಉದ್ಯಮಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮಡಚಬಲ್ಲ ಮತ್ತು ಕಾಂಪ್ಯಾಕ್ಟ್ ಬೈಸಿಕಲ್‌ಗಳು ಪ್ರಯಾಣಿಕರಿಗೆ ಉತ್ತಮ ಸಾರಿಗೆ ವಿಧಾನವಾಗಿದೆ. ಈ ಬೈಸಿಕಲ್‌ಗಳು ಪ್ರಯಾಣಿಕರಿಗೆ ತೀವ್ರ ಟ್ರಾಫಿಕ್ ದಟ್ಟಣೆಯ ಮೂಲಕ ಚಲಿಸಲು ಸಹಾಯ ಮಾಡುತ್ತವೆ ಮತ್ತು ಜಾಮ್ ಇದ್ದಾಗ ಅವುಗಳನ್ನು ಮಡಚಿಕೊಂಡು ನಡೆಯಬಹುದು.

ಇದನ್ನೂ ಓದಿ: ಲುಲು ಮಾಲ್​​​ನಲ್ಲಿ ಪಾಕ್ ಧ್ವಜ ವಿವಾದ; ತಪ್ಪು ಮಾಹಿತಿ ಹಂಚಿದ ಬಿಜೆಪಿ ನಾಯಕಿ ವಿರುದ್ಧ ಎಫ್ಐಐರ್

ಕಳೆದ ವಾರ, ಕರ್ನಾಟಕ ಸಾರಿಗೆ ಇಲಾಖೆಯು 37 ಫೀಡರ್ ಬಸ್‌ಗಳನ್ನು ಪ್ರಾರಂಭಿಸಿತು. ನೇರಳೆ ಮಾರ್ಗದ ಕೆಆರ್ ಪುರಂ ಮೆಟ್ರೋ ನಿಲ್ದಾಣದಿಂದ ಫೀಡರ್ ಬಸ್‌ಗಳ ಸೇವೆಯನ್ನು ಪಡೆಯಬಹುದು. ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಪ್ರಕಾರ, ಉದ್ಘಾಟನೆಯ ಮೊದಲ ದಿನ, ನಮ್ಮ ಮೆಟ್ರೋದಲ್ಲಿ ಒಟ್ಟು 6,80,894 ಜನ ಪ್ರಯಾಣ ಬೆಳೆಸಿದ್ದಾರೆ, ಅದರಲ್ಲಿ 61,179 ಮಂದಿ ಬೈಯಪ್ಪನಹಳ್ಳಿ – ವೈಟ್‌ಫೀಲ್ಡ್ ನೇರಳೆ ಮಾರ್ಗದಲ್ಲಿ ಸಂಚರಿಸಿದ್ದಾರೆ.

ಬೈಯಪ್ಪನಹಳ್ಳಿ-ಕೆಆರ್ ಪುರಂ ಮಾರ್ಗವನ್ನು ತೆರೆಯುವ ಮೊದಲು, ಕೆಆರ್ ಪುರಂ-ವೈಟ್‌ಫೀಲ್ಡ್ ನಡುವೆ ದೈನಂದಿನ ಸರಾಸರಿ ಪ್ರಯಾಣಿಕರ ಸಂಖ್ಯೆ 28,000 ಆಗಿತ್ತು ಮತ್ತು ಹೊಸ ಮಾರ್ಗದ ಉದ್ಘಾಟನೆಯ ನಂತರ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದೆ. ಎರಡನೇ ದಿನವೇ ಪ್ರಯಾಣಿಕರ ಸಂಖ್ಯೆ ದಿನಕ್ಕೆ ಏಳು ಲಕ್ಷದ ಗಡಿ ದಾಟಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ